ಗುರುವಾರ, ಡಿಸೆಂಬರ್ 16, 2010

ಕನ್ನಡ ಮಿಡಿಯಾ - ಎಡವುತ್ತಿರುವುದೆಲ್ಲಿ ?

ನಾವು ದಿನಾ ಓದೋ ಕನ್ನಡ ಪತ್ರಿಕೆಗಳಿರಬಹುದು (ವಿ.ಕ, ಪ್ರ.ವಾ,ಉ.ವಾ, ಕ.ಪ್ರ), ನೋಡೋ ಕನ್ನಡ ಸುದ್ದಿ ವಾಹಿನಿಗಳಿರಬಹುದು (ಟಿವಿ9, ಸುವರ್ಣ) ಇಲ್ಲವೇ ಕನ್ನಡದ ಮನರಂಜನೆ ಚಾನೆಲ್ ಗಳಿರಬಹುದು( ಜೀ ಕನ್ನಡ, ಕಸ್ತೂರಿ, ಈ ಟಿವಿ ಕನ್ನಡ, ಸುವರ್ಣ), ಇವರೆಲ್ಲರಲ್ಲಿ ಒಂದು ಸಾಮಾನ್ಯವಾದ ಅಂಶವೆಂದರೆ ಇವರಿಗಿರೋ ಹಿಂದಿ ಸಿನೆಮಾ, ಬಾಲಿವುಡ್ ಬಗೆಗಿನ ವಿಪರೀತ ಅಭಿಮಾನ. ಇವರ ಹಿಂದಿ ಸಿನೆಮಾ, ಹಾಡು, ನಟರ ಬಗೆಗಿನ disproportionate ಪ್ರಚಾರದ ವೈಖರಿ ನೋಡಿದವರಿಗೆ ಕರ್ನಾಟಕದಲ್ಲಿ ಹಿಂದಿ ಚಿತ್ರೋದ್ಯಮ ಕನ್ನಡಕ್ಕಿಂತ ದೊಡ್ಡದು ಅನ್ನುವಂತೆ ಅನ್ನಿಸುವ ಹಾಗೆ ಮಾಡಿದ್ದರೆ ಅಚ್ಚರಿಯಿಲ್ಲ. ಹಾಗಿದ್ರೆ  ಇದೆಷ್ಟು ಸರಿಯಾದದ್ದು ?

ಮಾಧ್ಯಮದ ಮಂದಿಗೆ ಕೆಲವು ಪ್ರಶ್ನೆಗಳು
’ಹಿಂದಿ’ಗಿಂತ ’ಕನ್ನಡ’ದ ಮನರಂಜನೆ, ಕನ್ನಡ ಚಿತ್ರಗಳು ಗ್ರಾಹಕರಾಗಿ ಕನ್ನಡಿಗರ ಮನಸಿಗೆ ಹೆಚ್ಚು ಹತ್ತಿರ ಅನ್ನುವುದನ್ನು ಹಲವು ಹಿಟ್ ಚಿತ್ರಗಳು ( ಈ ವರ್ಷ ಜಾಕಿ, ಸೂಪರ್, ಪಂಚರಂಗಿ, ಆಪ್ತರಕ್ಷಕ, ಪೃಥ್ವಿ, ಕೃಷ್ಣನ್ ಲವ್ ಸ್ಟೋರಿ) ಸಾಬೀತು ಮಾಡಿದ್ದರೂ ಹಿಂದಿ ಚಿತ್ರಗಳ ಬಗ್ಗೆ ಕನ್ನಡದ ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ನಡೆಯುತ್ತಿರುವ ಮಿತಿ ಮೀರಿದ ಪ್ರಚಾರ ಇಂದಿಗೂ ಹಾಗೆಯೇ ಸಾಗಿದೆ. ಆದರೆ ಇದೇ ಸಂದರ್ಭದಲ್ಲಿ ಬೆಂಗಳೂರಿನ ಎಪ್.ಎಮ್ ರೇಡಿಯೊಗಳು ಕೆಲವೇ ಕೆಲವು ವರ್ಷಗಳಲ್ಲಿ ಕನ್ನಡ ಅಪ್ಪಿಕೊಂಡು ಅತಿ ಹೆಚ್ಚು ವ್ಯಾಪಾರ ಮಾಡುವಂತಾದದ್ದು ನಾವೆಲ್ಲರೂ ಕಂಡುಕೊಂಡ ಸತ್ಯ.

ಈಗ ಬೆಂಗಳೂರಿನ ಹಿಂದಿ ಹಾಡು ಹಾಕುವ ಏಕೈಕ ಸ್ಟೇಶನ್ ಆದ ರೇಡಿಯೊ ಒನ್ ವಾಹಿನಿಯ ನ್ಯಾಷನಲ್ ಮಾರ್ಕೆಟಿಂಗ್ ಹೆಡ್ ಶೈಜು ಅವರ ಪ್ರಕಾರವೇ ಬೆಂಗಳೂರಿನ ಎಫ್.ಎಮ್ ಮಾರುಕಟ್ಟೆಯಲ್ಲಿ ’ಹಿಂದಿ’ಗಿರುವ ಪಾಲು ಹೆಚ್ಚೆಂದರೆ 14%. ಕನ್ನಡ ವಾಹಿನಿಗಳನ್ನು ಕೇಳುವವರ ಸಂಖ್ಯೆಯ ಮುಂದೆ ಹಿಂದಿ ಕೇಳುಗರ ಸಂಖ್ಯೆ ನಗಣ್ಯ ಅನ್ನುವ ಮಾತನ್ನು ಅವರು ಆಡಿದ್ದಾರೆ. ಕನ್ನಡ ಮನರಂಜನೆ ಅನ್ನುವುದು ಬೆಂಗಳೂರಿನ, ಕನ್ನಡ ಗ್ರಾಹಕರ ಮೊದಲ ಆಯ್ಕೆ ಅನ್ನುವುದು ನಿಜ ಸ್ಥಿತಿಯಾಗಿರುವಾಗ, ಕನ್ನಡ ಮಾಧ್ಯಮಗಳು ಅನುಸರಿಸುತ್ತಿರುವ ದ್ವಂದ್ವ ನಿಲುವಿನ ಬಗ್ಗೆ ನನ್ನ ಮನಸ್ಸಲ್ಲಿ ಏಳುತ್ತಿರುವ ಹಲವು ಪ್ರಶ್ನೆಗಳು ಇಂತಿವೆ.

  • ಅದ್ಯಾಕೆ ಕನ್ನಡದ ಹೆಸರಾಂತ ಪತ್ರಿಕೆಗಳು ಹಿಂದಿ ಚಿತ್ರರಂಗ, ಚಿತ್ರಗಳು, ಹಿಂದಿ ಸಿನೆಮಾ ತಾರೆಯರನ್ನು ಹೆಗಲ ಮೇಲೆ ಹೊತ್ತು ಮೆರೆಸುವುದು?
  • ಅದ್ಯಾಕೆ ಕನ್ನಡದ 24X7 ಸುದ್ದಿ ವಾಹಿನಿಗಳ ಫಿಲ್ಮಿ ಫಂಡಾ, ರಂಜನೆ ಮನರಂಜನೆಯಂತಹ ಸಿನೆಮಾ ಸಂಬಂಧಿ ಕಾರ್ಯಕ್ರಮಗಳಲ್ಲಿ ಕನ್ನಡಕ್ಕಿಂತ ತುಸು ಹೆಚ್ಚೇ ಹಿಂದಿ ಚಿತ್ರಗಳ ಬಗ್ಗೆ ಮಾಹಿತಿ ನೀಡಲು ತುದಿಗಾಲ ಮೇಲೆ ನಿಂತುಕೊಳ್ಳುವುದು?
  • ಯಾಕೆ ಕನ್ನಡದ ಮನರಂಜನೆ ವಾಹಿನಿಗಳ ಡ್ಯಾನ್ಸ್, ಹಾಡು ಮುಂತಾದ ಕಾರ್ಯಕ್ರಮಗಳಲ್ಲಿ ಸುಖಾಸುಮ್ಮನೆ ಹಿಂದಿ ಹಾಡುಗಳನ್ನು ತೂರಿಸುವುದು?
  • ಕನ್ನಡಿಗರಿಗೆ ಹಿಂದಿ ಮನರಂಜನೆಯೇ ಬೇಕಿದ್ದಲ್ಲಿ, ಅದು ಹೇಗೆ ಬೆಂಗಳೂರಿನ 80% ಕ್ಕೂ ಹೆಚ್ಚು ಜನರು ಕನ್ನಡ ಎಫ್.ಎಮ್ ವಾಹಿನಿಗಳನ್ನು ಕೇಳುತ್ತಿದ್ದಾರೆ ?
  • ಕನ್ನಡಿಗರಿಗೆ ನಿಜಕ್ಕೂ ಅಷ್ಟೇನು ಮಹತ್ವವಿಲ್ಲದ ಹಿಂದಿ,ತಮಿಳು,ತೆಲುಗು ಚಿತ್ರಗಳ ಬಗ್ಗೆ ನೀಡುವ ಪ್ರಚಾರ ನಿಜಕ್ಕೂ disproportionate ಅನ್ನಿಸುವುದಿಲ್ಲವೇ? 
  • ಕನ್ನಡಿಗರ ಮಾರುಕಟ್ಟೆಯನ್ನೇ ಸರಿಯಾಗಿ ಅರ್ಥ ಮಾಡಿಕೊಳ್ಳದೇ ಮಾಡುತ್ತಿರುವ ಈ ರೀತಿಯ ಎಡವಟ್ಟುಗಳು ನಾವೇ ಕೈಯಾರೇ ಇಲ್ಲದಿರುವ ಮಾರುಕಟ್ಟೆಯನ್ನು ಪರಭಾಷಾ ಚಿತ್ರಗಳಿಗೆ ಕಲ್ಪಿಸಿಕೊಡುವಂತೆ ಮಾಡುತ್ತಿಲ್ಲವೇ?
ಕನ್ನಡದ ಪತ್ರಿಕೆ ಮತ್ತು ಎಲೆಕ್ಟ್ರಾನಿಕ್ ವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಗೆಳೆಯರು ಈ ಬಗ್ಗೆ ಗಮನ ಹರಿಸಿ, ಬದಲಾವಣೆ ಮಾಡಿಕೊಂಡರೆ ಅವರಿಗೂ ಲಾಭ, ಕನ್ನಡದ ಗ್ರಾಹಕನಿಗೂ ಲಾಭ, ಕನ್ನಡ ಭಾಷೆಯ ಉಳಿವು, ಬೆಳವಿಗೂ ಪೂರಕ ಅನ್ನುವುದು ನನ್ನ ಅನಿಸಿಕೆ.

16 ಕಾಮೆಂಟ್‌ಗಳು:

  1. ಪ್ರಜಾವಾಣಿ' ಈಗ "ದುಡ್ಡಿನ ವಾಣಿ" ಆಗಿದೆ...ಏನೆ ಆಗಲಿ ಅದರ ಮೂಲ deccan herald. ಇನ್ನು ಕನ್ನಡಪ್ರಭ ಮೂಲ indian express. ಉದಯ TV ಏನೋ SUN Network...E-tv ಕನ್ನಡ ಈ-ನಾಡು ಅವರದು...tv-9 ನವರು ಆದಸ್ಟು ಬೇಗ ತೆಲುಗು ಚಿತ್ರಗಳನ್ನೇ ಹಾಕಲಿದ್ದಾರೆ...zee-ಕನ್ನಡ...ಸುವರ್ಣ ಯಾವು ನಮ್ಮದಲ್ಲ. ಇನ್ನು ಕಸ್ತೂರಿ ಯವರು ಹೆಸರಿಗೆ ಮಾತ್ರ ಕನ್ನಡದ ಮಾಲೀಕರು...ಆ ಮಾಲಿಕರ ನೀಯತ್ತು ಏನು ಅಂತ ಈಗಾಗಲೇ ಸಮಸ್ತ
    ಕನ್ನಡಿಗರಿಗೆ ಗೊತ್ತಾಗಿದೆ.

    ಪ್ರತ್ಯುತ್ತರಅಳಿಸಿ
  2. Nivu heluttiruva ella amshagalu satya... Idu nanagu hagu namma maneya ellarigu anisiruva abhipraya...
    Idakke namma suddi vahini galu(yavude irabahudu) sariyagi kelasa madade, bejavabdari inda vartisurriruvude kaarana...
    Avarige budhi heluva hagu tilisi koduva kelasa nammadagali...

    ಪ್ರತ್ಯುತ್ತರಅಳಿಸಿ
  3. One other important aspect is that most of the Kannada actors and actresses speak 1/2 Kannada word and rest in English. So disgusting. Same is true with so called VJ's of all TV channels

    ಪ್ರತ್ಯುತ್ತರಅಳಿಸಿ
  4. ವಸಂತ , ಈ ವಿಷ್ಯದ ಬಗ್ಗೆ ಬೆಳಕು ಚೆಲ್ಲಿದ್ದಕ್ಕೆ ಧನ್ಯವಾದ. ನಂಗು ಕೂಡ ಈ ಕೆಲವು ಚನ್ನೆಲ್ಗಳಲ್ಲಿ ಮತ್ತು ಪೇಪರ್ ನಲ್ಲಿ ಅನ್ಯ ಭಾಷಾ ಚಿತ್ರ ತಾರೆಯರ ಬಗ್ಗೆ ಯಾಕೆ ಕವರೇಜ್ ಕೊಡ್ತಾರೆ ಅಂತ ಅರ್ಥ ಆಗೋಲ್ಲ. ಬಹುಶ: ಈ ಮಾಧ್ಯಮದವರು ನಮ್ಮಲ್ಲಿ ಕೆಲವು ಮಂದಿ ವಿದ್ಯಾವಂತರು,ಮದ್ಯಮ ವರ್ಗದವರು ಅದರಲ್ಲೂ ಯುವ ಜನತೆಯು ಕನ್ನಡ ಅಂದ್ರೆ ಅಲರ್ಜಿ ಥರ ಆಡುವುದನ್ನು ನೋಡಿ ಈ ಥರ ಅನ್ಯ ಭಾಷೆಯ ಬಗ್ಗೆ ಒಲುಮೆ ತೋರಿಸ್ತಾರೆ ಅನಿಸುತ್ತೆ. ಒಂದೇ ಒಂದು ಕನ್ನಡ ಪೇಪರ್ ಅಥವ ಚಾನೆಲ್ ಪರಿಪೂರ್ಣವಾಗಿ ಕನ್ನಡೀಕರಣವಾಗದೆ ಇರುವುದು ನಮ್ಮ ದೌರ್ಭಾಗ್ಯ.

    ಪ್ರತ್ಯುತ್ತರಅಳಿಸಿ
  5. ಭಾರತೀಯ ಮಾಧ್ಯಮದ ಪ್ರತಿನಿಧಿಗಳು ಹೇಗೆ ಅಂತ ಮೊನ್ನೆ "2G " ಹಗರಣ ಜಗಜ್ಜಾಹೀರು ಮಾಡಿದೆ. ಬರ್ಖ ದತ್ತನಂಥ ಪ್ರಖ್ಯಾತ ಅತ್ಯಂತ ಗೌರವಿಸಲ್ಪಡುವ ಪತ್ರಕರ್ತರು ಕೂಡ ದುಡ್ಡಿಗಾಗಿ ವಾಮ ಮಾರ್ಗ ಅನಿಸರಿಸುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಎಲ್ಲ ಮಾಧ್ಯಮದವರು ಇದನ್ನೇ ಬೆಂಚ್ ಮಾರ್ಕ್ ಅಂತ ದುಡ್ಡಿಗಾಗಿ ಏನು ಬೇಕಾದರೂ ಮಾಡುತ್ತೇವೆ ಎಂಬುದನ್ನು ತೋರಿಸ್ತಾ ಇದಾರೆ.

    ಪ್ರತ್ಯುತ್ತರಅಳಿಸಿ
  6. Vasanth

    Olle manthana maduva amshagalu nimma varadhiyallide.

    Kannada nadina bagge tili heluva, prachara maduva samsthegalu, madhyamagalu illade iruvude idakke mukya karana. Malikara mele idu nirdhara vaguttade. Bere rajyadalli huttuva makkalu adara bashe bega kaliyuvanthe, illu kooda madhyamagalu madtha iruvudu ade kelsa. Yava madhyamagalu patrike yagarli, vahinigalagali..kannadigarige serilla..aaddrarinda ivarinda pavadagalannu nirikshane madoke agaolla. Innu kannadadde aada kelave kelavu pracharavillada patrikegala bagge yarigu gottilla..illi ondu kranthi aaga beku...ETV nalli Ramojirao madidantha kranthi madbeku...adakke kayona antha helade bere daari sadhyakonthu illa....

    ಪ್ರತ್ಯುತ್ತರಅಳಿಸಿ
  7. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  8. ಇದಕ್ಕೆಲ್ಲ ಮುಖ್ಯ ಕಾರಣ ಏನಂದರೆ ಕನ್ನಡದ ೯೦ ಪ್ರತಿಶತ ದೂರದರ್ಶನ ಚಾನೆಲ್ ಗಳು ಹಾಗು ಪತ್ರಿಕೆಗಳು ಕನ್ನಡೇತರರ ಕೈಯಲ್ಲಿರುವುದು. ಟೆಕ್ನಿಷಿಯನ್, ಲೈಟ್ ಬಾಯ್ಸ್ ಇಂದ ಹಿಡಿದು ಮಾಲೀಕರ ವರೆಗೂ ಕನ್ನಡೇತರರದೇ ಹೆಚ್ಚಿನ ಸಂಖ್ಯೆ. ನಮ್ಮದೇ ಆದ ಒಂದು ಚಾನೆಲ್ ಸಹ ಇಲ್ಲ. ಉದಯ (ಸನ್ ನೆಟ್ವರ್ಕ್) , ಈ-ಟಿವಿ ಕನ್ನಡ ಇತ್ಯಾದಿಗಳು ಯಾವುವೂ ನಮ್ಮದಲ್ಲ.

    ಪ್ರತ್ಯುತ್ತರಅಳಿಸಿ
  9. Naveen Nanjundappa: Namma(nambike illa) kannada vahinigalu adaralli kelasa maaduva kannadigaru (iddare) swalpa idara bagge yochane maadali.

    Aste alla Vasant, ondu chikka vishayavu ivarige "breaking news"...

    rajakiya holasagidhe, kesaru sagani mathu holasu obbaramelobbaru haarisuthare.. adu evarige breaking news...

    kridakuta bari hudugira dance... doddavara scams..

    innu daravahigalu.. aa devare kapadabeku! aidu pisada prayojana villadu, kathenu illa, noodi keliyonavemba vishayavanthu modale illa.

    innu e haadu kunitha da karyakramagaloo bari hudugirannu, avara ardambarda batte galannu thorisoke samaya saaladu.

    innu e joythisya... jothishigala jeevanavannu bittu bere yaara jeevanavannu saripadisilla.. dinabelagadare.. rahu, kehu shani doshagale !

    Namma dinapatrike, dooradarshanadalli nange noodabekannisuva varadhigalendare..
    1. saralathe, sowjanyathe inda baalida, baaluthiruva naagarikara dina chari..
    2. hiriya naagarikaru jeevanadalli kalitha paata, kasta sukha galu..
    3. namma deshada samvidhanada vishayagalu
    4. namma deshada naadu nudi haagu samkruthiyallina vishayagalu.
    5. karigala, lekhakara sadhanegalu..
    6. nataka kaarara natakagala surimale..
    7. 1 taragathi inda padavidara taragathigala patagalu..
    hege bekada pattigalu bahala..

    Kannada para vahinigalu innadaru yecchara gollali..

    ಪ್ರತ್ಯುತ್ತರಅಳಿಸಿ
  10. sariyagi helidri vasanth. anagatya hindi herike ge idu ondu olle udaaharane aguttade. iadannu vyavasthithavagi tadeyabeku.

    ಪ್ರತ್ಯುತ್ತರಅಳಿಸಿ
  11. ಸರಿಯಾಗಿ ಹೇಳಿದ್ರಿ ವಸಂತ್ ಅವರೇ

    ಪ್ರತ್ಯುತ್ತರಅಳಿಸಿ
  12. ur absolutely rite, we have so many reality shows in kannada but there are less than 5 popular kannada reality show directors from karnataka origin. no attitude of welcoming new comers and new ideas. there are a 1000 problems which can be rectified only by the top management people which unfortunately has got most of non kannadigas.

    ಪ್ರತ್ಯುತ್ತರಅಳಿಸಿ
  13. I completely agree with you Vasanth, its like the famous "cutting the branch of a tree for wood by sitting on its tail end". Its exactly the same thing happening to Kannada media. They don't know that people will stop watching Kannada channels and start other languages if they give publicity to other language movies. Print/visual media is losing responsibility of retaining our language/culture. Once there was a program on suvarna news channel on the English knowledge of our politicians, which was completely unnecessary and when I wrote to V. Bhat objecting it, he says there are two ways of looking at it and take it lightly. Making fun of our language by our media is fun for them.

    ಪ್ರತ್ಯುತ್ತರಅಳಿಸಿ
  14. First we need to get out from the notion that the government is the answer for all the problems. We need to work at the ground level to motivate peole to accept and adopt kannada.

    for this we need a team of dedicated volunteers. This team has to be built over the years and probably after 5-10 years we will have many of them coming forward to work for this cause. Mostly in the rural areas, we need to build this team.

    ಪ್ರತ್ಯುತ್ತರಅಳಿಸಿ
  15. ಇತ್ತೀಚಿಗೆ ಕನ್ನಡ ಪತ್ರಿಕೆಗಳಲ್ಲಿ ಇಂಗ್ಲಿಷ್ ಭಾಷೆಯ ಪ್ರಯೋಗವೂ ಜಾಸ್ತಿಯಾಗಿದೆ. ಪ್ರತೀ ದಿನದ ಪತ್ರಿಕೆಯ ಪ್ರಥಮ ಪುಟದಲ್ಲಿ ಒಂದಾದರೂ ಇಂಗ್ಲಿಷ್ ಭಾಷೆಯ ಪದ ಉಪಯೋಗಿಸಲೇ ಬೇಕು ಇವತ್ತಿನ ಸಂಪಾದಕರಿಗೆ. ಕನ್ನಡದಲ್ಲೇನು ಪದಗಳಿಗೆ ಕೊರತೆಯೇ? ಇಂಗ್ಲಿಷ್ನಲ್ಲಿ ಹೇಳಿದ್ದಕ್ಕಿಂತ ಅದೆಷ್ಟೋ ಸ್ವಾರಸ್ಯವಾಗಿ ನಮ್ಮ ಭಾಷೆಯಲ್ಲೇ ಹೇಳಬಹುದು.

    ಪ್ರತ್ಯುತ್ತರಅಳಿಸಿ

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !