ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಗುಜರಾತಿನಲ್ಲಿ ಶಾಂತಿ, ಸೌಹಾರ್ದತೆ ಬೆಳೆಯಲಿ ಎಂದು ಸದ್ಭಾವನಾ ಮಿಶನ್ ಹೆಸರಿನಲ್ಲಿ ಉಪವಾಸ ಕೈಗೊಂಡದ್ದು ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಯಿತು. ಗುಜರಾತಿನ ಮೇಲೆ, ಅದರ ಅಸ್ಮಿತೆಯ ಮೇಲೆ ಕಳೆದ ಹತ್ತು ವರ್ಷಗಳಿಂದಲೂ ಬೇರೆ ಬೇರೆ ಮಾಧ್ಯಮಗಳು, ಬುದ್ದಿಜೀವಿಗಳು, ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪಗಳಿಗೂ ಈ ಉಪವಾಸದ ಮೂಲಕ ಶಾಂತಿಯ ಉತ್ತರ ನೀಡುತ್ತಿದ್ದೇನೆ ಅನ್ನುವುದು ಮೋದಿಯವರ ವಾದವಾಗಿತ್ತು. ರಾಷ್ಟ್ರೀಯ ಪಕ್ಷವೊಂದರ ಪ್ರತಿನಿಧಿಯಾಗಿದ್ದು ಗುಜರಾತಿನ ಅಸ್ಮಿತೆ, ಗುಜರಾತಿನ ಸ್ವಾಭಿಮಾನ, ಗುಜರಾತಿನ ಏಳಿಗೆ ಅಂತ ಸ್ಥಳೀಯತೆಯ ಮಂತ್ರ ಜಪಿಸುತ್ತ ಒಕ್ಕೂಟ ವ್ಯವಸ್ಥೆ(federalism)ಯಲ್ಲಿ ರಾಜ್ಯಗಳ ಏಳಿಗೆಯಿಂದಲೇ ದೇಶದ ಏಳಿಗೆ ಸಾಧ್ಯ ಅನ್ನುವ ಸಂದೇಶ ಕೊಟ್ಟ ಅವರಿಗೆ ಅದೊಂದು ಕಾರಣಕ್ಕೆ ಅಭಿನಂದಿಸುವೆ. ಆದರೆ ಹಲವು ಸಂದರ್ಭಗಳಲ್ಲಿ ಭಾರತದ ಒಕ್ಕೂಟ ವ್ಯವಸ್ಥೆಯ ಬಗ್ಗೆ ಅವರು ಪ್ರತಿನಿಧಿಸುವ ಪಕ್ಷಕ್ಕಿರುವ ದ್ವಂದ್ವದ ನಿಲುವುಗಳಿಂದ ಇವರಿಗಾಗಲಿ, ಇವರ ಪಕ್ಷಕ್ಕಾಗಲಿ ಭಾರತಕ್ಕೆ ಒಕ್ಕೂಟ ವ್ಯವಸ್ಥೆಯೆನ್ನುವ ಆಡಳಿತ ವ್ಯವಸ್ಥೆ ಬೇಕು ಎಂಬ ಬಗ್ಗೆ ನಿಜಕ್ಕೂ ಪೂರ್ತಿ ಬದ್ಧತೆ ಇದೆಯೇ ಅನ್ನುವ ಬಗ್ಗೆ ನನ್ನಲ್ಲಿ ಅನುಮಾನಗಳಂತೂ ಸಾಕಷ್ಟಿವೆ !
ಆರು ಕೊಟ್ರೆ ಅತ್ತೆ ಕಡೆ, ಮೂರು ಕೊಟ್ರೆ ಸೊಸೆ ಕಡೆಮೊನ್ನೆ ಮೊನ್ನೆ ಕೇಂದ್ರದ ಸರ್ಕಾರ ಗುಜರಾತಿನಲ್ಲಿ ಹಲವು ವರ್ಷಗಳಿಂದ ಲೋಕಾಯುಕ್ತ ಹುದ್ದೆಗೆ ಗುಜರಾತ್ ಸರ್ಕಾರ ಯಾರನ್ನು ನೇಮಿಸಿಲ್ಲ ಎಂದು ಅಲ್ಲಿನ ರಾಜ್ಯಪಾಲರ ಮೂಲಕ ತಾನೇ ಮುಂದೆ ನಿಂತು ಲೋಕಾಯುಕ್ತರ ನೇಮಕ ಮಾಡಿತು. ಒಕ್ಕೂಟ ವ್ಯವಸ್ಥೆಯಲ್ಲಿ ಈ ರೀತಿ ರಾಜ್ಯದ ಆಡಳಿತದಲ್ಲಿ ಮೂಗು ತೂರಿಸುವ ಮೂಲಕ ಒಕ್ಕೂಟ ವಿರೋಧಿ ಧೋರಣೆ ತೋರಿಸಿದ ಕೇಂದ್ರದ ಪ್ರತಿನಿಧಿಯಾದ ರಾಜ್ಯಪಾಲರ ವಿರುದ್ದ ಕೆಂಡಾಮಂಡಲವಾದ ಬಿಜೆಪಿ ಇದು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ನಡೆ ಎಂದು ರಾಷ್ಟ್ರಪತಿಗಳವರೆಗೆ ಹೋಗಿ ಪ್ರತಿಭಟಿಸಿತು. ಆದರೆ ಇದೇ ಬಿಜೆಪಿ ಕರ್ನಾಟಕದಂತಹ ರಾಜ್ಯದಿಂದ ರಾಜ್ಯಸಭೆಗೆ ಸ್ಥಳೀಯರನ್ನು ಆರಿಸಿ ಕಳಿಸಿ ಎಂದಾಗ, ನಮ್ಮದು ರಾಷ್ಟ್ರೀಯ ಪಕ್ಷ, ಹೀಗೆಲ್ಲ ಪ್ರಾಂತೀಯ ವಾದ ಒಪ್ಪುವುದಿಲ್ಲ ಎಂಬಂತೆ ವರ್ತಿಸಿ ಪರ ರಾಜ್ಯದ, ಕರ್ನಾಟಕದ ಬಗ್ಗೆ ನಯಾ ಪೈಸೆ ಕೆಲಸ ಮಾಡದ ನಿವೃತ್ತ ನಟಿಮಣಿಯೊಬ್ಬರನ್ನು, ಆಂಧ್ರದಲ್ಲಿ ಒಂದೇ ಒಂದು ಚುನಾವಣೆ ಗೆಲ್ಲಲಾಗದ ಮಹಾನ್ ರಾಷ್ಟ್ರನಾಯಕರೊಬ್ಬರನ್ನು ಕರ್ನಾಟಕದಿಂದ ರಾಜ್ಯ ಸಭೆಗೆ ಕಳಿಸಿತು. ಅಷ್ಟೇ ಅಲ್ಲ ರಾಜ್ಯಗಳನ್ನು ಪ್ರತಿನಿಧಿಸಲೆಂದೇ ಇರುವ ರಾಜ್ಯಸಭೆಗೆ ಸ್ಪರ್ಧಿಸುವ ಅಭ್ಯರ್ಥಿಯ ಹೆಸರು ಆಯಾ ರಾಜ್ಯದ ಮತದಾರರ ಪಟ್ಟಿಯಲ್ಲಿರಬೇಕು ಅನ್ನುವ ರಾಜ್ಯದ ಪರವಾಗಿದ್ದ ನಿಯಮವನ್ನು ಸಡಿಲಿಸಿ, ಯಾರೂ ಬೇಕಾದರೂ ಬಂದು ನಿಲ್ಲಬಹುದು ಅನ್ನುವಂತೆ ಬದಲಾಯಿಸಿದ್ದು ಮತ್ತು ಆ ಮೂಲಕ ಕನ್ನಡೇತರರನ್ನು ರಾಜ್ಯಸಭೆಗೆ ಕಳಿಸುವಂತಾಗಿದ್ದು ಇದೇ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರ ಮಾಡಿದ ಕೆಲಸದಿಂದ ಅನ್ನುವುದನ್ನು ನೋಡಿದರೆ ಇವರ ಒಕ್ಕೂಟದ ಪರವಾಗಿನ ಎಲ್ಲ ಮಾತುಗಳು ತಮ್ಮ ಅನುಕೂಲಕ್ಕೆ ತಕ್ಕಾಗ ಮಾತ್ರ ಅನ್ನಿಸುವುದಿಲ್ಲವೇ?
ದೀನ್ ದಯಾಳ್ ಉಪಾಧ್ಯಾಯ್ ಒಕ್ಕೂಟ ವ್ಯವಸ್ಥೆಯ ಪರವಾಗಿರಲಿಲ್ಲ !
ಹಿಂದೆ ಬ್ರಿಟಿಷರಿಂದ ಬಿಡುಗಡೆ ಸಿಕ್ಕಾದ ಇಷ್ಟೊಂದು ಭಾಷೆ, ಸಂಸ್ಕೃತಿ, ಆಚರಣೆ, ಜೀವನಶೈಲಿಯ ವೈವಿಧ್ಯತೆ ಇರುವ ದೇಶಕ್ಕೆ ಹೊಂದುವ ವ್ಯವಸ್ಥೆ ಯಾವುದಿರಬೇಕು ಅನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದ ನಂತರವೇ ಭಾರತಕ್ಕೆ ಒಕ್ಕೂಟ ಮಾದರಿಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಯಿತು. ಆ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಸ್ಥಾಪಕ ಸದಸ್ಯರಲ್ಲೊಬ್ಬರಾದ ದೀನ್ ದಯಾಳ್ ಉಪಾಧ್ಯಾಯ್ ಅವರು ಈ ರೀತಿಯ ವ್ಯವಸ್ಥೆಯನ್ನು ಪ್ರತಿಭಟಿಸಿ, ಭಾರತಕ್ಕೆ ಏಕಕೇಂದ್ರ ಪ್ರಭುತ್ವ ಬೇಕೆ ಹೊರತು ಒಕ್ಕೂಟ ವ್ಯವಸ್ಥೆಯಲ್ಲ ಎಂದು ವಾದಿಸಿದ್ದರು. ಏಪ್ರಿಲ್ ೨೨-೨೫, ೧೯೬೫ ರಂದು ಮುಂಬೈನಲ್ಲಿ ಅವರು ನೀಡಿದ 4 ಅಂಶಗಳ ಭಾಷಣದಲ್ಲಿ ಹೇಳಿದ್ದು ಹೀಗಿತ್ತು:
According to the first para of the Constitution, "India that is Bharat will be a federation of States", i.e. Bihar Mata, Banga Mata, Punjab Mata, Kannada Mata, Tamil Mata, all put together make Bharat Mata. This is ridiculous. We have thought of the provinces as limbs of Bharat Mata and not as individual mother. Therefore our constitution should be unitary instead of federal.
ಅದರ ಬಗ್ಗೆ ಹೆಚ್ಚಿನ ಓದಿಗೆ ಕರ್ನಾಟಿಕ್ ಬ್ಲಾಗಿನಲ್ಲಿ ಬಂದಿದ್ದ ಒಂದು ಬರಹದ ಈ ಕೊಂಡಿ ನೋಡಿ.
ಕಾಂಗ್ರೆಸಿನಷ್ಟೇ ಟೊಳ್ಳು !
ಯಾವ ಪಕ್ಷದ ಸ್ಥಾಪಕರಲ್ಲೇ ಭಾರತವೆನ್ನುವುದು ಒಕ್ಕೂಟವಾಗದೇ ದೆಹಲಿಯೆಂಬ ಅಧಿಕಾರ ಕೇಂದ್ರದ ಅಡಿಯಾಳಾಗಿರಬೇಕು ಅನ್ನುವ ನಿಲುವಿತ್ತೋ, ಆ ಪಕ್ಷಕ್ಕೆ ಒಕ್ಕೂಟ ವ್ಯವಸ್ಥೆಯ ಬಗ್ಗೆ ನಿಜವಾದ ಕಾಳಜಿ ಇದೆ ಅನ್ನುವುದನ್ನು ನಂಬುವುದು ಕೊಂಚ ಕಷ್ಟವಲ್ಲವೇ? ಕಳೆದ ಹಲ ದಶಕಗಳ ರಾಜಕೀಯದ ಅನುಭವದಿಂದ ಭಾರತಕ್ಕೆ ಒಕ್ಕೂಟ ವ್ಯವಸ್ಥೆಯೇ ಸರಿಯೆಂಬ ನಿಲುವಿಗೆ ಬಿಜೆಪಿ ಬಂದಿದ್ದಲ್ಲಿ ಅದು ಸ್ವಾಗತಾರ್ಹ. ಆದರೆ ಗುಜರಾತಿನಲ್ಲೊಂದು ರೀತಿ, ಕರ್ನಾಟಕದಲ್ಲೊಂದು ರೀತಿ ನಡೆದುಕೊಳ್ಳುವ ಅವರ ನಡವಳಿಕೆ ಗಮನಿಸಿದರೆ ಒಕ್ಕೂಟ ವ್ಯವಸ್ಥೆಯ ಬಗೆಗಿನ ಅವರ ಬದ್ಧತೆ ಕಾಂಗ್ರೆಸಿನಷ್ಟೇ ಟೊಳ್ಳಾಗಿದೆ ಅನ್ನಿಸದೇ ಇರದು.
ಆರು ಕೊಟ್ರೆ ಅತ್ತೆ ಕಡೆ, ಮೂರು ಕೊಟ್ರೆ ಸೊಸೆ ಕಡೆ