
ಚುನಾವಣೆಯ ದಿನ ಹತ್ತಿರ ಬರುತ್ತಿದ್ದಂತೆ ಎಲ್ಲ ಪಕ್ಷಗಳು ಅಬ್ಬರದಿಂದ
ಪ್ರಚಾರಕ್ಕಿಳಿದಿವೆ. ಸರಿ, ಮುಂದಿನ ಐದು ವರ್ಷ ಏನೇನ್ ಮಾಡ್ತೀವಿ ಅಂತ ಯಾರ್ ಯಾರು ಏನ್
ಹೇಳಿದ್ದಾರೆ ಅಂತ ಪ್ರತಿಯೊಬ್ಬರ ಪ್ರಣಾಳಿಕೆ ಮೇಲೂ ಕಣ್ಣಾಡಿಸಿದಾಗ ಹೆಚ್ಚಿನವುಗಳಲ್ಲಿ
ಹಳೆ ಹೆಂಡ ಹೊಸ ಬಾಟ್ಲು ಅನ್ನುವಂತೆ ಅದದೇ ಹಳೆ ಭರವಸೆಗಳನ್ನೇ ಪಾಲಿಶ್ ಮಾಡಿ ಬಣ್ಣ
ಹೊಡೆದು ಮುಂದೆ ಇಟ್ಟಂಗೆ ಕಾಣುತ್ತೆ. ಪಾಪುಲಿಸಂ ಅನ್ನು ಮೀರಿ ಕನ್ನಡ-ಕನ್ನಡಿಗರ ಬದುಕಿನ
ವಿಷಯಗಳತ್ತ ಯಾರ್ ಏನ್ ಹೇಳಿದ್ದಾರೆ ಅಂತ ನೋಡಿದಾಗ ಇನ್ನು ನಿರಾಶೆಯಾಗುತ್ತೆ. ಹೆಚ್ಚಿನ
ಪ್ರಣಾಳಿಕೆಯಲ್ಲಿ ಕನ್ನಡ ಅಂದ್ರೆ ಮತ್ತದೇ ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಅದನ್ನ
ಉರಸ್ತಿವಿ, ಇದನ್ನ ಮೆರೆಸ್ತಿವಿ ಅನ್ನೋ ಅದೇ ಉತ್ಸವಮೂರ್ತಿಯ ಯೋಚನೆಗಳೇ ಕಾಣುತ್ತಿವೆ.
ಸಂಸ್ಕ್ರುತಿ, ಸಾಹಿತ್ಯ ಅನ್ನುವುದೆಲ್ಲ ಬೇಡ ಅಂತಲ್ಲ, ಆದರೆ ಊಟಕ್ಕೆ ಉಪ್ಪಿನಕಾಯಿಯಂತೆ
ಇರಬೇಕಾದದ್ದು ಊಟಾನೇ ಆಗೋ ತರಹ ಇದ್ದರೆ ನಮ್ಮ ರಾಜಕೀಯ ನಾಯಕರಿಗೆ ಕನ್ನಡ, ಕನ್ನಡಿಗರ
ಬದುಕಿನ ವಿಷಯಗಳು ಮತ ಗೆಲ್ಲುವ ದೃಶ್ಟಿಯಲ್ಲಿ ಎಶ್ಟು ಲೆಕ್ಕಕ್ಕೆ ಬಾರದಂತದ್ದು
ಅನ್ನುವುದು ಕಾಣುತ್ತೆ.
ಏನಿದು ಕನ್ನಡ, ಕನ್ನಡಿಗರ ಬದುಕಿನ ವಿಷಯಗಳು?
