ಶನಿವಾರ, ಏಪ್ರಿಲ್ 24, 2010

ಒಬ್ಬ ಕ್ಯಾಪ್ಟನ್ ಗೋಪಿನಾಥ್, ಒಬ್ಬ ನಾರಾಯಣ ಮೂರ್ತಿ ಸಾಕಾ?

ಒಂದು ನಾಡಿನ ಏಳಿಗೆಯಲ್ಲಿ ಆ ನಾಡಿನ ಜನಾಂಗದ ಕಲಿಕೆ, ದುಡಿಮೆ, ಒಗ್ಗಟ್ಟಿನಷ್ಟೇ ಮಹತ್ವದ ಪಾತ್ರ ಆ ನಾಡಿಗರಲ್ಲಿರುವ ಸಾಧಿಸುವ ಛಲಕ್ಕೂ ಇದೆ ಎಂಬುದು ನನ್ನ ಗಟ್ಟಿ ನಂಬಿಕೆ. ಎರಡನೇ ವಿಶ್ವ ಯುದ್ಧದಲ್ಲಿ ನೆಲಸಮವಾಗಿದ್ದ ಜಪಾನ್ ದೇಶ, ಜಪಾನಿಗರು ಅಮೇರಿಕದ ಮೇಲೆ ಸೇಡು ತೀರಿಸಿಕೊಂಡಿದ್ದು ಅವರ ಮೇಲೆ ಯುದ್ದ ಮಾಡಿಯಲ್ಲ, ಬದಲಿಗೆ ನೆಲಸಮವಾಗಿದ್ದ ಆ ದೇಶವನ್ನು ಇಡೀ ಜಗತ್ತೇ ನಿಬ್ಬೆರಗಾಗುವಂತೆ ಕಟ್ಟಿ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿ. ಛಲ ಅಂದ್ರೆ ಅದು !

ನಮ್ಮ ಯೋಗ್ಯತೆನೆ ಇಷ್ಟಾ?
ಜಗತ್ತಿನ ಯಾವುದೇ ಮುಂದುವರೆದ ದೇಶ ನೋಡಿ. ಆ ನಾಡಲ್ಲಿ, ಆ ಜನರಲ್ಲಿ ಕಲಿಕೆ, ದುಡಿಮೆ, ಛಲ, ಒಗ್ಗಟ್ಟು ಎಂಬ ನಾಲ್ಕು ವಿಷಯಗಳು ಸರಿಯಾಗಿರುತ್ತವೆ. ಇವತ್ತು ಕನ್ನಡ ನಾಡಲ್ಲಿ ಈ ನಾಲ್ಕು ವಿಷಯಗಳಲ್ಲಿ ಸಾಕಷ್ಟು ತೊಡಕುಗಳಿವೆ. ಛಲದ ಕೊರತೆಯಂತೂ ಸಾಕಷ್ಟಿದೆ. ದೊಡ್ಡ ಕನಸು ಕಾಣ್ತಿನಿ,ಮುನ್ನುಗ್ಗಿ ಸವಾಲು ಎದುರಿಸಿ ದೊಡ್ಡ ಗುರಿ ತಲುಪ್ತಿನಿ ಅನ್ನೋ ಛಲ ಕನ್ನಡಿಗರಲ್ಲಿ ತುಂಬಾ ಕಡಿಮೆ. ಎಲ್ಲೋ ಒಬ್ಬ ಕ್ಯಾಪ್ಟನ್ ಗೋಪಿನಾಥ್, ಒಬ್ಬ ನಾರಾಯಣ ಮೂರ್ತಿ, ಒಬ್ಬ ಸಿದ್ಧಾರ್ಥ ರಂತಹ ಉದ್ಯಮಿಗಳನ್ನು ಬಿಟ್ರೆ ದೊಡ್ಡ ಉದ್ಯಮ ಸ್ಥಾಪಿಸಿ ಎತ್ತರಕ್ಕೆ ಬೆಳೆದಿರುವ ಕನ್ನಡಿಗರೆಲ್ಲಿ? ಉಳಿದವರೆಲ್ಲ ಚಿಕ್ಕ ಪುಟ್ಟ ಕಂಪನಿಗಳಲ್ಲಿ ಪುಡಿಗಾಸಲ್ಲೇ ಜೀವನ ಕಳೆಯೋದಕಷ್ಟೇ ಯೋಗ್ಯರಾ? ಇತಿಹಾಸದಲ್ಲಿ ಛಲಕ್ಕೆ ಇನ್ನೊಂದು ಹೆಸರೇ ಕನ್ನಡಿಗರು. ಹಾಗಿದ್ದ ಈ ನಾಡು,ಈ ಜನ ಇವತ್ತು ಹೀಗಾಗಿದ್ದಾರೆ. ಕಾರಣಗಳೇನೇ ಇರಲಿ, ಇದು ಬದಲಾಗಬೇಕು. ಬದಲಾಗಲೇಬೇಕು. ಅದಿಲ್ಲದೇ ಈ ನಾಡಿಗೆ, ಈ ನಾಡಿನ ಮಕ್ಕಳಿಗೆ ಭವಿಷ್ಯವಿಲ್ಲ.

ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ
ಈ ಸಂದರ್ಭದಲ್ಲಿ ನನಗೆ ಅಣ್ಣಾವ್ರು ನೆನಪಾಗ್ತಾರೆ. ಚೆನ್ನೈನಲ್ಲಿ ತಮಿಳು ಚಿತ್ರದ ಜೆರಾಕ್ಸ್ ಕಾಪಿಯಂತಿದ್ದ ಕನ್ನಡ ಚಿತ್ರೋದ್ಯಮವನ್ನು ಬೆಂಗಳೂರಿಗೆ ಕರೆ ತರಲು, ತನ್ನ ಕಾಲ ಮೇಲೆ ತಾನು ನಿಲ್ಲುವಂತೆ ಅದನ್ನು ಕಟ್ಟುವಲ್ಲಿ ಅಣ್ಣಾವ್ರ ಕೊಡುಗೆ ಬಲು ದೊಡ್ಡದು. ಇವತ್ತು ಅವರ ಹುಟ್ಟಿದ ದಿನ. ಒಂದಿಡೀ ನಾಡನ್ನು, ನಾಡಿಗರನ್ನು ಭಾವನಾತ್ಮಕವಾಗಿ ಬೆಸೆದ, ಒಂದಿಡೀ ನಾಡಿಗೆ ಆತ್ಮ ಗೌರವ, ಸ್ವಾಭಿಮಾನದ ಕಿಡಿ ತುಂಬಿದ, ತಮ್ಮ ಅಭಿನಯದ ಚಿತ್ರಗಳ ಮೂಲಕ ಜನರಲ್ಲಿ ಸರಿದಾರಿಯಲ್ಲಿ ನಡೆಯುವಂತ ಮೌಲ್ಯಗಳನ್ನು ತುಂಬಿದ ಅಣ್ಣಾವ್ರನ್ನು ಈ ಹಾಡಿನೊಂದಿಗೆ ನೆನೆಯೋಣ. ನರನಾಡಿಯಲ್ಲಿ ಛಲದ ಬಿಸಿ ನೆತ್ತರು ತುಂಬುವ, ಸಾಧಿಸಬೇಕು ಅನ್ನುವ ಹಟ ತುಂಬುವ ಈ ಹಾಡು evergreen !



ಹುಟ್ಟು ಹಬ್ಬದ ಸವಿ ಸಹಿ ಹಾರೈಕೆಗಳು ಅಣ್ಣಾವ್ರೇ ...

9 ಕಾಮೆಂಟ್‌ಗಳು:

  1. neevu helodu correct vasanth nammalli oggattu ella. yaradru munde hogtare andre kalu heliyoke 100 jana ready agirtare.navu namma sanna buddi bittagle munde baroke sadya.....naavu echettukoloke etara sandesha tumba mukya..

    **chik hudgi enadru tappu matadidre ksamisi**

    ಪ್ರತ್ಯುತ್ತರಅಳಿಸಿ
  2. ನೀವು ಹೇಳಿರುವುದು ಸರಿಯಾಗಿದೆ. ಒಬ್ಬೊಬ್ಬ ಕನ್ನಡಿಗನೂ ಎದ್ದು ನಿಂತಾಗ ಮಾತ್ರ ಕರ್ನಾಟಕದ ಏಳ್ಗೆ... ಕರ್ನಾಟಕದ ಏಳ್ಗೆ ಆದ್ರೆ ಭಾರತದ ಏಳ್ಗೆನೂ ಆದಂತೆ...

    ಪ್ರತ್ಯುತ್ತರಅಳಿಸಿ
  3. ನೀವು ಹೇಳಿರೋದು ಖಂಡಿತ ನಿಜ. ಸಾದಿಸುವ ಛಲ, ಛಲ ಇದ್ದರೆ ಕಲಿಕೆ, ಕಲಿಕೆಯ ಹಿಂದೆಯೆ ದುಡಿಮೆ. ಇವೆಲ್ಲದರ ಜೊತೆ ಒಗ್ಗಟ್ಟು ಸೇರಿದರೆ ನಮ್ಮ ನಾಡಿನ ಉನ್ನತಿ ಖಂಡಿತವಾಗಿಯು ಸಾಧ್ಯ..

    ಪ್ರತ್ಯುತ್ತರಅಳಿಸಿ
  4. ವಸಂತರವರಿಗೆ ನಮಸ್ಕಾರಗಳು. ಕ್ಷಮಿಸಿ ತಾವು ತಿಳಿಸಿದ ದಿನದಂದು ಭೇಟಿ ಸಾಧ್ಯವಾಗಲಿಲ್ಲ.

    "ಒಬ್ಬ ಕ್ಯಾಪ್ಟನ್ ಗೋಪಿನಾಥ್, ಒಬ್ಬ ನಾರಾಯಣ ಮೂರ್ತಿ ಸಾಕಾ?" ಕುತೂಹಲ ಕೆರಳಿಸುವಂತಹ ಶೀರ್ಷಿಕೆ :) .

    ತುಂಬಾ ಜನರಿಗೆ ಇವರ ಬಗ್ಗೆ ಕೇಳಿ, ಅವ್ರು ಹೇಳೋದು "ತುಂಬಾ ದೊಡ್ಡ ಜನ ಸರ್ ಅವ್ರು","ಭಾರೀ ಶ್ರೀಮಂತರು","ವಿದ್ವಾಂಸರು,ಬುದ್ದಿವಂತ್ರು ಅಂತ"... ಕೆಲವು ಜನಗಳ ಬಾಯಲ್ಲಿ ಮಾತ್ರ ಇವರು "ನಮ್ಮ ನಾಡಿನ ಗಣಿಗಳು, ಕನ್ನಡಿಗರು" ಅಂತ ಬರೋದು..ಯಾಕೆ ಹೇಳಿ- ಇವ್ರು ಯಾರು ಕನ್ನಡನಾ ಮುಂದೆ ಇಟ್ಕೊಂಡು ತಮ್ಮ ಸಾಧನೆ ಮಾಡಲಿಲ್ಲ ಅಥವಾ ಕನ್ನಡಿಗ ಅಂತ ತಮ್ಮನ್ನು ಪ್ರದರ್ಶಿಸಲಿಲ್ಲ. ತಾವು ಮಾಡಿದ ಸಾಧನೆಯಿಂದ ಕನ್ನಡಕ್ಕೆ ಗೌರವ ತಂದು ಕೊಟ್ಟ್ರು.

    ಹೌದು ಅಣ್ಣಾವ್ರ ಸಾಧನೆ ಬಗ್ಗೆ ಎರಡು ಮಾತಿಲ್ಲ ಆದ್ರೆ ಸಾಧನೆ ಮಾಡಿದ ಸಾಧಕರಲ್ಲಿ ಎಷ್ತು ಜನ ತಮ್ಮನ್ನು ಕನ್ನಡಿಗ ಅಂತ ಹೇಳ್ಕೋಕ್ಕೆ ಮುಂದೆ ಬರ್ತಾ ಇದಾರೆ? ನೀವು ಗೂಗಲ್ ನಲ್ಲಿ "*** speaking kannada" (**** Replace with your Kannada celebrity name) ಅಂತ ಹುಡುಕಿದ್ರೆ ಸಾಕು ನಿಮಗೆ ಒಂದು ಕ್ಷಣದಲ್ಲಿ ಬೇಸರದ ಮಂದಹಾಸ ಮೂಡೋದು ಖಂಡಿತ.

    ಮೊದಲು ನಮ್ಮಲ್ಲಿ ಸಾಧನೆ ಹೆಚ್ಚಾಗಬೇಕು,ಗುರಿ,ಛಲ ಬಲಗೊಳ್ಳಬೇಕು. ನಮ್ಮ ಕೊರತೆಗಳನ್ನು ನೀಗಿಸಿ ಕೊಂಡರೆ ಮಾತ್ರ ನಾವು ಜಯ ಕರ್ನಾಟಕವನ್ನು ಉಳಿಸಕೊಳ್ಳಬಹುದು.

    ಭಾಷೆಗೂ ಅಭಿಮಾನಕೂ ಯಾಕೀ ದೊಂಬರಾಟ!!!

    ಪ್ರತ್ಯುತ್ತರಅಳಿಸಿ
  5. ಅರವಿಂದ,
    ಅನಿಸಿಕೆಗೆ ನನ್ನಿ..
    ಮೂರ್ತಿಗಳ ಬಗ್ಗೆ ಗೊತ್ತಿಲ್ಲ,, ಆದ್ರೆ ಗೋಪಿನಾಥ್ ಅವರ ಸಿಂಪ್ಲಿ ಫ್ಲೈ ಹೊತ್ತಿಗೆ ಒಮ್ಮೆ ಓದಿ. ಅವರೆಲ್ಲೂ ತಮ್ಮನ್ನು ತಾವು ಕನ್ನಡಿಗ ಎಂದು ಹೇಳಿಕೊಳ್ಳಲು ಹಿಂಜರಿದಿಲ್ಲ. ನಿಜ ಹೇಳಬೇಕು ಅಂದ್ರೆ ಅವರು ಡೆಕ್ಕನ್ ಎವಿಯೇಶನ್ ಕರ್ನಾಟಕದಲ್ಲಿ ಶುರು ಮಾಡಿದ್ದಕ್ಕೆ ಕಾರಣವೇ ತಾವು ಕನ್ನಡಿಗ, ಕರ್ನಾಟಕದಲ್ಲೇ ತಮ್ಮ ಉದ್ಯಮ ಶುರು ಆಗಬೇಕು ಅನ್ನುವುದು. ಆ ಪುಸ್ತಕ ಒಮ್ಮೆ ಓದಿ, ಸಕತ್ ಕಿಚ್ಚು ತುಂಬೋ ಪುಸ್ತಕ ಅದು. ಉದ್ಯಮಿ ಆಗೋ ಕನಸು ಕಾಣೋ ಪ್ರತಿಯೊಬ್ಬ ಕನ್ನಡಿಗ ಅದನ್ನ ಓದಬೇಕು.

    ಇವತ್ತು, ಕನ್ನಡಿಗರು ಪ್ರತಿ ಕ್ಷೇತ್ರದಲ್ಲೂ ಚೆನ್ನಾಗಿ ಸಾಧನೆ ಮಾಡಿ, ಹೆಸರು, ಹಣ ಎಲ್ಲ ಮಾಡಬೇಕು. ಅದೆಲ್ಲ ಆದ ಮೇಲೂ ತಮ್ಮ ಬೇರಿನ ಬಗ್ಗೆ, ತಮ್ಮತನದ ಬಗ್ಗೆ ಮಾತನಾಡಲು ಹಿಂಜರಿಯಬಾರದು.

    ಪ್ರತ್ಯುತ್ತರಅಳಿಸಿ
  6. annavaru birthday na illi yaake club maadidira artha aaglilla,
    but coming to ventures,biz tycoons, entrapranures.. yes there are ppl coming up with startups, owning small companies, establishments.., aadre namma govt galu.. bari videshada companygal mohadalliddare..
    On another note, apart from Gopinath, Murthi.. there are many ppl in medicine,education,industries... just that they are not know to ppl..

    ಪ್ರತ್ಯುತ್ತರಅಳಿಸಿ
  7. lakshmi yavattu kaledu hogthale...adre saraswathi alla...ee maathu ellaru nenapinalli itkobeku....jnana iddare adanna nooru janakke hanchuva kelsa madidaaga..lakshmi yu baruttale..sadhaneyou agutte...meleida mooru mahaniyaru...yaaru lakshmigaagi kelsa madalilla...saraswathi iddalu..lakshmi hinde bandalu...haage modalu naaanu beleyabeku...haagu nammanna belasabeku....adu takath ee moooru janakku ittu..

    olleya barha...dhanyavadagalu

    ಪ್ರತ್ಯುತ್ತರಅಳಿಸಿ

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !