ಮಂಗಳವಾರ, ಆಗಸ್ಟ್ 24, 2010

ಜನಾ ಜನಾ ಜನಾ ... ಈ ಸಮಸ್ಯೆ ನಿಜಾನಾ?

ಜನಸಂಖ್ಯೆನೇ ನಮ್ಮ ದೇಶದ ಅತಿ ದೊಡ್ಡ ಸಮಸ್ಯೆ, ಜನಸಂಖ್ಯೆ ಕಡಿಮೆ ಮಾಡಿಕೊಳ್ಳದೇ ಹೋದ್ರೆ ನಮ್ಮ ಕತೆ ಅಷ್ಟೇ ಅನ್ನುವ ಮಾತು ನಾನು ಚಿಕ್ಕವನಾಗಿದ್ದಾಗಿನಿಂದಲೂ ಕೇಳುತ್ತಲೇ ಬಂದಿದ್ದೇನೆ. ಆದರೆ overpopulation is a myth ಅನ್ನುವ ಆನ್ ಲೈನ್ ತಾಣದಲ್ಲಿನ ಕೆಲವು ವಿಡಿಯೋಗಳನ್ನು ನೋಡಿದ ಮೇಲೆ ಜನಸಂಖ್ಯೆ ಗುಮ್ಮ ಎಷ್ಟು ನಿಜ ಅನ್ನುವ ಬಗ್ಗೆ ಗುಮಾನಿ ಏಳುತ್ತೆ.