ಎಲ್ಲ ಸರಿ, ಏನಿದು ಕನ್ನಡ, ಕನ್ನಡಿಗರ ಬದುಕಿನ ವಿಷಯಗಳು ಅನ್ನುವ ಪ್ರಶ್ನೆ
ನಿಮ್ಮಲ್ಲಿರಬಹುದು. ಅದಕ್ಕೆ ಉತ್ತರ ಯಾವ ವಿಷಯಗಳು ನಮ್ಮ ಬದುಕನ್ನು ಕಟ್ಟಿ ಕೊಡುತ್ತವೋ,
ನಮ್ಮ ಏಳಿಗೆಗೆ, ಉಳಿವಿಗೆ ಅತ್ಯಂತ ಮುಖ್ಯವಾದದ್ದೋ ಅವು ಅನ್ನಬಹುದು. ಹಾಗಿದ್ರೆ ಅಂತಹ
ವಿಷಯಗಳು ಯಾವುದಪ್ಪ ಅನ್ನುವ ಪ್ರಶ್ನೆ ಯಾರಾದ್ರೂ ಕೇಳಿದ್ರೆ ಅದು ಏನ್ ತೋರಿಸುತ್ತೆ
ಅಂದ್ರೆ ನಮ್ಮ ರಾಜಕೀಯದ ಡಿಸ್-ಕೋರ್ಸ್ ಎಶ್ಟರಮಟ್ಟಿಗೆ ಇಂತಹ ವಿಶಯಗಳಿಂದಾಚೆ
ಪಾಪುಲಿಸ್ಟ್ ಅದ, ಯಾವುದೇ ಲಾಂಗ್ ಟರ್ಮ್ ಯೋಚನೆಯಿಲ್ಲದ ವಿಶಯಗಳತ್ತಲೇ ಗಿರಕಿ
ಹೊಡೆಯುತ್ತಿದೆ ಅನ್ನುವುದು. ಅದಿರಲಿ, ಅಶ್ಟು ಮುಖ್ಯವಾದ ವಿಶಯಗಳು ಯಾವುದು ಅನ್ನುವ
ಪ್ರಶ್ನೆಗೆ ಕನ್ನಡಿಗರ ಬೇಡಿಕೆ ಅನ್ನು ಹೆಸರಲ್ಲಿ ಕೆಲವೊಂದಿಷ್ಟು ಮುಖ್ಯವಾದದ್ದನ್ನು ಒಂದು ಪಟ್ಟಿ ಮಾಡಿ ಕೆಳಗೆ ಹಾಕಿದ್ದೇನೆ. ನಮ್ಮ
ಪಕ್ಷಗಳಲ್ಲಿ, ಅದರಲ್ಲೂ ರಾಶ್ಟ್ರೀಯ ಪಕ್ಷಗಳ ಪ್ರಣಾಳಿಕೆಯಲ್ಲಿ ಇದರಲ್ಲಿನ ಯಾವೊಂದು
ಅಂಶವೂ ಕಂಡಿಲ್ಲ ಅಂತಲೇ ಹೇಳಬಹುದು.


ಹೇಳಿ, ಈ ಮೇಲಿನವುಗಳು ಕನ್ನಡ-ಕನ್ನಡಿಗರ ಬದುಕಿನ ವಿಶಯಗಳಲ್ಲವೇ? ಇವುಗಳಲ್ಲಿ
ಯಾವುದು ಇಂದು ನಮ್ಮ ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿವೆ? ಕನ್ನಡ-ಕರ್ನಾಟಕ ಕೇಂದ್ರಿತ
ರಾಜಕಾರಣ ಅನ್ನುವ ಒಂದು ಸ್ಪೇಸ್ ಇವತ್ತಿಗೂ ಖಾಲಿ ಇದೆ ಮತ್ತು ಅದನ್ನು ಪ್ರಾದೇಶಿಕ ಪಕ್ಷಗಳು ಮಾತ್ರವೇ ತುಂಬಬಲ್ಲವು.
ಇರುವ ಪ್ರಾದೇಶಿಕ ಪಕ್ಷಗಳು ಅವುಗಳಿಗಿರುವ ಲಿಮಿಟೇಶನ್ಸ್ ನಡುವೆಯೂ ಇಂತಹ ವಿಷಯಗಳನ್ನು
ತಮ್ಮ ರಾಜಕೀಯದ ಅಜೆಂಡಾಗೆ ಸೇರಿಸಿಕೊಳ್ಳುವ ಹಾಗಾಗಬೇಕು ಮತ್ತು ಅಂತಹದೊಂದು ಒತ್ತಡ
ಕರ್ನಾಟಕ ಕೇಂದ್ರಿತ ರಾಜಕಾಣದ ಅನಿವಾರ್ಯತೆ ಚೆನ್ನಾಗಿ ಮನದಟ್ಟಾಗಿರುವ ಎಲ್ಲ ಕನ್ನಡಿಗರು
ತರಬೇಕು. ಅದು ಈ ಚುನಾವಣೆಯಿಂದಲೇ ಶುರುವಾಗಲಿ.