ಮಂಗಳವಾರ, ನವೆಂಬರ್ 8, 2011

ದೆಹಲಿ, ಚೆನ್ನೈ ಮೆಟ್ರೊಗೂ ಬೆಂಗಳೂರಿನ ನಮ್ಮ ಮೆಟ್ರೊಗೂ ಏನ್ ವ್ಯತ್ಯಾಸ ಗೊತ್ತಾ? ..

(ದೆಹಲಿಯ ಮೆಟ್ರೋದಲ್ಲಿ ಭಾಷಾ ಆಯ್ಕೆ ಹಿಂದೀ/ ಇಂಗ್ಲೀಷ್)
ನಮ್ಮ ಮೆಟ್ರೋ ಮಿಂಬಲೆಗೆ ಯಾವಾಗಾದ್ರೂ ಭೇಟಿ ನೀಡಿದ್ದೀರಾ? ಅದಕ್ಕಿಂತ ಮೊದಲು ಭಾರತದ ರಾಜಧಾನಿ ದೆಹಲಿಯ ಮೆಟ್ರೋ ಮಿಂಬಲೆಯನ್ನು ತೆರೆದು ನೋಡಿ. ಇದರ ಮುಖಪುಟ ಇಂಗ್ಲೀಷಿನಲ್ಲಿ ತೆರೆದುಕೊಳ್ಳುತ್ತದೆ. ದೆಹಲಿ ಮೆಟ್ರೋದ ಹೆಸರು "ದೆಹಲಿ ಮೆಟ್ರೋ" ಅಂತಾ. ಇದರ ಮಿಂಬಲೆಯಲ್ಲಿ ಹಿಂದೀ ಭಾಷೆಯ ಆಯ್ಕೆಯೂ ಇದೆ. ದೆಹಲಿ ಮೆಟ್ರೋದ ಅಧಿಕಾರಿಗಳ ಈ ಪಟ್ಟಿಯನ್ನೊಮ್ಮೆ ನೋಡಿ ಬಿಡಿ. ಎಷ್ಟು ಜನ ಹಿಂದೀ ಅಧಿಕಾರಿಗಳಿದ್ದಾರೆ ಅಂತಾ ಹಾಗೇ ಲೆಕ್ಕ ಹಾಕ್ಕೊಂಡ್ಬುಡಿ.
ಈಗ ಇಲ್ಲಿ ಬನ್ನಿ... ಇನ್ನೂ ಯೋಜನಾ ಹಂತದಲ್ಲಿರೋ ಚೆನ್ನೈ ಮೆಟ್ರೋ ಮಿಂಬಲೆಯನ್ನು ಈಗ ತೆರೆಯೋಣ. 
(ಚೆನ್ನೈ ಮೆಟ್ರೋದಲ್ಲಿ ಭಾಷಾ ಆಯ್ಕೆ ಇಂಗ್ಲೀಷ್/ ತಮಿಳು)
ಚೆನ್ನೈ ಮೆಟ್ರೋದ ಹೆಸರು "ಚೆನ್ನೈ ಮೆಟ್ರೋ ರೈಲ್" ಅಂತಾ. ಇದರ ಮಿಂಬಲೆ ತೆರೆದು ಕೊಳ್ಳುವುದು ಇಂಗ್ಲೀಷಿನಲ್ಲೇ... ಇದರಲ್ಲಿ ತಮಿಳು ಭಾಷೆಯ ಆಯ್ಕೆಯ ಅವಕಾಶವೂ ಇದೆ. ಇದರ ಅಧಿಕಾರಿಗಳ ಪಟ್ಟಿಯನ್ನೂ ನೋಡಿ. ಇದರಲ್ಲಿ ಎಷ್ಟು ಜನ ತಮಿಳು ಭಾಷಿಕರಿದ್ದಾರೆ ಅನ್ನೋದನ್ನೊಂದು ಸಲ ಗುರುತಿಟ್ಟುಕೊಂಡುಬಿಡಿ. 

ಈಗ ಬನ್ನಿ, ಬೆಂಗಳೂರಿನ ನಮ್ಮ ಮೆಟ್ರೋ ಮಿಂಬಲೆಗೆ. ಏನು ಕಾಣುಸ್ತಿದೆ? ಇಂಗ್ಲೀಷಿನ ಮುಖಪುಟವಾ? ದಿಲ್ಲೀಲೂ ಚೆನ್ನೈಲೂ ಅದೇ ಕಾಣೋದಲ್ವಾ? ಮತ್ತೇನು ಹುಡುಕ್ತಿದೀರಾ? ಭಾಷಾ ಆಯ್ಕೆ? ಕನ್ನಡ ಇಲ್ಲಾ ಅಂತಾ ಬೇಸರಾನಾ? ಸ್ವಾಮಿ ಹಾಗೆಲ್ಲಾ ಹುಡುಕಕ್ಕೆ ಹೋಗಿ ಬೇಸರವಾಗಿ ನಮ್ಮ ಮೆಟ್ರೋ ಅಧಿಕಾರಿಗಳಿಗೆ ಪತ್ರ ಗಿತ್ರಾ ಬರೆದೀರಾ ಜೋಕೆ! 

(ಬೆಂಗಳೂರಿನ ನಮ್ಮ ಮೆಟ್ರೋಲಿ ಭಾಷಾ ಆಯ್ಕೆಯೇ ಇಲ್ಲ...)
ಅದರ ಮುಖ್ಯಸ್ಥರೇ ನಿಮಗೆ ಖುದ್ದಾಗಿ ಉತ್ತರ ಬರೆದು "ಕನ್ನಡಿಗರು ಸಹನಶೀಲರು. ದಯವಿಟ್ಟು ನೀವು ಸಹಿಷ್ಣುತೆಯನ್ನು ಬೆಳೆಸಿಕೊಳ್ಳಬೇಕು. ಈ ರೀತಿಯ ಭಾಷಾ ದುರಭಿಮಾನ ಸಲ್ಲದು. ಈ ತಾಣಕ್ಕೆ ಪರಭಾಷಿಕರು ಬರುತ್ತಾರೆ ಹಾಗಾಗಿ ಇಂಗ್ಲೀಷು ಹಾಕಿದ್ದೀವಿ..ನೀವು ಹೀಗೆ ಆಕ್ಷೇಪಿಸುವುದು ನಿಮ್ಮ ಪರಭಾಷಾ ದ್ವೇಷದ ಮನಸ್ಥಿತಿ ತೋರಿಸುತ್ತದೆ..." ಎಂದಾರು!

ನಮ್ಮ ಮೆಟ್ರೋಲಿ ಮಾತ್ರಾ ಯಾಕೆ ಕನ್ನಡ ಆಯ್ಕೆ ಇಲ್ಲಾ ಅಂತಾ ಯೋಚಿಸೋ ಮೊದಲು ಇದರ ಅಧಿಕಾರಿಗಳ ಹೆಸರಿನ ಪಟ್ಟಿಯನ್ನೊಮ್ಮೆ ನೋಡಿ. ಎಷ್ಟು ಜನ ಕನ್ನಡದವರಿದ್ದಾರೆ ಹುಡುಕ್ಕೊಳ್ಳಿ. ಏನು? ದುರ್ಬೀನು ಬೇಕಾ?

17 ಕಾಮೆಂಟ್‌ಗಳು:

  1. Vasath, Good comparison. The lack of Kannada people in administration (services like IAS, IRS) is showing up clearly here. Most of the people in administering the "Namma Metro" are from outside Karnataka and they don't have any respect to the local language. This issue needs to be addressed from the base.

    ಪ್ರತ್ಯುತ್ತರಅಳಿಸಿ
  2. ವಸಂತ್ ರವರೆ,
    ಲೇಖನ ಅರ್ಥಪೂರ್ಣವಾಗಿದೆ.
    ಕನ್ನಡಿಗರ ಪರಿಸ್ಥಿತಿ ಇಂದಿಗೂ ಪರಿಶೋಚನೀಯವೇ!
    Prasad
    Adelaide

    ಪ್ರತ್ಯುತ್ತರಅಳಿಸಿ
  3. ಇದು ಸ್ವಾಬಿಮಾನದ ಪ್ರಶ್ನೆ ???????? ದುರಭಿಮಾನ ಎಲ್ಲಿಂದ ಬಂತು !!!

    ಪ್ರತ್ಯುತ್ತರಅಳಿಸಿ
  4. I checked to send a feedback in bangalore metro website and it says internal error and not taking any feedback.

    ಪ್ರತ್ಯುತ್ತರಅಳಿಸಿ
  5. ನಾನು ಅವ್ರಿಗೆ ಮಿಂಚೆ ಕಳಸಕ್ಕೆ ಪ್ರಯತ್ನ ಮಾಡಿದೆ ಇ error ಬಂತು
    ತುಂಬಾ ಸಲ ಪ್ರಯತ್ನ ಮಾಡಿದರು ಏನು ಪ್ರಯೋಜನ ಆಗಿಲ್ಲ :(
    500 - Internal server error.
    There is a problem with the resource you are looking for, and it cannot be displayed.

    ಪ್ರತ್ಯುತ್ತರಅಳಿಸಿ
  6. Send emails to these ids: sivasailam@bmrc.co.in,
    sudhirchandra@bmrc.co.in,
    vasanthrao@bmrc.co.in,
    bmrcl@dataone.in

    ಪ್ರತ್ಯುತ್ತರಅಳಿಸಿ
  7. ವಸಂತ್ ಅವರೇ, ಚೆನ್ನೈ ಮೆಟ್ರೋ ನ ವೆಬ್ಸೈಟ್ ಇಲ್ಲಿ ಯಾಕೋ ಲೋಡ್ ಆಗುತ್ತಿಲ್ಲ. ಅದರ ಅಧಿಕಾರಿಗಳ ಪಟ್ಟಿಯ screenshot ಇಲ್ಲಿ ಹಾಕಲು ಸಾಧ್ಯವೇ?

    ಪ್ರತ್ಯುತ್ತರಅಳಿಸಿ
  8. this mistake should be rectified by the metro authorities.How to inform them on this issue?

    ಪ್ರತ್ಯುತ್ತರಅಳಿಸಿ
  9. ಅವಿನಾಶ ಕನ್ನಮ್ಮನವರನವೆಂಬರ್ 8, 2011 ರಂದು 09:58 PM ಸಮಯಕ್ಕೆ

    BMRC ವೆಬ್ ನಲ್ಲಿ contact us ಹೋಗಿ, ಅಲ್ಲಿ ಕೊಟ್ಟಿರುವ public relation officer ದೂರವಾಣಿಗೆ ಸತತವಾಗಿ ಕರೆಮಾಡಿ,, ಹೀಗೇಕೆ ಅಂತ ಪಪ್ರಶ್ನಿಸಿ,ಸತತವಾಗಿ ಕರೆಯ ಕಿರಿರ ಕೊಡೋಣ?? ಏನಂತೀರಿ?

    ಪ್ರತ್ಯುತ್ತರಅಳಿಸಿ
  10. ಕರ್ನಾಟಕದಲ್ಲೇ ಇದ್ಕೊಂಡು ಕನ್ನಡನ ದ್ವೇಷ ಮಾಡ್ತಾರೆ.... ಇಂಥವರು ಇರೋದ್ರಿನ್ದೆ ನಮ್ ಕನ್ನಡಕ್ಕೆ ಈ ಸ್ಥಿತಿ.... ಮೊದ್ಲು ಕನ್ನಡ ಹಾಕ್ರಿ

    ಪ್ರತ್ಯುತ್ತರಅಳಿಸಿ
  11. ನಮ್ ಮುಖ್ಯ ಮಂತ್ರಿಗಳು ಎನ್ಮಾಡ್ತಿದರೆ....

    ಪ್ರತ್ಯುತ್ತರಅಳಿಸಿ
  12. ನಮ್ಮ ಮುಖ್ಯಮಂತ್ರಿಗಳು ತಮ್ಮನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದವರು ಯಾವಾಗ ಬರ್ತಾರೆ ಅಂತ ಕಾಯುತ್ತಿದ್ದಾರೆ...

    ಪ್ರತ್ಯುತ್ತರಅಳಿಸಿ
  13. ಇಲ್ಲಿ ಇನ್ನೊಂದು ಪ್ರಶ್ನೆ ಏನಪ್ಪ ಅಂದ್ರೆ, ನಮ್ಮ ಕನ್ನಡ ಅಭಿವೃದ್ಧಿ ಪಾಧಿಕಾರ ಏನು ಕಿಸಿತಾಯಿದೆ ಅನ್ನೋದೆ ಅರ್ಥವಾಗೊಲ್ಲ.... ಇಡೀ ಬೆಂಗಳೂರು ಆಂಗ್ಲಮಯವಾಗುತ್ತಿದ್ದರೂ, ಅದರ ಗೊಡವೆಗೇ ಹೋಗದೇ, ಹೊಸದರಲ್ಲಿ ಅಗಸ ಬಟ್ಟೆನ ಎತ್ತಿತ್ತಿ ಒಗೆದ ಅನ್ನೋಹಾಗೆ, ಅಧಿಕಾರವಹಿಸಿಕೊಂಡ ಹೊಸತರಲ್ಲಿ ರಾಜಾರೋಷದಿಂದ ಮಾತಾಡಿ, ಈಗ ಸುಮ್ಮನಾಗಿದ್ದಾರೆ. ಇವರಿಗೆಲ್ಲ ಅಧಿಕಾರ ಬೇಕೇ ಹೊರತು ಅಧಿಕಾರ ಚಲಾಯಿಸುವುದು ಬೇಕಿಲ್ಲ.. ಹಾಗೂ ಅದನ್ನು ಸರಿಯಾಗಿ ಬಳಸಿಕೊಳ್ಳಲು ಬರೋಲ್ಲ. :(

    ಪ್ರತ್ಯುತ್ತರಅಳಿಸಿ
  14. ಇಷ್ಟೆಲ್ಲಾ ಆದಮೇಲೆ ....ಆದ ಬೆಳವಣಿಗೆ ಅಥವಾ ಬದಲಾವಣೆ...ಏನು ಸರ್?
    ನಾವು ಇರೋದೆ ಹೀಗೆ

    ಪ್ರತ್ಯುತ್ತರಅಳಿಸಿ
  15. ನಮ್ಮ ಮೆಟ್ರೋ ಮಿಂಬಲೆಯಲ್ಲಿ ಕನ್ನಡ ಆಯ್ಕೆಗೆ ನಾವು ವಿನಂತಿಸಬಹುದಿತ್ತು. ಆದರೆ ತ್ರಿಭಾಷ ಸೂತ್ರ ಬೇಡ ಅಂತ ಸಾವಿರ ಮಿಂಚೆ ದಿನಕ್ಕೆ ಕಳಿಸ್ತಾ ಇದ್ದರೆ ಅವರಿಗೇನು ಮಿಂಚೆ ಓದಿ ಓದಿ ಸುಸ್ತಾಗಿರತ್ತೆ. ಅದಕ್ಕೆ ಮಿಂಬಲೆಯಲ್ಲಿ ಮಿಂಚೆ ಕಳಿಸೋದನ್ನು ತಡೆಹಿಡಿದಿರ್ತಾರೆ. ಅದಕ್ಕೆ ಯಾವಾಗಲು ತೋಳ ಬಂತು ತೋಳ ಅಂತ ಹೇಳಬಾರದು ಈಗ ನಿಜವಾಗಲು ತೋಳ ಬಂದಾಗ ( ಕನ್ನಡವೇ ಅಲ್ಲಿರದಿದ್ದಾಗ ) ಹೀಗೆ ಆಗುವುದು.

    ಪ್ರತ್ಯುತ್ತರಅಳಿಸಿ
  16. kannada bagge nimagadru a abhimana ideyalla astu saku (Kshamisi Kannadalli Type Madoke Barta illa)

    ಪ್ರತ್ಯುತ್ತರಅಳಿಸಿ
  17. ನಾನು ರಾಕೇಶ್ ಮಯ್ಯ
    ಈ ಮೇಲಿನ ವಿಷಯ ಕೇಳಿ ಕೋಪ ಬರುತ್ತ ಇದೆ , ಆದ್ರೆ ಇನ್ನು ಚಿಂತಿಸಿ ನೋಡಿದಾಗ ನಮ್ಮ ರಾಜ್ಯದ ಮೆಟ್ರೋ ಅಧಿಕಾರಿಗಳ ಬಗ್ಗೆ ಅಸಹ್ಯವು ಆಗುತ್ತ ಇದೆ . ಛೆ ಎಂತಹ ಪರಿಸ್ಥಿತಿ . ಹಾಂ ಇದು ಇಲ್ಲಿಯಾ ಒಂದು ವ್ಯವಸ್ಥೆ ಮಾತ್ರ ಅಲ್ಲ ಇಡಿ ಬೆಂಗಳೂರಿನ ಸುತ್ತ ನಡೆಯುತ್ತಿರುವ ವ್ಯವಸ್ಥೆ .

    ಪ್ರತ್ಯುತ್ತರಅಳಿಸಿ

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !