ಮಂಗಳವಾರ, ಜೂನ್ 28, 2011

ಸರ್ಕಾರಿ ಇಂಗ್ಲಿಶ್ ಶಾಲೆ - ಬೇಲಿಯೇ ಎದ್ದು ಹೊಲವ ಮೇಯ್ದೊಡೆ ಕಾಯುವರಾರು ?

ಜನರ ಅಪೇಕ್ಷೆಗಳನ್ನು ಈಡೇರಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಜನರಿಂದ ಬೇಡಿಕೆ ಬಂದ್ರೆ ಆರನೇ ತರಗತಿಯಿಂದ ಎಲ್ಲೆಡೆ ಇಂಗ್ಲಿಶ್ ಮಾಧ್ಯಮದ ಶಾಲೆಗಳನ್ನು ತೆರೆಯಲು ಸರ್ಕಾರ ತಯಾರಾಗಿದೆ ಅನ್ನುವ ಹೇಳಿಕೆಯನ್ನು ಪ್ರಾಥಮಿಕ ಮತ್ತು ಪ್ರೌಡಶಾಲೆ ಸಚಿವರಾದ ಕಾಗೇರಿಯವರು ಹೇಳಿದ್ದು ಮೊನ್ನೆ ಮೊನ್ನೆ ಪತ್ರಿಕೆಗಳಲ್ಲಿ ಕಂಡೆ. ಬೇಲಿಯೇ ಎದ್ದು ಹೊಲವ ಮೇಯೊದು ಅಂದ್ರೆ ಇದೇನಾ ಅನ್ನಿಸ್ತಾ ಇತ್ತು. ಒಂದೆಡೆ ಪಾಲಿಕೆ ವ್ಯಾಪ್ತಿಯ ಕನ್ನಡ ಶಾಲೆಗಳನ್ನು ಸಿ.ಬಿ.ಎಸ್.ಈ ತೆಕ್ಕೆಗೆ ಕೊಡಿಸಿ ತಮ್ಮ ಜನ್ಮ ಪಾವನವಾಯ್ತು ಅನ್ನುವ ಸಚಿವರೊಬ್ಬರು, ಇನ್ನೊಂದೆಡೆ ಜನರ ಅಪೇಕ್ಷೆ ಈಡೇರಿಸಲು ಎಲ್ಲೆಡೆ ಇಂಗ್ಲಿಶ್ ಶಾಲೆಗಳನ್ನು ತೆರೆಯುವುದಾಗಿ ಹೇಳುವ ಈ ಸಚಿವರು. ಇವರ ಹೊಣೆಗಾರಿಕೆ ಇಲ್ಲದ ಈ ನಡೆಗಳು ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಗಟ್ಟಿಯಾದ ಸಮಾಧಿಯೊಂದನ್ನು ಸದ್ದಿಲ್ಲದೇ ಕಟ್ಟುತ್ತಿವೆ ಅನ್ನಬಹುದು. 

ಇದೇ ಸಂದರ್ಭದಲ್ಲಿ ತಾಯ್ನುಡಿ ಶಿಕ್ಷಣದ ಬದಲು ಇಂಗ್ಲಿಶ್ ಬೇಕೆನ್ನುವವರ ವಾದವಾದರೂ ಏನು ಅಂದರೆ ನನಗೆ ಕಾಣುವುದು ಕೆಳಗಿನ ಕೆಲವು ಮಾತುಗಳು. ಅವುಗಳಿಗೆ ನನ್ನ ಅನಿಸಿಕೆ ಏನು ಅನ್ನುವುದನ್ನು ಈ ಸಂದರ್ಭದಲ್ಲಿ ಬರೆದಿರುವೆ.

ಕನ್ನಡ ಮಾಧ್ಯಮ ಬೇಕು ಅನ್ನುವವರದ್ದು ಬೂಟಾಟಿಕೆ. ಕನ್ನಡ ಮಾಧ್ಯಮ ಬೇಕು ಅನ್ನುವ ಸಾಹಿತಿಗಳು, ಚಿಂತಕರು, ಕನ್ನಡ ಪರ ಹೋರಾಟಗಾರರು, ರಾಜಕಾರಣಿಗಳು ತಮ್ಮ ಮಕ್ಕಳನ್ನು ಸೇರಿಸುವುದು ಇಂಗ್ಲಿಶ್ ಮಾಧ್ಯಮದ ಸಿ.ಬಿ.ಎಸ್.ಈ/ಐ.ಸಿ.ಎಸ್.ಈ ಶಾಲೆಗಳಿಗೆ, ಆದರೆ ಸಾಮಾನ್ಯ ಜನರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸಬೇಕು. ತಮ್ಮ ಮಕ್ಕಳು ಯಾವ ಮಾಧ್ಯಮದಲ್ಲಿ ಕಲಿಯಬೇಕು ಅನ್ನುವುದನ್ನು ಪಾಲಕರ ನಿರ್ಧಾರಕ್ಕೆ ಬಿಡಿ.       
ಆರು ಕೋಟಿ ಜನರ ಕಲಿಕೆ, ದುಡಿಮೆ ರೂಪಿಸಬೇಕಾದ ಸರ್ಕಾರ ತನ್ನ ನೀತಿ ನಿಯಮಗಳನ್ನು ಯಾವ ಆಧಾರದ ಮೇಲೆ ರೂಪಿಸಬೇಕು? ಯಾರೋ ನಾಲ್ಕು ಜನ ಸಾಹಿತಿಗಳು, ಚಿಂತಕರು ತಮ್ಮ ಮಕ್ಕಳನ್ನು ಇಂಗ್ಲಿಶ್  ಶಾಲೆಗಳಿಗೆ ಕಳಿಸುವುದರ ಆಧಾರದ ಮೇಲೆ ಒಂದು ಸರ್ಕಾರವೇ ನಾಡಿನ ಜನರ ಕಲಿಕೆ ರೂಪಿಸುವ ತನ್ನ ಹೊಣೆಗಾರಿಕೆಯಿಂದಲೇ ನುಣುಚಿಕೊಂಡು, ಜನರಿಂದ ಬೇಡಿಕೆ ಇದೆ ಅನ್ನುವ ಕಾರಣವೊಡ್ಡಿ ಇಂಗ್ಲಿಶ್ ಶಾಲೆಗಳನ್ನು ತೆರೆಯಲು ಹೊರಡುವುದು ಎಷ್ಟು ಸರಿ? ಕರ್ನಾಟಕದಲ್ಲಿ ಇಂದೂ ಸುಮಾರು ನೂರಕ್ಕೆ ೮೩ ಮಕ್ಕಳು ಕನ್ನಡ ಮಾಧ್ಯಮದಲ್ಲೇ ಕಲಿಯುತ್ತಿದ್ದಾರೆ. ಆದರೆ ಅನೇಕರಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯುವುದರಿಂದ ಉನ್ನತ ಶಿಕ್ಷಣ ಸರಳವಾಗುತ್ತದೆ, ಮಕ್ಕಳು ಬುದ್ಧಿವಂತರಾಗುತ್ತಾರೆ, ಒಳ್ಳೆಯ ಕೆಲಸಗಳು ಸಿಗುತ್ತವೆ ಎನ್ನುವ ಅನಿಸಿಕೆಯಿದೆ. ಈ ಕಾರಣದಿಂದಾಗಿ ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಸೇರಿಸುವತ್ತ ಒಲವು ತೋರುತ್ತಿದ್ದಾರೆ. ತಾಯಿ ತಂದೆಯರಿಗೆ ತಮ್ಮ ಮಕ್ಕಳ ಕಲಿಕಾ ಮಾಧ್ಯಮವನ್ನು ತೀರ್ಮಾನಿಸುವ ಹಕ್ಕಿದೆ ಎನ್ನುವುದು ಖಂಡಿತಾ ಒಪ್ಪುವಂತಹುದ್ದೇ ಆಗಿದೆ. ಇಂಗ್ಲೀಷ್ ಭಾಷೆಯಲ್ಲಿನ ಪರಿಣಿತಿ ತಂದುಕೊಡುವ ಲಾಭಕ್ಕೂ, ಇಂಗ್ಲೀಷ್ ಮಾಧ್ಯಮದ ಕಲಿಕೆ ಉಂಟುಮಾಡುವ ನಷ್ಟಕ್ಕೂ ನಡುವಿನ ವ್ಯತ್ಯಾಸವನ್ನು ಅರಿಯದ ಮುಗ್ಧರು ಜನಸಾಮಾನ್ಯರು. ಹಾಗಾಗಿ ಸಿರಿವಂತರಿಗೆ ಸಿಗುತ್ತಿರುವ ಇಂಗ್ಲೀಷ್ ಮಾಧ್ಯಮದ ಕಲಿಕೆ ಬಡವರಿಗೂ ಸಿಗಲಿ ಎಂಬ ಬಣ್ಣದ ಮಾತಿನ ಆಕರ್ಷಣೆಗೆ ಸಿಕ್ಕಿಕೊಳ್ಳುವುದು ಸುಲಭವಾಗಿದೆ, ಹಾಗಾಗಿ ಇಂದು ಕನ್ನಡಪರರು ತಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮಕ್ಕೆ ಕಳಿಸಿ ನಮ್ಮ ಮಕ್ಕಳನ್ನು ಉದ್ಧಾರವಾಗಲು ಬಿಡುತ್ತಿಲ್ಲ ಎನ್ನುವ ಘೋಷಣೆ ಸಲೀಸಾಗಿ ನಂಬುವುದು ಕೂಡಾ ಸಹಜ. ಆದರೆ ಸರ್ಕಾರವೊಂದು ನಡೆದುಕೊಳ್ಳುತ್ತಿರುವ ರೀತಿ ಸರಿಯೇ ಎಂಬುದೇ ಇಲ್ಲಿನ ಮುಖ್ಯಪ್ರಶ್ನೆಯಾಗಿದೆ.

ಅಮೇರಿಕದಂತಹ ಮುಕ್ತ ಮಾರುಕಟ್ಟೆಯ ವ್ಯವಸ್ಥೆ ಹೊಂದಿರುವ ದೇಶದಲ್ಲೇ ಶಿಕ್ಷಣ, ಆರೋಗ್ಯ ಸೇವೆಯಂತಹ ಮೂಲಭೂತ ವಿಷಯಗಳು ಈಗಲೂ ಸರ್ಕಾರದ ಕಣ್ಣಂಚಿನಲ್ಲೇ ಇದೆ ಅನ್ನುವುದನ್ನು ಗಮನಿಸಬೇಕಾಗುತ್ತದೆ. ಅಷ್ಟಕ್ಕೂ ಜನ ಮರುಳೋ ಜಾತ್ರೆ ಮರುಳೋ ಅಂಬಂತೆ ಇಂಗ್ಲಿಶ್ ಶಾಲೆಗಳಿಗೆ ಸೇರಿರುವ ಮಕ್ಕಳೆಲ್ಲ ಇಂಗ್ಲಿಶ್ ಕಲಿತು ಜ್ಞಾನ, ವಿಜ್ಞಾನದ ಶಾಖೆಗಳಲ್ಲಿ ಪ್ರಪಂಚವೇ ಬೆರಗಾಗುವಂತಹ ಸಾಧನೆಯೆನಾದರೂ ಮಾಡಿದ್ದಾರಾ? ಕರ್ನಾಟಕದಲ್ಲಿ ಇವತ್ತು ಅನ್ನ ತಿನ್ನುತ್ತಿರುವವರೆಲ್ಲ ಇಂಗ್ಲಿಶಿನಿಂದಲೇ ಅದನ್ನು ಪಡೆಯುತ್ತಿದ್ದಾರಾ? ಎಲ್ಲೋ ಒಂದಿಷ್ಟು ಐಟಿ, ಕಾಲ್ ಸೆಂಟರ್ ನ ಪುಡಿಗಾಸಿನ ಕೆಲವು ಕೆಲಸಗಳ ಲಾಭವಷ್ಟೇ ಆಗುತ್ತಿರುವುದು. ಅಷ್ಟು ಮಾತ್ರದ ಲಾಭಕ್ಕೆ ಎಲ್ಲೆಡೆ ಸರ್ಕಾರವೇ ಮುಂದೆ ನಿಂತು ಇಂಗ್ಲಿಶ್ ಶಾಲೆ ತೆರೆಯುವ ಮಾತು ಸರ್ಕಾರಕ್ಕೆ ಒಂದು ಭಾಶೆಯಾಗಿ ಇಂಗ್ಲಿಶ್ ಕಲಿಸುವುದಕ್ಕೂ, ಇಂಗ್ಲಿಶ್ ಮಾಧ್ಯಮದಲ್ಲೇ ಎಲ್ಲವನ್ನೂ ಮಾಡುತ್ತೇವೆ ಅನ್ನುವುದಕ್ಕೂ ಇರುವ ಅಂತರವಾದರೂ ಅರ್ಥವಾಗಿದೆಯೇ ಅನ್ನುವ ಪ್ರಶ್ನೆ ಹುಟ್ಟು ಹಾಕುತ್ತಿಲ್ವೇ?

ಇಡೀ ರಾಜ್ಯದಲ್ಲಿ ಇಂಗ್ಲಿಶ್ ಮಾದ್ಯಮ ಶಾಲೆ ತೆರೆದರೆ ಕರ್ನಾಟಕ ಖಂಡಿತ ಮುಂದುವರೆಯುತ್ತೆ, ಏಳಿಗೆ ಹೊಂದುತ್ತೆ.
ಕರ್ನಾಟಕದ 83% ಮಕ್ಕಳು  ಇಂದಿಗೂ ಕನ್ನಡ ಮಾಧ್ಯಮದಲ್ಲೇ ಓದುತ್ತಿದ್ದಾರೆ. ಈ ಶಾಲೆಗಳನ್ನೆಲ್ಲ ಮುಚ್ಚಿ ಇಂಗ್ಲಿಶ್ ಶಾಲೆಗಳಾಗಿಸುವುದು ಸಾಧ್ಯವೇ? ಸಾಧ್ಯ ಯಾಕಾಗಲ್ಲ ಅನ್ನುವುದನ್ನು ಮೊದಲಿಗೆ ಅರ್ಥ ಮಾಡಿಕೊಳ್ಳಬೇಕು. 90 ಲಕ್ಷ ವಿದ್ಯಾರ್ಥಿಗಳಿಗೆ ಅವರ ವಾತಾವರಣದಲ್ಲಿ ಇಲ್ಲದ ಇಂಗ್ಲಿಶ್ ನುಡಿಯಲ್ಲಿ, ಅವರೆಲ್ಲ ಇಂಗ್ಲಿಶ್ ನಲ್ಲೇ ಚೆನ್ನಾಗಿ ಪಾಠ ಕೇಳಿ, ಕಲಿತು, ಮನದಟ್ಟು ಮಾಡಿಕೊಳ್ಳಲು ಇಂಗ್ಲಿಶ್ ಅನ್ನು ಅರೆದು ಕುಡಿದಿರುವ, ಅದನ್ನು ಮಕ್ಕಳಿಗೆ ಅಷ್ಟೇ ಪರಿಣಾಮಕಾರಿಯಾಗಿ ಕಲಿಸಬಲ್ಲ ಪರಿಣಿತ ಶಿಕ್ಷಕರು ಬೇಕು. ಪ್ರತಿ ಮೂವತ್ತು ವಿದ್ಯಾರ್ಥಿಗೆ ಒಬ್ಬ ಶಿಕ್ಷಕ ಅಂದರೆ ಕಡಿಮೆ ಅಂದರೂ 3 ಲಕ್ಷ ಜನ ಇಂಗ್ಲಿಶ್ ಬಲ್ಲ ಶಿಕ್ಷಕರು ಬೇಕು. ಹೇಳಿ ಎಲ್ಲಿಂದ ತರೋಣ ಇವರನ್ನೆಲ್ಲ? ಇರುವ ಮಕ್ಕಳಿಗೆ ಕನ್ನಡದಲ್ಲೇ ಪಾಠ ಮಾಡಲು ಶಿಕ್ಷಕರು ಸಿಗುತ್ತಿಲ್ಲ. ಇನ್ನು ಇವರನ್ನೆಲ್ಲಿಂದ ತರೋಣ ? ವಾತಾವರಣದಲ್ಲಿರುವ ಮಕ್ಕಳ, ಶಿಕ್ಷಕರೆಲ್ಲರ ಭಾಷೆಯಾಗಿರುವ ಕನ್ನಡದಲ್ಲಿ ಇಂತಹದೊಂದು ವ್ಯವಸ್ಥೆ ಕಲ್ಪಿಸುವುದು ಸುಲಭವೋ ಅಥವಾ ಇದಾವುದು ಇಲ್ಲದ ಇಂಗ್ಲಿಷ್ ನಲ್ಲೋ? ಹಾಗಿದ್ದರೆ ಇವತ್ತಿರುವ ಕನ್ನಡ ಮಾಧ್ಯಮ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಿ, ಹೆಚ್ಚಿನ ಕಲಿಕೆಯನ್ನು ಅದರಲ್ಲೇ ತರುವ ಪ್ರಯತ್ನಕ್ಕೆ ಹಣ, ಸಂಪನ್ಮೂಲ, ಆದ್ಯತೆ ಕೊಡುವ ಮಾತನ್ನು ಮಾನ್ಯ ಮಂತ್ರಿಗಳು ಆಡಿದ್ದರೆ ಜನರ ಬಗೆಗಿನ ಕಾಳಜಿಯ ಇವರ ಮಾತುಗಳು ನಿಜ ಅನ್ನಿಸುತ್ತಿತ್ತು.

ಕನ್ನಡದಲ್ಲಿ ಎಲ್ಲಿದೆ ವಿಜ್ಞಾನ-ತಂತ್ರಜ್ಞಾನದ ವಿಷ್ಯಗಳ ಪುಸ್ತಕಗಳು. ಉನ್ನತ ಶಿಕ್ಷಣ ಎಲ್ಲಿದೆ?                                
ಇವತ್ತು ಆ ವ್ಯವಸ್ಥೆ ಇಲ್ಲ ಅಂದರೆ ಪರಿಹಾರ, ಅದನ್ನು ಬಿಟ್ಟು ಇನ್ನೊಂದು ವ್ಯವಸ್ಥೆ ಕಟ್ಟುತ್ತೀನಿ ಅಂತ ಹೊರಡೋದಾ ಇಲ್ಲ ಅದರಲ್ಲಿ ಅಂತಹ ಸಾಧ್ಯತೆ ತರುವುದರತ್ತ ಕೆಲಸ ಮಾಡುವುದಾ? ನಿಮ್ಮನೆ ಮಗುವಿಗೆ ಯಾವುದೋ ಒಂದು ಸಾಮರ್ಥ್ಯ ಇವತ್ತಿಲ್ಲ ಅಂದರೆ,ಆ ಮಗುವನ್ನೇ ಕೈ ಬಿಟ್ಟು ಇನ್ನೊಂದು ಮಗುವನ್ನ ಕೊಂಡು ತರ್ತಿರೋ ಇಲ್ಲ ನಿಮ್ಮ ಮಗುವಲ್ಲಿ ಆ ಸಾಮರ್ಥ್ಯ ದೊರಕಿಸಿಕೊಡುವತ್ತ ಕೆಲಸ ಮಾಡುತ್ತಿರೋ? ಒಂದು ಸಮಯಾಧಾರಿತ ಯೋಜನೆ ಹಾಕಿಕೊಂಡು ಜ್ಞಾನ ಶಾಖೆಯ ಎಲ್ಲ ವಿಷಯಗಳನ್ನು ಕನ್ನಡದಲ್ಲಿ ತರುವತ್ತ ಕೆಲಸ ಮಾಡಬೇಕಾದುದು ಇವತ್ತಿನ ಅಗತ್ಯವೇ ಹೊರತು ಕೈ ಚೆಲ್ಲಿ ಎಲ್ಲೆಡೆ ಇಂಗ್ಲಿಶ್ ಶಾಲೆಗಳನ್ನು ತೆರೆಯುವುದಲ್ಲ ಅಲ್ಲವೇ?
    ಎಂದಿಗೂ ಹಿಂಪಡೆಯಲಾಗದ ( irreversible) ಬದಲಾವಣೆ !
    ಇದೆಲ್ಲ ಒಂದು ತೂಕವಾದರೆ, ಸರ್ಕಾರದ ಇಂತಹ ನಿಲುವೊಂದು ಮುಂದಿನ ದಿನಗಳಲ್ಲಿ ಕನ್ನಡ ಸಮಾಜದ ಮೇಲೆ ಮಾಡಬಹುದಾದ ಪರಿಣಾಮ ಎಂತಹುದು? ಇವತ್ತು ಎಲ್ಲೆಲ್ಲಿ ಕನ್ನಡದ ಬಳಕೆ ಚೆನ್ನಾಗಿ ಆಗುತ್ತಿದೆಯೋ, ಅಲ್ಲೆಲ್ಲ ಒಂದು ಪೀಳಿಗೆಯ ಅವಧಿಯಲ್ಲಿ ಆಗಬಹುದಾದ ಬದಲಾವಣೆಗಳನ್ನು ಊಹಿಸಿದ್ದೀರಾ? ಇಂಗ್ಲಿಶ್ ಮಾದ್ಯಮ ಶಾಲೆಗಳ ಸಂಖ್ಯೆ ಹೆಚ್ಚಿರುವ  ಬೆಂಗಳೂರಿನಲ್ಲಿ ಕನ್ನಡದಲ್ಲಿ ಇಂಗ್ಲಿಶ್ ಬೆರಕೆ, ಕನ್ನಡ ಮಾತನಾಡದಿರುವುದೇ ಪ್ರತಿಷ್ಟೆಯ ಸಂಕೇತ, ಕನ್ನಡದ ಬಗ್ಗೆ ಕೀಳರಿಮೆ ಮುಂತಾದ ಸಮಸ್ಯೆಗಳು ಉಲ್ಬಣಿಸಿವೆ ಅನ್ನುವುದು ಏನನ್ನು ತೋರಿಸುತ್ತಿವೆ? ಇಡೀ ಕರ್ನಾಟಕಕ್ಕೆ ಇಂಗ್ಲಿಶಿನ ವ್ಯವಸ್ಥೆ ತರುವುದು ಎಂದಿಗೂ ಹಿಂಪಡೆಯಲಾಗದ ( irreversible) ಬದಲಾವಣೆಯಾಗಲಿದೆ ಅನ್ನುವುದು ಸರ್ಕಾರದ ಅರಿವಿಗೆ ಬಂದಿದೆಯೇ? ಸಾವಿರಾರು ವರ್ಷಗಳ ಇತಿಹಾಸ, ಹಿರಿಮೆ ಇರುವ ಒಂದು ಜನಜೀವನ ಒಂದೇ ಒಂದು ಪೀಳಿಗೆಯ ಅವಧಿಯಲ್ಲಿ ಹೊಂದಲಿರುವ ಬದಲಾವಣೆ ಎಂತಹುದು ಅನ್ನುವುದರ ಪ್ರಜ್ಞೆ ಸರ್ಕಾರಕ್ಕಿದೆಯೇ?

    ಕನ್ನಡ ಶಾಲೆಗಳ ಯಶಸ್ಸೊಂದೇ ಬದಲಾಯಿಸಬಲ್ಲುದು
    ತಾಯ್ನುಡಿ ಶಿಕ್ಷಣ ಮಕ್ಕಳ ಬುದ್ದಿ ವಿಕಾಸಕ್ಕೆ ದಾರಿಯೆನ್ನುವುದನ್ನು ಜಗತ್ತಿನ ನೂರಾರು ಚಿಂತಕರು, ವಿಜ್ಞಾನಿಗಳು, ಶಿಕ್ಷಣ ತಜ್ಞರು ಸಾರಿ ಸಾರಿ ಹೇಳುತ್ತಿದ್ದರೂ, ತಾಯ್ನುಡಿ ಶಿಕ್ಷಣದ ವ್ಯವಸ್ಥೆಯಿಂದಲೇ ಇಸ್ರೇಲ್, ಜಪಾನ, ಜರ್ಮನಿ, ಅಮೇರಿಕ, ಇಂಗ್ಲಂಡ್, ಫ್ರಾನ್ಸ್ ನಂತಹ ದೇಶಗಳು ಏಳಿಗೆ ಹೊಂದಿರುವ ಎತ್ತುಗೆ ಕಣ್ ಮುಂದಿದ್ದರೂ, ಅಂತಹದೊಂದು ವ್ಯವಸ್ಥೆ ಕಟ್ಟುವೆಡೆ ಪ್ರಾಮಾಣಿಕವಾಗಿ ಕೆಲಸ ಮಾಡದೇ, ಈ ರೀತಿ ತನ್ನ ಜವಾಬ್ದಾರಿಯಿಂದ ಜಾರಿಕೊಳ್ಳುವ ಸರ್ಕಾರಗಳ ಕಣ್ ತೆರೆಸಲು ಇರುವ ಹಾದಿಯೊಂದೇ.. ಕನ್ನಡ ಮಾದ್ಯಮದಲ್ಲೇ ಎಲ್ಲ ಸವಲತ್ತು, ಸೌಕರ್ಯ, ಹೊಸ ಮಾದರಿಯ ಕಲಿಕೆ ಇರುವ ಖಾಸಗಿ ಶಾಲೆಗಳನ್ನು ಕನ್ನಡಿಗರು ಕಟ್ಟಿ,  ಅಂತಹ ಶಾಲೆಗಳ ಮಕ್ಕಳು ಅದ್ಭುತ ಯಶಸ್ಸು ಸಾಧಿಸಬೇಕು, ಅಂತಹ ಯಶಸ್ಸಿನ ಅಲೆಯೊಂದೇ ಸರ್ಕಾರವನ್ನು ಮತ್ತೆ ಕನ್ನಡ ಮಾಧ್ಯಮದೆಡೆಗೆ ಗಮನ ಹರಿಸುವಂತೆ ಮಾಡಬಹುದೆನೋ..

    16 ಕಾಮೆಂಟ್‌ಗಳು:

    1. I m anita from Ranibennur. Instead of telling to English medium schools we go for the solution which is easy to proceed like according to me we need to have one english learning/speaking classes at the 9th or 10th so that when student come to PUC or equivalent any course he/she can feel to learn all subjects in English. I think it doesn't need more effort from government also..... Good na?....... Because i m also kennda medium student i took 2 years to understand the subject in English....... Some times i didnt answered more question in exams even though i know the concept....
      I think if my suggestion implemented then more Kannada medium students will going to avoid this problem.......

      ಪ್ರತ್ಯುತ್ತರಅಳಿಸಿ
    2. The influence of English language is inevitable because people treat English speaking ability as a symbol of prestige or achievement in itself. They don't care if a person knows 10 Indian languages...what an irony. So in this situation we need to bring awareness in people that just by speaking English no one is going to achieve anything. Its the sheer raw talent in a child which makes the difference. I believe instead of starting English Govt. schools, giving an option of First Language English elective and giving English speaking tutorials is better way. Its difficult to believe and accept but its true that English language has great influence. We can't go against it, everyone has to learn it as the society and jobs demand it. But it doesn't mean you learn only English, learn it as a necessity. Kannada is our mother tongue, every Kannadiga should learn to speak, write and respect Kannada. In my opinion, starting English medium schools is not going to affect so much as teachers in GOVT. schools will still teach in Kannada :-). Kannada is available as First, Second and Third language in syllabus. We can't force people to love or hate anything. We can just make them aware of few things like "Janani Janmabhoomischa Swargadhapi Gareeyasi". Eshtu english kaltre enu, novvadaga.. Ayyo Ammma antane thane bayige barodu ;-) Maathru bhashe prema hrudayadalli moodirabeku... "Murkhanige buddi noorkala helidhare...Gorkalla mele male hoydare...Kallu neerkudiyuvudhe Sarvanjna?" Jai Kannada Jai Karanataka Maathe.

      ಪ್ರತ್ಯುತ್ತರಅಳಿಸಿ
    3. ಇಡೀ ರಾಜ್ಯದಲ್ಲಿ ಇಂಗ್ಲಿಶ್ ಮಾದ್ಯಮ ಶಾಲೆ ತೆರೆದರೆ ಕರ್ನಾಟಕ ಖಂಡಿತ ಮುಂದುವರೆಯುತ್ತೆ, ಏಳಿಗೆ ಹೊಂದುತ್ತೆ.
      ಕರ್ನಾಟಕದ 83% ಮಕ್ಕಳು ಇಂದಿಗೂ ಕನ್ನಡ ಮಾಧ್ಯಮದಲ್ಲೇ ಓದುತ್ತಿದ್ದಾರೆ. ಈ ಶಾಲೆಗಳನ್ನೆಲ್ಲ ಮುಚ್ಚಿ ಇಂಗ್ಲಿಶ್ ಶಾಲೆಗಳಾಗಿಸುವುದು ಸಾಧ್ಯವೇ? ಸಾಧ್ಯ ಯಾಕಾಗಲ್ಲ ಅನ್ನುವುದನ್ನು ಮೊದಲಿಗೆ ಅರ್ಥ ಮಾಡಿಕೊಳ್ಳಬೇಕು. 90 ಲಕ್ಷ ವಿದ್ಯಾರ್ಥಿಗಳಿಗೆ ಅವರ ವಾತಾವರಣದಲ್ಲಿ ಇಲ್ಲದ ಇಂಗ್ಲಿಶ್ ನುಡಿಯಲ್ಲಿ, ಅವರೆಲ್ಲ ಇಂಗ್ಲಿಶ್ ನಲ್ಲೇ ಚೆನ್ನಾಗಿ ಪಾಠ ಕೇಳಿ, ಕಲಿತು, ಮನದಟ್ಟು ಮಾಡಿಕೊಳ್ಳಲು ಇಂಗ್ಲಿಶ್ ಅನ್ನು ಅರೆದು ಕುಡಿದಿರುವ, ಅದನ್ನು ಮಕ್ಕಳಿಗೆ ಅಷ್ಟೇ ಪರಿಣಾಮಕಾರಿಯಾಗಿ ಕಲಿಸಬಲ್ಲ ಪರಿಣಿತ ಶಿಕ್ಷಕರು ಬೇಕು. ಪ್ರತಿ ಮೂವತ್ತು ವಿದ್ಯಾರ್ಥಿಗೆ ಒಬ್ಬ ಶಿಕ್ಷಕ ಅಂದರೆ ಕಡಿಮೆ ಅಂದರೂ 3 ಲಕ್ಷ ಜನ ಇಂಗ್ಲಿಶ್ ಬಲ್ಲ ಶಿಕ್ಷಕರು ಬೇಕು. ಹೇಳಿ ಎಲ್ಲಿಂದ ತರೋಣ ಇವರನ್ನೆಲ್ಲ? ಇರುವ ಮಕ್ಕಳಿಗೆ ಕನ್ನಡದಲ್ಲೇ ಪಾಠ ಮಾಡಲು ಶಿಕ್ಷಕರು ಸಿಗುತ್ತಿಲ್ಲ. ಇನ್ನು ಇವರನ್ನೆಲ್ಲಿಂದ ತರೋಣ ? ವಾತಾವರಣದಲ್ಲಿರುವ ಮಕ್ಕಳ, ಶಿಕ್ಷಕರೆಲ್ಲರ ಭಾಷೆಯಾಗಿರುವ ಕನ್ನಡದಲ್ಲಿ ಇಂತಹದೊಂದು ವ್ಯವಸ್ಥೆ ಕಲ್ಪಿಸುವುದು ಸುಲಭವೋ ಅಥವಾ ಇದಾವುದು ಇಲ್ಲದ ಇಂಗ್ಲಿಷ್ ನಲ್ಲೋ? ಹಾಗಿದ್ದರೆ ಇವತ್ತಿರುವ ಕನ್ನಡ ಮಾಧ್ಯಮ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಿ, ಹೆಚ್ಚಿನ ಕಲಿಕೆಯನ್ನು ಅದರಲ್ಲೇ ತರುವ ಪ್ರಯತ್ನಕ್ಕೆ ಹಣ, ಸಂಪನ್ಮೂಲ, ಆದ್ಯತೆ ಕೊಡುವ ಮಾತನ್ನು ಮಾನ್ಯ ಮಂತ್ರಿಗಳು ಆಡಿದ್ದರೆ ಜನರ ಬಗೆಗಿನ ಕಾಳಜಿಯ ಇವರ ಮಾತುಗಳು ನಿಜ ಅನ್ನಿಸುತ್ತಿತ್ತು.
      This point is extremely imprtant -- themagnitude of the problem of finding well-trained teachers wo can teach all (or most) subjects through he Englsh mediums often not appreciatd. The effort to train such a teacher force will be stupendous.

      ಪ್ರತ್ಯುತ್ತರಅಳಿಸಿ
    4. Main idea is government which is supposed to give push to Kannada medium education, is forcing english medium and making Kannada inferior in its own land.Countries like China,Japan,Germany,France who are much much advanced in technology than us,they learn english as language not as medium of education and that is the reason we are lagging behind."ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು". ತಾಯಿ ಬಾಶೆಯಲ್ಲಿ ಕಲಿತಷ್ಟು ಸುಲಭ ಇನ್ನಾವುದು ಆಗಲಿಕ್ಕಿಲ್ಲ.ಸರಕಾರವೇ ಇಂಥ ಕುಕೃತ್ಯಕ್ಕೆ ಮುಂದಾದರೆ ಬೇಲಿಯೇ ಎದ್ದು ಹೊಲಮೆಯ್ದಂತೆ ಅಲ್ಲವೇ? ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಕಿಳರಿಮೆ ಬೆಳೆಸಲು ಘನ ಸರಕಾರವೇ ಮುಂದಾಗಿದೆ. ಕ್ಯಾಪ್ಟನ್ ಗೋಪಿನಾಥ್, ವಿಜಯ್ ಸಂಕೇಶ್ವರ,ನಾರಾಯಣ ಮೂರ್ತಿ ಅಂತ ಉದ್ಯಮಿಗಳು ಕೂಡ ಕನ್ನಡ ಮಾಧ್ಯಮದಲ್ಲಿ ಕಲಿತದ್ದು ಅಂತ ಗೊತ್ತಿರಲಿ.

      ಪ್ರತ್ಯುತ್ತರಅಳಿಸಿ
    5. i support the Ministers proposal..

      we have to consider the current situation and right accordingly not just by emotional attachments to language ..
      yes we all are Kannadigas and i am happy and glad for that .. that doesn't mean that very high talented people in karnataka should become useless and endup in there villages just because they don't know English(there is a high opportunity if you know English is what i meant)..

      English learning is a process even if you learn English grammar, you can't speak easily even if you speak, you cant speak with proper accent
      so people get demotivated when they come to Bangalore for learning higher studies

      just imagine, where should poor talented people learn English from???

      stop this partiality... and help them grow Economically

      ಪ್ರತ್ಯುತ್ತರಅಳಿಸಿ
    6. Raghunandan,
      "we have to consider the current situation and right accordingly not just by emotional attachments to language"

      Its not emotional attatchment,
      English medium will not work because
      its impractical, unscientific and absurd. Currently teachers who are trained in Kannada to teach in primary, Middle and High school are not able to impart quality education/teaching/learning,then how can they effectively teach in English medium when the whole school is surrounded by Kannada population. Moment they get out of the school they hear/work/eat/learn from Kannada society.

      I still remember that when I was studying PUC at Mysore, the Lecturer used to teach English as a language in Kannada. He used to focus more on the content of English literature than the language itself. He almost taught the whole English course for I and II PUC by conversing and explaining in Kannada itself.

      If Kannada medium is supported,developped,imparted and built effectively, one can learn the concepts clearly and carry out innovation in future.

      English medium is actually killing the innovation qualities of an individual(Kannadiga)

      ಪ್ರತ್ಯುತ್ತರಅಳಿಸಿ
    7. @Raghunandan,,

      Read the article carefully,,
      In the article nowhere the author opposed the learning of english as a Language.

      Please try to understand the difference between and consequences of having English as a language and English as a medium.

      ಪ್ರತ್ಯುತ್ತರಅಳಿಸಿ
    8. ದಿನದಿಂದ ದಿನಕ್ಕೆ ಹತ್ತಿರ ಬರುತ್ತಿರುವ ಜಗತ್ತಿನಲ್ಲಿ, ಇಂಗ್ಲೀಶ್ ಗೊತ್ತಿರುವುದು ಒಳ್ಳೆಯದೇ. ಹಾಗಂತ, ಇತರೆ ಕಲಿಕೆಗೂ ಇಂಗ್ಲೀಷನ್ನೇ ಒರಗಿಕೊಂಡರೆ, ಎಲ್ಲ ಜನರ ಕಲಿಕೆ ಬೆಳೆಯುವುದಿಲ್ಲ. ಇದು ಜಗತ್ತಿನ ಎಲ್ಲಾ ನುಡಿಸಮುದಾಯಗಳೂ ಕಂಡುಕೊಂಡ ಸತ್ಯ ಕೂಡ. ಇತರ ವಿಷಯಗಳ ಕಲಿಕೆಗೆ ಕನ್ನಡವನ್ನೇ ಬಳಸಿ, ಇಂಗ್ಲೀಷನ್ನು ಒಂದು ಬಾಷೆಯಾಗಿ ಚೆನ್ನಾಗಿ ಕಲಿಸುವ ಏರ್ಪಾಡು ಇವತ್ತು ಬೇಕಾಗಿದೆ. ಅಂತಹ ಒಂದು ಏರ್ಪಾಡು ಬೆಳೆಸುವ ಕಡೆ ಶಿಕ್ಷಣ ಸಚಿವರು ಒತ್ತು ಕೊಡುವಂತಾಗಲಿ.
      ಹೀಗೆ ಮಾಡುವುದರಿಂದ, ಕನ್ನಡ ಮಕ್ಕಳಿಗೆ ವಿಷಯ ಕಲಿಕೆ ಚೆನ್ನಾಗಿ ಆಗುತ್ತದೆ, ಜೊತೆಗೇ ಹೊರಜಗತ್ತಿನೊಡನೆ ವ್ಯವಹಾರಕ್ಕಾಗಿ ಇಂಗ್ಲೀಷೂ ತಿಳಿದಿರುತ್ತದೆ. ಇದರ ಬದಲಾಗಿ, ಎಲ್ಲಕ್ಕೂ ಇಂಗ್ಲೀಷನ್ನೇ ಬಳಸೋದರಿಂದ, ಹೆಚ್ಚಿನ ಕನ್ನಡ ಮಕ್ಕಳು ವಿಷಯ ಕಲಿಕೆಯಲ್ಲಿ ಹಿಂದೆ ಬೀಳುತ್ತಾರೆ. ನಮ್ಮ ಹೆಚ್ಚಿನ ಮಂದಿ ಕಲಿಕೆಯಲ್ಲಿ ಹಿಂದೆ ಬಿದ್ದರೆ, ನಾವೊಂದು ಸಮಾಜವಾಗಿ ಹಿಂದೆ ಬಿದ್ದಂತೆಯೇ.

      ಪ್ರತ್ಯುತ್ತರಅಳಿಸಿ
    9. ದಂಡಪಿಂಡಗಳು...
      ನಾವು ತಮಿಳು ಮತ್ತು ತೆಲಗು ಭಾಷಿಕರಿಂದ ಕಲಿಯಬೇಕಾದದು ಬಹಳಿದೆ... ಅವರಲ್ಲಿರುವ ಮಾತೃಭಾಷಾ ಪ್ರೇಮದ ೧% ಸಹ ನಮ್ಮ ಕನ್ನಡಿಗರಲ್ಲಿ ಇಲ್ಲದೇ ಇರುವುದು ಖೇದದ ಸಂಗತಿ... ಅದರ ಫಲಶೃತಿಯೇ ಇಂಗ್ಲಿಶ್ ಮಾಧ್ಯಮದ ಶಾಲೆ...
      try to speaks in Kannada even u know English / Hindi as they speaks Telgu / Tamil... avoid secondary language if you real kannada premi
      ಕನ್ನಡ ಮಾತನಾಡುವುದರಲ್ಲಿ ನಿಮ್ಮ ಪ್ರತಿಷ್ಠೆ ಅಂತಸ್ತು ಅಡ್ಡ ಬರುವುದಾದರೇ ಕರ್ನಾಟಕದಿಂದ ಜಾಗ ಖಾಲಿ ಮಾಡಿ....

      ಪ್ರತ್ಯುತ್ತರಅಳಿಸಿ
    10. namaste nanna hesaru madhu naanu maisurinalli vaasavaagi eddene. naanu eegaste M Sc (speech language pathology andre vaak mathu baasha vibhaga) mugisiddene. nanna samstheyalli maathu maththu baasheya tondare iruva halavu makkalannu nodiddene. adaralli ondu maguvina katheyannu illa hela bayasuthe adu melina helikege poorakavaagi ide.\

      1 tingala hinde one thande tanna maguvondige namma samstege bandiddaru, kaarana maguvige toduluva tondare ide endu. naanu chikitse shuru maadidaaga gothada kelavu amshagalendare tande raitha, thaayi gruhuni ibbaru 10 taragatiginta jaasti odilla. magu 2 taragatiyalli ondu public shaaleyalli oduthide. avanige todalisuva tondare shaalege hogalu shuru maadida mele bandide, magu oduvudaralli hindulidide, 20/100 idakke naave kalikaa nyunyate ennutheve, adarinda avana sarvatomuka abivruddi kuntita agtha ide.... kaarana yaaru, pratistegoskara aa shalege haakida tandetaayigaladda, maguvina yogyate tiliyade pata maaduvu gurugaladda, hiyaalisuva avana snehitarada illa ella sahisi shaale hoguthiruva aa maguvinada?????
      ellaru samskruthi, sarkaara, arthika paristi anta yochane madthira adre makkalu idaralli mukyavaada baaga avarabagge yyochane maadi dayavittu.........
      netta kannada vijnana kalisada namma sarkaari shikshakaru, english kalistara....... sarkaara modalu idara bagge gamana harisidare chennagiruthe makkala bavisya kattodakkina illiruva shikshana vyavaste mathe shiskaranna saripadisi........ madbekaagiruva kelsa bittu bedadiruva kelsake kai haakodake horatide naachike keedu.......... o sarkaarave nimma dorbalyana sari kolli....... haage english maadyama tarale bekendre modalu makkala mathu poskarondi and sarve maadi........ nanna prakaara neevu haage maadalu hortare olle maryaade siguthe mathu nimage kannada bele thiliyuthe........ ivathu nanna geleya kannada madyamadalli odi amerikadalli english lecturer aagi kelsa madtha idaane... idu kannadakke hemmeya vishaya alva...... yaake illa salladadella heli namma kannadada maanavanna neene beedige elitideera gothagtha illa...... dayavittu aariti yochanegalanella bidi........ illa andre nammantha janagalu seri bidisbekaaguthe...........

      ಪ್ರತ್ಯುತ್ತರಅಳಿಸಿ
    11. ನನ್ನ ಹೆಸರು ಪ್ರಶಾಂತ್, ಬೆಂಗಳೂರಿನವನು,

      ನಮ್ಮ ಇದೇ ಘನ ಸರಕಾರವು ಅನ್ಯ ಭಾಷೆಯವರಿಗೆ ಕನ್ನಡ ಕಲಿಯಲು ಹೆಳಿ ತಮ್ಮ ಮಕ್ಕಳಿಗೆ ಕನ್ನಡವನ್ನು ಬಿಟ್ಟು English ಭಾಷೆ ಯಲ್ಲಿ ಕಲಿಯಲು ಹೆಳುತ್ತಿರುವುದು ವಿಷಾದದ ವಿಚಾರ. Jayateerth ಹೆಳಿದಂತೆ Europena ಬಹುತೆಕ ರಾಷ್ಟ್ರಗಳು, Muslim ರಾಷ್ಟ್ರಗಳು, Japan, china ಮತ್ತು ಇತರೆ Asian ರಾಷ್ಟ್ರಗಳು ತಮ್ಮ ವಿದ್ಯಾಭಾಸವನ್ನು ತಮ್ಮ ಮತೃ ಭಾಷೆಯಲ್ಲೆ ಮಾಡುತ್ತಾರೆ ತಮ್ಮ ಉನ್ನತ ವ್ಯಾಸಂಗವನ್ನು ಸಹ ತಮ್ಮ ಮತೃ ಭಾಶೆಯಲ್ಲೆ ಮಾಡುತ್ತರೆ.

      This is a foolish proposal from the minister. Instead they should encourage people to write technological books or books required for (higher) education in our language or at least translate good books into our language and try to improve the education system.
      Most of the developed countries do their education, day to day business, their art and culture in their mother tongue. and learn English just as any other language required to communicate with people who don't know their language. This is the current situation if you thing out of your well. This doesn't mean that they are emotionally attached to their language or they don't know English grammatically or something. We Indians are so confused in every thing. we want their language but we don't want to have self respect like them and we dont respect our language.

      There are a lot of people who study in Kannada medium and still talk English fluently than a lot of people who study in English medium. There are also a lot of Indians who are very fluent in non-Indian non-English languages even though they don't do their education in the corresponding medium. So my personal opinion is that it depends on the person's interest to learn the language more than their medium of education.

      Just think about the current state of Sanskrit language before supporting such people and their anti-Kannada decisions. ಕನ್ನಡನ ಬೆಳಿಸಕ್ಕೆ ಆಗದೆ ಹೊದರು ಉಳಿಸಿ ಕೊಂಡಾದ್ರು ಹೊಗಬೆಕು

      ಪ್ರತ್ಯುತ್ತರಅಳಿಸಿ
    12. yash:
      Madhu N Nyak:netta kannada vijnana kalisada namma sarkaari shikshakaru, english kalistara....... sarkaara modalu idara bagge gamana harisidare chennagiruthe makkala bavisya kattodakkina illiruva shikshana vyavaste mathe shiskaranna saripadisi........ madbekaagiruva kelsa bittu bedadiruva kelsake kai haakodake horatide naachike keedu..........


      thumba arthapurnavada mathu..engish medium bidi..iro ondu english language na modlu sarigi kaliso english teacher na appoint maadkolli...illa andre teacherrigoo english baralla, makligoo englissh baralla, pathya pusthaka maathra english nalli iruthe..maklu kannadanu alla englishhu alla antha yadabidangi galu aagthare ashte...mughda janarige illa sallada aase voddi vote thagolode aythu..

      ಪ್ರತ್ಯುತ್ತರಅಳಿಸಿ
    13. Government should concentrate on Technical, knowledge and Logical things then language, If they provide it in KANNADA (Mother tongue), it is easily understandable.
      After that they can learn any language.
      European countries, China, Japan are not giving education in English.

      Knowledge is important not the language.

      If they start education in English, students and teachers mainly concentrate learning or teaching English not technical or knowledge or logical things.

      ಪ್ರತ್ಯುತ್ತರಅಳಿಸಿ
    14. ಇಂಗ್ಲಿಷ್ ಕಲಿತರೆ ಮಾತ್ರ ಉದ್ಧಾರ ಆಗ್ತಾರೆ , ಕನ್ನಡ ಕಲಿತರೆ ಹಾಳಾಗಿ ಹೋಗ್ತಾರೆ ಅನ್ನೋ ಮನೋಭಾವ ಮೊದಲು ತಂದೆ ತಾಯಿಯವರ ಮನಸ್ಸಿನಿಂದ ಹೋಗ್ಬೇಕು. ಪುಟ್ಟ ಹೊನ್ನೇಗೌಡ ಅವ್ರು ಹೇಳಿದ ಹಾಗೆ "Knowledge is important not the language." ಜ್ಞಾನ ಮುಖ್ಯ.
      ೮ನೆ ತರಗತಿಯಿಂದ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ತೆರೆದರೆ ಒಳ್ಳೆಯದೆಂದು ನನ್ನ ಅಭಿಪ್ರಾಯ (ಇದಕ್ಕೆ ಇಂಗ್ಲಿಷ್ ಚೆನ್ನಾಗಿ ಗೊತ್ತಿರೋ ಶಿಕ್ಷಕರು ಬೇಕು.). ಯಾಕಂದ್ರೆ ಅಷ್ಟು ಹೊತ್ತಿಗಾಗಲೇ ಮಕ್ಕಳಿಗೆ ಕನ್ನಡದ ಮೇಲೆ ಬಿಗಿ ಹಿಡಿತ ಇರುತ್ತೆ.

      ಪ್ರತ್ಯುತ್ತರಅಳಿಸಿ

    ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !