ಶುಕ್ರವಾರ, ಮಾರ್ಚ್ 4, 2011

ನಾರಾಯಣ ಮೂರ್ತಿ ಅವರಿಂದ ಏನ್ ಕಲಿಬೇಕು, ಏನ್ ಬೇಡ ?

ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನವನ್ನು ಉದ್ಘಾಟಿಸಲು ಇನ್ ಫೋಸಿಸ್ ನ ನಾರಾಯಣ ಮೂರ್ತಿ "ಅವರನ್ನು ಆಯ್ಕೆ ಮಾಡಿದ ಸರ್ಕಾರದ ಕ್ರಮ ತಪ್ಪೆಂದೂ, ಅವರೊಬ್ಬ ಉದ್ಯಮಿಯೇ ಹೊರತು ಕನ್ನಡಕ್ಕೆ ಅವರ ಕೊಡುಗೆ ಶೂನ್ಯ" ಅಂತಲೂ ಅವರ ಆಯ್ಕೆಯ ಬಗ್ಗೆ ಅಪಸ್ವರ ಎದ್ದ ಸುದ್ದಿ ಪತ್ರಿಕೆಗಳಲ್ಲಿ,ಟಿವಿಗಳಲ್ಲಿ ನೋಡಿದೆ. ಅದೇ ಸಮಯಕ್ಕೆ ಕೆಲವು ಪತ್ರಿಕೆಗಳಲ್ಲಿ "ಅವರೊಬ್ಬ ಉದ್ಯಮಿ, ಲಕ್ಷಾಂತರ ಜನರಿಗೆ ಉದ್ಯೋಗ ಕೊಟ್ಟಿದ್ದಾರೆ, ಅವರ ಆಯ್ಕೆಯನ್ನು ವಿರೋಧಿಸಿರುವವರು ಕನ್ನಡಕ್ಕೆ ಏನ್ ಮಾಡಿದ್ದಾರೆ?" ಎಂದು ಮೂರ್ತಿ ಅವರ ಆಯ್ಕೆಯನ್ನು ಸಮರ್ಥಿಸುವ ಸುದ್ದಿಯನ್ನು ಕಂಡೆ. ಕರ್ನಾಟಕದ ಸಮಾಜಕ್ಕೆ ಮೂರ್ತಿ ಅವರ ಕೊಡುಗೆ ಏನೇನು ಇಲ್ಲ ಅನ್ನುವುದು ಎಷ್ಟು ತಪ್ಪೋ, ಮೂರ್ತಿ ಅವರ ಪರವಾಗಿ ಬರೆಯುವ ಆತುರದಲ್ಲಿ ಕನ್ನಡ, ಕರ್ನಾಟಕದ ಬಗ್ಗೆ ಅವರು ಮಾತಾಡಿದ್ದು, ಮಾಡಿದ್ದೆಲ್ಲ ಸರಿ ಅನ್ನುವ ಧೋರಣೆಯೂ ಅಷ್ಟೇ ತಪ್ಪು.

ಮೂರ್ತಿಯವರಿಂದ ಕಲಿಯಬೇಕಾದದ್ದು ಸಾಕಷ್ಟಿದೆ !

ಅತ್ಯಂತ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಿದ್ದರೂ, ಜಾಗತೀಕರಣದ ನಂತರ ತೆರೆದ ಮಾರುಕಟ್ಟೆ ಕೊಡ ಮಾಡುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ, ಪ್ರತಿಭೆ, ಪರಿಶ್ರಮಕ್ಕೆ ಬೆಲೆ ಕೊಡುವ ವ್ಯವಸ್ಥೆಯೊಂದನ್ನು ಕಟ್ಟಬಹುದು ಮತ್ತು ಆ ಮೂಲಕ ದೊಡ್ಡ ಮಟ್ಟದಲ್ಲಿ ಕೆಲಸ ಮತ್ತು ಸಂಪತ್ತು ಸೃಷ್ಟಿಸಬಹುದು ಹಾಗೂ ಆ ಮೂಲಕ ದೊಡ್ಡ ಮಟ್ಟದಲ್ಲಿ ಜನರ ಜೀವನದ ಆರ್ಥಿಕ ಮಟ್ಟ ಸುಧಾರಿಸಬಹುದು ಅನ್ನುವುದನ್ನು ತೋರಿಸಿಕೊಟ್ಟ ಶ್ರಮಜೀವಿ ಕನಸುಗಾರರಲ್ಲಿ ಇವರೂ ಒಬ್ಬರು. ಉದ್ಯಮಶೀಲತೆಯ ಅಪಾರ ಕೊರತೆ ಅನುಭವಿಸುತ್ತಿರುವ ಕನ್ನಡನಾಡಿನ ಯುವ ಜನತೆಗೆ ದೊಡ್ಡದಾಗಿ ಯೋಚಿಸುವ, ಕನಸು ಕಾಣುವ, ಆ ಕನಸಿನ ಬೆನ್ನತ್ತಿ ಶ್ರಮ ಪಟ್ಟರೆ ಎಂತಹ ಯಶಸ್ಸು ಸಾಧಿಸಬಹುದು ಅನ್ನುವ ನಂಬಿಕೆಯನ್ನು ಇನ್ ಫೋಸಿಸ್ ನ ಯಶಸ್ಸಿನ ಮೂಲಕ ಬಿತ್ತಿದ ಉದ್ಯಮಿ ನಮ್ಮ ನಾರಾಯಣ ಮೂರ್ತಿಯವರು.

ಅವರ ಶ್ರಮ, ಮುಂದಾಲೋಚನೆ ಅವರಿಗಷ್ಟೇ ಗೆಲುವು ತರಲಿಲ್ಲ. ದೊಡ್ಡ ಮಟ್ಟದಲ್ಲಿ ಐಟಿ ಕ್ರಾಂತಿಗೂ ಅದು ಸ್ಪೂರ್ತಿಯಾಯಿತು. ಲಕ್ಷಗಟ್ಟಲೆ ಜನರಿಗೆ ಉದ್ಯೋಗ ಕಲ್ಪಿಸುವ ಆ ಮೂಲಕ ದೊಡ್ಡ ಮಟ್ಟದಲ್ಲಿ ಅವರ ಆರ್ಥಿಕ ಮಟ್ಟದ ಸುಧಾರಣೆಗೆ ಅದು ಇಂಬು ನೀಡಿತು. ಆದ್ದರಿಂದಲೇ ಇಡೀ ಕನ್ನಡ ಸಮಾಜ ಅವರ ಸಂಸ್ಥೆಗೂ, ಅವರಿಗೂ ಎತ್ತರದ ಸ್ಥಾನಮಾನ, ಗೌರವವನ್ನು ಕಲ್ಪಿಸಿತ್ತೆನ್ನಬಹುದು. ಒಬ್ಬ ಉದ್ಯಮಿಯಾಗಿ ಏನ್ ಮಾಡಬಹುದೋ ಅದನ್ನು ಅವರು ಮಾಡಿದರು ಅನ್ನಲು ಅಡ್ಡಿಯಿಲ್ಲ. ಆ ವಿಷಯದಲ್ಲಿ ಅವರಿಗೆ ಸಲ್ಲಬೇಕಾದ ಗೌರವ ಸಲ್ಲಲೂ ಬೇಕು.

ಮೂರ್ತಿ ಅವರಿಗೆ ಅರ್ಥವಾಗದ ಕನ್ನಡ ಸಮಾಜ !

ಒಬ್ಬ ಸಾಹಿತಿ, ನಟ ಹೇಗೆ ತಮ್ಮ ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೋ ಅಂತೆಯೇ ಮೂರ್ತಿಯವರು ತಮ್ಮ ಉದ್ಯಮದಲ್ಲಿ ಕೆಲಸ ಮಾಡಿ ಗುರುತರವಾದದ್ದನ್ನು ಸಾಧಿಸಿದ್ದಾರೆ. ಅದನ್ನು ಅಷ್ಟಕ್ಕೆ ಸೀಮಿತಗೊಳಿಸಿ ನೋಡಬೇಕು. ಆದರೆ ಯಾರಾದ್ರೂ ಗೆಲುವು ಕಂಡ್ರೆ, ಎಲ್ಲದಕ್ಕೂ ಅವರ ಸಲಹೆ ಕೇಳುವುದು ನಮ್ಮ ಸಮಾಜ, ಸರ್ಕಾರಕ್ಕಂಟಿರುವ ಊನವೆನ್ನಬಹುದು. ಅದರಂತೆ ಅವರ ಸಂಸ್ಥೆಯ ಯಶಸ್ಸು ಕಂಡ ನಮ್ಮ ಜನ, ನಮ್ಮ ಮಾಧ್ಯಮದವರು ಕನ್ನಡ ನಾಡಿನ ಏಳಿಗೆ, ಭವಿಷ್ಯದ ಬಗ್ಗೆಯೂ ಅವರ ಅಭಿಪ್ರಾಯ, ಸಲಹೆ ಕೇಳಿದಾಗಲೇ ಕನ್ನಡ ಸಮಾಜವನ್ನು, ಅದರ ಅಗತ್ಯಗಳನ್ನು ಅವರು ಅರ್ಥೈಸಿಕೊಂಡಿರುವ ರೀತಿಯಲ್ಲಿರುವ ತೊಂದರೆ ಎಂತದ್ದು ಅನ್ನುವುದು ಗಮನಕ್ಕೆ ಬಂದಿದ್ದು. ಮೂರ್ತಿಯವರ ಪ್ರಕಾರ ಇಂಗ್ಲಿಷ್ ಒಂದೇ ನಮ್ಮ ನಾಡನ್ನು ಪ್ರಪಂಚದ ಮುಂಚೂಣಿಗೆ ತಂದು ನಿಲ್ಲಿಸಬಲ್ಲಂತದು. ಈ ನಾಡಿಗೆ ಭವಿಷ್ಯ ಬೇಕಾ, ಇಂಗ್ಲಿಷ್ ಅಪ್ಪಿಕೊಳ್ಳಿ ಇಲ್ಲದಿದ್ದರೆ ಉಳಿಗಾಲವಿಲ್ಲ ಅನ್ನುವ ತಪ್ಪು ಧೋರಣೆ ಅವರದ್ದು. "ಕನ್ನಡ ಮಾಧ್ಯಮ ಶಾಲೆಗಳನ್ನೆಲ್ಲ ಮುಚ್ಚಿ, ಇಂಗ್ಲಿಷ್ ಶಾಲೆ ತೆರೆಯಿರಿ" ಜಾಗತೀಕರಣವನ್ನು ಎದುರಿಸಲು ಇಂಗ್ಲಿಷ್ ಒಂದೇ ಸಾಧನ ಅನ್ನುತ್ತ ಜಗತ್ತೇ ಒಪ್ಪಿರುವ ತಾಯ್ನುಡಿ ಶಿಕ್ಷಣದ ಜಾಗದಲ್ಲಿ ಇಂಗ್ಲಿಷ್ ಕಲಿಕಾ ವ್ಯವಸ್ಥೆ ತರುವುದನ್ನು ಬೆಂಬಲಿಸಿ ಕನ್ನಡದ ಮಕ್ಕಳ ಕಲಿಕೆಯ ಈ ದಿನದ ಸವಾಲುಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಕತ್ ಆಗೇ ಎಡವಿದರು.

ಕನ್ನಡ ಸಮಾಜವೊಂದೇ ಅಲ್ಲ, ಭಾರತವೆಂಬ ಒಕ್ಕೂಟವೂ ಅವರಿಗರ್ಥವಾಗಿಲ್ಲ !
  
ಬೆಂಗಳೂರಿನಲ್ಲಿ ಇವರ ಸಂಸ್ಥೆಯ ಏಳಿಗೆಗೆ ಸರ್ಕಾರದ ಕೊಡುಗೆ ಕಡಿಮೆಯೇನಲ್ಲ. ಸರ್ಕಾರದಿಂದ ದೊಡ್ಡ ಮಟ್ಟದಲ್ಲಿ ಪ್ರಯೋಜನ ಪಡೆದಿದ್ದರೂ (ನೆಲ, ಜಲ, ತೆರಿಗೆ ವಿನಾಯಿತಿ) ನಗರದ ಮೂಲಭೂತ ಸೌಕರ್ಯ ಸರಿಯಿಲ್ಲ, ಅದರಿಂದ ಅನಾನುಕೂಲವಾಗಿದೆ,, ಆದ್ದರಿಂದ ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಿದರೆ ಹೆಚ್ಚು ಅನುಕೂಲ ಅನ್ನುವ ಧಾಟಿಯಲ್ಲಿ ಮಾತನಾಡಿದ್ದು ಮೂರ್ತಿಯವರೇ. ತಮಗೆ ಒಂದಿಷ್ಟು ಅನಾನುಕೂಲವಾಯಿತು ಎಂದು ಬೆಂಗಳೂರನ್ನು ಕರ್ನಾಟಕದಿಂದ ಬೇರ್ಪಡಿಸಿ ಅನ್ನುವುದು ಭಾರತವೆಂಬ ಒಕ್ಕೂಟ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡವರು ಆಡುವ ಮಾತೇ? ಬೆಂಗಳೂರನ್ನು ಕೇಂದ್ರಕ್ಕೆ ವರ್ಗಾಯಿಸೋ ಬದಲು ಅಮೇರಿಕಕ್ಕೆ ವರ್ಗಾಯಿಸಿದರೆ ಇನ್ನೂ ಒಳ್ಳೆದಲ್ವಾ? ಎಷ್ಟಂದರೂ ಅವರು ಒಳ್ಳೆ ಮೂಲಭೂತ ಸೌಕರ್ಯ ಕಲ್ಪಿಸುವುದರಲ್ಲಿ ಜಗತ್ತಿಗೆ ದೊಡ್ಡವರಲ್ವಾ. ನಮ್ಮ ಆಡಳಿತದಲ್ಲಿ ಒಂದಿಷ್ಟು ತೊಂದರೆ ಇದೆ ಅಂದಾಕ್ಷಣ ಭಾರತದ ಒಕ್ಕೂಟದ ಸ್ವರೂಪವನ್ನೇ ಬದಲಾಯಿಸಿ ಅನ್ನುವವರಿಗೆ ಭಾರತವೆಂಬ ಒಕ್ಕೂಟ ವ್ಯವಸ್ಥೆ ಎಷ್ಟರ ಮಟ್ಟಿಗೆ ಅರ್ಥವಾಗಿದೆ ಅನ್ನಿಸಲ್ವಾ?  

ಹೋಗಲಿ, ಇವರ ಸಂಸ್ಥೆಯಲ್ಲೇ ಕನ್ನಡದ ಸ್ಥಿತಿ ಹೇಗಿದೆ?

ಇವರ ಸಂಸ್ಥೆಯ ಮಂಗಳೂರು, ಮೈಸೂರು, ಬೆಂಗಳೂರು ಕೇಂದ್ರಗಳಲ್ಲಿ ಕನ್ನಡ, ಕನ್ನಡಿಗರ ಸ್ಥಿತಿ ಹೇಗಿದೆ? ನಿಜಕ್ಕೂ ಅಷ್ಟೇನು ಚೆನ್ನಾಗಿಲ್ಲ ಅಂತಾರೆ ಅಲ್ಲಿ ಕೆಲಸ ಮಾಡುವ ಗೆಳೆಯರು. ಒಂದು ಚಿಕ್ಕ ಕನ್ನಡ ಕಲಿ ಕಾರ್ಯಕ್ರಮ ಮಾಡುವುದಾಗಿರಬಹುದು, ಇಲ್ಲವೇ ಕನ್ನಡ ರಾಜ್ಯೋತ್ಸವ ಆಚರಿಸುವುದಿರಬಹುದು. ಅಲ್ಲಿನ ಕನ್ನಡಿಗರು ಎಷ್ಟು ಕಷ್ಟ ಪಟ್ಟು ದಕ್ಕಿಸಿಕೊಂಡಿದ್ದಾರೆ ಅನ್ನುವುದನ್ನು ಬಲ್ಲವರೇ ಬಲ್ಲರು. ಯಾಕೆ ಹೀಗಿದೆ? ಇದಕ್ಕೆ ಮೂರ್ತಿಯವರ indifference ಕಾರಣ ಅನ್ನಿಸಲ್ವಾ? ಕನ್ನಡ ಪರವಾಗಿರೋದು ಬೇಡ, ಕೊನೆ ಪಕ್ಷ ಇಂತಹದೊಂದು ಲೆಕ್ಕಕ್ಕಿಲ್ಲ ಅನ್ನುವ ಧೋರಣೆಯನ್ನು ಇವರು ತೋರಿಸದೇ ಇದ್ದಿದ್ದರೆ ಆ ಸಂಸ್ಥೆಯಲ್ಲಿ ಹಿರಿಯ ಹುದ್ದೆಯಲ್ಲಿರುವ ಪರಭಾಷಿಕರು ಇಂತಹದೊಂದು ಧೋರಣೆ ತೋರಿಸುತ್ತಿದ್ದರೇ? ಇನ್ಫಿಯ ಮಂಗಳೂರು, ಮೈಸೂರು ಕೇಂದ್ರದಲ್ಲಿ ಮಲಯಾಳಿಗಳದ್ದೇ ಕಾರುಭಾರು ಎಂದು ಕೇಳ್ಪಟ್ಟೆ. ಪ್ರತಿಭೆಯೊಂದೇ ಮಾನದಂಡ ಅಂತ ಇವರೆನೋ ಅನ್ನುತ್ತಾರೆ, ಹಾಗಾದ್ರೆ ಇಲ್ಲಿ ಕನ್ನಡಿಗರ ಸಂಖ್ಯೆ ತೀರಾ ಕಡಿಮೆ ಇದೆ ಅನ್ನುವುದು ಏನ್ ತೋರಿಸುತ್ತೆ ? ನಮಗೆ ಪ್ರತಿಭೆಯೇ ಇಲ್ಲವೆಂತಲೋ ಇಲ್ಲ ಮಲೆಯಾಳಿಗಳಿಗೆ ಮಾತ್ರ ಪ್ರತಿಭೆ ಇದೆ ಅಂತಲೋ? ಕಾಕತಾಳೀಯವೆಂಬಂತೆ ಈ ಕೇಂದ್ರದ ಹೆಚ್ಚಿನ ಹಿರಿಯ ಅಧಿಕಾರಿಗಳು ಮಲೆಯಾಳಿಗಳು ಅಂತಲೂ ಕೇಳ್ಪಟ್ಟೆ :) .

ನಾರಾಯಣ ಮೂರ್ತಿ ಅವರಿಂದ ನಾವು ಕಲಿಯಬೇಕಾದದ್ದು ಬಹಳಷ್ಟಿದೆ ಅನ್ನುವುದು ಎಷ್ಟು ಸರಿಯೋ, ಕಣ್ಣು ಮುಚ್ಚಿ ಅವರನ್ನು ರೋಲ್ ಮಾಡೆಲ್ ಅಂತ ಒಪ್ಪಿಕೊಳ್ಳುವುದು, ಸಮಾಜದ ಬಗ್ಗೆ ಅವರು ಕೊಡುವ ಟಿಪ್ಪಣಿಯನ್ನು ಪರಿಶೀಲಿಸದೆ ವೇದ ವಾಕ್ಯವೆಂಬಂತೆ ಕಣ್ಣಿಗೊತ್ತಿಕೊಳ್ಳುವುದು ಅಷ್ಟೇ ತಪ್ಪು.

49 ಕಾಮೆಂಟ್‌ಗಳು:

  1. naanu idanna poortiyagi opthene. Nijakku kannada bhasheya karyakramadalli Murthiyavarannu serisuvadu sariyalla yennuvade nanna annona. Namma mukhyamanthriyavarige bhashegintha doddistikeye doddadu :(

    -Balachandra

    ಪ್ರತ್ಯುತ್ತರಅಳಿಸಿ
  2. ಇವರು ತಮ್ಮ ಸಂಸ್ಥೆಯಲ್ಲಿ ಓಣಮ್-ಗೆ ರಜೆ ಕೊಡ್ತಾರೆ ಆದ್ರೆ ಉಗಾದಿಗೆ ರಜೆ ಕೊಡೋಲ್ಲ...ಅದು ನಮ್ಮೇ ಬೆಂಗಳೂರಿನಲ್ಲಿ. ಸುಧಾ ಮೂರ್ತಿ ಒಬ್ಬರು ಸಮಾಜ ಸೇವಕಿ ಅಂತೆ. ಅವರು ಕನ್ನಡದಲ್ಲಿ ಕೆಲವು ಪುಸ್ತಕಗಳನ್ನು ಬರೆದಿದ್ದಾರೆ. ಅವರ ಮಾತಿಗೆ ಇವರು ಎಷ್ಟು ಬೆಲೆ ಕೊಡ್ತಾರೋ ಗೊತ್ತಿಲ್ಲ.

    ಪ್ರತ್ಯುತ್ತರಅಳಿಸಿ
  3. ವಸ೦ತ್,
    ತು೦ಬಾ ಒಳ್ಳೆ ಲೇಖನ. ವಿಷಯಗಳನ್ನ ತು೦ಬಾ ಚೆನ್ನಾಗಿ ಬಿಡಿಸಿ ಬರ್ದಿದೀರ. ಕನ್ನಡಿಗನಾಗಿ ಕನ್ನಡಕ್ಕೋಸ್ಕರ ಮೂರ್ತಿಯವರು ಏನೂ ಮಾಡಿಲ್ಲ ಅನ್ನೋದು ನನ್ನ ಅಭಿಪ್ರಾಯ ಕೂಡ. ಇನ್ಫೋಸಿಸ್ ಸ೦ಸ್ಥೆ ಬಿಟ್ಟಿಯಾಗಿ ಕರ್ನಾಟಕಕ್ಕೆ ಏನೂ ಮಾಡಿಲ್ಲ. ಒ೦ದು ರೂಪಾಯಿ ಸಮಾಜಕ್ಕೆ ಅ೦ತ ಖರ್ಚು ಮಾಡಿದ್ರೆ ಅದಕ್ಕೆ ಹತ್ತು ರೂಪಾಯಿ ಸರ್ಕಾರದಿ೦ದ ಲಾಭ ಪಡೆದಿದೆ ಅನ್ನೋದು ಕಹಿ ಸತ್ಯ. ಕನ್ನಡ ಸಮ್ಮೇಳನಕ್ಕೆ ಮೂರ್ತಿಯೋರನ್ನ ಕರಿಯೋದು ಹೇಗಿದೆ ಅ೦ದ್ರೆ, ಜನ್ಮಾಷ್ಟಮಿಗೂ ಹಿಮಾಮ್ಸಾಬಿಗೂ ಇರೋ ಸ೦ಬ೦ಧ ಥರಾ ಇದೆ. ದೊಡ್ಡ ಸ೦ಸ್ಥೆ ಕಟ್ಟಿದ್ದಾರೆ ಅನ್ನೋ ಕಾರಣಕ್ಕೆ, ಕರ್ನಾಟಕ ರಣಜಿ ತ೦ಡಕ್ಕೆ ಆಡ್ಸಕ್ಕಾಗತ್ತ?? ನಾನು ಮೂರ್ತಿಯವರ ಹಾಗೂ ಇನ್ಫೋಸಿಸ್ ಸ೦ಸ್ಥೆಯ ಅಭಿಮಾನಿಯೇನಲ್ಲ ಹಾಗಾಗಿ ನಾನು ಹೇಳಿರೋ ಮಾತುಗಳು ಸ್ವಲ್ಪ ಕಠಿಣವಾಗಿರಬಹುದು. ಬೇಜಾರಾಗಿದ್ದಲ್ಲಿ ಕ್ಷಮೆ ಇರಲಿ.
    ಕನ್ನಡಕ್ಕಾಗಿ/ಕನ್ನಡಿಗರಿಗಾಗಿ ದುಡಿತಾ ಇರೋ ಬೇಕಾದಷ್ಟು ಎಲೆ ಮರೆಯಲಿ ಇರೋ ಕಾಯಿಗಳಿವೆ. ಅವರುಗಳು ಹಣ್ಣಾಗೋ ಮು೦ಚೆನೇ ಗುರುತಿಸಿ, ಅವರುಗಳು ಮಾಡಿರೋ ಅಪ್ರತಿಮ ಕೆಲಸಗಳನ್ನ ಶ್ಲಾಘಿಸಿ ಅವರಿಗೆ ಸಿಗಬೇಕಾಗಿರೋ ಸ್ಥಾನಮಾನಗಳನ್ನ ಕೊಟ್ರೆ ಮು೦ದೆ ಬರೋ ಕನ್ನಡದ ಚಿಗುರುಗಳಿಗೆ ಕನ್ನಡನಾಡಿಗಾಗಿ ದುಡಿಯೋ ಹುಮ್ಮಸ್ಸು ದ್ವಿಗುಣಗೊಳ್ಳುತ್ತೆ ಅನ್ನೋದು ನನ್ನ ಅಭಿಪ್ರಾಯ.

    ವ೦ದನೆಗಳೊ೦ದಿಗೆ,
    ಅವಿನಾಶ

    ಪ್ರತ್ಯುತ್ತರಅಳಿಸಿ
  4. ಚೆನ್ನಾಗಿದೆ ಲೇಖನ ವಸಂತ್ .. ಒಂದು ಪ್ರಿಂಟ್ ತಗೊಂಡಿದ್ದೀನಿ :-). ನನ್ನ ಬಗ್ಗೆ ನಿಮಗೆ ಗೊತ್ತಲ್ಲ :-) ಪರಿಚಯ ಬೇಡ ಅಂತ ತಿಳಿತೀನಿ :))))
    --

    ಪ್ರತ್ಯುತ್ತರಅಳಿಸಿ
  5. ಲೇಖನ ಚೆನ್ನಾಗಿದೆ ವಸಂತ್. ಇಂದಿನ ಕನ್ನಡ ಪ್ರಭದಲ್ಲಿ ರಕ್ಷಣಾ ವೇದಿಕೆಯ ನಾರಾಯಣ ಗೌಡ್ರು ವ್ಯಕ್ತ ಪಡಿಸಿರುವ ಅಭಿಪ್ರಾಯ ಯುಕ್ತವಾಗಿದೆ. http://www.kannadaprabha.com/NewsItems.asp?ID=KPE20110304010525&Title=Editorial&lTitle=%D1%DAM%AE%DB%A5%DAP%DE%BE%DA%DF&Topic=0&ndate=3/4/2011&Dist=0

    ಪ್ರತ್ಯುತ್ತರಅಳಿಸಿ
  6. ಇಂಗ್ಲಿಷ್ ಯಿಂದಾನೇ ಎಲ್ಲ ಸಿಗುತ್ತಿರುವುದು ನಿಜವಾಗಿರುವಾಗ ಅವರು ಹೇಳಿರುವುದರಲ್ಲಿ ತಪ್ಪೇನಿದೆ ರೀ ಅಂತ ನೀವು ಕೇಳಬಹುದು. ಇಂಗ್ಲಿಷ್ ಯಿಂದ ಅದು ಸಾಧ್ಯ ಯಾಕಾಗಲ್ಲ ಅನ್ನುವುದನ್ನು ಮೊದಲಿಗೆ ಅರ್ಥ ಮಾಡಿಕೊಳ್ಳಬೇಕು. ಇವತ್ತಿಗೂ ಕರ್ನಾಟಕದ ೮೩% ಮಕ್ಕಳು ಕನ್ನಡ ಮಾಧ್ಯಮ ಶಾಲೆಯಲ್ಲೇ ಓದುತ್ತಿದ್ದಾರೆ. ೯೦ ಲಕ್ಷ ವಿದ್ಯಾರ್ಥಿಗಳಿಗೆ ಅವರ ವಾತಾವರಣದಲ್ಲಿ ಇಲ್ಲದ ಇಂಗ್ಲಿಷ್ ನುಡಿಯಲ್ಲಿ, ಅವರೆಲ್ಲ ಇಂಗ್ಲಿಷ್ ನಲ್ಲೇ ಚೆನ್ನಾಗಿ ಪಾಠ ಕೇಳಿ, ಕಲಿತು, ಮನದಟ್ಟು ಮಾಡಿಕೊಳ್ಳಲು ಇಂಗ್ಲಿಷ್ ಅನ್ನು ಅರೆದು ಕುಡಿದಿರುವ, ಅದನ್ನು ಮಕ್ಕಳಿಗೆ ಅಷ್ಟೇ ಪರಿಣಾಮಕಾರಿಯಾಗಿ ಕಲಿಸಬಲ್ಲ ಪರಿಣಿತ ಶಿಕ್ಷಕರು ಬೇಕು. ಪ್ರತಿ ಮೂವತ್ತು ವಿದ್ಯಾರ್ಥಿಗೆ ಒಬ್ಬ ಶಿಕ್ಷಕ ಅಂದರೆ ಕಡಿಮೆ ಅಂದರೂ 3 ಲಕ್ಷ ಜನ ಇಂಗ್ಲಿಷ್ ಬಲ್ಲ ಶಿಕ್ಷಕರು ಬೇಕು. ಹೇಳಿ ಎಲ್ಲಿಂದ ತರೋಣ ಇವರನ್ನೆಲ್ಲ? ಇರುವ ಮಕ್ಕಳಿಗೆ ಕನ್ನಡದಲ್ಲೇ ಪಾಠ ಮಾಡಲು ಶಿಕ್ಷಕರು ಸಿಗುತ್ತಿಲ್ಲ. ಇನ್ನೂ ಇವರನ್ನೆಲ್ಲಿಂದ ತರೋಣ ? ವಾತಾವರಣದಲ್ಲಿರುವ ಮಕ್ಕಳ, ಶಿಕ್ಷಕರೆಲ್ಲರ ಭಾಷೆಯಾಗಿರುವ ಕನ್ನಡದಲ್ಲಿ ಇಂತಹದೊಂದು ವ್ಯವಸ್ಥೆ ಕಲ್ಪಿಸುವುದು ಸುಲಭವೋ ಅಥವಾ ಇದಾವುದು ಇಲ್ಲದ ಇಂಗ್ಲಿಷ್ ನಲ್ಲೋ? ಹಾಗಿದ್ದರೆ ಇವತ್ತಿರುವ ಕನ್ನಡ ಮಾಧ್ಯಮ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಿ, ಹೆಚ್ಚಿನ ಕಲಿಕೆಯನ್ನು ಅದರಲ್ಲೇ ತರುವ ಪ್ರಯತ್ನಕ್ಕೆ ಹಣ, ಸಂಪನ್ಮೂಲ, ಆದ್ಯತೆ ಕೊಡೋಣ ಅನ್ನುವ ಮಾತು ಮೂರ್ತಿಯವರು ಆಡಿದ್ದರೆ, ಆ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರೆ ಅವರಿಗೆ ನಮ್ಮ ಸಮಾಜವೂ ಅರ್ಥವಾಗಿದೆ ಅನ್ನಬಹುದಿತ್ತೆನೋ ಅನ್ನಿಸಲ್ವಾ?

    ಪ್ರತ್ಯುತ್ತರಅಳಿಸಿ
  7. Infosys making profit by sucking employees blood. Compulsary Certification, Deadline etc.etc
    They fired some employee for filling wrong investment proof. But they have not paid Crores of Tax to Govt.
    No Social work. They Just looting land, water and tax beneifts of the Govt and Karnataka
    Go to any Infosys Campus you can hardly find kannadigas. Even some of my malayalee freinds saying that , Narayan moorthy basically a kerlaite..It says that, they tottaly neglected the people of karnataka. I really hate them. They did nothing :(

    ಪ್ರತ್ಯುತ್ತರಅಳಿಸಿ
  8. ಒಳ್ಳೆಯ ಲೇಖನ ಪ್ರಕಟಿಸಿದ್ದೀರಿ...! ನಿಮ್ಮ ಮಾತು ಅಕ್ಷರಶಃ ನಿಜ. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ English ಬಹಳ ಮುಖ್ಯ ಅನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಕನ್ನಡದ ಸಮಾಧಿ ಮೇಲೆ ಇಂಗ್ಲಿಷ್ ಸಾಮ್ರಾಜ್ಯ ಕಟ್ಟುವುದು ಎಷ್ಟು ಸಮಂಜಸ. ಬಹುಶಃ ನಾರಯಣ ಮೂರ್ತಿಗಳಿಗೆ english ಮಾಧ್ಯಮದ ಶಿಕ್ಷಣ ಮುಂದೆ ಎಂಥಹ ಅಪಾಯ ನಮ್ಮ ಜನಾಂಗಕ್ಕೆ ತಂದೊಡ್ಡುತ್ತದೆ ಅನ್ನುವುದರ ಬಗ್ಗೆ ಅರಿವಿಲ್ಲ. ಒಂದು ಭಾಷೆ, ಕಲೆ, ಜನಾಂಗ, ಸಂಸ್ಕ್ರತಿಯನ್ನೇ ಅದೂ ನಾಶ ಮಾಡುತ್ತದೆ.

    ಪ್ರತ್ಯುತ್ತರಅಳಿಸಿ
  9. ಒಂದೇ ಮಾತಿನಲ್ಲಿ ಹೇಳುವುದಾದರೆ ಮೂರ್ತಿಯವರು ಜಾಗತೀಕರಣದಿಂದ ಎನೇನು ’ಪಡೆ’ಯಬಹುದೆಂದು ತೋರಿಸಿಕೊಟ್ಟರು. ಆದರೆ ಅದಕ್ಕಿಂತ ಮುಕ್ಯವಾಗಿ ಏನೇನು ’ಕೊಡ’ಬಹುದೆಂದು ತೋರಿಸಿಕೊಡಲು ಅವರಿಗೆ ಸಾಧ್ಯವಾಗಲಿಲ್ಲ. ಯಾಕಂದ್ರೆ ’ಕೊಡ’ಬಹುದೆಂಬುದರ ಬಗ್ಗೆ ಅವರಿಗೆ ನಂಬಿಕೆ ಇಲ್ಲ ಅನ್ಸುತ್ತೆ.

    ಪ್ರತ್ಯುತ್ತರಅಳಿಸಿ
  10. "ಯಾರಾದ್ರೂ ಗೆಲುವು ಕಂಡ್ರೆ, ಎಲ್ಲದಕ್ಕೂ ಅವರ ಸಲಹೆ ಕೇಳುವುದು ನಮ್ಮ ಸಮಾಜ, ಸರ್ಕಾರಕ್ಕಂಟಿರುವ ಊನವೆನ್ನಬಹುದು " ಸತ್ಯವಾದ ಮಾತು . ಅವರ ಕಾರ್ಯಕ್ಷೇತ್ರದಲ್ಲಿ ಅವರ ಸಲಹೆ ಕೇಳಬೇಕೆ ಹೊರತು ಎಲ್ಲವಕ್ಕೂ ಸೆಲೆಬ್ರಿಟಿಗಳ ಸಲಹೆ ಕೇಳೋದು ತಪ್ಪು. ನಾರಾಯಣಮೂರ್ತಿ , ಮಲ್ಯ , ಐಶ್ವರ್ಯ ರೈ , ಶಿಲ್ಪ ಶೆಟ್ಟಿ ... ಎಲ್ಲರೂ ನಮ್ಮ ರಾಜ್ಯದವರಾಗಿ ನಮ್ಮ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ . ಅದನ್ನು ಒಪ್ಪಿಕೊಳ್ಳಬೇಕು. ಆದರೆ ಕನ್ನಡ ಭಾಷೆಗೆ ಅವರ ಕೊಡುಗೆ ಏನು? ಈ ಕ್ಷೇತ್ರದಲ್ಲಿ ಖಂಡಿತ ಅವರಿಗಿಂತ ಅರ್ಹ ವ್ಯಕ್ತಿಗಳು ಸಾಕಷ್ಟಿದ್ದರು.

    ಪ್ರತ್ಯುತ್ತರಅಳಿಸಿ
  11. ನಿಜ ನೀವು ಹೇಳೋದು ಅವರು ಸಾಫ್ಟ್‌ವೇರ್ ಫೀಲ್ಡ್ ನಲ್ಲಿ ಒಳ್ಳೇ ಉದ್ಯಮಿ ಕನ್ನಡ ವಿಷಯಕ್ಕೆ ಬಂದ್ರೆ ಅವಾರ್ಡ್‌ದು ೧೦ ಕ್ಕೆ ೫ ಅಷ್ಟೇ
    ಇವರೆಲ್ಲ ತಮಿಳರನ್ನ ನೋಡಿ ಕಲಿಬೇಕು ಅಲ್ಲವೇ???

    ಪ್ರತ್ಯುತ್ತರಅಳಿಸಿ
  12. guruve, kelpatte, kelpatte antha barede.
    konegu adda gode yalli deepa itta hagide. lekhana aa kadegu illa ee kadegu illa. ee thara ellaru helabahudu. konegu nanage gotthgilla , neevu yaava kade iddi endu. lekhana yaavudadaru ondu kade irabeku. adu sari idu sari andre hege?

    ಪ್ರತ್ಯುತ್ತರಅಳಿಸಿ
  13. IT conferenceಗಳಿಗೆ ಮೂರ್ತಿ ಅವರನ್ನು ಕರೆದರಾಯಿತು. ಕನ್ನಡ ಸಂಭಂದ ಪಟ್ಟ ಕಾರ್ಯಕ್ರಮಕ್ಕೆ ಅವರಿಗೆ ರಜೆ ಕೊಟ್ಟುಬಿಡಿ. ಗೊಂದಲ ಬೇಡ.

    ಪ್ರತ್ಯುತ್ತರಅಳಿಸಿ
  14. naanu kooda obba malayali inda narayana murthy malayaliyavru anta kelpatte, ashtara mattige malayaligalu avranna malayaliyagi maadi bittidare. adre adu sullu

    ಪ್ರತ್ಯುತ್ತರಅಳಿಸಿ
  15. ondu nenapu........C .Ashwath avara " KANNADAVE SATYA" karyakrama bengalurinalli nadeyuvaga , adarallu C. Ashwathravarige "smt. SUDHA MURTHY" 5 rupayee nu illa endhu thamma atheeva badathana pradarshisidaru....... kannada da bagge 5 paiseya kalajiyu illada, kannadigarige ottase yagi nillada INFOSYS murthy kutumbhake isthu dodda maryadeya agathya illa........... idhu C. ASHWATH avaru helidhu. " KANNADAVE SATYA RANGANNA".........

    ಪ್ರತ್ಯುತ್ತರಅಳಿಸಿ
  16. I Am proud to be indian and kannadiga.But my point of view at the end of the day for a common man what matters his basic need .For me language is not basic need.I am proud of my language.But Murthy has given basic needs to laks of people directly indirectly.Among them many r kannadigas.Indirectly many ppl r dependendant on infosys

    ಪ್ರತ್ಯುತ್ತರಅಳಿಸಿ
  17. Infosys Narayan murthy to inaugurate Vishwa Kannada Sammelana......... WHAT HAS NARAYANA MURTHY DONE FOR KANNADA & KANNADIGA'S.......??

    ಪ್ರತ್ಯುತ್ತರಅಳಿಸಿ
  18. I dont agree to fact that he is not eligible. He is eligible but there r more eligible people than him.

    ಪ್ರತ್ಯುತ್ತರಅಳಿಸಿ
  19. Obba udyami eshtu madabeku...ashtu madidare....udyamiyinda samajaseva expect maduvudu murkhatana.....Avrinda saviraru kannadagirige olleyadagide(Indirectly)....Ashtu mathra expect madi, computer programming bittu narayana murthy halegannada kalthidre avru infosys kattalikke agutha iralilla..navu ee topic mathado avashyakathe nu irlilla...

    AVRANNA TIKISUVAVARU SHUDHA MURKHARU....

    ಪ್ರತ್ಯುತ್ತರಅಳಿಸಿ
  20. srinivas

    idu kahndita olle lekhana,narayana murthy yavara bagge gottiladavarige avara darshana :)

    ಪ್ರತ್ಯುತ್ತರಅಳಿಸಿ
  21. I am feeling very sad to see some of the comments about narayana murthy. Im an NRI working in in U.K from past 10 years in health care.We say narayana murthy is a Indian and we all appreciate here what he has done to the country and we are very proud of him. but u people here fighting there he is Kannadiga and some say he is malayalee and other say he is not done anything to the state or country can anybody tell me what politicians have done to ur country. Common friends it's time to wake up ad think wise and don't get influence by politicians words.

    ಪ್ರತ್ಯುತ್ತರಅಳಿಸಿ
  22. Pavan Kumar

    Initially i feel proud to be a Kannidiga, as per my personal view there is no harm in considering him to for Belguam Kannada summit, he has contributed so much to Karnataka and to India, so my advice is that people should not give so much hype to that and make out an issue..

    Regards
    Pavan
    Jai Hind

    ಪ್ರತ್ಯುತ್ತರಅಳಿಸಿ
  23. Kannadavaru dodda hudde yali idavaru enu madolla yakke andre avarige mado mansu illa narayana murthy kuda same categaroy so illi narayana murthy blame madi eno proyojana.Nama (kannadigarali barabeku omatha illa andre bari bina matha.

    ಪ್ರತ್ಯುತ್ತರಅಳಿಸಿ
  24. bari saahitigale seri sahitigale sammelana mad-kolli....narayana murthy-yantha shreshtha vyaktigale sammelanakke anarharu annodadre, nannanthaha saamanyarige alli en kelsa???

    ಪ್ರತ್ಯುತ್ತರಅಳಿಸಿ
  25. Priya geleya Vasanta,
    Naanu Maahi Bindaas hudga..Nimma blog annu odhi bahala santhosha ayithu..noorakke nooru sathya.
    Kannadanaadu jaagathika mattadalli yelige kaanutta,tanna bashapremavannu vistarisbeku.idu kevala narayana murthy,atawa vishwa sammelanadinda sadhyavaguvudilla.idu nammellara ommanassininda,baasha abhimanadinda,baasha premadinda,hemme,garvadinda,druda sankalpadinda,..aah marethu bitte..kannadigarinda maatra saadhya

    ಪ್ರತ್ಯುತ್ತರಅಳಿಸಿ
  26. rakesh dbp
    There r people great, based on der abilities n on der contribution to de society, so its better to accept each person prosperous n should respect his contribution! oorels it ll be a a junk of problems aste!!!! one thing wen world cup is won by any team de cup is not given by de best player or x player but given by sum public leader...

    ಪ್ರತ್ಯುತ್ತರಅಳಿಸಿ
  27. MADHURAJA,

    Kannadigaralli INFOSYS NARAYANA MURTY THARADAVARU BAHALA JANA IDAARE! Antha bahala janaranna naanu sandisiddene. EE tharahadavarige thamma, bhashe, nelada bagge Maathadoke svalpa NACHIKE, SANKOCHA IROTHE PAAPA! bekadre SMT.SUDHA NARAYANA MURTHY avranna interveiw maadi kachita padisikolli.Yaakandre avru obba olle baraha gaati! mattu janarondige muktavaagi bereyuva swabhavadaru.

    adeno sari kannadigaru sammelanada mukya vyaktiyannagi aayke maadidaru, aadre INFOSYS NARAYANA MUTHY idara bagge yenu helidaru? adara bagge vicharave illa?

    ಪ್ರತ್ಯುತ್ತರಅಳಿಸಿ
  28. Geleyare..

    Eega NRN avaranna kannada saahithya sammelanakke aahvanisalaagide. Naavu sumne NRN idakke suktha vyakthi alla antha charchisuvudannu bittu avaru sammelanakke bandu kannada bhasheya,bhashikara kodugeya bagge chennagi aritu maatanaadali mattu kannada bhasheya abhivruddiya bagge sarakara kaigolluva ella karyakramagalige sampoorna sahakara needutthene,sahaya maaduththene antha ghoshisali endu aashisona

    inti kannadiga,
    Sachi Vasishta

    ಪ್ರತ್ಯುತ್ತರಅಳಿಸಿ
  29. ಕನ್ನಡಿಗರು ಮೇಲೆ ಬಂದ್ರೆ ಕನ್ನಡಿಗರಿಗೆ ಹೊಟ್ಟೆ ಉರಿ .. ದೊಡ್ಡವರಿಗೆ ನಾವುಗಳು ಸ್ವಲ್ಪ ಹೆಚ್ಚ್ಹು ಮರ್ಯಾದೆ, ಸನ್ಮಾನ ಮಾಡಲೇಬೇಕು, ಆಗಲೇ ಅವರು ಕನ್ನಡದ ಬಗ್ಗೆ ಸ್ವಲ್ಪ ವಾದರೂ ಅಭಿಮಾನ ತೋರುತ್ತಾರೆ. ನಮಗೆ ಈಗ ಎಲ್ಲರಿಂದಲೂ ಸಪ್ಪೋರ್ಟ್ ಬೇಕ್ಕಾಗಿದೆ , ಎಲ್ಲರನ್ನು ಹೀಗೆ ಒದೆಯುತ್ತಿದ್ದರೆ, ಕನ್ನಡಿಗರು ಬಹಳ ಮುಂದೆ ಒದ್ದಾಡ ಬೇಕಾಗುತ್ತದೆ ..

    ಪ್ರತ್ಯುತ್ತರಅಳಿಸಿ
  30. Chiranjeevi..

    Vasanth,

    Naanu Infosys, mysurnalli kelasa maadtiddeeni.. Murthy avrna hattiradinda nodi, nim ee article nodidre nagu baratte.

    English medium school start maadi anta heliddre hortu kannada kalibedi, balasbedi anta helillvalla. English kalsoke teachers illa andre adu sarkara da tale novu.. NRN adkakke sponsor maado athva sarkarada jote maataado avashyakthe enide?
    NRN bidi, Narayan Gowdru maadbahudalvaa? Janara duddanna namma nayakaru neer tara kuditaare... Adanna correct maadi shaale galna, teachers na sponsor maadbahudalvaa?

    Mysuru matte mangaluralli malayali galu jaasti nija - Kerala hatra ide antaano eno gottilla. Adrinda malayali galige karnataka dalli importance kottiddaare annodu tappu.. Talent iddavru yellidru yashassina eni hatti mele hogtaare....

    Eega karnataka, tamil naadu anta jagla aado naavu; munde nandu bengluru, nindu belagavi anta jagla aado dinaanu barutte ansate...

    Namma bhaashe, namma jana annodu elrigu irbeku. aadre adu obba manushyana belavanige, yelige na haal maadbaardu alvaa?

    Est jana kannadigaru hora rajya, hora deshagalalli kelsa maadtilvaa? Ella kaade, local talent na hudki - train maadi kelsa maadso tara iddidre nammavrella ille irtidru alvaa?


    Samaja seve: Samsthe kade indaanu, swayam prerane indaa nu naavu avagavaaga vrudhhashrama, anathashrama galige hogi, avara jote 1 dina samaya kaldu, aadastu daana maadi, maklige paata hel kottu barteevi... chamundi betta swachha maadiddeevi.. govt shaale galige bheti neediddeevi....

    Kannadadavru, malyali galu anta lekka chaara maadi idella maadalla... ee tara karyakrama galalli kannadadavraste bere rajya da geleyaru irtaare (50% gu hecchu)...

    10/- daana maadi, adanna publicity kodoke 20/- kharchu maadodu est important anta eega gottaagtide.... illa andre, jana heege maataadodu....


    Nija, NRN ee karyakramakke sariyaada vyakti alla.. yaaraadru rajakeeya vyakti na karkondbandu udghatane maadsona... Kannada da bagge olle bhasha bigdu chappale gittuskondu mane ge hogi astu chappaale estu vote galaagi convert aagtaave anta lekka haaktaare... Enanteera?

    ಪ್ರತ್ಯುತ್ತರಅಳಿಸಿ
  31. ಯಾಕೋ ಗೊತ್ತಿಲ್ಲ ಎಲ್ಲರು ಈ ವೇದಿಕೇಲಿ ಮೂರ್ತಿ ಅವರನ್ನ ಖಂಡಿಸ್ತಿದಿರಾ ! ಆದ್ರೆ ಅವ್ರು ಮಾಡಿರೋ ಅಂಥ ದೊಡ್ಡ ಅಪರಾಧ ಏನು ? ಇನ್ಫೋಸಿಸ್ನಲ್ಲಿ ಕನ್ನಡಿಗರು ಕಡಿಮೆ ಇದ್ದಾರೆ ಅಂತಾನಾ? ಅದಕ್ಕೆ ಅವ್ರೇನ್ ಮಾಡೋಕಾಗತ್ತೆ?
    ಎಲ್ಲೆಲ್ಲಿಂದ ಅವ್ರಿಗೆ ಬುದ್ಧಿವಂತರು ಸಿಗತಾರೋ ಅಲ್ಲಿಂದ ತೊಗೊಳತಾರೆ ಅಷ್ಟೇ.. ನಾವು ಖುಷಿ ಪಡಬೇಕು ಅಷ್ಟೊಂದು ಬೇರೆ ಬೇರೆ ಥರದ ಜನರ ನಾಯಕರಾಗಿ ಕನ್ನಡಿಗರೊಬ್ಬರು ಆಳ್ವಿಕೆ ನಡೆಸುತ್ತ ಇದ್ದಾರೆ ಅಂತ.. ಅದು ಬಿಟ್ಟು ಕನ್ನಡಕ್ಕೆ ಏನೂ ಮಾಡಿಲ್ಲ ಅಂತ ಬಡ್ಕೊಂದ್ರೆ !? ಕಥೆ ಕಾದಂಬರಿ ಸಾಹಿತ್ಯ ಎಲ್ಲ ಬರೆಯೋಕೆ ನಮ್ಮಲ್ಲಿ ಬೇರೆ ಬುದ್ಧಿವಂತರಿದ್ದಾರೆ. ಅವರಿಗೆಲ್ಲ ಅವರಿಗೆ ಗೌರವಾನೂ ಸಲ್ಲತಾ ಇದೆಯಲ್ಲ..ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನಗಳು, ಜಿಲ್ಲಾ ತಾಲ್ಲೂಕು ಮಟ್ಟದ ಸಮ್ಮೇಳನಗಳು ಇದ್ದೆ ಇವೆ.. ಅಷ್ಟು ಮೀರಿ ಕನ್ನಡಾನ, ಸಾಹಿತ್ಯಾನ ಗೌರವಿಸಬೇಕೆನ್ನೋವ್ರು ಕನ್ನಡ ಪುಸ್ತಕ ಕಥೆ ಕಾದಂಬರಿಗಳನ್ನ ಓದಿ, ಕಂಗ್ಲೀಷ್ ಬಿಟ್ಟು ಶುದ್ಧ ಕನ್ನಡ ಭಾಷೆ ಮಾತಾಡೋದಕ್ಕೆ ಪ್ರಯತ್ನ ಪಡಿ..

    ಮೇಲಾಗಿ ಇದು ಸಾಹಿತ್ಯ ಸಮ್ಮೇಳನವಲ್ಲ.. ಸಾಂಸ್ಕೃತಿಕ ಸಮ್ಮೇಳನ... ಅದರಲ್ಲಿ ಉತ್ಸವ ಮೂರ್ತಿಗಳಂತೆ ಇರುವ ಪ್ರಧಾನ ಮಂತ್ರಿ, ರಾಷ್ಟ್ರಪತಿಗಳನ್ನ ಕರೆದರೆ ಏನು ಪ್ರಯೋಜನ..ಎನ್ ಆರ್ ಎನ್ ಅವ್ರು ಹಿರಿಯರು, ಕನ್ನಡಿಗರು. ಅವ್ರು ಕನ್ನಡ ಮಾತಾಡೋದನ್ನ ಕೇಳಿಲ್ಲ ಅಂತ ಅವ್ರು ಕನ್ನಡ ವಿರೋಧಿ ಅಂತ ಹೇಳಕ್ಕಾಗಲ್ಲವಲ್ಲಾ.. ಅವರಿಗೂ ಒಂದು ಅವಕಾಶ ಕೊಟ್ಟರೆ ಅವರ ಭಾವನೆಗಳು ಏನು ಅಂತ ಮುಕ್ತವಾಗಿ ಹಂಚಿಕೊಳ್ಳುವನ್ತಾಗುತ್ತದೆ... ಮೇಲಾಗಿ ಕನ್ನಡಿಗರು ಕನ್ನಡಿಗರ ಕಾಲೆಳೆಯೋ ಚಾಳಿನ ಬಿಡಬೇಕು.. ನಮ್ಮವರನ್ನ ಬೆಂಬಲಿಸಲಿಕ್ಕೆ ಕಲಿಬೇಕು.. ಎನ್ ಆರ್ ಎನ್ ಅವ್ರು ಪದ್ಮವಿಭೂಶಣರು.. ಒಂದು ಲಕ್ಷ ಜನರಿಗೆ ಉದ್ಯೋಗ ಕೊಡೊ ಕಂಪನಿ ಕಟ್ಟೋದು ಅಂದ್ರೆ ಸಾಮಾನ್ಯನ.. ನಿಜವಾಗಲು ಅವ್ರು ಭಾರತ ರತ್ನ.. ಅದು ಅವ್ರಿಗೆ ಸಿಗುವಂತಾಗಲಿ ಅಂತ ಮುಕ್ತ ಮನಸ್ಸಿನಿಂದ ಹಾರೈಸಿ...

    ರಾಜೀವ

    ಪ್ರತ್ಯುತ್ತರಅಳಿಸಿ
  32. Kamal:

    Yaakree ellaaroo istondu Bhaavukaraagthira..... Moorthy avaroo obba kannadiga. aatha udghaTane maadidare enu thappu... Istella maathaado kannadigaru naavella kannadakke enu maadidivi antha......Odhi kelsa maadodu videshi samsthegalige.. athava videshiyarige.....Naavu namma swaarthane nodikollutthirodu.....Istella maathaadthivalla.....estu Jana kannadigaru kannada sariyaagi bareethivi??? estu jana kannda patrie odutthivi???? estu jana thamma thamma kelasadalli kannada lipi balasikondu thamma dainandika dinachari munduvaresthivi....???? Naavugale Kannadaambege sariyaada seve maadolla...haagiddalli, bere vyakthiya kannaDadaikyatheya sawaalu maadodu estu samanjasa......Nammu mukkaalu vaasi badukinalli Kanglish upayogiso samaya eega....sari inmelinda.....kannadaambe na pakkadallittu kanglish abbe na tharonna....sari hogutthe....istella maathaado badalu...Naavugalu modalu Acchagannada upayogiso prayatna maadonna....nanthara beer vichara maadonna....

    ಪ್ರತ್ಯುತ್ತರಅಳಿಸಿ
  33. narayana murthy doesnt know anything about kannada, and its culture.
    He is a role model icon, and etc. are true, but for that reason he should not be given chance to inagurate event like vishwa kannada samelana.

    its not any gobal meet.

    ಪ್ರತ್ಯುತ್ತರಅಳಿಸಿ
  34. ನಾರಾಯಣ ಮೂರ್ತಿ ಅವರಿಂದ ಕನ್ನಡ ಸಮಾಜ ಕಲಿಯಬೇಕಾದ ಕೆಲ ಗುಣಗಳಿವೆ. ಹಾಗೆಯೇ, ನಮ್ಮ ಸಮಾಜವನ್ನು ಅವರು ಅರ್ಥ ಮಾಡಿಕೊಳ್ಳುವಲ್ಲ ಕೆಲವೆಡೆ ಎಡವಿರುವುದರಿಂದ ಮತ್ತು ಅವರ ಆ ತಪ್ಪು ನಿಲುವುಗಳಿಗೆ ಸರ್ಕಾರವೇನಾದರೂ ಮಾನ್ಯತೆ ನೀಡಿದ್ದೇ ಆದಲ್ಲಿ ಆಗಬಹುದಾಗ ತೊಂದರೆಗಳು ದೊಡ್ಡದೇ ಆಗಿವೆ. ಹಾಗಾಗಿ, ಅವರನ್ನು ಕಣ್ಣು ಮುಚ್ಚಿ ಹಿಂಬಾಲಿಸುವುದು ಕೂಡಾ ಅಷ್ಟೇ ದೊಡ್ಡ ತಪ್ಪಾಗುತ್ತೆ. ಅವರ ಸಾಧನೆ ನಮಗೆ ಸ್ಪೂರ್ತಿಯನ್ನೀಡಲಿ, ಆದರೆ ಅವರ ಕೆಲವು ತಪ್ಪು ನಿಲುವುಗಳ ಬಗ್ಗೆ ಕನ್ನಡಿಗರಾದ ನಮಗೆ ಸರಿಯಾದ ನಿಲುವಿರಲಿ ಅನ್ನುವುದು ನನ್ನ ಲೇಖನದ ಉದ್ದೇಶ.

    ಓದಿ ಪ್ರತಿಕ್ರಿಯಿಸಿದ ಎಲ್ಲ ಗೆಳೆಯರಿಗೂ ವಂದನೆಗಳು.

    ಗಡಿ ಭಾಗದ ಬೆಳಗಾವಿಯಲ್ಲಿ ಇಂತಹದೊಂದು ಅಪರೂಪದ ಸಮ್ಮೇಳನ ನಡೆಯುವಾಗ ಕನ್ನಡಿಗರೆಲ್ಲ ಒಂದೆಂದೂ ಸಾರಲು, ನಮ್ಮೆಲ್ಲರ ಅಭಿಪ್ರಾಯ ಭೇದ ಬಿಟ್ಟು ಕೈ ಜೋಡಿಸಿ ಈ ಕಾರ್ಯಕ್ರಮ ಯಶಸ್ವಿ ಮಾಡಬೇಕಿದೆ. ಗಡಿ ಕನ್ನಡಿಗರ ಆತ್ಮ ವಿಶ್ವಾಸ ಹೆಚ್ಚಿಸುವಲ್ಲಿ ಈ ಸಮ್ಮೇಳನಕ್ಕೆ ಮಹತ್ವವಿದೆ. ಅದು ಚೆನ್ನಾಗಿ ನಡೆಯಲಿ.

    ಪ್ರತ್ಯುತ್ತರಅಳಿಸಿ
  35. ಕನ್ನಡ ...... ಕನ್ನಡ ಅಂತ ಕನ್ನಡಾಭಿಮಾನ ದ ಬಗ್ಗೆ ಮಾತನಾಡುವವರು ಕನ್ನಡ ದವರನ್ನೇ ದ್ವೇಷಿಸುವ ಈ ಕನ್ನಡಾಭಿಮಾನಿಗಳು
    ಬೆಂಗಳೂರಿನಲ್ಲಿ ನಮ್ಮ ಸಿರಿಗನ್ನಡ ದ ಸ್ಥಿತಿಯ ಬಗ್ಗೆ ಯಾವತ್ತಾದರೂ ಯೋಚಿಸಿದ್ದಾರೆಯೇ ?
    ಕನ್ನಡಿಗರು ತಮಿಳರಾಗಿ, ತೆಲುಗು ರಾಗಿ, ಮಲಯಾಳಿಗಳಾಗಿ, ತಮ್ಮನ್ನೇ ತಾವು ಬದಲಾಯಿಸಿಕೊಳ್ಳು ತ್ತಿರುವ ಕನ್ನಡಿಗರ ಬಗ್ಗೆ ಈ ನಮ್ಮ ಕನ್ನಡ ಪರ ಹೋರಾಟಗಾರರು ಏನು ಮಾಡುತ್ತಿದ್ದಾರೆ ?
    ಒಂದು ವಿಶ್ವ ಕನ್ನಡ ಸಮ್ಮೇಳನ ಮಾಡುತ್ತಿರುವ ಸಮಯದಲ್ಲಿ ಒಬ್ಬ ಕನ್ನಡಿಗನನ್ನು ಈ ರೀತಿಯಾಗಿ ಅವಹೇಳನ ಮಾಡುತ್ತಿರುವುದು ನಮ್ಮ ಬರಗೂರು ರಾಮಚಂದ್ರಪ್ಪ ಮತ್ತು ಸಂಗಡಿಗರು ನಾಚಿಕೆ ಯಾಗುತ್ತಿದೆ. ಇಲ್ಲಿ ನಮ್ಮ ಕನ್ನಡಿಗರ ಒಡಕು ಎದ್ದು ಕಾಣುತ್ತಿದೆ.
    ಕನ್ನಡಿಗರು ನಾವು ಕನ್ನಡ ತನ ಮೆರೆಯಬೇಕು. ಕನ್ನಡವನ್ನು ಮಾತಾನಾಡುವುದು "ಅವಮಾನ" ಎಂದು ಕೊಂಡಿರುವ ಯಾವತ್ತಿನ ನಮ್ಮ ಕನ್ನಡಿಗರೂ ತಮಗೆ ಬರದೆ ಇದ್ದರೂ ಅನ್ಯ ಭಾಷೆಗಳನ್ನು ಕಲಿತು ಮಾತನಾಡುತ್ತಾರೆ.
    ಮೊದಲು ಅದನ್ನು ಮಾಡಿ ಕನ್ನಡ ಉಳಿಸಿ,
    ರಾಜು ದಾವಣಗೆರೆ
    rajudavanagere@gmail.com

    ಪ್ರತ್ಯುತ್ತರಅಳಿಸಿ
  36. ನಮ್ಮ ಸಕಾ೯ರಕ್ಕೆ ಕನ್ನಡದ ಬಗ್ಗೆ ಕಾಳಜಿ ಇಲ್ಲ, ಆಡಳಿತ ಭಾಷೆ ಕನ್ನಡ ಅ೦ತ ಹೇಳಿ ಯಾವ ಕಾಲವಾಯಿತು. ನಮ್ಮಲ್ಲೇ ನ್ಯೂನತೆ ಇರಬೇಕಾದರೆ, ಜಾಗತಿಕ ಮಟ್ಟದಲ್ಲಿ ಕನಾ೯ಟಕದ ಹೆಸರನ್ನು ಕೋ೦ಡಾಡುವ೦ತೆ ಮಾಡಿದ ನಾರಾಯಣಮೂತಿ೯ ಯವರನ್ನು ಮೆಚ್ಚಲೆಭೇಕು ಆದರೆ ಅವರು ಕೆಲಸದಲ್ಲಿ ಕನ್ನಡದವರಿಗೆ ಮೂದಲ ಆದ್ಯತೆ ಕೂಟ್ಟರೆ ನಮ್ಮ ರಾಜ್ಯದ ಮೇಲೆ ಅಭಿಮಾನ ಇದೆ ಎ೦ದು ಕೂಳ್ಳೂಣ.

    ಪ್ರತ್ಯುತ್ತರಅಳಿಸಿ
  37. ನಾರಾಯಣ ಮೂರ್ತಿಯವರು ಮುಖ್ಯ ಅತಿಥಿಗಳಾಗಿ ಏನು ಭಾಷಣ ಮಾಡುತ್ತಾರೋ ಕಾದು ನೋಡಿ ನಂತರ ಅಭಿಪ್ರಾಯ ಸೂಚಿಸುವುದು, ಅಲ್ಲವೆ? ಈ ಸಮ್ಮೇಳನಕ್ಕೆ ಅವರನ್ನು ಆಹ್ವಾನಿಸುವ ಬಗ್ಗೆ ವಿವಾದಗಳು ಹುಟ್ಟಿಕೊಂಡಿರುವುದು ಅವರಿಗೂ ಗೊತ್ತಿರದೇ ಇಲ್ಲ. ಅವರು ಮೈಕ್‌ ಮುಂದೆ ನಿಂತು ಭಾಷಣ ಮಾಡುವುದನ್ನು ಕೇಳಿದ ನಂತರವೇ ಗೊತ್ತಾಗೋದು.

    ಸುಧಾ ಮೂರ್ತಿಯವರಿಗೆ ಈ ಆಹ್ವಾನ ನೀಡಿದ್ದಲ್ಲಿ ಜನರು ಸಮಾಧಾನಗೊಳ್ಳುತಿದ್ದರೋ ಏನೋ. ಸ್ವಲ್ಪವೂ ಕನ್ನಡ ಬಾರದ ಐಶ್ವರ್ಯಾ ರೈಗೆ ಆಹ್ವಾನ ನೀಡಿದವರಿಗೆ ತಲೇಯೇ ಇಲ್ಲ ಎಂದು ಕಟುವಾಗಿ ಟೀಕಿಸಿದವರಿದ್ದಾರೆ.

    ಪ್ರತ್ಯುತ್ತರಅಳಿಸಿ
  38. nimma lekana arthabharitavagide, aadare kannadiganobba kannadadigaranne athava kannada nadanne uddara madabekemba dorane namma manassinalliruvudu kuda ashte tappu. Pratiyobba kannadiganu murthy avara rity dudidare wishwa kalyana waguttade.
    Kannada madivantike kaledukollade bere bashegalindalu swikarisutta, tanu dana nidutta sanskuthadante alisihogade jivantavagiruva bashe.
    hageye navu nammatanavannu bidade wishvodharakkoskara dudidare aa tayi bhuvaneshvarigu hemme.......kannada nadina bagge matanaduvaga navu ati hemmeyinda murthyyavara hesaru ullekhisutteve...adare sammelanakke avariginta meru vyaktitvadavaru kannada nadinalliddare...aadare navondannu tiliyabekagide.....naavu videshakke hogiyagali athava kannada nadinalle iddagali tamma tamma eligege sarvaru dudidare ade kannada mathege e bharata bhumige e vishvakke ati dodda seveyaguttade.......modalu manavanagu nantara vishva manavanagu:)

    -
    Subramanya Prasad N K
    8th sem BE Mech- UVCE, Bengaluru

    ಪ್ರತ್ಯುತ್ತರಅಳಿಸಿ
  39. Its Nice comments and discussion..
    NRN should understand he himself is a kannadiga..

    I don't want NRN to any Kannada work

    Atleast give preferences to our Much Talented Kannada people for employeement in Infosys that is is biggest kannada seve..

    This is Karnataka, Please don't sell it to America, Tamilnadu or Kerala

    ಪ್ರತ್ಯುತ್ತರಅಳಿಸಿ
  40. annandira keli,
    He is not doing any favour to country or sate or people here, he is purely business minded, he s not paying money simply with gaining some thing , even azim premzi is doing better than him, even he has given employment to many people, atleast he has some concern for karnataka people for getting benifitted from the business by using our resources.
    Let me tell you one thing clearly,
    infosys software employees are the poorest software engineer you can see in india(Considering MNCs only). A software engineer in any other company get double the pay and of the work in other MNCs, I am working for a US based MNC , They are paying double than infosys.
    NRN is using people very weell , infact employees are not getting benifited , its NRN who is getting benifitted.
    And again , kannadigas speak better english than any other state people, n there are many taleted people in karnataka, for me infosys the last company to work at , i never like to work for infosys in my life if given a chance,
    Bieng a US based MNC our CEO and others support us to celebrate regional festival and they would like to keep employees happy , what the hell NRN does.
    For his growth he wants INDIA and Bangalore.
    No doubt he is fantastic Busness man, when it comes to humanity he is less concerned than other companies,
    He is utilising people like donkeys.
    He can reserve some percentage of employeement when he is utilising the wealth of that particular state. US people are far better than him.
    What has he done ??

    ಪ್ರತ್ಯುತ್ತರಅಳಿಸಿ
  41. ವಸಂತ ಅವರೆ ನಿಮ್ಮ ಕನ್ನಡಾಭಿಮಾನ ಷ್ಲಾಘನೀಯ. ಈ ನಿಮ್ಮ ಬ್ಲಾಗಿನ ಮೂಲಕ ಕನ್ನಡಿಗರಿಗೆ ಉತ್ತಮ ಲೇಖನಗಳನ್ನು ಪ್ರಸ್ತುತ ಪಡಿಸುತ್ತಿದ್ದೀರಿ. ಆದರೆ ಮೂರ್ತಿಯವರ ಬಗೆಗಿನ ನಿಮ್ಮ ಅಭಿಪ್ರಾಯ ನನಗೇನೊ ಸರಿ ಅನ್ನಿಸುತ್ತಿಲ್ಲ.

    ಒಂದು ಭಾಷೆಯ ಬೆಳವಣಿಗೆಯಾಗಬೇಕೆಂದರೆ. ಆ ಭಾಷಾ ಜನಾಂಗ ಸಧೃಡವಾಗಬೇಕು. ಆ ಭಾಷಿಕ ಕುಲದಿಂದ ಉತ್ತಮ ಚಿಂತಕರು, ಕಲಾವಿದರು, ಉದ್ಯಮಿಗಳು ಹಾಗು ಉತ್ತಮ ರಾಜಕಾರಣಿಗಳು ಜನ್ಮ ತಾಳಬೇಕು.
    ಮೂರ್ತಿಯವರು ಒಬ್ಬ ಉದ್ಯಮಿಯಾಗಿ ತಮ್ಮ ತಾಯ್ನಾಡಿಗೆ ಸಲ್ಲಿಸ ಬೇಕಾದ ಸೇವೆ ಸಲ್ಲಿಸಿದ್ದಾರೆ. ಮೂರ್ತಿಯವರು ತಮ್ಮ ಸಂಸ್ಥೆ ಸ್ಥಾಪಿಸುವ ಮುನ್ನ ಕೆಲಸ ಮಾಡುತಿದ್ದದ್ದು ದೂರದ ಪುಣೆಯಲ್ಲಿ ಬೆಂಗಳೂರಲ್ಲಿ ಇನ್ಫಿಯನ್ನು ಸ್ಥಾಪಿಸಲು ಕಾರಣವಾದರೂ ಏನಿತ್ತು? ನೀವೆ ಹೇಳಿದ ಹಾಗೆ ಕರ್ನಾಟಕ ರಾಜ್ಯ ಸರ್ಕಾರ ನೀಡಿದ ಸವಲತ್ತುಗಳು ಮಾತ್ರ ಕಾರಣ ಆದರಿಂದ ಮೂರ್ತಿಯವರು ಬೆಂಗಳುರನ್ನು ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡರು ಎಂದೇ ತಿಳಿಯೋಣ. ಬೃಹಧಾಕಾರವಾಗಿ ಬೆಳೆದಿದ್ದ ಇನ್ಫಿಗೆ ಹಲವಾರು ರಾಜ್ಯ ಸರ್ಕಾರಗಳು ಸೌಕರ್ಯ ಒದಗಿಸಲು ತಯಾರಿರುವಾಗ, ಮೂರ್ತಿಯವರು ಮೈಸೂರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ತರಬೇತಿ ಕೇಂದ್ರ, ಮಂಗಳೂರಿನಲ್ಲೊಂದು ಶಾಖೆ ತೆರೆಯಲು ಅವರಿಗಿದ್ದ ತಾಯ್ನಾಡಿನ ಅಭಿಮಾನವಲ್ಲವೇ ಕಾರಣ??

    ಎರಡೆನೆಯದಾಗಿ ಮೂರ್ತಿಯವ್ರೆಂದು ಕನ್ನಡ ತ್ಯಜಿಸಿ ಇಂಗ್ಲೀಷ್ ಭಾಷೆಯನ್ನು ಅಪ್ಪಿಕೊಳ್ಳಿ ಎಂದು ಹೇಳಲಿಲ್ಲ. ಕನ್ನಡ ನಮ್ಮ ಮೈಗಂಟಿದ ಚರ್ಮ, ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲಸಮಾಡುವಾಗು ಒಮ್ದು ಸಾಮನ್ಯ ಭಾಷೆಯ ಅವಶ್ಯಕತೆ ಇದ್ದು ಸಮಾನತೆ ಕಾಯ್ದುಕೊಳ್ಳಲು ಇಂಗ್ಲೀಷ್ ಸಮವಸ್ತ್ರ ಧರಿಸಬೇಕು. ಜಾಗತೀಕರಣದ ಯುಗದಲ್ಲಿರುವ ನಾವು ಜಗದೊಡೆನೆಯೆ ಬೆಳೆಯಬೇಕು. ಬೆಳೆದು ನಮ್ಮ ಭಾಷೆಯನ್ನು ಕಾಪಡಿಕೊಳ್ಳ ಬೇಕು.
    ಇಂಗ್ಲೀಷ್ ಭಾಷೆಯೇ ಏಕೆ ಆ ಸಮಾನ್ಯ ಭಾಷೆಯಾಗ ಬೇಕು ನಮ್ಮ ಕನ್ನಡವನ್ನು ವಿಶ್ವಭಾಷೆಯನ್ನಗಿಸಲು ನಾವೇಕೆ ಪ್ರಯತ್ನಿಸಬಾರದು ಎಂದು ನೀವು ಕೇಳಬಹುದು. ಇಂಗ್ಲೀಷ್ ಒಂದು ಭಾಷೆಯಾಗಿ ಬೆಳೆಯಿತು, ತನ್ನ ಸ್ವ್ಂತಿಕೆಯನ್ನು ಬಲಿಕೊಟ್ಟು ಎಲ್ಲಾ ಭಾಷೆಗಳಿಂದಲು ಪದಗಳನ್ನು ಸಾಲ ಪಡೆದು ವಿಶ್ವ ಭಾಷೆಯಾಯ್ತು. ನಮ್ಮ ಕನ್ನಡಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ತನ್ನದೇ ಆದ ಸೊಗಡಿದೆ, ಈ ಸ್ವಾರಸ್ಯವನ್ನು ಬಲಿಕೊಟ್ಟು ಬೆಳೆಯುವ ಅಗತ್ಯ ನಮಗಿಲ್ಲ.

    ಇನ್ಫಿಯಲ್ಲಿ ಪರಭಾಷಿಕರದೆ ರಾಜ್ಯಭಾರ ಎಂದು ಹೇಳಿದಿರಿ. ಈ ಮಾತಿಗೆ ನನ್ನ ಸಂಪೂರ್ಣ ನಿರಾಕರಣೆ ಇದೆ. ನಾನು ಸಹ ಕಳೆದ ವರ್ಷವೇ ಇಂಜಿನಿಯರಿಂಗ್ ಮುಗಿಸಿದ್ದು. ಕರ್ನಾಟಕದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಾದ NITK Surathkal ನ placement coordinator ಕೂಡ ಆಗಿದ್ದೆ. ಹಾಗೆ ನನ್ನ ಅನೇಕ ಗೆಳೆಯರು ಕರ್ನಾಟಕದ ವಿವಿದೆಡೆಯಿಂದ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ನನಗೆ ತಿಳಿದ ಪ್ರಕಾರ ಇನ್ಫಿ ಹಲವಾರು ಕಾಲೇಜುಗಳಲ್ಲಿ ಶೇಕಡಾ ೧೫ ರಿಂದ ೩೦ ರಷ್ಟು ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಿದೆ. ಅಗತ್ಯಕ್ಕೂ ಮೀರಿದಷ್ಟು ಇಂಜಿನಿಯರಿಂಗ್ ಕಾಲೇಜುಗಳು ನಮ್ಮಲ್ಲಿರುವುದರಿಂದ ಶಿಕ್ಷಣದ ಗುಣಮಟ್ಟ ಹದಗೆಟ್ಟಿದೆ. ಇಂತಹ ಕಾಲೇಜುಗಳಿಂದ ವಿದ್ಯಾರ್ಥಿಗಳನ್ನು ಹೇಗೆ ತಾನೆ ಆಯ್ಕೆ ಮಾಡಿಕೊಳ್ಳುತ್ತರೆ ನೀವೆ ಹೇಳಿ??

    ಮೂರ್ತಿಯವರು ನಿಜವಾಗಿಯೂ ಒಬ್ಬ ಸಾಧಕರು. ೩೦೦ ವರ್ಷ ಗುಲಾಮರಗಿದ್ದ ಭಾರತೀಯರ ಮಧ್ಯೆ ಜನಿಸಿ ನಮ್ಮನ್ನಾಳಿದ ಆಂಗ್ಲಿರಿಗೂ ಉದ್ಯೋಗ ನೀಡಿರಿವ ಮೂರ್ತಿಯವರ ಸಾಧನೆ ಶ್ಲಾಘನೀಯ. ಒಬ್ಬ ಸಾಧಕನನ್ನು ನಿಂಧಿಸುವುದು ಸುಲುಭ ಆದರೆ ಆ ಮಟ್ಟಕ್ಕೆ ಬೆಳೆಯಲು ನಿಜವಾದ ಪರಿಶ್ರಮ ಬೇಕು. ಮೂರ್ತಿಯವರು ಈ ಕಾರ್ಯಕ್ರಮ ಉಧ್ಘಾಟಿಸಲಿ. ಅವರಿಂದ ಸ್ಪೂರ್ತಿ ಪಡೆದು ಕರುನಾಡಿನಲ್ಲಿ ಇನ್ನಷ್ಟು ಸಾಧಕರು ಜನ್ಮ ತಾಳಲಿ ಎಂಬುದೆ ನನ್ನ ಆಶಯ.

    ಜೈ ಕರ್ನಾಟಕ ಮಾತೆ
    ದುಷ್ಯಂತ್ ಕುಮಾರ್
    ವ್ಯವಸ್ಥಾಪ್ರಬಂಧ ಸ್ನಾತಕೋತ್ತರ ಪದವಿ
    ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ, ಅಹಮದಾಬಾದ್
    http://echilipili.blogspot.com/

    ಪ್ರತ್ಯುತ್ತರಅಳಿಸಿ
  42. ದುಶ್ಯಂತ್,
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನನ್ನ ಬರಹದಲ್ಲಿ ನಾನು ಮೂರ್ತಿ ಅವರಿಂದ ಏನ್ ಕಲಿಬೇಕು ಅನ್ನುವುದನ್ನು ಒತ್ತಿ ಹೇಳಿದ್ದೇನೆ. ಮೈಸೂರಿನಲ್ಲಿ, ಮಂಗಳೂರಿನಲ್ಲಿ ಕೇಂದ್ರ ತೆರೆಯಲು ಮೂರ್ತಿಯವರಿಗೆ ತಾಯ್ನಾಡಿನ ಸೆಳೆತವೇ ಕಾರಣ ಅಂತಲೇ ಅಂದುಕೊಳ್ಳೊಣ. ಆ ಕೇಂದ್ರಗಳಲ್ಲಿ ಕನ್ನಡಿಗರು ಅಲ್ಪಸಂಖ್ಯಾತರು ಅಂದ ಮೇಲೆ, ಈ ಕೇಂದ್ರಗಳಿಗೆ ಅಗ್ಗದ ದರದಲ್ಲಿ ಎಲ್ಲವನ್ನೂ ಒದಗಿಸಿದ ನಮ್ಮ ಸರ್ಕಾರದ ಕ್ರಮಕ್ಕೆ ಪ್ರತಿಯಾಗಿ ನಮಗೆ ಸಿಕ್ಕಿದ್ದೇನು ? ಅನಿಯಂತ್ರಿತ ಪರಭಾಷಿಕರ ವಲಸೆಯೇ? ಈ ಊರುಗಳಲ್ಲಿ ಕೇಂದ್ರ ತೆಗೆಯುವ ಅವರ ಕ್ರಮ ಎಷ್ಟು ಹೊಗಳಿಕೆಗೆ ಅರ್ಹವೋ, ಆ ಕೇಂದ್ರಗಳಲ್ಲಿ ಯಾವ ಹಂತದಲ್ಲೂ ಸ್ಥಳೀಯರಿಗೆ ಆದ್ಯತೆ ಕೊಟ್ಟಿಲ್ಲ ಅನ್ನುವುದು, ಅಲ್ಲೆಲ್ಲ ಕನ್ನಡ ಕಲಿ, ರಾಜ್ಯೋತ್ಸವದಂತಹ ಚಿಕ್ಕ ಕಾರ್ಯಕ್ರಮ ಮಾಡಲು ಹುಡುಗರು ಸಕತ್ ಶ್ರಮ ಪಡುವಂತಿರುವುದು ಎಷ್ಟು ethical, ಎಷ್ಟು ಸರಿ ?

    ಇನ್ನೂ, ಮೂರ್ತಿ ಅವರು ಕನ್ನಡ ಕಲಿಯಬೇಡಿ ಎಂದೇನು ಹೇಳಿಲ್ಲ ನಿಜ. ಆದರೆ ನನ್ನ ಪ್ರಶ್ನೆ ಇರುವುದು ಕನ್ನಡ ಮಾಧ್ಯಮ ಶಿಕ್ಷಣವನ್ನು next levelಗೆ ತೆಗೆದುಕೊಂಡು ಹೋಗಬೇಕಾದ ಸರ್ಕಾರ, ಕನ್ನಡ ಮಾಧ್ಯಮದಲ್ಲಿ ಬದುಕಿಗೆ ಬೇಕಿರುವ ಒಳ್ಳೆಯ ವಿದ್ಯೆಯೆಲ್ಲವನ್ನು ತರುವ ಪ್ರಯತ್ನ ಮಾಡಬೇಕಾದ ಸರ್ಕಾರಕ್ಕೆ ಇಂಗ್ಲೀಷ್ ಮಾಧ್ಯಮವೊಂದೇ ಪರಿಹಾರವೆಂದು ಸರ್ಕಾರದ ಆದ್ಯತೆಯೇ ಬದಲಾಯಿಸುವ ಒತ್ತಾಯ ಹೇರಿದ್ದು ಯಾರು? ಇಂಗ್ಲಿಷ್ ಯಿಂದಾನೇ ಎಲ್ಲ ಸಿಗುತ್ತಿರುವುದು ನಿಜವಾಗಿರುವಾಗ ಅವರು ಹೇಳಿರುವುದರಲ್ಲಿ ತಪ್ಪೇನಿದೆ ರೀ ಅಂತ ನೀವು ಕೇಳಬಹುದು. ಇಂಗ್ಲಿಷ್ ಯಿಂದ ಅದು ಸಾಧ್ಯ ಯಾಕಾಗಲ್ಲ ಅನ್ನುವುದನ್ನು ಮೊದಲಿಗೆ ಅರ್ಥ ಮಾಡಿಕೊಳ್ಳಬೇಕು. ಇವತ್ತಿಗೂ ಕರ್ನಾಟಕದ ೮೩% ಮಕ್ಕಳು ಕನ್ನಡ ಮಾಧ್ಯಮ ಶಾಲೆಯಲ್ಲೇ ಓದುತ್ತಿದ್ದಾರೆ. ೯೦ ಲಕ್ಷ ವಿದ್ಯಾರ್ಥಿಗಳಿಗೆ ಅವರ ವಾತಾವರಣದಲ್ಲಿ ಇಲ್ಲದ ಇಂಗ್ಲಿಷ್ ನುಡಿಯಲ್ಲಿ, ಅವರೆಲ್ಲ ಇಂಗ್ಲಿಷ್ ನಲ್ಲೇ ಚೆನ್ನಾಗಿ ಪಾಠ ಕೇಳಿ, ಕಲಿತು, ಮನದಟ್ಟು ಮಾಡಿಕೊಳ್ಳಲು ಇಂಗ್ಲಿಷ್ ಅನ್ನು ಅರೆದು ಕುಡಿದಿರುವ, ಅದನ್ನು ಮಕ್ಕಳಿಗೆ ಅಷ್ಟೇ ಪರಿಣಾಮಕಾರಿಯಾಗಿ ಕಲಿಸಬಲ್ಲ ಪರಿಣಿತ ಶಿಕ್ಷಕರು ಬೇಕು. ಪ್ರತಿ ಮೂವತ್ತು ವಿದ್ಯಾರ್ಥಿಗೆ ಒಬ್ಬ ಶಿಕ್ಷಕ ಅಂದರೆ ಕಡಿಮೆ ಅಂದರೂ 3 ಲಕ್ಷ ಜನ ಇಂಗ್ಲಿಷ್ ಬಲ್ಲ ಶಿಕ್ಷಕರು ಬೇಕು. ಹೇಳಿ ಎಲ್ಲಿಂದ ತರೋಣ ಇವರನ್ನೆಲ್ಲ? ಇರುವ ಮಕ್ಕಳಿಗೆ ಕನ್ನಡದಲ್ಲೇ ಪಾಠ ಮಾಡಲು ಶಿಕ್ಷಕರು ಸಿಗುತ್ತಿಲ್ಲ. ಇನ್ನೂ ಇವರನ್ನೆಲ್ಲಿಂದ ತರೋಣ ? ವಾತಾವರಣದಲ್ಲಿರುವ ಮಕ್ಕಳ, ಶಿಕ್ಷಕರೆಲ್ಲರ ಭಾಷೆಯಾಗಿರುವ ಕನ್ನಡದಲ್ಲಿ ಇಂತಹದೊಂದು ವ್ಯವಸ್ಥೆ ಕಲ್ಪಿಸುವುದು ಸುಲಭವೋ ಅಥವಾ ಇದಾವುದು ಇಲ್ಲದ ಇಂಗ್ಲಿಷ್ ನಲ್ಲೋ? ಹಾಗಿದ್ದರೆ ಇವತ್ತಿರುವ ಕನ್ನಡ ಮಾಧ್ಯಮ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಿ, ಹೆಚ್ಚಿನ ಕಲಿಕೆಯನ್ನು ಅದರಲ್ಲೇ ತರುವ ಪ್ರಯತ್ನಕ್ಕೆ ಹಣ, ಸಂಪನ್ಮೂಲ, ಆದ್ಯತೆ ಕೊಡೋಣ ಅನ್ನುವ ಮಾತು ಮೂರ್ತಿಯವರು ಆಡಿದ್ದರೆ, ಆ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರೆ ಅವರಿಗೆ ನಮ್ಮ ಸಮಾಜವೂ ಅರ್ಥವಾಗಿದೆ ಅನ್ನಬಹುದಿತ್ತೆನೋ ಅನ್ನಿಸಲ್ವಾ?

    ಕರ್ನಾಟಕದಲ್ಲಿ ೧೭೦ ಇಂಜಿನಿಯರಿಂಗ್ ಕಾಲೇಜಿದೆ. ಆದರೆ ಕ್ಯಾಂಪಸ್ ನಡೆಯುತ್ತಿರುವ ಕಾಲೇಜುಗಳ ಸಂಖ್ಯೆ ಹೆಚ್ಚೆಂದರೆ ೧೫-೨೦. ಇನ್ಫಿ ಇಲ್ಲಿಗೆಲ್ಲ ಹೋಗಿಬಹುದು. ಆದರೆ ಇನ್ಪಿ ತಮಿಳುನಾಡಿನಲ್ಲೋ, ಕೇರಳದಲ್ಲೋ, ಆಂಧ್ರದಲ್ಲೋ ಹೋಗುವ ಕಾಲೇಜುಗಳ ಸಂಖ್ಯೆಗೆ ಹೋಲಿಸಿ ನೋಡಿ. ನಿಜಕ್ಕೂ ನಾವೆಷ್ಟು ಹಿಂದೆ ಇದ್ದೀವಿ ಅನ್ನುವುದು ತಿಳಿಯುತ್ತೆ. ಅಗತ್ಯಕ್ಕಿಂತ ಹೆಚ್ಚು ಕಾಲೇಜು ಕರ್ನಾಟಕದಲ್ಲಿದೆ ಅಂತೀರಾ.. ತಮಿಳುನಾಡಿನಲ್ಲಿ ೪೫೦, ಆಂಧ್ರದಲ್ಲಿ ೨೫೦ಕ್ಕೂ ಹೆಚ್ಚು ಕಾಲೇಜುಗಳಿವೆ. ಅಲ್ಲಿನ ಹುಡುಗರಿಗೆ ಕೆಲಸ ಹಿಡಿಯುವುದರಲ್ಲಿ ಆಗದಿರುವ ಎಲ್ಲ ತೊಂದರೆ ಬರೀ ೧೭೦ ಕಾಲೇಜಿರುವ ನಮ್ಮ ರಾಜ್ಯದ ವಿಧ್ಯಾರ್ಥಿಗಳಿಗಷ್ಟೇ ಆಗುತ್ತೆ ಅನ್ನುವುದು ಏನ್ ತೋರಿಸುತ್ತೆ? ಅಷ್ಟಕ್ಕೂ ತಮಿಳುನಾಡು,ಆಂಧ್ರದಲ್ಲಿ ಆ ಪಾಟಿ ಕಾಲೇಜುಗಳು ಬರಲು ಕಾರಣವೆನೆಂದರೆ ಐಟಿ ಉದ್ಯಮದಲ್ಲಿ ಅವರಿಗೆಲ್ಲ ಕೆಲಸ ಸಿಕ್ಕೇ ಸಿಗುತ್ತ ಅನ್ನುವ ನಂಬಿಕೆ. ಅಂತಹದೊಂದು ನಂಬಿಕೆಗೆ ಕಾರಣ ಹೆಚ್ಚಿನ ಐಟಿ ಕಂಪನಿಗಳಲ್ಲಿ ಹಿರಿಯ ಹುದ್ದೆಯಲ್ಲಿರುವ ಆಯಾ ರಾಜ್ಯದ ಅಧಿಕಾರಿಗಳು ತೋರಿಸುವ nepotism ಅಲ್ಲದೇ ಇನ್ನೇನು? ಐಟಿ ಉದ್ಯಮದ ಸರ್ವಿಸಸ್ ಸೆಕ್ಟರ್ ನಲ್ಲಿ ಸಿಗುವ ೫೦% ಕೆಲಸಕ್ಕೆ SSLC ಮಾಡಿರುವ ಹುಡುಗ್ರು ಸಾಕಾಗ್ತಾರೆ. ಹಾಗಾಗಿಯೇ average IQ ಇರುವ ಹುಡುಗನಿಗೂ ಕೆಲಸ ಸಿಗುತ್ತೆ,, ನಮ್ಮ ಹುಡುಗ್ರ IQ ಏನೋ ಪರವಾಗಿಲ್ಲ ಆದ್ರೆ ನಮ್ ಪರವಾಗಿ nepotism, favourism ಮಾಡೋ ಜನರಿಲ್ಲವೇ .. :)

    ಪ್ರತ್ಯುತ್ತರಅಳಿಸಿ
  43. ವಸಂತ್,

    ನೀವು ಹೇಳಿದ ಹಾಗೆ ಸಮಸ್ಯೆ ಇರುವುದು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ. ಶಿಕ್ಷಕರಿಗೆ ನೀಡುತ್ತಿರುವ ಭತ್ಯೆ ಹಾಗು ಸವಲತ್ತುಗಳು ಸರಿಯಾದ ಪ್ರಮಾಣದಲ್ಲಿಲ್ಲವಾದ್ದರಿಂದ, ಪ್ರತಿಭಾನ್ವಿತರು ಶಿಕ್ಷಕ ಹುದ್ದೆಯನ್ನು ಜೀವನಾಧಾರವಾಗಿ ಸ್ವೀಕರಿಸಲು ನಿರಾಕರಿಸುತ್ತಿದ್ದಾರೆ. ನಾವು ಈ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಬೇಕೆ ಹೊರತು ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿಲ್ಲ ಎಂದು ನಿರ್ಧರಿಸಬಾರದು. ಪ್ರಾಥಮಿಕ ಶಿಕ್ಷಣ ಇಂಗ್ಲೀಷ್ ನಲ್ಲೇ ಆಗಬೇಕೆಂದು ನಾನು ಪ್ರತಿಪಾದಿಸುತ್ತಿಲ್ಲ ಆದರೆ ಬದುಕಲು ಬೇಕಾದಷ್ಟು ಇಂಗ್ಲೀಷ್ ಶಿಕ್ಷಣ ಒದಗಿಸಬೇಕು ಎಂಬುದು ನನ್ನ ಅನಿಸಿಕೆ. ನಾನು ಕೂಡ ಕೊಳ್ಳೇಗಾಲದ ಅರೆ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲೇ ನನ್ನ ಪ್ರಾಥಮಿಕ ಶಿಕ್ಷಣ ಮುಗಿಸಿದ್ದು. ನಗರೇತರ ಪ್ರದೇಶಗಳಲ್ಲಿನ ವಿದ್ಯಾರ್ಥಿಗಳ ಸಮಸ್ಯೆಯ ಅರಿವು ನನಗಿದೆ. ಕೇಂದ್ರಿಯ ವಿದ್ಯಾಲಯಗಳು ಸರ್ಕಾರಿ ಶಾಲೆಗಳೆ. ಅಲ್ಲಿನ ಶಿಕ್ಷಣ ಗುಣಮಟ್ಟವನ್ನು ರಾಜ್ಯ ಸರ್ಕಾರದ ಸರ್ಕಾರಿ ಶಾಲೆಗಳಿಗೆ ಹೋಲಿಸಿ ನೋಡಿ, ಎರಡರ ಮಧ್ಯೆ ಅಜಗಜಾಂತರ ವ್ಯತ್ಯಾಸವಿದೆ. ಈ ಅಂತರವನ್ನು ಕಡಿಮೆ ಮಾಡಲು ಸರ್ಕಾರ ಪ್ರಯತ್ನಿಸಬೇಕು.

    ಎರಡೆನಯದಾಗಿ ನಮ್ಮ ಪರವಾಗಿ nepotism, favourism ಮಾಡೋ ಜನರಿಲ್ಲವೇ ಎಂದಿರಿ. ಸಮಸ್ಯೆ ಇರುವುದು ಇಲ್ಲೆ. ನಮ್ಮ mindset ನಲ್ಲಿ. ನಮ್ಮ risk averse ಸ್ವಭಾವದಲ್ಲಿ. ಗಾಂಚಲಿ ಬಿಡಿ ಕನ್ನಡ ಮಾತಾಡಿ ಯಂತ ಬೃಹತ್ ವೇದಿಕೆಯ ಆಧಾರ ಸ್ಥಂಭಗಳಲ್ಲಿ ಒಬ್ಬರಾದ ನೀವೆ ಬೇರೊಬ್ಬರು ಬಂದು ನಮ್ಮನ್ನು favour ಮಾಡಲಿ ಎಂದು ಬಯಸುತ್ತೀರಿ. ಪ್ರತಿಭಾನ್ವಿತಾದಂತಹ ತಾವೇ ಏಕೆ ನಮ್ಮ ಜನರಿಗೆ ಉದ್ಯೋಗವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಯೋಚಿಸಬಾರದು ಎಂಬುದೆ ನನ್ನ ಪ್ರಶ್ನೆ?? ಕರ್ನಾಟಕದ ಪ್ರಗತಿಗೆ ಒಬ್ಬ ನಾರಯಣ ಮೂರ್ತಿ ಸಾಲುವಿದಿಲ್ಲ. ನಮ್ಮ ನಿಮ್ಮಂತಹ ಯುವ ಜನಾಂಗ ಮೂರ್ತಿಯವರಂತೆ ಮತ್ತೊಬ್ಬರಲ್ಲಿ ಉದ್ಯೋದಕ್ಕೆ ಕೈಚಾಚದೆ ಹಲವರಿಗೆ ಉದ್ಯೋಗ ಕಲ್ಪಿಸಿಕೊಡುವಂತಹ entrepreneurಗಳಾಗ ಬೇಕು ಎನ್ನುವುದು ನನ್ನ ಅಭಿಪ್ರಾಯ.

    ನೀವು ಮಾಡುವ ಎಲ್ಲ ಕನ್ನಡ ಪರ ಚಟುವಟಿಕೆಗಳಿಗೆ ನನ್ನ ಮೆಚ್ಚುಗೆ ಇದೆ. ಗಾಂಚಲಿ ಬಿಡಿ ಕನ್ನಡ ಮಾತಾಡಿ ನಿಜಕ್ಕೂ ಒಂದು ಅದ್ಬುತ ಕಲ್ಪನೆ. ಇಷ್ಟು ಜನ ಕನ್ನಡಿಗರನ್ನು ಒಗ್ಗೂಡಿಸಿದ ನಿಮಗೆ ಹಾಗು ನಿಮ್ಮ ಮಿತ್ರ ವೃಂದಕ್ಕೆ hats off. ಇದೇ ರೀತಿ ಚಿಂತನೆಯನ್ನು ಪ್ರಚೋದಿಸುವಂತಹ ಲೇಖನಗಳನ್ನು ಬರೆಯುತ್ತಿರಿ.

    ಪ್ರೀತಿಯಿಂದ,
    ದುಶ್ಯಂತ್

    ಪ್ರತ್ಯುತ್ತರಅಳಿಸಿ
  44. ದುಶ್ಯಂತ್,
    ಕನ್ನಡದಲ್ಲಿ ಎಲ್ಲ ಹಂತದ ವರೆಗೂ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ಅದು ಆಗಲು ಆ ದಿಕ್ಕನಲ್ಲಿ ಆಗಬೇಕಾದ ಸುಧಾರಣೆಯತ್ತ ಗಮನ, ಸಂಪನ್ಮೂಲ ಕೊಡಬೇಕಾದ ತುರ್ತು ಅಗತ್ಯ ನಮ್ಮ ಮುಂದಿದೆ. ಅದನ್ನು ಸರ್ಕಾರ ಆದ್ಯತೆಯ ಮೇಲೆ ಮಾಡಬೇಕಾಗಿದೆಯೇ ಹೊರತು ಕರ್ನಾಟಕದಲ್ಲಿ ಎಂದಿಗೂ ಕಟ್ಟಲಾಗದ (purely on practical reasons) ಇಂಗ್ಲಿಷ್ ವ್ಯವಸ್ಥೆಯತ್ತ ತನ್ನ ಗಮನ ಹರಿಸುವುದಲ್ಲ ಅನ್ನುವುದು ನನ್ನ ಅನಿಸಿಕೆ. ನಿಮ್ಮ ಹಾಗೇ ನಾನು ಒಂದು ಹಳ್ಳಿಯ ಕನ್ನಡ ಮಾಧ್ಯಮ ಶಾಲೆಯಲ್ಲೇ ಕಲಿತು ಬಂದಿದ್ದೇನೆ. ನಾನು ಓದಿದ ಉತ್ತರ ಕರ್ನಾಟಕದ ಹಳ್ಳಿಯಲ್ಲಿ ಹುಡುಗರು ಕಲಿಕೆಯಲ್ಲಿ ಅನುಭವಿಸುತ್ತಿರುವ ತೊಂದರೆಗಳನ್ನು ತಕ್ಕ ಮಟ್ಟಿಗೆ ಬಲ್ಲೇನು ಕೂಡ. ಅಲ್ಲಿನ ಮಕ್ಕಳಲ್ಲೂ ಅಧ್ಬುತ ಪ್ರತಿಭೆ ಇದೆ. ಆದರೆ ಅದನ್ನು ಹೊರ ತರುವಂತಹ eco system ಅಲ್ಲಿಲ್ಲ.

    ಎರಡನೆಯದಾಗಿ ನಾನು nepotism, favourismನ ಪರವಾಗಿ ಎಂದಿಗೂ ಇಲ್ಲ. ಇವತ್ತು ನಮ್ಮ ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಹೇಗೆ ಪ್ರತಿಭೆಯೊಂದೇ ಮಾನದಂಡವಾಗದೇ ಈ ರೀತಿಯ ತಪ್ಪು ಕೆಲಸಗಳು ನಡೆಯುತ್ತಿವೆ, ಅದರಿಂದಾಗಿ ನಮ್ಮ ಕನ್ನಡ ಜನಾಂಗಕ್ಕೆ ಆಗುತ್ತಿರುವ ತೊಂದರೆ ಏನು ಅನ್ನುವುದನ್ನು ಹೇಳುವಾಗ sarcastic ಆಗಿ ಆ ರೀತಿ ಹೇಳಿದೇನೆ ಹೊರತು, ನಾನೆಂದೂ ಅವುಗಳ ಪರವಾಗಿಲ್ಲ. ನಮ್ಮಲ್ಲೂ ಪ್ರತಿಭೆ ಇದೆ, ನಮ್ಮಲ್ಲೂ ಶ್ರಮಜೀವಿಗಳಿದ್ದಾರೆ,, ಅವರಿಗೊಂದು ಅವಕಾಶದ ಆದ್ಯತೆಯಾದರೂ ಸಿಗಲಿ ಅನ್ನುವುದು ನನ್ನ ಕಾಳಜಿ.

    ಕೊಳ್ಳೆಗಾಲದ ಹಳ್ಳಿಗಾಡಿನಿಂದ ಪ್ರತಿಷ್ಟಿತ ಐಐಎಮ್ ವರೆಗಿನ ನಿಮ್ಮ ಪಯಣ ನನಗಂತೂ ಸಕತ್ ಸಂತಸ ನೀಡಿದೆ. ಒಮ್ಮೆ ಭೇಟಿ ಆಗೋಣ.

    ನಿಮ್ಮವ,
    ವಸಂತ

    ಪ್ರತ್ಯುತ್ತರಅಳಿಸಿ
  45. 'ನಾರಾಯಣ ಮೂರ್ತಿ ಅವರಿಂದ ಏನ್ ಕಲಿಬೇಕು, ಏನ್ ಬೇಡ ?' ಲೇಖನವನ್ನು ನಾಡಿನ ಹಾಗೂ ವಿದೇಶದ ಕನ್ನಡ ಜನತೆಯ ಮುಂದಿಟ್ಟ ಶ್ರೀ. ವಸಂತ ಶೆಟ್ಟಿಯವರಿಗೆ ವಂದನೆಗಳು.

    -ಪ.ರಾಮಚಂದ್ರ,
    ರಾಸ್ ಲಫ್ಫಾನ್, ಕತಾರ್.

    ಪ್ರತ್ಯುತ್ತರಅಳಿಸಿ
  46. Narayan Murthygalu....Kannadiga.. Samanya hobba kannadigana tara,,, avarge.. kannada nadina ella samarabada baga vaguva hakku oontu... " kannada da seve, madali bidali.. karnataka vanu, jagatika bhupatadali... minchumvante, kannadigaru,, enu bekadru sadisea bahudu,, yambudake ,,nidrashanvagidera.... " avarali kannada abhimanay mudabekagede..:

    ಪ್ರತ್ಯುತ್ತರಅಳಿಸಿ
  47. ನನಗೆ ನಾರಾಯಣಮೂರ್ತಿ ಬಗ್ಗೆ ಅಷ್ಟಾಗಿ ಏನೂ ಗೊತ್ತಿಲ್ಲ ಅದ್ದರಿಂದ ನಾನು ಅವರ ಬಗ್ಗೆ ಏನೂ ಹೇಳೋಕೆ ಇಷ್ಟ ಪದೊಲ್ಲ... ಆದರೆ ನಿಮ್ಮ ಬರಹದ ಬಗ್ಗೆ ಹೇಳಲೇ ಬೇಕು. ನನಗೆ ನಿಮ್ಮ ಭಾಷಾ ಪ್ರಯೋಗ ತುಂಬಾ ಮೆಚ್ಚುಗೆಯಾಯಿತು. ನೀವು ಕೆಲವು ಕಡೆ ಉಪಯೋಗಿಸಿರುವ ಉದಾಹರಣೆಗಳು ಸಂದರ್ಬಕ್ಕೆ ತಕ್ಕಂತೆ ಇವೆ ಮತ್ತು ತುಂಬಾ ಪರಿಣಾಮಕಾರಿಯಾಗಿವೆ.

    ಚಂದ್ರಪ್ರಭ

    ಪ್ರತ್ಯುತ್ತರಅಳಿಸಿ

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !