ಯಾವುದೇ ಊರಿನ ಸಾರಿಗೆ ವ್ಯವಸ್ಥೆ ಒಂದು ರೀತಿಯಲ್ಲಿ ಆ ಊರಿನ ಮುಖವಾಣಿಯಂತೆ ಇರುತ್ತೆ. ಅಲ್ಲಿಗೆ ಬರುವ ಪ್ರಯಾಣಿಕನಿಗೆ, ಪ್ರವಾಸಿಗನಿಗೆ ಆ ಊರು, ಅಲ್ಲಿನ ಜನರ ಭಾಷೆ, ಅಲ್ಲಿನ ಜನ ಜೀವನ ಎಲ್ಲವನ್ನು ಒಂದು ರೀತಿಯಲ್ಲಿ ಪರಿಚಯಿಸುವ ಕನ್ನಡಿಯಾಗಿರುತ್ತೆ. ಬಿ.ಎಂ.ಟಿ.ಸಿಯ ನಂತರ ಈಗ ಬೆಂಗಳೂರಿನ ಸಾರಿಗೆ ಮೂಲಭೂತ ಸೌಕರ್ಯದ ಚಹರೆಯನ್ನೇ ಬದಲಾಯಿಸುವ ಹೊಸ ವ್ಯವಸ್ಥೆಯಾಗಿ ನಮ್ಮ ಮೆಟ್ರೋ ನಗರ ರೈಲು ಸಾರಿಗೆ ಕಳೆದ ಗುರುವಾರದಿಂದ ಶುರುವಾಗಿದೆ. ಹೆಚ್ಚು ಕಡಿಮೆ ೩೦ ವರ್ಷಗಳ ಕಾಲದಿಂದ ಇಂತಹದೊಂದು ವ್ಯವಸ್ಥೆಯ ಬಗ್ಗೆ ಹಲವಾರು ನಾಯಕರು, ಸರ್ಕಾರಗಳು, ನಟ ಶಂಕರ್ ನಾಗ್ ನಂತಹ ಕನಸುಗಾರ ಕನ್ನಡಿಗರು ಕಂಡ ಕನಸು ನನಸಾಗುವ ಮೊದಲ ಹಂತವಾಗಿ ಇದು ಬಂದಿದೆ. ತುಂಬಾ ಸಂತಸದ ವಿಚಾರವೇ ಸರಿ. ನಮ್ಮ ಮೆಟ್ರೋದಲ್ಲಿ ನಮ್ಮತನದ ಅಚ್ಚು ಒತ್ತಿರಬೇಕು ಎಂದುಕೊಂಡು ನೋಡಲು ಹೋದರೆ ಅಚ್ಚರಿ ಕಾದಿದೆ. ಅಲ್ಲಿನ ನಾಮ ಫಲಕ, ಘೋಷಣೆ, ಸುರಕ್ಷೆಯ ಸಂದೇಶ, ಹೀಗೆ ಎಲ್ಲ ವ್ಯವಸ್ಥೆಯಲ್ಲೂ ಯಾರದೋ ಒತ್ತಾಯಕ್ಕೆ ಸಿಲುಕಿಯೋ ಅಥವಾ ಯಾರನ್ನೋ ಒಲೈಸಲೋ ಎಂಬಂತೆ ಕನ್ನಡ, ಇಂಗ್ಲಿಶ್ ಜೊತೆ ಅನಾವಶ್ಯಕವಾಗಿ ಹಿಂದಿಯನ್ನೂ ಬಳಸಿರುವುದು ಕಂಡಾಗ ಹಿಂದಿ ಮೂಲಭೂತವಾದಿಗಳ ಕೈಗೆ ಹಿಂದಿ ಹೇರಿಕೆಯ ಹೊಸ ಅಸ್ತ್ರವಾಗಿ ನಮ್ಮ ಮೆಟ್ರೋ ಕಂಡಿದೆ ಅಂದರೆ ತಪ್ಪಾಗದು.
ಬೈಯಪ್ಪನ ಹಳ್ಳಿಯಿಂದ ಹಲಸೂರಿಗೆ ಹೋಗಲು ಹಿಂದಿ ಘೋಷಣೆ ಬೇಕೇ?
ಬೈಯಪ್ಪನ ಹಳ್ಳಿಯಿಂದ ಹಲಸೂರಿಗೆ ಹೋಗಲು ಹಿಂದಿ ಘೋಷಣೆ ಬೇಕೇ?
ನಮ್ಮ ಮೆಟ್ರೋ ರೈಲಿನ ಎಲ್ಲ ಸೂಚನೆ, ನಾಮ ಫಲಕ, ನಿಲ್ದಾಣದ ಎಲ್ಲ ಕಡೆಯಲ್ಲೂ ತ್ರಿ ಭಾಷಾ ಸೂತ್ರ ಅನ್ನುವ ಪೊಳ್ಳು ನೆಪವೊಡ್ಡಿ ಹಿಂದಿ ಬಳಸಿರುವುದು ಯಾಕೆ? ಇಡೀ ಬೆಂಗಳೂರಿನ ಜೀವನಾಡಿಯಾಗಿರುವ ಬಿ.ಎಂ.ಟಿ.ಸಿ ಕನ್ನಡವೊಂದನ್ನೇ ಬಳಸಿ ಎಲ್ಲ ಜನರನ್ನು ಅತ್ಯಂತ ಪರಿಣಾಮಕಾರಿಯಾಗಿ ತಲುಪುತ್ತಿರುವಾಗ ಇಲ್ಲಿ ಮಾತ್ರ ಬೈಯಪ್ಪನ ಹಳ್ಳಿಯಿಂದ ಹಲಸೂರಿಗೆ ಹೋಗಲು ಹಿಂದಿ ಘೋಷಣೆ ಬೇಕೇ? ಕೇಂದ್ರ ಸರ್ಕಾರ ಈ ಯೋಜನೆಗೆ ಕೊಟ್ಟ ಹಣ ಕೇವಲ ೨೫%. ರಾಜ್ಯದ ಪಾಲು ೩೦% ಜೊತೆಗೆ ಮೆಟ್ರೋ ಆಸ್ತಿ-ಪಾಸ್ತಿಯನ್ನೇ ಆಧಾರವಾಗಿಟ್ಟುಕೊಂಡು ಪಡೆದ ಸಾಲ ಖಾಸಗಿ ಸಾಲ ೪೫% ಇದೆ. ಕೇಂದ್ರ ಕೊಟ್ಟಿರುವ ೨೫% ಹಣ ಕೂಡ ಅವರದ್ದಲ್ಲ. ಕರ್ನಾಟಕದಿಂದ ಕೇಂದ್ರಕ್ಕೆ ಹೋಗೋ ಸಾವಿರಾರು ಕೋಟಿಯ ತೆರಿಗೆ ಹಣದಲ್ಲಿ ನಮಗೆ ಮರಳಿ ಕೊಟ್ಟ ಪುಡಿಗಾಸಷ್ಟೇ. ಹೀಗಿರುವಾಗ ಕೊಟ್ಟಿರುವ ೨೫% ನಮ್ಮದೇ ಹಣಕ್ಕೆ ಎಲ್ಲೆಡೆ ಹಿಂದಿ ಬಳಸಬೇಕು ಎಂದು ಕೇಂದ್ರ ಅಂದರೆ ಅದು ಹಿಂದಿ ಹೇರಿಕೆಯಲ್ಲದೆ ಇನ್ನೇನು? ಅಷ್ಟಕ್ಕೂ ಹಿಂದಿಯಲ್ಲೇ ಆಡಳಿತ ಮಾಡಬೇಕು ಅನ್ನಲು ಕೇಂದ್ರ ಸರ್ಕಾರ ಅನ್ನುವುದು ಕೇವಲ ಹಿಂದಿ ಭಾಷಿಕರ ಸರ್ಕಾರವೇ? ಭಾರತದ ೨೨ ಭಾಷೆಯವರು ಸೇರಿ ತಾನೇ ಕೇಂದ್ರ ಆಗಿರುವುದು? ಹಾಗಿದ್ದಾಗ ನಿಮ್ಮೂರಲ್ಲೇ ನಿಮ್ಮ ನಿಮ್ಮ ಭಾಷೆ ಏನಾದ್ರೂ ಮಾಡ್ಕೊಳ್ಳಿ ( ಮನೇಲಿ ಇದ್ರೆ ಒಳ್ಳೆಯದು ಅಂತ ಓದಿಕೊಳ್ಳಿ) ಹಿಂದಿ ಮಾತ್ರ ಬಳಸಲೇಬೇಕು ಅಂತ ಕೇಂದ್ರ ಹೇಳುವುದು ಹಿಂದಿಯೇತರ ನುಡಿಗಳ ಬಗ್ಗೆ ಅದಕ್ಕೆಷ್ಟು ಕಾಳಜಿ ಇದೆ ಅನ್ನುವ ಪ್ರಶ್ನೆ ಹುಟ್ಟಿಸುವುದಿಲ್ಲವೇ ? ಇರಲಿ ಕೇಂದ್ರ ತನ್ನ ವ್ಯಾಪ್ತಿಯಲ್ಲಿರುವ ಕಛೇರಿಗಳಲ್ಲಿ ಪ್ರಜಾತಂತ್ರ ವಿರೋಧಿಯಾಗಿ ಹಿಂದಿ ಹೇರುವುದೇ ಗೊತ್ತೇ ಇದೆ, ಒಂದಲ್ಲ ಒಂದು ದಿನ ಅದು ಅಂತ್ಯ ಕಾಣಲು ಬೇಕು. ಆದ್ರೆ ಒಂದು ಊರಿನ ಸ್ಥಳೀಯ ಸಾರಿಗೆಯಲ್ಲೂ ಹಿಂದಿ ಹೇರಬೇಕು ಎಂದು ಅದು ಹೊರಟಿತ್ತೆ ಎಂದು ನೋಡಲು ಹೊರಟರೆ ಕಾಣುವುದು ಇನ್ನೂ ಅಚ್ಚರಿಯ ಸಂಗತಿ. ಅದೇನು ಗೊತ್ತೇ? ನಮ್ಮ ಮೆಟ್ರೋದಲ್ಲಿ ಕಡ್ಡಾಯವಾಗಿ ಹಿಂದಿ ಬಳಸಲೇಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆಯೇ ಎಂದು ಮೆಟ್ರೋ ಎಂ.ಡಿ ಶ್ರೀ ಶೈಲಂ ಅವರಿಗೆ ಈ ಹಿಂದೆ ಗೆಳೆಯರೊಬ್ಬರು ಮಿಂಚೆ ಕಳಿಸಿ ಕೇಳಿದ್ದಾಗ ಅವರು ಕೊಟ್ಟ ಸ್ಪಷ್ಟ ಉತ್ತರ "ಇಲ್ಲ" ಅನ್ನುವುದಾಗಿತ್ತು. ಆ ಮಿಂಚೆಯಲ್ಲಿ ಏನಿತ್ತು ಎಂದು ಕೆಳಗೆ ನೋಡಿ:
ಯಾರ ಒತ್ತಾಯಕ್ಕೆ? ಯಾರನ್ನು ಓಲೈಸಲು?
ಯಾರ ಒತ್ತಾಯಕ್ಕೆ? ಯಾರನ್ನು ಓಲೈಸಲು?
ಹಾಗಿದ್ದಲ್ಲಿ ಇವತ್ತು ನಮ್ಮ ಮೆಟ್ರೋ ದಲ್ಲಿ ಎಲ್ಲ ಸೂಚನೆ, ಸುರಕ್ಷೆ, ಘೋಷಣೆಗಳಲ್ಲಿ ಹಿಂದಿ ಬಳಸುತ್ತಿರುವುದು ಯಾತಕ್ಕೆ? ಕನ್ನಡವೇ ಬಾರದ ರಕ್ಷಣಾ ಸಿಬ್ಬಂದಿ ಕಾಣಿಸಿಕೊಳ್ಳುತ್ತಿರುವುದು ಯಾಕೆ? ಯಾರ ಒತ್ತಾಯಕ್ಕೆ? ಯಾರನ್ನು ಓಲೈಸಲು? ಇವತ್ತು ಮೊದಲ ಹಂತದಲ್ಲಿ ಮಾಡಿರುವ ಈ ಹೇರಿಕೆ ನಾಳೆ ಎಲ್ಲ ಹಂತದಲ್ಲೂ ಕಾಣುತ್ತೆ.. ಮುಂದೆ? ಬಿ.ಎಂ.ಟಿ.ಸಿ ಯಲ್ಲೂ ತ್ರಿಭಾಷ ಸೂತ್ರ? ಆಮೇಲೆ ಕೆಸ್ಸಾರ್ಟಿಸಿ ? ನಂತರ ಸಾರಿಗೆ ಇಲಾಖೆ? ಎಲ್ಲಿದೆ ಇದಕ್ಕೆ ಕೊನೆ? ಮೊದಲು ಕನ್ನಡದ ಜೊತೆಗೆ ಹಿಂದಿ ಹಾಕ್ತಿವಿ ಅಂತಾರೆ, ಆಮೇಲೆ ಹಿಂದಿ ಕಲಿತಾಗಿದೆಯಲ್ಲ, ಇನ್ಯಾಕೆ ಕನ್ನಡ, ಸುಮ್ನೆ ದುಡ್ಡು ದಂಡ ಅಂತಾರೆ. ಅಲ್ಲಿಗೆ ಕನ್ನಡದ ತಿಥಿ. ಈ ರೀತಿಯ ನೂರೆಂಟು ವಲಸಿಗರಿಗಾಗಿನ ಅನುಕೂಲಗಳು ಕರ್ನಾಟಕಕ್ಕೆ ಇನ್ನಷ್ಟು ಪರಭಾಷಿಕರ ವಲಸೆ ಹೆಚ್ಚಿಸಿ, ಸ್ಥಳೀಯ ಡೆಮಾಗ್ರಫಿಯನ್ನು ಬದಲಾಯಿಸಿ, ಅವರೆಂದು ಕನ್ನಡ ಕಲಿತು ಇಲ್ಲಿನ ಮುಖ್ಯವಾಹಿನಿಯಲ್ಲಿ ಬೆರೆಯದಂತೆ ಮಾಡಿ ಸ್ಥಳೀಯರ ಜೀವನವನ್ನು ಇನ್ನಷ್ಟು ಅಸಹನೀಯ ಮಾಡಬಲ್ಲದೇ ಹೊರತು ಇನ್ನಾವ ದೊಡ್ಡ ಲಾಭವು ನಮಗೆ ಸಿಗದು. ಈ ಹಿಂದಿ ಹೇರಿಕೆಯನ್ನು ನಾವೆಲ್ಲರೂ ವಿರೋಧಿಸಬೇಕು. ನಮ್ಮ ಮೆಟ್ರೋಗೆ ಹೋದಾಗಲೆಲ್ಲ ನಿಮ್ಮ ಅನಿಸಿಕೆ ಬರೆಯಿರಿ, ಮೆಟ್ರೋ ಅಧಿಕಾರಿಗಳಿಗೆ ಪತ್ರ, ಮಿಂಚೆ, ಕರೆಗಳ ಮೂಲಕ ಈ ಮೂರ್ಖತನವನ್ನು ಕೈ ಬಿಡುವಂತೆ ಒತ್ತಾಯಿಸಿ. ಇಲ್ಲದಿದ್ದಲ್ಲಿ ಇವತ್ತು ಶುರುವಾದ ಈ ಹೊರ ಬಗೆಯ ಹೇರಿಕೆ ಮುಂದೆ ದೊಡ್ಡ ಅನಾಹುತವನ್ನೇ ತಂದೀತು!
ನೀವು ಬರೆಯಬೇಕಾದ ಮೆಟ್ರೋ ಅಧಿಕಾರಿಗಳ ವಿಳಾಸ: sivasailam@bmrc.co.in; sudhirchandra@bmrc.co.in; vasanthrao@bmrc.co.in; bmrcl@dataone.in
Partnership ಅಥವಾ ಸಹಭಾಗಿತ್ವ ಅಥವಾ 'ಒಕ್ಕೂಟ' ವೊಂದರಲ್ಲಿ 'ಬಿರುಕು' ಕಾಣಿಸಿಕೊಳ್ಳುವುದು ಯಾವಾಗ ಎಂದರೆ ಅಲ್ಲಿನ ಚಟುವಟಿಕೆಗಳು ಅಥವಾ ಕೆಲಸಗಳು ನ್ಯಾಯಬಧ್ಧವಾಗಿ ನಡೆಯದೇ ಹೋದಾಗ. ಅಲ್ಲಿನ್ನ ಎಲ್ಲಾ ಸದಸ್ಯರಿಗೂ ಸಮಾನವಾದ ಗೌರವ ಸಿಗದೇ ಇದ್ದಾಗ. ಇಲ್ಲಿ ಎಲ್ಲಾ ಸದಸ್ಯರದ್ದೂ ಸಮಾನವಾದ ಪಾಲು ಇಲ್ಲದೇ ಇರಬಹುದು. ಕೆಲವರದ್ದು ಅತಿ ದೊಡ್ಡ ಪಾಲು, ಕೆಲವರದ್ದು ಚಿಕ್ಕ ಪಾಲು, ಮತ್ತೆ ಕೆಲವರದ್ದು ಅತ್ಯಂತ ಕಡಿಮೆ, ಹೀಗೆ ಇರಬಹುದು. ಅಂದ ಮಾತ್ರಕ್ಕೆ ದೊಡ್ಡ ಪಾಲಿರುವವನನ್ನ ತಲೆಯ ಮೇಲೆ ಕೂರಿಸಿಕೊಂಡು ಓಡಾಡುವುದು, ಚಿಕ್ಕ ಪಾಲಿರುವವನನ್ನ ಕಾಲ ಕಸದಂತೆ ನೋಡುವುದು ನಡೆದಾಗ 'ಅಸಮಾಧಾನ'ದ ಹೋಗೆ ಕಾಣಿಸಿಕೊಳ್ಳುತ್ತದೆ. ಮತ್ತೆ ಆ ಒಂದು ಒಕ್ಕೂಟದ ಮುಖ್ಯಸ್ಥನೆನಿಸಿಕೊಂಡವ attitude ತೋರಿಸುವುದು, ಪಾಲುದಾರರ ಮೇಲೆ ಸರ್ವಾಧಿಕಾರಿ ವರ್ತನೆ ತೋರುವುದು, ಪಾಲುದಾರರಿಗೆ ಸೇರಬೇಕಾದ 'ಲಾಭ'ದ ಮೇಲೆ ಹಿಡಿತ ಸಾಧಿಸುವುದು ಸಹ 'ಬಿರುಕು'ಕಾಣಿಸಿಕೊಳ್ಳಲು ಕಾರಣವಾಗುತ್ತದೆ. ಪಾಲುದಾರನೊಬ್ಬ ಯಾವುದೋ ಒಂದು ಸಾಧನೆಯನ್ನ ಮಾಡಿ 'ಒಕ್ಕೂಟಕ್ಕೆ' ಹೆಸರು ತಂದಾಗ, ಆ ಫಲವನೆಲ್ಲಾ ತಂದವನಿಗೆ ಬಿಡದೇ ಮಿಕ್ಕೆಲ್ಲರೂ ನುಂಗಿಬಿಟ್ಟರೆ situation extreme ಗೆ ಹೋಗಿಬಿಡುತ್ತದೆ. ಇದೆಲ್ಲಾ ನಮಗೂ ನಿಮಗೂ ಗೊತ್ತಿರುವ simple concept. ಈ ರೀತಿ 'ಅಸಮಾನತೆ' ಯಿಂದ ಸಿಟ್ಟಿಗೆದ್ದು ಹೊರಬರುವ 'ಒಕ್ಕೂಟ'ಗಳ 'ಸದಸ್ಯ'ರುಗಳು 'ತಮ್ಮದೇ ಸಂಸ್ಥೆ ಕಟ್ಟಿದ' ಉದಾಹರಣೆಗಳು ನಮ್ಮ, ನಿಮ್ಮ ಕಣ್ಣ ಮುಂದೆ ಬೇಕಾದಷ್ಟು ಇವೆ. ಆಲ್ವಾ?
ಪ್ರತ್ಯುತ್ತರಅಳಿಸಿನನ್ನ ಈ ಮಾತು ನಿಮಗೆ ಅರ್ಥವಾಗಿದೆ ಎಂಬ ಭಾವನೆ
-ಸಾಗರ್ ಅರಸು
ಅವ್ರ್ ಕೊಡೊ ಉತ್ತರ ಏನಂದ್ರೆ, ಮೆಟ್ರೋ ದುಡ್ಡು ಕರ್ನಾಟಕ ಸರ್ಕಾರದಿಂದಲೂ (ಕನ್ನಡ), ಕೇಂದ್ರ ಸರ್ಕಾರದಿಂದಲೂ (ಹಿಂದಿ) ಬಂದಿದೆ ಅಂತ. ಇವರ್ ಪ್ರಕಾರ ಕೇಂದ್ರ ಅಂದ್ರೆ ಹಿಂದಿ ಅಂತ. ಏನೋ ಕೇಂದ್ರ ಬೇರೇನೆ ದೇಶ, ನಮ್ಮ ಮೆಟ್ರೋಗೆ ಅಂತ ಉದಾರ ಕೊಟ್ಟಿರೋರ ಥರ ಆಡ್ತಾರೆ. ಇರುದ್ ಏನಂದ್ರೆ, ಮೊದ್ಲುನೆದಾಗಿ, ಕೇಂದ್ರ ಸರ್ಕಾರ ಎಸ್ಟ್ರುಮಟ್ಟಿಗೆ ಹಿಂದಿಯವರಿಗೆ ಸರ್ಕಾರನೋ, ಅಸ್ಟ್ರುಮಟ್ಟಿಗೆ ಕನ್ನಡಿಗೃಗೂ ಸರ್ಕಾರ. ಎರಡನೇದಾಗಿ, ಕರ್ನಾಟಕದಿಂದ ಕೇಂದ್ರಕ್ಕೆ ೧ ರುಪಾಯ್ ಪಾಲು ಓದರೆ, ವಾಪಾದ್ ಬರೋದು ೭೦ ಪೈಸೆ ಪಾಲ್ಗಿಂತ ಕಮ್ಮಿ. ರುಣಪಾತಕ್ರು ಕೇಂದ್ರದವರು, ಬಹುತೇಕ ಹಿಂದಿ ರಾಜ್ಯದವರು. ಕನ್ನಡಿಗರು ಅಲ್ಲ. ದುಡ್ ಕೊಟ್ ಹೊಡೆಸ್ಕೋಳ್ಳೋದು ಅಂದ್ರೆ ಇದೆ.
ಪ್ರತ್ಯುತ್ತರಅಳಿಸಿPavaman, I dont have Kannada script, so sorry, commenting in English...
ಪ್ರತ್ಯುತ್ತರಅಳಿಸಿBut why are we so worried about Hindi being used, I mean we have so much of North Indian population in Bangalore and the city is no more just Capital city of Karnataka, we have people from around the country staying in Bangalore and it is important to make sure that everyone understands the sign boards. It is better to put a Hindi board, rather than causing harm to our North Indian brothers because they can not read a safety instruction....
First they will tell hindi will be with kannada. Later all know hindi remove kannada.
ಅಳಿಸಿPrevention is better than cure.
ಉತ್ತರ ಭಾರತದ ನಿಮ್ಮ ಸಹೋದರರು ಎಷ್ಟಿದ್ದಾರೆ ಬೆಂಗಳೂರಿನಲ್ಲಿ? ಕನ್ನಡಿಗರ ನಂತರ ಅತಿ ಹೆಚ್ಚು ಇರುವುದು ತಮಿಳು, ತೆಲುಗು ಮಾತನಾಡುವ ಜನರು. ಹಾಗಿದ್ದಲ್ಲಿ ಅವರಿಗಾಗಿ ತಮಿಳು, ತೆಲುಗಲ್ಲಿ ಮೊದಲು ಹಾಕಬೇಕಿತ್ತಲ್ಲವೇ? ಅಷ್ಟಕ್ಕೂ ಹಿಂದಿಯೊಂದೇ ಭಾರತದ ಭಾಷೆಯೇ,, ಉಳಿದವೆಲ್ಲ ಏನು ಚಂದ್ರಲೋಕದ ಭಾಶೆಗಳಾ? ಕೇಂದ್ರಕ್ಕೆ ಜನರ ಅನುಕೂಲದ ಬಗ್ಗೆ ಅಷ್ಟೇ ಕಾಳಜಿ ಇದ್ದರೆ ಮೆಟ್ರೊದಲ್ಲಿ ಎಲ್ಲ ಭಾಷೆಗಳೂ ಬರಲಿ.. ಆದರೆ ಅದು ಮೊದಲು ದೆಹಲಿ ಮೆಟ್ರೊದಿಂದ ಶುರುವಾಗಲಿ..
ಪ್ರತ್ಯುತ್ತರಅಳಿಸಿನೀವು ದೆಹಲಿ ಅಥವಾ ಇನ್ನಾವುದೋ ಉತ್ತರ ಭಾರತದ ಹಿಂದಿ ರಾಜ್ಯಗಳಿಗೆ ಹೋದಾಗ...ಅಲ್ಲಿ ನಿಮ್ಮ ಉತ್ತರ ಭಾರತೀಯ ಸಹೋದರರು ನಿಮಗೆ ಕನ್ನಡದಲ್ಲಿ ಬೋರ್ಡುಗಳನ್ನು ಹಾಕಿದ್ದರಾ? ಅಲ್ಲಿಯ ಮೆಟ್ರೋದ ಕಂಬಿಗಳಲ್ಲಿ ಹರಿಯುತ್ತಿರುವುದೂ ಅಪಾಯಕಾರಿ ಕರೆಂಟ್ ಅಲ್ವಾ ಅದನ್ನ ಮುಟ್ಟಿದರೆ ನಮಗೆ ಶಾಕ್ ಹೊಡಿಯಲ್ವಾ? ಅದನ್ನ ನಿಮಗೆ ಕನ್ನಡದಲ್ಲಿ ಹೇಳಿದ್ರಾ? ಅಲ್ಲಿಗೆ ಹೋದಾಗ ನಾವೇ ಅವರಿಗಾಗಿ ಹರಕು ಮುರುಕು ಹಿಂದಿಯಲ್ಲಿ ಮಾತಾಡಿಕೊಂಡು ವ್ಯವಹಾರ ಮಾಡೋದಿಲ್ವಾ? ನಮ್ಮ ವ್ಯವಸ್ಥೆಗಳು ಕನ್ನಡ ಭಾಷೆತರರಿಗೆ..ಕನ್ನಡ ಭಾಷೆಯನ್ನು ಕಲಿಯುವ ಅನಿವಾರ್ಯತೆಯನ್ನು ಸೃಷ್ಟಿ ಮಾಡುವಂತಿರಬೇಕು. ಇಲ್ಲದೆ ಹೋದಲ್ಲಿ ಅವರು ಕನ್ನಡ ಯಾಕೆ ಕಲಿಯುತ್ತಾರೆ ಹೇಳಿ? ಕ್ರಮೇಣ ಕನ್ನಡ ಭಾಷೆ ನಶಿಸಿ ಹೋಗೋ ಅಪಾಯ ಇಲ್ವಾ? ಭಾಷೆ ಬರಿ ಒಂದು ಮಾಧ್ಯಮ ಅಷ್ಟೇ ಅಲ್ಲ, ಅದು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಹೊರಗಿನಿಂದ ಬರುವ ಯಾವುದೇ ಭಾಷೆಯವರು,ಹಾಲಿನೊಂದಿಗೆ ಬೆರೆಯುವ ಸಕ್ಕರೆಯಂತಾಗಬೇಕೇ ಹೊರತು ಹಾಲನ್ನು ಒಡೆಯುವ ಹುಳಿಯಾಗಬಾರದು. ಹಾಲು ಒಡೆಯದಂತೆ ಕಾಳಜಿ ವಹಿಸಬೇಕಾಗಿರುವುದು ನಾವು, ಬೇರೆಯವರಲ್ಲ.
ಪ್ರತ್ಯುತ್ತರಅಳಿಸಿUllas:
ಪ್ರತ್ಯುತ್ತರಅಳಿಸಿಇವತ್ತು ಮೊದಲ ಬಾರಿಗೆ ಮೆಟ್ರೋ ಹತ್ತಿ ಬಂದೆ. ಮೇಲೆ ಹೇಳಿರುವುದು ಅಕ್ಷರಶಃ ಸತ್ಯ ಮತ್ತು ವಿಶ್ಹದಕರ. ಇವತ್ತಿನ ನನ್ನ ಪಯಣ ಜಗಳ ದಿಂದಲೇ ಪ್ರಾರಂಭ ವಾಯಿತು.
ಆದರೆ , ನಾನು ವೈಯುಕ್ತಿಕ ವಾಗಿ ಏನು ಮಾಡಬಹುದಿತ್ತು ಅದನ್ನು ಮಾಡಿದೆ ಎಂಬ ತೃಪ್ತಿ ಇದೆ. ಮಹಾತ್ಮಾ ಗಾಂದಿ ಸ್ಟೇಷನ್ ನಲ್ಲಿ , ರೈಲು ಕಾಯುತ್ತಿದ್ದಾಗ , ಸ್ವಲ್ಪ ಸ್ಟೇಷನ್ ನೋಡೋಣ ಎಂದು ನಡೆದುಕೊಂಡು ಹೋಗುತ್ತಿದ್ದೆ . ಹಿಂದೆ ಇಂದ ಸೆಕ್ಯೂರಿಟಿ ಗಾರ್ಡ್ ಒಬ್ಬ “ಉದರ್ರ್ ಮತ್ ಜಾವೋ, ಹಜ್ಯಾರ್ ರುಪಯಾ ಫೈನ್ ಹೈ ಅಂತ ಕೂಗಿದ ”.
ನಾನು ಅವನಿಗೆ , “ಅಲ್ಲಯ್ಯ ಜನರಿಗೆ ಅಲ್ಲಿಗೆ ಹೋಗಬಾರದು ಅಂತ ಗೊತ್ತಿರುವುದಿಲ್ಲ್ಲ , ಬೋರ್ಡ್ ಸಹ ಹಾಕಿಲ್ಲ , ಹಾಗಿದ್ದ ಮೇಲೆ ಮೊದಲನೆಯದಾಗಿ ಹೇಳುವುದು ಏನಾದರು ಇದ್ದಾರೆ ಕನ್ನಡದಲ್ಲಿ ಹೇಳು , ಇದು ಡೆಲ್ಲಿ ಅಲ್ಲ , ಎರಡನೆಯದಾಗಿ ಸಭ್ಯವಾಗಿ ಹೇಳು , ಕೂಗಾಡೋ ಅವಶ್ಯಕತೆ ಇಲ್ಲ ಅಂದೆ. ಇಷ್ಟೇ ಮಾತಿಗೆ ಕನ್ನಡದಲ್ಲಿ ಜಗಳ ಶುರು ಹಚ್ಕೊಂಡ. ಅವನು ಕನ್ನಡದವನೇ . ಅಲ್ಲಿ ಇನ್ನು ಮೂವರು , ಸಾರ್ ನಿಮ್ಮ ಒಳ್ಳೇದಕ್ಕೆ ಹೇಳ್ತಾ ಇರೋಧು ಅವ್ರು , ಸ್ವಲ್ಪ ಅರ್ಥ ಮಾಡ್ಕೊಳ್ಳಿ ಅಂತ ನನ್ನೇ ದಬಯಿಸೋಕೆ ಬಂದರು. ದುರದೃಷ್ಟ ವಶಾತ್ , ಅಲ್ಲಿ ನಾಲ್ಕು ಜನ ಕನ್ನಡದವರು , ಹಿಂದಿ ವಿಚಾರಕ್ಕೆ ಮಾತುಕಥೆ ಅದುತಿದ್ದೆವು . ಆದರೆ ಯಾವಗ ನಾನು ಹೇಳಿದ್ದ ವಿಚಾರವನ್ನೇ ಪಧೆ ಪಧೆ , ಸ್ಪಷ್ಟವಾಗಿ ಹೇಳಿದೆನೋ , ಆ ಮೂವರು ನನ್ನ ಪರ ಮಾಥನಾಡಲು ಶುರು ಮಾಡಿದರು . ಅಷ್ಟರಲ್ಲಿ ರೈಲು ಬಂದಿದ್ದರಿಂದ ಜಗಳ ಮುಗಿಸಬೇಕಾಯಿತು.
ನಮ್ಮ ಅಸಹನೆ ಇಂಥ ಎಲ್ಲ ಜಾಗಗಳಲ್ಲಿ ತುಂಬಾ emotion ಸಹಿತ ಹೊರಬರಬೇಕು . ಜಗಳ ವಾದರು ಪರವಾಗಿಲ್ಲ ಅನ್ನೋದು ನನ್ನ ಅನಿಸಿಕೆ.
ಕನ್ನಡಿಗರು ಬೇರೆ ಭಾಷೆಗಳನ್ನು ಕಲಿತು ಮಾತನಾದುಉದರಲ್ಲಿ ಪರಿಣಿತರು. ಇಗಾಗಲೇ ಬಹುತೇಕ ಜನರು ತಮಿಳು ಹಾಗು ತೆಲುಗು ಕಲಿತು ಕನ್ನಡ ಮರೆಯುತಿಧಾರೆ.
ಪ್ರತ್ಯುತ್ತರಅಳಿಸಿಅನಾಮಧೇಯ ಹೇಳಿಕೆಗೆ ಪ್ರತ್ಯುತ್ತರ.
ಪ್ರತ್ಯುತ್ತರಅಳಿಸಿತಾವು ಜರ್ಮನಿ ,ಫ್ರಾನ್ಸ್ ಅಥವಾ ಇಟಲಿ ದೇಶಕ್ಕೆ ಹೋಗಿ ನೆಲಸಿದರೆ ನೀವು ಅವರ ಭಾಷೆ ಕಲಿಯುವದಿಲ್ಲವೇ ?
ಜರ್ಮನಿ ದೇಶಕ್ಕೆ ಪ್ರಾಜೆಕ್ಟ್ ಗೆ ಹೋಗೋ ಮಂದಿ ಬೆಂಗಳೂರಿನ ಮ್ಯಾಕ್ಸ್ಮುಲ್ಲರ್ ಭವನದಲ್ಲಿ ಜರ್ಮನ್ speaking ಕೋರ್ಸ್
ಮಾಡ್ತಾರೆ, ಯಾರನ್ನ ಮೆಚ್ಚಿಸೋದಕ್ಕು ಅಲ್ಲ , ಅಲ್ಲಿ ಬದುಕ ಬೇಕು ಅಂದ್ರೆ ಅವರ ಭಾಷೆ ಕಲಿಯಲೇ ಬೇಕು, ಹಾಗೆ ನೀವು
ನಿಮ್ಮ 'brothers ಗೆ ಹೇಳಿ ಕನ್ನಡ ಕಲಿಯಲಿಕ್ಕೆ. ಬಿಹಾರ್ , ಉತ್ತರ ಪ್ರದೇಶದಲ್ಲಿ ಇಂಗ್ಲಿಷ್ ನಾಮ ಫಲಕ ಬಹಳ ವಿರಳ.
ಒಂದು ವರ್ಷದ ಹಿಂದೇನೆ ನನ್ನ ಮೆಟ್ರೋ ಕಲ್ಪನೆ ಹೇಗಿತ್ತು ಅನ್ನೋದು ಇಲ್ಲಿದೆ.
http://bhaashapriya.blogspot.com/
ಹಿಂದಿಯಲ್ಲಿ ಹಾಕಿರೋದರಿಂದ, ಉತ್ತರ ಬಾರತದಿಂದ ಬಂದವರಿಗೆ ಅನುಕೂಲ ಅಂತ ಪವಮಾನ್ ಹೇಳ್ತಿದಾರೆ.
ಪ್ರತ್ಯುತ್ತರಅಳಿಸಿಜನರಿಗೆ ಅನುಕೂಲ ಆಗಬಾರದು ಎಂಬ ಮನಸ್ತಿತಿಯಲ್ಲಿ ಹಿಂದಿ ಹೇರಿಕೆಯ ಬಗ್ಗೆ ವಿರೋದ ಎತ್ತಿಲ್ಲ ಇಲ್ಲಿ ಎಂಬುದನ್ನು ಅವರು ಗಮನಿಸಿದಂತಿಲ್ಲ.
ನಿಜಕ್ಕೂ ಜನರಿಗೆ ಅನುಕೂಲ ಮಾಡಿಸುವ ಇಚ್ಛೆ ಮೆಟ್ರೋದವರಿಗೆ ಇದ್ದಿದ್ರೆ, ಕನ್ನಡ, ಇಂಗ್ಲೀಶ್ ಜೊತೆಗೆ ಉರ್ದು ಮತ್ತು ತಮಿಳು ಇರಬೇಕಿತ್ತು.
ಉರ್ದು ಮತ್ತು ತಮಿಳು ನುಡಿಯವರು ಬೆಂಗಳೂರಲ್ಲಿ ಹಿಂದಿಯೋರಿಗಿನ್ತಾ ಹೆಚ್ಚಿನ ಸಂಕೇಲಿ ಇದಾರೆ. ಆದರೆ, ಹಿಂದಿ ಇವೆರಡು ನುಡಿಗಳ ಜಾಗ ಕಿತ್ಕೊಂಡಿದೆ.
ಜನರ ಅನುಕೂಲಕ್ಕಿಂತಾ, ಹಿಂದಿ ಹೇರಿಕೆಯೇ ಮೆಟ್ರೋಗೆ ದುಡ್ಡು ಕೊಟ್ಟ ಕೇಂದ್ರ ಸರ್ಕಾರಕ್ಕೆ ಮುಕ್ಯವಾಗಿದೆ.
ಇನ್ನೊಂದು ವಿಷಯ ಏನಂದ್ರೆ, ಡೆಲ್ಲಿ ಮೆಟ್ರೋದಲ್ಲಿ ಓಡಾಡೋ ಜನರಲ್ಲಿ ಪಂಜಾಬಿಗಳೂ ತುಂಬಾ ಜನರು ಇದಾರೆ.
ಆದರೆ, ಡೆಲ್ಲಿ ಮೆಟ್ರೋದಲ್ಲಿ ಎಲ್ಲೂ ಪಂಜಾಬಿ ಕಂಡು ಬರೋಲ್ಲ. ಅಲ್ಲಿ, ಹಿಂದಿ ಮತ್ತೆ ಇಂಗ್ಲೀಶ್ ಎರಡು ಮಾತ್ರ. ಪಂಜಾಬಿಗಳಿಗೆ ಅನಾನುಕೂಲ ಆದ್ರೆ ಪರ್ವಾಗಿಲ್ವ?
ಜನರ ಅನುಕೂಲ ನೋಡಿಕೊಳ್ಳೋ ಮನಸ್ತಿತಿ ಕೇಂದ್ರಕ್ಕೆ ಇದ್ದಿದ್ರೆ, ಡೆಲ್ಲಿ ಮೆಟ್ರೋದಲ್ಲಿ ಪಂಜಾಬಿನೂ, ಬೆಂಗಳೂರು ಮೆಟ್ರೋದಲ್ಲಿ ಉರ್ದುನೂ ಹಾಕುಸ್ತಿದ್ರು.
ಹಿಂದಿ ಮಾತಾಡುವವರಿಗೆ English ಓದಲು ಬರುತದೆ ಅಲ್ಲವೆ ...ಅಂದಮೇಲೆ ಕನ್ನಡ , Englishnalli ಸೂಚನೆ ಸಾಲದೇ ? ಎಲ್ಲದರಲ್ಲೂ hindi ಯಾವುದಕ್ಕಾಗಿ ಹೇರಿಕೆ ಆಗುತಿದೆ ಅನ್ನುವುದು ತಿಳಿಯುತ್ತಿಲ್ಲ ...ಇದರಿಂದ hindi ಮಾತಾಡುವವರು ಕನ್ನಡ ಕಲಿಯದೇ ಇರುವುದಕ್ಕೆ ಮಥಷ್ಟು ಪ್ರೋತ್ಸಾಹ ಕೊಟ್ಟಂತೆ ಆಯಿತು ..
ಪ್ರತ್ಯುತ್ತರಅಳಿಸಿಬೆಂಗಳೂರಿನಲ್ಲಿ ಬರೆ hindi ಮಾತಾಡುವವರು ಬಿಟ್ಟರೆ , tamil, telugu, malayalam, gujarati ಮುಂತಾದ ಭಾಷೆ ಮಾತಾಡುವವರು ಇದ್ದಾರೆ , ಹಾಗಿದ್ರೆ ಎಲ್ಲ ಭಾಷೆಗಳಲ್ಲೂ ಸೂಚನೆಗಳು ಲಭ್ಯವಾಗಬೇಕೆ ??
ನನ್ನ ಹೆಸರು ಜೈ ಕಿಸಾನ್ ಅಂತ ನಾನು ತುಂಬ ಆಳವಾಗಿ ಅದ್ಯಯನ ಮಾಡಿ ಹೇಳುತ್ತಿಲ್ಲ ಹಾಗೆ ನನ್ನ ಅನಿಸಿಕೆ ಕೆಲಸ ಮಾಡೋರಿಗೆ ಅಲ್ಲಿನ ಸ್ಥಳೀಯ ಭಾಷ ಕಲಿಕೆ ಕಡ್ಡಾಯ ಇದ್ರೆ ಅದು ಸರಿ ಯಾಕೆ ಅಂದರೆ ನಾನು ನನ್ನನ ಮೊದ್ಲು ಪ್ರೀತಿಸುತ್ತೇನೆ. ಆದರೆ ಯಾಕೆ ನಾವು ನಾಮ ಫಲಕದಲ್ಲಿ ಕನ್ನಡ ಕಲಿಸೋ ಪ್ರಯತ್ನ ಮಾಡಬಾರದು.
ಪ್ರತ್ಯುತ್ತರಅಳಿಸಿಉದಾರಣೆ : ರಾಜಾಜಿ ನಗರ
Ra- ರ ja- ಜಾ ji- ಜಿ na- ನ ga-ಗ ra-ರ
रा- ರ जा- ಜಾ जी- ಜಿ ना- ನ गा-ಗ रा-ರ
ಗೆಳೆಯರೆ,
ಪ್ರತ್ಯುತ್ತರಅಳಿಸಿಡೆಲ್ಲಿ ಮೆಟ್ರೊನಲ್ಲಿ ನಾನು ಓಡಾದ ಎಲ್ಲೆಡೆ ಬರಿ ಹಿಂದಿ, ಇಂಗ್ಲೀಶ್ ನುಡಿಗಳ ಬಳಕೆ ಮಾಡಿರುವರು. ಡೆಲ್ಲಿನಲ್ಲಿ ಕೂಡ ಕನ್ನಡಿಗರಿ ಇರುವರು ಹಾಗಂತ ಅಲ್ಲಿ ಕನ್ನಡದ ಬಳಕೆ ಎಲ್ಲೂ ಆಗಿಲ್ಲ. ಹಾಗೆ ಇಲ್ಲಿ ಕೂಡ ಕನ್ನಡ ಮತ್ತು ಇಂಗ್ಲೀಶ್ ಬಳಕೆ ಬಿಟ್ಟು ಬೇರೆ ನುಡಿಯ ಬಳಕೆ ಬೇಕಿಲ್ಲ. ಡೆಲ್ಲಿ ನಲ್ಲಿ ಕನ್ನಡಿಗರ ಅನುಕೂಲದ ಬಗ್ಗೆ ಮಾತನಾಡದವರು ಇಲ್ಲಿ ಉತ್ತರ ಭಾರತೀಯರ ಅನುಕೂಲ ಮಾತನಾಡುವರು. ಎಂತೆ ವಿಪರಿಯಾಸ.
ಪ್ರತಿಕ್ರಿಯಿಸಿರುವ ಎಲ್ಲ ಗೆಳೆಯರಲ್ಲಿ ಒಂದು ಮನವಿ.. ಮೆಟ್ರೊ ಅಧಿಕಾರಿಗಳಿಗೆ ಪತ್ರ ಬರೆಯಿರಿ.. ಹಿಂದಿ ಹೇರಿಕೆ ನಿಲ್ಲಿಸಿ.. ಹಿಂದಿ ಘೋಷಣೆ, ಹಿಂದಿ ಸುರಕ್ಷೆ ಎಲ್ಲವನ್ನು ತೆಗೆದು, ಕನ್ನಡ, ಇಂಗ್ಲಿಷ್ ಮಾತ್ರ ಸಾಕು ಎಂದು ತಿಳಿಸಿ. ಕನ್ನಡ ಬಲ್ಲ ರಕ್ಷಣಾ ಸಿಬ್ಬಂದಿಯನ್ನು ನೇಮಿಸುವಂತೆ ಒತ್ತಾಯಿಸಿ.. ಇದೆಲ್ಲ ಈಗಲೇ ಮಾಡಬೇಕಾದ ಕೆಲಸ.. ನೀವು ಮಾಡಿ, ನಿಮ್ಮ ಗೆಳೆಯರಿಗೂ ತಿಳಿಸಿ..
ಪ್ರತ್ಯುತ್ತರಅಳಿಸಿHindi namma rashtra bhaashe, andare deshada hechina bhaagada janaru maatanaaduva bhaashe, bengalurige saakashtu deshada vividha bhaagadinda bartaare...namma raajya haagu bengaluriruvudu bhaaratadalli...anda mele tappenide...kannadave illadiddare helabahuditteno..idu namaa vishaala manobhaava, kuvempuravara vishwa manavateya sadhbhaavavanna ethi hidiyuthe..sankuchita manobhaava beda enisute allava?
ಪ್ರತ್ಯುತ್ತರಅಳಿಸಿKiran C N
ಕೆ. ಸಿ. ಏನ್. - ಹಿಂದಿ ಭಾರತದ ರಾಷ್ಟ್ರ ಭಾಷೆ ಅನ್ನೋ ಸುಳ್ಳನ್ನು ನೀವು ನಂಬಿರೋದ್ರಲ್ಲಿ ನಿಮ್ಮ ತಪ್ಪು ಏನು ಇಲ್ಲ. ಹಾಗಂತ ನಮ್ಮ ಶಾಲೆಗಳಲ್ಲಿ ನಮಗೆ ಹೇಳಿಕೊಡಲಾಗಿದೆ. ಆದರೆ ಅದು ಸತ್ಯ ಅಲ್ಲ ಅನ್ನೋದು ನಿಮಗೆ ಈಗಲಾದರೂ ಗೊತ್ತಾಗಲಿ. ಈ ಲಿಂಕ್ ನಲ್ಲಿ ಇರೋ ವಿಷಯಾನ ದಯವಿಟ್ಟು ಒಮ್ಮೆ ಓದಿ. ನಮ್ಮ ಮೇಲೆ ಅನ್ಯಾಯ ಆಗ್ತಾ ಇದ್ರೆ ಅದನ್ನ ವಿರೋಧಿಸೋದು ಸಂಕುಚಿತ ಭಾವನೆ ಅಲ್ಲ..ಅದು ಗಂಡಸುತನ.
ಪ್ರತ್ಯುತ್ತರಅಳಿಸಿhttp://www.thehindu.com/news/national/article94695.ece
@Vasant: At below URL, I have created a petition for BMRCL to drop the three language policy. I am sure you'll help spread the message so we can get a enough petitioners to influence the BMRCL management.
ಪ್ರತ್ಯುತ್ತರಅಳಿಸಿhttp://www.PetitionOnline.com/NammaMet/
ಕೆ.ಸಿ.ಎನ್,
ಪ್ರತ್ಯುತ್ತರಅಳಿಸಿಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ. ಇದರ ಸಲುವಾಗಿ ಗುಜರಾತ್ ನ್ಯಾಯಾಲವು ಆಗಲೆ ತೀರ್ಪನ್ನು ನೀಡಿ ಸುಮಾರು ಎರಡು ವರ್ಶವಾಯಿತು. ಮತ್ತು ಡೆಲ್ಲಿ ಮೆಟ್ರೊ ನಲ್ಲಿ ಕೂಡ ದೇಶದ ಸುಮಾರು ಕಡೆಯಿಂದ ಜನರು ಬರುವರು ಆದರೆ ಅಲ್ಲಿ ಎರಡೇ ಎರಡು ಭಾಷೆಗಳ ಬಳಕೆ ಆಗಿದೆ. ಹಿಂದಿ ಸ್ಥಳಿಯರಿಗೆ ಮತ್ತು ಆಂಗ್ಲ ಬೇರೆಯವರಿಗೆ. ಅಲ್ಲಿ ಇರುವ ಭಾಷಾ ನೀತಿಯನ್ನು ಬೇರೆಯವರು ಪಾಲಿಸಿದರೆ ತಪ್ಪಲ. ಕನ್ನಡ ಕನ್ನಡಿಗರಿಗೆ ಮತ್ತು ಆಂಗ್ಲ ಬೇರೆಯರಿಗೆ. ದೇಶದ ಬೇರೆ ಕಡೆಯಿಂದ ಬರುವರ ಭಾಷೆ ಹಾಕುತ್ತಾ ಹೋದರೆ ನಮ್ಮ ಮೆಟ್ರೊ ನಲ್ಲಿ ೨೨ ಭಾಷೆ ಹಾಗಬೇಕು ಯಾಕೆಂದರೆ ಅಷ್ಟು ಭಾಷೆಗಳನ್ನು ನಮ್ಮ ಸಂವಿಧಾನ ಗುರುತಿಸಲಾಗಿದೆ.
ಆ 'ಪವಮಾನ್' ಅನ್ನೋವ್ನು 'ಕನ್ನಡ ವೇಷಾಧಾರಿ' ಅನ್ನೋದನ್ನ ನಿಮಗೆ ಬಿಡಿಸಿ ಹೇಳಬೇಕಾ?! ಕನ್ನಡಿಗನ ವೇಷ ಧರಿಸಿ ಕನ್ನಡಿಗರನ್ನೇ ಇರಿಯಲು ಎತ್ನಿಸುವ ಇಂತಹವರನ್ನ ಗುರುತಿಸದಷ್ಟು ನಾವು ಮುಟ್ಟಾಳರಲ್ಲ!
ಪ್ರತ್ಯುತ್ತರಅಳಿಸಿ'ಕೆ.ಸಿ.ಏನ್' ಸಾಹೇಬರು ಇನ್ನೂ ಸಾವಿರದ ಒಂಬಾಯಿನೂರ ಐವತ್ತನೆಯ ಇಸವಿಯಲ್ಲಿ ಇದ್ದಂತಿದೆ. ಸ್ವಲ್ಪ ಬೇಗ ಎರಡು ಸಾವಿರದ ಹನ್ನೊಂದನೆಯ ಇಸವಿಗೆ ಓಡೋಡಿ ಬಂದರೆ ನಮಗೂ ನಿಮಗೂ ಇಬ್ಬರಿಗೂ ಒಳ್ಳೆಯದು!LOL
ಪ್ರತ್ಯುತ್ತರಅಳಿಸಿAlong with Hindi boards we have to remove English boards also. Then everyone who comes to Karnataka from outside will learn Kannada
ಪ್ರತ್ಯುತ್ತರಅಳಿಸಿಗೆಳೆಯರೆ,
ಪ್ರತ್ಯುತ್ತರಅಳಿಸಿಉದ್ಯಾನ ನಗರಿಯೊಂದು ಹೆಮ್ಮರದಂತೆ. ಇಲ್ಲಿ ಅನೇಕ ವಲಸೆ ಹಕ್ಕಿಗಳು ಕೆಲಕಾಲ ನೆಲಸಿರುತ್ತವೆ. ಕನ್ನಡತನವೆಂದರೆ ಬರೀ ಕನ್ನಡ ಮಾತನಾಡುವುದಷ್ಟೇ ಅಲ್ಲ ನಮ್ಮ ಸಂಸ್ಕೃತಿಗೆ ತಕ್ಕಂತೆ ನಡೆದುಕೊಳ್ಳಬೇಕು ಕೂಡ. ಯಾವ ಕಾರಣಕ್ಕೂ ಬೇರೊಬ್ಬರಿಗೆ ತೊಂದರೆ ಕೊಡದಂತೆ ಬದುಕೋಣ. ಮೆಟ್ರೋದ ಎಲ್ಲಾ ನಾಮಫಲಕಗಳಲ್ಲೂ ಕನ್ನಡಕ್ಕೆ ಪ್ರಧಾನ ಸ್ಥಾನ ನೀಡಿದ್ದಾರಲ್ಲಾ? ನೋಡಿ ಬೆಂಗಳೂರಿಗೆ ಭಾರತದ ಹಲವೆಡೆ ಇಂದ ಕೆಲಸ ಹುಡುಕಿ ಜನ ಬರ್ತಾರೆ, ಅವರಲ್ಲಿ ಇಂಗ್ಲೀಷ್ ಬಾರದ ಕಾರ್ಮಿಕರು ಇರ್ತಾರೆ.. ಇಂತವರಿಗೆ ಸಾರ್ವಜನಿಕ ಸಾರಿಗೆ ಅತ್ಯಗತ್ಯ. ನಾನು ಕೆ ಸಿ ಎನ್ ರವರ ಅಭಿಪ್ರಾಯವನ್ನು ಗೌರವಿಸುತ್ತೇನೆ. ನಡೆ ನುಡಿಯಲ್ಲಿ ಕನ್ನಡತನವನ್ನ ಮೆರೆಯೋಣ.
ಕನ್ನಡಿಗ
nanu lucknow dalli wasa madtha iddini....illi yelli nodidaru hindi bittu englishu kooda kanalla...........nodi namma karnatakada paristhithi
ಪ್ರತ್ಯುತ್ತರಅಳಿಸಿ