ಆಫ್ರಿಕಾವೊಂದೇ ಸಾಕು !
ಜನಸಂಖ್ಯೆ ಜಾಸ್ತಿ ಆದ್ರೆ ಜಗತ್ತಲ್ಲಿ ಆಹಾರದ ಕೊರತೆಯಾಗಿ ಜನ ನರಳಬಹುದು ಅಂತಾರೆ. ಅದು ನಿಜವಾ? ಇಲ್ಲ ಅನ್ನುತ್ತೆ ಈ ವಿಡಿಯೋ. ಅಷ್ಟೇ ಅಲ್ಲ, ಆಫ್ರಿಕಾ ಖಂಡವೊಂದರಲ್ಲೇ ಸರಿಯಾಗಿ ಕೃಷಿ ಮಾಡಿದರೆ ಇಡೀ ಜಗತ್ತಿನ ಅನ್ನದ ಬೇಡಿಕೆಯನ್ನು ಅದೊಂದೇ ಖಂಡ ಪೂರೈಸಬಲ್ಲುದು ಅನ್ನುತ್ತೆ ಈ ವಿಡಿಯೋ.ಆಹಾರ ಕೊರತೆ ನೀಗಿಸಬೇಕಾ? ಬಡವರನ್ನ ಕೊಲ್ಲಿ !
ಹಾಗಿದ್ರೆ,, ಈ ಜನಸಂಖ್ಯೆಯ ಗುಮ್ಮ ಹೇಗೆ ಶುರುವಾಯ್ತು? ಅದು ಈ ಶತಮಾನವಲ್ಲ, 18ನೇ ಶತಮಾನದಲ್ಲೇ ಶುರುವಾಗಿದ್ದು ಅನ್ನುತ್ತೆ ಈ ವಿಡಿಯೋ. ಅಷ್ಟೇ ಅಲ್ಲ, ಆಹಾರ ಕೊರತೆ ನೀಗಿಸಲು ಇರುವ ಹಾದಿಯೆಂದರೆ ಬಡವರನ್ನು ಕೊಲ್ಲುವುದು ಎಂದು ಪ್ರತಿಪಾದಿಸಿದ್ದ ಥಾಮಸ್ ಮ್ಯಾಲ್ತಸ್ ಅನ್ನುವವನ ತಲೆಕೆಟ್ಟ ಐಡಿಯಾದ ಬಗ್ಗೆಯೂ ಮಾತಾಡುತ್ತೆ.TFR = 2.1 ಯಾಕಿರಬೇಕು ?
ಅಷ್ಟೇ ಅಲ್ಲ, ಕೊನೆಯಲ್ಲಿ, ಜಗತ್ತಿನಲ್ಲಿ ಯಾವುದೇ ಜನಾಂಗ ಬೆಳಿದೇ ಹೋದರೂ ಅಳಿಯದೇ ಉಳಿಯಲು ಇರಬೇಕಾದ ಜನಸಂಖ್ಯೆ ಬೆಳವಣಿಗೆಯ ಪ್ರಮಾಣ ಏನು? TFR (Total Fertility Rate = Average number of children each women in a society is having) ಪ್ರಮಾಣ 2.1 ಯಾಕಿರಬೇಕು? 2.1ಕ್ಕಿಂತ ಕೆಳಗೆ ಹೋಗಿರುವ ಜಪಾನನಂತಹ ದೇಶದಲ್ಲಿ ಇವತ್ತು ಉಂಟಾಗಿರುವ ಸಾಮಾಜಿಕ ಸಮಸ್ಯೆ ಏನು? ಅನ್ನುವುದನ್ನು ಈ ಕೆಳಗಿನ ವಿಡಿಯೋ ವಿವರಿಸುತ್ತೆ.ನಮ್ಮ ಪಾಡೇನು?
11ನೇ ಪಂಚವಾರ್ಷಿಕ ಯೋಜನೆ ಅನ್ವಯ ಭಾರತ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿರುವ TFR ಟಾರ್ಗೆಟ್ 1.8. ಇದರರ್ಥ ಕರ್ನಾಟಕದ TFR ಮಟ್ಟ ನಾರ್ಮಲ್ ರಿಪ್ಲೇಸ್-ಮೆಂಟ್ ಮಟ್ಟವಾದ 2.1 ರಿಂದ ಕೆಳಗಿಳಿಯುತ್ತೆ. ಅದರಿಂದಾಚೆ, ವರ್ಷದಿಂದ ವರ್ಷಕ್ಕೆ ನಮ್ಮ ಕನ್ನಡ ಜನಾಂಗದ ಸಂಖ್ಯೆ ಇಳಿಮುಖವಾಗುವುದಿಲ್ಲವೇ? ಇದೇ ಸಮಯದಲ್ಲಿ ಬಿಹಾರ್, ಉತ್ತರ ಪ್ರದೇಶದಂತಹ ರಾಜ್ಯಗಳ TFR ಮಟ್ಟ 3.0ಕ್ಕಿರುತ್ತೆ. ಅಲ್ಲಿ ಜನಸಂಖ್ಯೆ ಹೆಚ್ಚಿದರೆ, ಇಲ್ಲಿ ಇಳಿಮುಖವಾದರೆ ಅದು ಇನ್ನೂ ಹೆಚ್ಚಿನ ವೇಗದಲ್ಲಿ ವಲಸೆಗೆ ಅನುವು ಮಾಡಿಕೊಡುವುದಿಲ್ಲವೇ? ಇಡೀ ಭಾರತ TFR = 2.1ಕ್ಕೆ ತಲುಪಿದಾಗಲೂ, ಉತ್ತರದ ಅನೇಕ ರಾಜ್ಯಗಳು ರಿಪ್ಲೇಸ್-ಮೆಂಟ್ ಮಟ್ಟದ ಮೇಲೆಯೇ ಇರುತ್ತವೆ, ಆದರೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಜನಸಂಖ್ಯೆಯೂ ರಿಪ್ಲೇಸ್-ಮೆಂಟ್ ಮಟ್ಟಕ್ಕಿಂತ ಕೆಳಗಿಳಿದು ಜಪಾನ್ ದೇಶದಂತೆ ಸಾಮಾಜಿಕ ಸಮಸ್ಯೆಯೆಡೆಗೆ ಹೆಜ್ಜೆ ಹಾಕಿಯಾವು. ಇದನ್ನೆಲ್ಲ ಗಮನಿಸಿದರೆ ಭಾರತದ ಜನಸಂಖ್ಯೆ ನಿಯಂತ್ರಣದ ಬಗೆಗಿನ ನಿಲುವುಗಳು ನಿಜಕ್ಕೂ ಎಷ್ಟು ಸರಿಯಾಗಿದೆ ಅನ್ನುವ ಮೂಲಭೂತ ಪ್ರಶ್ನೆ ಏಳುತ್ತೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !