ಸೋಮವಾರ, ಜನವರಿ 10, 2011

ಆಂಗ್ ಸಾನ್ ಸೂಕಿ ಎಂಬ ಹೆಣ್ಣುಮಗಳಿಂದ ನಾವು ಕಲಿಯಬೇಕಾದದ್ದು !

ಬರ್ಮಾದ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ ಆಂಗ್ ಸಾನ್ ಸೂ ಕಿಯ ಬಗ್ಗೆ ಚಿಕ್ಕಂದಿನಿಂದಲೂ ಬೇರೆ ಬೇರೆ ಪತ್ರಿಕೆಗಳಲ್ಲಿ ಓದುತ್ತಲೇ ಇದ್ದೆ. ತನ್ನ ನಾಡಿನ ಜನರ ಸ್ವಾತಂತ್ರ್ಯಕ್ಕಾಗಿ, ಅವರ ಹಕ್ಕುಗಳಿಗಾಗಿ ಹೋರಾಡುತ್ತ ಹೆಚ್ಚು ಕಡಿಮೆ ಬದುಕಿನ ಮುಕ್ಕಾಲು ಭಾಗ ಗೃಹ ಬಂಧನದಲ್ಲೇ ಕಳೆದ ಛಲಗಾರ್ತಿ ಈಕೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡು ಆಚೆ ಬಂದ ಆಕೆಯ ಈ ಕೆಳಗಿನ ಮಾತುಗಳು ಏಳಿಗೆಗೆ ಕನ್ನಡವೊಂದನ್ನೇ ನೆಚ್ಚಿಕೊಂಡಿರುವ ಕೋಟ್ಯಾಂತರ ಅವಕಾಶವಂಚಿತ ಕನ್ನಡಿಗರ ನಡುವೆ "ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಮತ್ತು ಅದು ಕೊಡ ಮಾಡುವ ಉದ್ಯೋಗ, ಜೀವನವಕಾಶದ ಪ್ರಯೋಜನ” ಪಡೆದುಕೊಂಡಿರುವ ಕೆಲವೇ ಕೆಲವು ಕನ್ನಡಿಗರ ಮನಸಿನಲ್ಲಿ ರಿಂಗಣಿಸಬೇಕಿದೆ. ಅಷ್ಟೇ ಅಲ್ಲ, ಸಂವಿಧಾನದ ಪ್ರಕಾರವೇ ಇಡೀ ಭಾರತದೆಲ್ಲೆಡೆ ಹಿಂದಿಯೇತರ ಜನರಿಗಿಂತ ಹೆಚ್ಚಿನ ಸವಲತ್ತು, ಸೌಕರ್ಯ ಪಡೆಯುತ್ತಿರುವ ಹಿಂದಿ ಭಾಷಿಕ ಭಾರತೀಯರ ಮನಸಲ್ಲೂ ಅವರ ಈ ಮಾತುಗಳು ಪ್ರತಿಧ್ವನಿಸಬೇಕಿದೆ:
The value systems of those with access to power and of those far removed from such access cannot be the same. The viewpoint of the privileged is unlike that of the underprivileged.
ಅಧಿಕಾರ, ಸವಲತ್ತು ಅನುಭವಿಸುತ್ತಿರುವ ಜನರು ನಂಬುವ ಮೌಲ್ಯ ವ್ಯವಸ್ಥೆ ಮತ್ತು ಅಧಿಕಾರ, ಸವಲತ್ತಿದಿಂದ ವಂಚಿತರಾಗಿರುವ ಜನರ ಮೌಲ್ಯ ವ್ಯವಸ್ಥೆ ಒಂದೇ ಆಗಿರುವುದಿಲ್ಲ. ಸವಲತ್ತು, ಹಕ್ಕು ಅನುಭವಿಸುತ್ತಿರುವ ಜನರ ನಿಲುವು ವಂಚಿತರಾದವರ ನಿಲುವಿಗಿಂತ ಯಾವತ್ತಿಗೂ ಬೇರೆಯೇ ಆಗಿರುತ್ತದೆ.
ಹಾಗೇ, ರಾಜಕೀಯವೆಂದರೆ ಕೊಳಕು, ಕೊಳಚೆ ಅನ್ನುವ ಮನಸ್ಥಿತಿಯ ಜನರ ಮನಸ್ಸಿನಲ್ಲಿ ಅವರ ಈ ಮಾತುಗಳು ಕ್ಷಣವೂ ರಿಂಗಣಿಸಬೇಕು:
You can never separate the political system of a country from the way you conduct your daily life.
ಒಂದು ದೇಶದ ರಾಜಕೀಯ ವ್ಯವಸ್ಥೆಯನ್ನು ಅಲ್ಲಿನ ಜನರು ನಿತ್ಯ ಜೀವನದಲ್ಲಿ ತಮ್ಮನ್ನು ತಾವು ನಡೆಸಿಕೊಳ್ಳುವ ರೀತಿಯಿಂದ ಎಂದಿಗೂ ಬೇರೆಗೊಳಿಸಲಾಗದು. 
ಅಲ್ಲದೇ, ಸವಲತ್ತು, ಅವಕಾಶ ವಂಚಿತ ಜನರಿಗೆ ಸೀರೆ ಪಂಚೆ ಹಂಚುವುದರಲ್ಲೇ ತೃಪ್ತಿ ಕಾಣುತ್ತಿರುವ ಕರ್ನಾಟಕದ ರಾಜಕೀಯ ನಾಯಕರ ಮನಸ್ಸಿನಲ್ಲಿ ಅವರ ಈ ಮಾತುಗಳು ದಿನವೂ ರಿಂಗಣಿಸಬೇಕು:
The provision of basic material needs is not sufficient to make minority groups and indigenous peoples feel they are truly part of the greater national entity. For that they have to be confident that they too have an active role to play in shaping the destiny of the state that demands their allegiance.

ಜನರ ಮೂಲಭೂತ ಅವಶ್ಯಕತೆಯನ್ನು ಪೂರೈಸುವುದೊಂದೇ ಅವರನ್ನು ನಿಜವಾದ ಅರ್ಥದಲ್ಲಿ ಆ ದೇಶದ ಭಾಗವಾಗಿಸುವುದಿಲ್ಲ. ಯಾವ ದೇಶ ತನ್ನ ನಿಷ್ಟೆ ಬೇಡುತ್ತೋ, ಆ ದೇಶದ ಭವಿಷ್ಯವನ್ನು ನಿರ್ಧರಿಸುವಲ್ಲಿ ತಮಗೂ ಒಂದು ಮುಖ್ಯವಾದ ಪಾತ್ರವಿದೆ ಅನ್ನುವ ನಂಬಿಕೆ ಮೂಡಿದಾಗಲಷ್ಟೇ ಅದು ಆಗಲು ಸಾಧ್ಯ.
ಕೊನೆಯಲ್ಲಿ ಅವರ ಈ ಮಾತುಗಳು, ಕರ್ನಾಟಕದ ಭವಿಷ್ಯದ ಬಗ್ಗೆ, ಅದರ ನಾಳೆಗಳನ್ನು ಬದಲಾಯಿಸುವತ್ತ ಕನಸು ಕಾಣುವ ಪ್ರತಿಯೊಬ್ಬನ ಮನದಲ್ಲೂ ರಿಂಗಣಿಸಬೇಕು:
The democracy process provides for political and social change without violence.

ಪ್ರಜಾತಂತ್ರ ವ್ಯವಸ್ಥೆ ಹಿಂಸೆಯ ಅಗತ್ಯವಿಲ್ಲದೆಯೇ ರಾಜಕೀಯ ಮತ್ತು ಸಾಮಾಜಿಕ ಬದಲಾವಣೆ ತರುವ ಎಲ್ಲ ಅವಕಾಶವನ್ನಿಯುತ್ತದೆ.
ಬರ್ಮಾದಲ್ಲಿರುವ ಮಿಲಿಟರಿ ಆಡಳಿತ ಆದಷ್ಟು ಬೇಗನೇ ಅಂತ್ಯ ಕಂಡು ಜನರಿಂದ, ಜನರಿಗಾಗಿ ಆಯ್ಕೆಯಾದ ಸರ್ಕಾರ ಕಾಣುವ ವ್ಯವಸ್ಥೆ ಆದಷ್ಟು ಬೇಗನೆ ಬರಲಿ ಎಂದು ಹಾರೈಸೋಣ. ತನ್ನ ಜೀವನದ ಬಹು ಪಾಲು ಅಹಿಂಸೆಯ ಮಾರ್ಗದಲ್ಲೇ  ಈ ಹೋರಾಟಕ್ಕೆ ಮೀಸಲಿಟ್ಟ ಆಂಗ್ ಸಾನ್ ಸೂ ಕಿ ಜೀವಂತವಾಗಿರುವಾಗಲೇ ಈ ಬದಲಾವಣೆ ಕಾಣುವ ದಿನ ಬರಲಿ ಎಂದು ಹಾರೈಸೋಣ. 

ಸೂಚನೆ: ಈ ಬರಹದ ಬಹು ಪಾಲು ಕಿರಣ್ ರಾವ್ ಅವರ ಕರ್ನಾಟಿಕ್ ಬ್ಲಾಗ್ ನಲ್ಲಿ ಬಂದ ಒಂದು ಅಂಕಣದ ಅನುವಾದ. ಅದನ್ನು ಓದಿದ ಮೇಲೆ ಅದನ್ನು ಕನ್ನಡದಲ್ಲೂ ಅನುವಾದ ಮಾಡಬೇಕು ಅನ್ನಿಸಿ, ನನ್ನ ಕೆಲವು ಮಾತನ್ನು ಸೇರಿಸಿ ಅನುವಾದಿಸಿದ್ದೇನೆ.

5 ಕಾಮೆಂಟ್‌ಗಳು:

  1. ಒಳ್ಳೆಯ ತುಣುಕನ್ನು ತೆಗೆದು ಅನುವಾದ ಮಾಡಿದ್ದೀರ. ಒಂದು ಕೊಳಕು ವ್ಯವಸ್ತೆಗೆ ಹೊಂದಿಕೊಂಡು ಇದನ್ನು ಬದಲಿಸಲು ಆಗುವುದಿಲ್ಲ ಅನ್ನುವವರಿಗೆ ಸೂಕಿ ಅವರ ಜೀವನ ಮತ್ತು ಮಾತುಗಳು ದಾರಿ ದೀಪವಾಗಲಿ.

    ಪ್ರತ್ಯುತ್ತರಅಳಿಸಿ
  2. I like these lines very much

    "You can never separate the political system of a country from the way you conduct your daily life."

    nice translation for the present crisis/turmoil in our state.

    ಪ್ರತ್ಯುತ್ತರಅಳಿಸಿ
  3. ಒಳ್ಳೆಯ ಬರಹ! ವ್ಯವಸ್ಥೆಯ ಪಾಲುದಾರರಾದ ನಮಗೆಲ್ಲರಿಗೂ ಅನ್ವಯಿಸುವ ಮಾತುಗಳು. ಬಾಯಿ ಮಾತಿನಲ್ಲಷ್ಟೇ ಆದರ್ಶವನ್ನ ಬಡಬಡಿಸಿ, ಗೂಟದ ಕಾರುಗಳ ಹಿಂದೆ AC ಕಾರಿನಲ್ಲಿ ತಿರುಗುವ ನಮ್ಮ ಸ್ವಘೋಷಿತ 'ಬುಧ್ಧಿಜೀವಿ'ಗಳು ಅಂಗ್ ಸಾನ್ ಸೂಕಿ ಯ ಜೀವನವನ್ನ ಗಮನಿಸಬೇಕು !!

    ಪ್ರತ್ಯುತ್ತರಅಳಿಸಿ
  4. "ಜನರ ಮೂಲಭೂತ ಅವಶ್ಯಕತೆಯನ್ನು ಪೂರೈಸುವುದೊಂದೇ ಅವರನ್ನು ನಿಜವಾದ ಅರ್ಥದಲ್ಲಿ ಆ ದೇಶದ ಭಾಗವಾಗಿಸುವುದಿಲ್ಲ. ಯಾವ ದೇಶ ತನ್ನ ನಿಷ್ಟೆ ಬೇಡುತ್ತೋ, ಆ ದೇಶದ ಭವಿಷ್ಯವನ್ನು ನಿರ್ಧರಿಸುವಲ್ಲಿ ತಮಗೂ ಒಂದು ಮುಖ್ಯವಾದ ಪಾತ್ರವಿದೆ ಅನ್ನುವ ನಂಬಿಕೆ ಮೂಡಿದಾಗಲಷ್ಟೇ ಅದು ಆಗಲು ಸಾಧ್ಯ."

    ಅದ್ಭುತ ಮತ್ತು ಅರ್ಥಗರ್ಭಿತ ಸಾಲುಗಳು !!

    ಪ್ರತ್ಯುತ್ತರಅಳಿಸಿ

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !