ಉತ್ತರ ಕರ್ನಾಟಕ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಉತ್ತರ ಕರ್ನಾಟಕ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಶುಕ್ರವಾರ, ಮೇ 31, 2013
ಬುಧವಾರ, ಮೇ 15, 2013
ಮಂಗಳವಾರ, ಏಪ್ರಿಲ್ 23, 2013
ಮತ ಕೊಡುವ ಮುನ್ನ,, ಕೇಳಿ ಈ ಪ್ರಶ್ನೆಗಳನ್ನ..
ಚುನಾವಣೆಯ ದಿನ ಹತ್ತಿರ ಬರುತ್ತಿದ್ದಂತೆ ಎಲ್ಲ ಪಕ್ಷಗಳು ಅಬ್ಬರದಿಂದ
ಪ್ರಚಾರಕ್ಕಿಳಿದಿವೆ. ಸರಿ, ಮುಂದಿನ ಐದು ವರ್ಷ ಏನೇನ್ ಮಾಡ್ತೀವಿ ಅಂತ ಯಾರ್ ಯಾರು ಏನ್
ಹೇಳಿದ್ದಾರೆ ಅಂತ ಪ್ರತಿಯೊಬ್ಬರ ಪ್ರಣಾಳಿಕೆ ಮೇಲೂ ಕಣ್ಣಾಡಿಸಿದಾಗ ಹೆಚ್ಚಿನವುಗಳಲ್ಲಿ
ಹಳೆ ಹೆಂಡ ಹೊಸ ಬಾಟ್ಲು ಅನ್ನುವಂತೆ ಅದದೇ ಹಳೆ ಭರವಸೆಗಳನ್ನೇ ಪಾಲಿಶ್ ಮಾಡಿ ಬಣ್ಣ
ಹೊಡೆದು ಮುಂದೆ ಇಟ್ಟಂಗೆ ಕಾಣುತ್ತೆ. ಪಾಪುಲಿಸಂ ಅನ್ನು ಮೀರಿ ಕನ್ನಡ-ಕನ್ನಡಿಗರ ಬದುಕಿನ
ವಿಷಯಗಳತ್ತ ಯಾರ್ ಏನ್ ಹೇಳಿದ್ದಾರೆ ಅಂತ ನೋಡಿದಾಗ ಇನ್ನು ನಿರಾಶೆಯಾಗುತ್ತೆ. ಹೆಚ್ಚಿನ
ಪ್ರಣಾಳಿಕೆಯಲ್ಲಿ ಕನ್ನಡ ಅಂದ್ರೆ ಮತ್ತದೇ ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಅದನ್ನ
ಉರಸ್ತಿವಿ, ಇದನ್ನ ಮೆರೆಸ್ತಿವಿ ಅನ್ನೋ ಅದೇ ಉತ್ಸವಮೂರ್ತಿಯ ಯೋಚನೆಗಳೇ ಕಾಣುತ್ತಿವೆ.
ಸಂಸ್ಕ್ರುತಿ, ಸಾಹಿತ್ಯ ಅನ್ನುವುದೆಲ್ಲ ಬೇಡ ಅಂತಲ್ಲ, ಆದರೆ ಊಟಕ್ಕೆ ಉಪ್ಪಿನಕಾಯಿಯಂತೆ
ಇರಬೇಕಾದದ್ದು ಊಟಾನೇ ಆಗೋ ತರಹ ಇದ್ದರೆ ನಮ್ಮ ರಾಜಕೀಯ ನಾಯಕರಿಗೆ ಕನ್ನಡ, ಕನ್ನಡಿಗರ
ಬದುಕಿನ ವಿಷಯಗಳು ಮತ ಗೆಲ್ಲುವ ದೃಶ್ಟಿಯಲ್ಲಿ ಎಶ್ಟು ಲೆಕ್ಕಕ್ಕೆ ಬಾರದಂತದ್ದು
ಅನ್ನುವುದು ಕಾಣುತ್ತೆ.ಏನಿದು ಕನ್ನಡ, ಕನ್ನಡಿಗರ ಬದುಕಿನ ವಿಷಯಗಳು?
ಹೇಳಿ, ಈ ಮೇಲಿನವುಗಳು ಕನ್ನಡ-ಕನ್ನಡಿಗರ ಬದುಕಿನ ವಿಶಯಗಳಲ್ಲವೇ? ಇವುಗಳಲ್ಲಿ ಯಾವುದು ಇಂದು ನಮ್ಮ ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿವೆ? ಕನ್ನಡ-ಕರ್ನಾಟಕ ಕೇಂದ್ರಿತ ರಾಜಕಾರಣ ಅನ್ನುವ ಒಂದು ಸ್ಪೇಸ್ ಇವತ್ತಿಗೂ ಖಾಲಿ ಇದೆ ಮತ್ತು ಅದನ್ನು ಪ್ರಾದೇಶಿಕ ಪಕ್ಷಗಳು ಮಾತ್ರವೇ ತುಂಬಬಲ್ಲವು. ಇರುವ ಪ್ರಾದೇಶಿಕ ಪಕ್ಷಗಳು ಅವುಗಳಿಗಿರುವ ಲಿಮಿಟೇಶನ್ಸ್ ನಡುವೆಯೂ ಇಂತಹ ವಿಷಯಗಳನ್ನು ತಮ್ಮ ರಾಜಕೀಯದ ಅಜೆಂಡಾಗೆ ಸೇರಿಸಿಕೊಳ್ಳುವ ಹಾಗಾಗಬೇಕು ಮತ್ತು ಅಂತಹದೊಂದು ಒತ್ತಡ ಕರ್ನಾಟಕ ಕೇಂದ್ರಿತ ರಾಜಕಾಣದ ಅನಿವಾರ್ಯತೆ ಚೆನ್ನಾಗಿ ಮನದಟ್ಟಾಗಿರುವ ಎಲ್ಲ ಕನ್ನಡಿಗರು ತರಬೇಕು. ಅದು ಈ ಚುನಾವಣೆಯಿಂದಲೇ ಶುರುವಾಗಲಿ.
ಶನಿವಾರ, ಅಕ್ಟೋಬರ್ 20, 2012
ಕರ್ನಾಟಕವನ್ನು ಒಡೆಯುವ ಮುನ್ನ ಕೇಳಿಕೊಳ್ಳಬೇಕಾದ ಕೆಲವು ಪ್ರಶ್ನೆಗಳು..
ಕರ್ನಾಟಕವನ್ನು ಒಡೆಯುವ ಉಮೇಶ್ ಕತ್ತಿಯವರ ಮಾತಿನ ಬಗ್ಗೆ ಚರ್ಚೆ ನಡೆಯುವ ಸಂದರ್ಭದಲ್ಲಿ ಸರಿಯಾದ ಒಕ್ಕೂಟ ವ್ಯವಸ್ಥೆ ರೂಪಿಸದೇ ಚಿಕ್ಕ ರಾಜ್ಯಗಳನ್ನು ಮಾಡುವುದು ಅವುಗಳ ದನಿ ಅಡಗಿಸುವ ಕ್ರಮ ಅನ್ನುವ ನನ್ನ ನಿಲುವನ್ನು ಕನ್ನಡ ಪತ್ರಿಕೆಗಳಿಗೆ ಪತ್ರದ ರೂಪದಲ್ಲಿ ಕಳಿಸಿದ್ದೆ. ಬ್ಲಾಗಿನ ಗೆಳೆಯರ ಓದಿಗಾಗಿ ಬ್ಲಾಗಿನಲ್ಲಿ ಹಾಕುತ್ತಿರುವೆ.
-ವಸಂತ
ಮಾನ್ಯ ಸಂಪಾದಕರೇ,
-ವಸಂತ
ಮಾನ್ಯ ಸಂಪಾದಕರೇ,
ವಿಷಯ: ಕರ್ನಾಟಕವನ್ನು ಒಡೆಯಬೇಕು ಅನ್ನುವುದು ಸರಿಯೋ ತಪ್ಪೋ ಅನ್ನುವ ಬಗ್ಗೆ ಓದುಗರ ಓಲೆಯಲ್ಲಿ ಪ್ರಕಟಿಸಲು
ಕರ್ನಾಟಕವನ್ನು ಒಡೆದು ಉತ್ತರ ಕರ್ನಾಟಕ ಬೇರೆ ರಾಜ್ಯ ಮಾಡಬೇಕು ಅನ್ನುವ ಮಂತ್ರಿ ಉಮೇಶ್ ಕತ್ತಿಯವರ ಹೇಳಿಕೆ ರಾಜ್ಯವ್ಯಾಪಿ ಖಂಡನೆಗೆ ಒಳಗಾಗಿದೆ. ಉತ್ತರ ಕರ್ನಾಟಕ ಬೇರೆ ರಾಜ್ಯ ಆಗುವುದರಿಂದಲೇ ಅದರ ಏಳಿಗೆ ಸಾಧ್ಯ ಅನ್ನುವುದು ನಿಜವೇ ಆಗಿದ್ದಲ್ಲಿ ಅದಕ್ಕೆ ನಮ್ಮ ಅಡ್ಡಿಯಿರಬಾರದು. ಆದರೆ ಪ್ರತ್ಯೇಕ ರಾಜ್ಯ ಬೇಕು ಅನ್ನುವವರು ಈ ಕೆಲ ಪ್ರಶ್ನೆಗಳನ್ನು ಉತ್ತರಿಸುವರೇ?
- ಇವತ್ತು ಇಡೀ ಕರ್ನಾಟಕದ ಸಂಪನ್ಮೂಲದ ಅಗತ್ಯಗಳ ಬಹುಪಾಲನ್ನು ಪೂರೈಸುತ್ತಿರುವುದು ಬೆಂಗಳೂರು. ಬೆಂಗಳೂರು ಇಲ್ಲದ ಉತ್ತರ ಕರ್ನಾಟಕ ಎಲ್ಲಿಂದ ಸಂಪನ್ಮೂಲ ಹೊಂದಿಸುತ್ತೆ?
- ಉತ್ತರ ಕರ್ನಾಟಕದ ಅಕ್ಕ ಪಕ್ಕ ಯಾವ ರಾಜ್ಯಗಳಿವೆ? ಒಂದೆಡೆ ೪೮ ಎಂ.ಪಿಗಳ ಮಹಾರಾಷ್ಟ್ರ, ಇನ್ನೊಂದೆಡೆ ೪೨ ಎಂ.ಪಿಗಳ ಆಂಧ್ರಪ್ರದೇಶ. ಆರ್ಥಿಕವಾಗಿಯೂ, ರಾಜಕೀಯವಾಗಿಯೂ ಬಲಾಡ್ಯವಾಗಿರುವ ಇಂತಹ ರಾಜ್ಯಗಳ ಜೊತೆ ನದಿ ನೀರು, ಗಡಿ ತಕರಾರುಗಳನ್ನು ಈ ರಾಜ್ಯ ಹೇಗೆ ನಿಬಾಯಿಸುತ್ತೆ? ಆಂಧ್ರ ಡ್ಯಾಮ್ ಕಟ್ಟಿ ಹಿನ್ನೀರಿನಲ್ಲಿ ಮುಳುಗಿಸಬಹುದು, ಮಹಾರಾಷ್ಟ್ರ ಡ್ಯಾಮ್ ಬಾಗಿಲು ತೆಗೆದು ನೀರಿನ ಪ್ರವಾಹ ಹರಿಸಬಹುದು. ಅದನ್ನು ತಡೆಯಬಲ್ಲರೇ? ೨೮ ಎಂ.ಪಿಗಳ ಕರ್ನಾಟಕ ರಾಜ್ಯಕ್ಕೆ ನೆಲ,ಜಲ ವಿಷಯಗಳಲ್ಲಿ ಅನ್ಯಾಯವಾಗುವುದನ್ನು ತಡೆಯಲು ಸಾಧ್ಯವಾಗದೇ ಇರುವಾಗ ೧೦ ಎಂ.ಪಿಗಳ ಈ ರಾಜ್ಯದ ಕೈಲಿ ಏನಾಗುತ್ತೆ?
- ನೈಸರ್ಗಿಕ ಸಂಪನ್ಮೂಲ ಅತಿ ಕಡಿಮೆ ಇರುವ ಈ ಬಯಲುಸೀಮೆಯ ಈ ಭಾಗ ಯಾವ ರೀತಿಯಲ್ಲಿ ತನ್ನ ಮಾನವ ಸಂಪನ್ಮೂಲದ ಏಳಿಗೆ ಮಾಡುತ್ತೆ? ಕೇಂದ್ರ ಕೊಡುವ ಅನುದಾನವನ್ನೇ ನಂಬಿಕೊಂಡು ಹೊಸ ರಾಜ್ಯ ಕಟ್ಟಿಕೊಂಡರೆ ಇವರು ಬಯಸುವ ಏಳಿಗೆ ಅನ್ನುವುದು ಕನ್ನಡಿಯೊಳಗಿನ ಗಂಟೇ ಸರಿ.
- ಇವತ್ತು ಬೆಂಗಳೂರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಜೀವನ ಕಟ್ಟಿಕೊಂಡಿರುವ ಉತ್ತರ ಕರ್ನಾಟಕ ಭಾಗದ ಕನ್ನಡಿಗರಿದ್ದಾರೆ. ನಾಳೆ ಬೇರೆ ರಾಜ್ಯ ಮಾಡಿಕೊಂಡರೆ ಅಲ್ಲಿನ ಕನ್ನಡಿಗರಿಗೆ ಬೆಂಗಳೂರಿನಲ್ಲಿ ಇವತ್ತು ಸಿಗುತ್ತಿರುವ ಆತಿಥ್ಯ ಹಾಗೆಯೇ ಮುಂದುವರೆಯುವುದರ ಬಗ್ಗೆ ಅನುಮಾನಗಳಿವೆ. ಹೈದಾರಾಬಾದ್, ಮುಂಬೈ, ಪುಣೆಯ ಪಾಲಿಗೆ ಉತ್ತರ ಕರ್ನಾಟಕದ ಕನ್ನಡಿಗರು ಎಂದಿಗೂ ಹೊರಗಿನವರೇ. ಬೆಂಗಳೂರು ಮಾತ್ರ ಅವರನ್ನು ನಮ್ಮವರೇ ಎಂದು ಕರೆದು ಮಣೆ ಹಾಸಿದೆ. ಈಗ ಒಡೆದುಕೊಂಡು ಹೋದರೆ ಅದ್ದರಿಂದ ಹೆಚ್ಚಿನ ಹಾನಿ ಹಾಗೇ ಹೋಗುವವರಿಗೆ ಆಗಬಹುದೇ ಹೊರತು ಬೆಂಗಳೂರಿಗಲ್ಲ.
- ಭಾರತ ಒಕ್ಕೂಟದಲ್ಲಿ ಹೆಚ್ಚಿನ ಆರ್ಥಿಕ ಸಂಪನ್ಮೂಲವೆಲ್ಲ ಕೇಂದ್ರದ ಕೈಯಲ್ಲಿದೆ. ಸಮ್ಮಿಶ್ರ ಸರ್ಕಾರದ ಈ ಅವಧಿಯಲ್ಲಿ ಕೇಂದ್ರದಿಂದ ತನ್ನ ಪಾಲಿನ ನ್ಯಾಯಯುತವಾದ ಸಂಪನ್ಮೂಲ ಪಡೆಯಲು ರಾಜ್ಯಗಳು ದೊಡ್ಡದಾಗಿರುವುದು ಮತ್ತು ಅಲ್ಲಿ ಸರಿಯಾದ ಪ್ರಾದೇಶಿಕ ಪಕ್ಷಗಳಿರುವುದು ಅತ್ಯಂತ ಮುಖ್ಯವಾಗಿದೆ. ರಾಷ್ಟ್ರೀಯ ಪಕ್ಷಗಳ ಆಳ್ವಿಕೆಯ ಚಿಕ್ಕ ಉತ್ತರ ಕರ್ನಾಟಕ ರಾಜ್ಯವನ್ನು ಕೇಂದ್ರ ಯಾವ ರೀತಿ ನಡೆಸಿಕೊಳ್ಳಬಹುದು ಅನ್ನುವುದನ್ನು ಊಹಿಸುವುದು ಕಷ್ಟವೇ?
- ಎಲ್ಲಕ್ಕೂ ಮಿಗಿಲಾಗಿ ಯಾವುದೇ ಪ್ರಾಂತ್ಯದ ಏಳಿಗೆಯ ನೇರ ಹೊಣೆ ಅಲ್ಲಿನ ಜನನಾಯಕರದ್ದು. ಹೀಗಿರುವಾಗ ಉತ್ತರ ಕರ್ನಾಟಕದ ಕೆಲ ಭಾಗಗಳು ಹಿಂದೆ ಬೀಳಲು ಕಾರಣ ಅಲ್ಲಿನ ಜನನಾಯಕರೇ ಹೊರತು ಇನ್ನಾರು ಅಲ್ಲ. ಉತ್ತರ ಕರ್ನಾಟಕ ಭಾಗದಿಂದ ಸುಮಾರು ೮ ಜನ ಮುಖ್ಯಮಂತ್ರಿಗಳು ಹೆಚ್ಚು ಕಡಿಮೆ ೨೫ ವರ್ಷಗಳ ಕಾಲ ಆಡಳಿತ ನಡೆಸಿದ್ದರೂ ಅಲ್ಲಿ ಅಂದುಕೊಂಡ ಮಟ್ಟಿಗೆ ಅಭಿವೃದ್ಧಿ ಆಗದಿರಲು ಕಾರಣ ಅಲ್ಲಿನ ಜನ ನಾಯಕರೇ ಅಲ್ಲವೇ? ಅಲ್ಲಿನ ಜನರನ್ನು ಅನಕ್ಷರತೆ, ಮೌಢ್ಯಗಳ ಪ್ರಪಂಚದಲ್ಲಿ ಬಂಧಿಸಿ ತಾವು ಮಾತ್ರ ಬೆಂಗಳೂರಿನಲ್ಲಿ ಎ.ಸಿ ಬಂಗಲೆಯಲ್ಲಿ ಆರಾಮಾಗಿರುವ ಅಲ್ಲಿನ ಇದೇ ಜನನಾಯಕರ ಕೈಗೆ ಹೊಸ ರಾಜ್ಯವೊಂದನ್ನು ಮಾಡಿ ಕೊಟ್ಟಲ್ಲಿ ಅಲ್ಲಿನ ಪರಿಸ್ಥಿತಿ ಬದಲಾಗುತ್ತೆ ಎಂದು ನಿರೀಕ್ಷಿಸುವುದು ಹುಲಿ ಹುಲ್ಲು ತಿನ್ನಲಿ ಎಂದು ನಿರೀಕ್ಷಿಸಿದಂತಲ್ಲವೇ?
- ಸರಿಯಾದ ಒಕ್ಕೂಟ ವ್ಯವಸ್ಥೆಯನ್ನು ರೂಪಿಸದೇ ಎಲ್ಲ ಅಧಿಕಾರವನ್ನು ಕೇಂದ್ರದ ಕೈಯಲ್ಲೇ ಉಳಿಸಿ ಚಿಕ್ಕ ಚಿಕ್ಕ ರಾಜ್ಯಗಳನ್ನು ಮಾಡಿಕೊಳ್ಳುವುದು ಒಂದರ್ಥದಲ್ಲಿ ರಾಜ್ಯಗಳನ್ನು ಕೇಂದ್ರದ ಸಾಮಂತರನ್ನಾಗಿಸಬಹುದೇ ಹೊರತು ಅಧಿಕಾರ ವಿಕೇಂದ್ರಿಕರಣದ ಮೂಲಕ ಆಡಳಿತವನ್ನು, ಏಳಿಗೆಯನ್ನು ಜನಸಾಮಾನ್ಯರವರೆಗೆ ತರುವ ಸಾಧ್ಯತೆ ಇಲ್ಲ. ಇದನ್ನು ಬೇರೆ ರಾಜ್ಯ ಬೇಕೆನ್ನುವವರು ಅರ್ಥ ಮಾಡಿಕೊಂಡಿದ್ದಾರೆಯೇ?
ಕನ್ನಡಿಗರೆಲ್ಲರ ಏಳಿಗೆ ಸಾಧ್ಯವಾಗಲಿ ಅನ್ನುವ ಆಶಯವೇ ಕರ್ನಾಟಕದ ಏಕೀಕರಣಕ್ಕೆ ಕಾರಣವಾಗಿತ್ತು. ಇಂದು ಅದು ಅಂದುಕೊಂಡ ಮಟ್ಟದಲ್ಲಿ ಸಾಧ್ಯವಾಗಿಲ್ಲವೆಂದರೆ ಆ ಬಗ್ಗೆ ಎಲ್ಲ ಕನ್ನಡಿಗರು ಕೂತು, ಚರ್ಚೆ ಮಾಡಿ ಅಭಿವೃದ್ಧಿಯನ್ನು ಎಲ್ಲ ಭಾಗಕ್ಕೂ ಕೊಂಡೊಯ್ಯುವಲ್ಲಿ ಏನು ಮಾಡಬೇಕಿದೆ ಅನ್ನುವುದರತ್ತ ಗಮನಹರಿಸಬೇಕಿದೆಯೇ ಹೊರತು ಭಾವುಕರಾಗಿ ಒಂದೇ ನುಡಿಯಾಡುವ ಜನರ ನಡುವೆ ಇನ್ನಷ್ಟು ತಡೆಗೋಡೆಗಳನ್ನು ಕಟ್ಟುವ ಕೆಲಸಕ್ಕೆ ಹೋಗದಿರಲಿ.
ಇಂತಿ ನಿಮ್ಮ ನಂಬುಗೆಯ
ವಸಂತ ಶೆಟ್ಟಿ
ಸೋಮವಾರ, ಅಕ್ಟೋಬರ್ 1, 2012
ಕಾವೇರಿ ವಿವಾದ, ನಮ್ಮ ರಾಜಕೀಯ ನಾಯಕರ ಕೈಲಾಗದತನ, ನಮಗೆ ಬೇಕಿರುವ ರಾಜಕೀಯ ಪರಿಹಾರ
ಕಾವೇರಿ ವಿವಾದ, ನಮ್ಮ ರಾಜಕೀಯ ನಾಯಕರ ಕೈಲಾಗದತನ, ನಮಗೆ ಬೇಕಿರುವ ರಾಜಕೀಯ ಪರಿಹಾರದ ಬಗ್ಗೆ ಕನ್ನಡದ ಪತ್ರಿಕೆಗಳಿಗೆ ಒಂದು ಪತ್ರ ಬರೆದಿದ್ದೆ. ಅದನ್ನೇ ಇಲ್ಲಿ ಹಾಕಿರುವೆ.
-ವಸಂತ
-ವಸಂತ
ಮಾನ್ಯ ಸಂಪಾದಕರೇ,
ವಿಷಯ: ಕಾವೇರಿ ವಿವಾದ ಮತ್ತು ರಾಜಕೀಯವಾದ ಪರಿಹಾರ ಓದುಗರ ಓಲೆಯಲ್ಲಿ ಪ್ರಕಟಿಸಲು
ವಿಷಯ: ಕಾವೇರಿ ವಿವಾದ ಮತ್ತು ರಾಜಕೀಯವಾದ ಪರಿಹಾರ ಓದುಗರ ಓಲೆಯಲ್ಲಿ ಪ್ರಕಟಿಸಲು
ಪ್ರತಿ ಬಾರಿ ಕಾವೇರಿ ವಿವಾದ ತಲೆದೋರಿದಾಗಲೂ ಕೇಳುವಂತೆ ಕರ್ನಾಟಕಕ್ಕೆ
ಅನ್ಯಾಯ ಆಗುತ್ತಿದೆ ಅನ್ನುವ ಕೂಗು ಈ ಬಾರಿಯೂ ಎದ್ದಿದೆ. ಆದರೆ ಇಂತಹ ಅನ್ಯಾಯ ಪದೇ ಪದೇ ಆಗಲು
ಕಾರಣವೇನು ಅನ್ನುವ ಬಗ್ಗೆ ಕನ್ನಡ ಸಮಾಜದಲ್ಲಿ ಚಿಂತನೆ ನಡೆಯಬೇಕಿದೆ. ಈ ಬಾರಿ ಕರ್ನಾಟಕದಲ್ಲಿ
ಭೀಕರ ಬರವಿದ್ದು, ಕುಡಿಯುವ ನೀರಿಗೂ ತೊಂದರೆ ಅನ್ನುವ ಸ್ಥಿತಿಯ ಬಗ್ಗೆ ಮನವರಿಕೆ ಆದ ಮೇಲೂ
ಪ್ರಧಾನಿ ದಿನಕ್ಕೆ 9000 ಕ್ಯೂಸೆಕ್ಸ್ ನೀರು ಬಿಡುವ ಆಜ್ಞೆ ಯಾಕೆ ಹೊರಡಿಸುತ್ತಾರೆ
ಅನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಡಿಸೇಲ್ ಬೆಲೆ ಏರಿಕೆ, ಚಿಲ್ಲರೆ ವ್ಯಾಪಾರದಲ್ಲಿ ಎಫ್.ಡಿ.ಐ
ಅನುಮತಿಯಂತಹ ನಿರ್ಧಾರದಿಂದ ಕೆಲ ಮಿತ್ರ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿ ಕೇಂದ್ರ ಸರ್ಕಾರದ
ಅಸ್ತಿತ್ವವೇ ಅಲುಗಾಡುತ್ತಿದೆ. ಹೀಗಿರುವಾಗ ನ್ಯಾಯಸಮ್ಮತವಾದ ನಿಲುವು ತೆಗೆದುಕೊಂಡು ತಮಿಳುನಾಡು
ಕೇಳಿದಷ್ಟು ನೀರು ಬಿಡದಿರುವ ನಿಲುವಿಗೆ ಬಂದರೆ ಮಿತ್ರಪಕ್ಷ ಡಿ.ಎಮ್.ಕೆ ಬೆಂಬಲ ಹಿಂಪಡೆಯುವ
ಸಾಧ್ಯತೆ ಒಂದೆಡೆಯಾದರೆ, ಮುಂದಿನ ಚುನಾವಣೆಯ ನಂತರ ಎ.ಐ.ಎ.ಡಿ.ಎಮ್.ಕೆ ಜೊತೆ ಮೈತ್ರಿಗೆ ಅವಕಾಶದ
ಸಾಧ್ಯತೆ ಮಸುಕಾಗುವ ಅಪಾಯ ಇನ್ನೊಂದೆಡೆ ಇರುವಾಗ ಪ್ರಧಾನಿಗಳು ಅದು ಹೇಗೆ ಕರ್ನಾಟಕದ ಪರವಾದ
ನಿಲುವು ತಳೆಯಲು ಸಾಧ್ಯ?
ಇಂತಹ ರಾಜಕೀಯ ಮೇಲಾಟಗಳ ಲೆಕ್ಕಾಚಾರದ ಪ್ರಕಾರ ತಳೆಯುವ ನಿಲುವಿನ ಆಧಾರದ ಮೇಲೆ ನೀರು ಬಿಡಲೇಬೇಕು ಅನ್ನುವ ಕಟ್ಟುಪಾಡು ಉಂಟಾಗುವುದು ಸಮಾನತೆಯ ಆಧಾರದ ಮೇಲೆ ಕಟ್ಟಲ್ಪಟ್ಟ ಒಕ್ಕೂಟ ವ್ಯವಸ್ಥೆಯಲ್ಲಿ ಎಷ್ಟರ ಮಟ್ಟಿಗೆ ಸರಿಯಾದದ್ದು? ಹಾಗಿದ್ದರೆ ಇದಕ್ಕೇನು ಪರಿಹಾರ ಎಂದು ಕಾಣಲು ಹೊರಟರೆ ಕರ್ನಾಟಕದಲ್ಲೂ ತಮಿಳುನಾಡಿನಲ್ಲಿರುವಂತೆ ಪ್ರಾದೇಶಿಕ ಪಕ್ಷಗಳು ಹುಟ್ಟಿಕೊಳ್ಳುವುದೇ ಆಗಿದೆ ಅನ್ನಿಸದಿರದು. ಒಂದು ವೇಳೆ ಕರ್ನಾಟಕದಲ್ಲೂ ಒಂದು ಪ್ರಾದೇಶಿಕ ಪಕ್ಷವಿದ್ದು, ಅದಕ್ಕೊಂದು 20 ಜನ ಸಂಸತ್ ಸದಸ್ಯರ ಬಲವಿದ್ದಿದ್ದರೆ ಪ್ರಧಾನಿಯವರ ನಿಲುವು ಈಗಿರುವಂತೆಯೇ ಇರುತ್ತಿತ್ತೇ? ಮೈತ್ರಿಕೂಟದ ಸರ್ಕಾರಗಳೇ ಆಳ್ವಿಕೆ ಮಾಡುತ್ತಿರುವ, ಮುಂದೆಯೂ ಮಾಡುವ ಇವತ್ತಿನ ಸಂದರ್ಭದಲ್ಲಿ ಪ್ರಾದೇಶಿಕ ಪಕ್ಷಗಳ ಅಸ್ತಿತ್ವ ಇರುವ ನಾಡುಗಳು ಕೇಂದ್ರದಿಂದ ತನ್ನ ನಾಡಿಗೆ ಬೇಕಿರುವ ಅನುಕೂಲಗಳನ್ನು ಪಡೆದುಕೊಳ್ಳುತ್ತಿರುವುದನ್ನು ದಿನವೂ ನೋಡುತ್ತಿದ್ದೇವೆ. ಹಾಗೆಯೇ ಎಷ್ಟೇ ನಾಡ ಪರವಾಗಿದ್ದರೂ ಹೈಕಮಾಂಡ್ ಮಾತಿನ ಮುಂದೆ ಉಸಿರೆತ್ತಲಾಗದ ರಾಷ್ಟ್ರೀಯ ಪಕ್ಷಗಳಲ್ಲಿರುವ ನಮ್ಮ ನಾಯಕರ ಅಸಹಾಯಕತೆಯನ್ನು ನೋಡುತ್ತಿದ್ದೇವೆ. ಈ ವ್ಯವಸ್ಥೆ ಹೀಗೆಯೇ ಮುಂದುವರೆದಲ್ಲಿ ಪ್ರತಿ ಬಾರಿ ನಮ್ಮ ನಾಡಿನ ನೆಲ, ಜಲ, ನುಡಿ, ಬದುಕಿನ ಪ್ರಶ್ನೆಗಳು ಎದ್ದಾಗಲೂ ಕನ್ನಡಿಗರು ಬೀದಿ ಹೋರಾಟ, ಚಳುವಳಿ ಮಾಡುತ್ತಲೇ ಇರಬೇಕಾಗುತ್ತದೆ. ಆದರೆ ಅವುಗಳು ತುದಿ ಮುಟ್ಟುವ, ಶಾಶ್ವತವಾದ ಯಾವುದೇ ಪರಿಹಾರವನ್ನು ಕೊಡಲಾರವು.
ಹೀಗಿರುವಾಗ ಕರ್ನಾಟಕದ ಪರ, ರೈತ ಪರವಾದ ಪ್ರಬಲ ಸಂಘಟನೆಗಳು, ಅಪಾರ ಸಾಮರ್ಥ್ಯವಿದ್ದೂ ರಾಷ್ಟ್ರೀಯ ಪಕ್ಷಗಳಲ್ಲಿ ಕೇವಲ ಚುನಾವಣೆ ಫಂಡ್ಸ್ ತರುವಾಗ ಬೇಕಿದ್ದ, ಈಗ ಹೊರೆಯಾಗಿರುವ ರಾಜ್ಯದ ಹಲವು ಪ್ರಬಲ ನಾಯಕರು ಈ ಬಗ್ಗೆ ಚಿಂತಿಸಿ, ಸರಿಯಾದ ಪ್ರಾದೇಶಿಕ ಪಕ್ಷವೊಂದನ್ನು ಕಟ್ಟಿಕೊಳ್ಳುವತ್ತ ಮುನ್ನಡೆಯಬೇಕಿದೆ. ಒಮ್ಮೆ ಅಂತಹ ಪಕ್ಷ ಅಸ್ತಿತ್ವಕ್ಕೆ ಬಂದರೆ ಕರ್ನಾಟಕದಲ್ಲಿರುವ ಇತರ ರಾಷ್ಟ್ರೀಯ ಪಕ್ಷಗಳು ಕನ್ನಡ, ಕರ್ನಾಟಕದ ಪರವಾದ ನಿಲುವು ತಳೆಯುವ ಒತ್ತಡಕ್ಕೆ ಒಳಗಾಗುತ್ತಾರೆ ಅನ್ನುವುದರಲ್ಲಿ ಅನುಮಾನವಿಲ್ಲ ಮತ್ತು ಅಂತಹ ರಾಜಕೀಯ ಬಲವೊಂದಿದ್ದಾಗ ದೆಹಲಿಯಲ್ಲಿ ನಡೆಯುವ ರಾಜಿ-ಸಂಧಾನಗಳಲ್ಲೂ ನಾವು ಸರಿ ಸಮಾನವಾಗಿ ಧ್ವನಿ ಎತ್ತುವ, ನ್ಯಾಯ ತಂದುಕೊಳ್ಳುವ, ನಮ್ಮ ಹಿತಾಸಕ್ತಿ ಕಾಪಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಲಿವೆ. ಹಾಗಾಗಲಿ.

ಬುಧವಾರ, ಅಕ್ಟೋಬರ್ 7, 2009
ನೀನಾರಿಗಾದೆಯೋ ಓ ಕನ್ನಡಿಗ ?
ಉತ್ತರದ ನೆರೆ ನಾವೆಲ್ಲರೂ ಅಂದುಕೊಂಡದ್ದಕ್ಕಿಂತಲೂ ದೊಡ್ಡ ಮಟ್ಟದ ಹಾನಿ ಮಾಡಿದೆ. ೨೫ ಲಕ್ಷ ಹೆಕ್ಟೆರ್ ಭೂಮಿಯಲ್ಲಿನ ಬೆಳೆ ನಾಶವಾಗಿದೆ. ಭತ್ತ, ತೊಗರಿಬೆಳೆ, ಜೋಳ, ಈರುಳ್ಳಿ, ಕಬ್ಬಿನಂತಹ ದಿನ ನಿತ್ಯದ ಅಗತ್ಯಕ್ಕೆ ಬೇಕಾದ ಬೆಳೆಗಳನ್ನು ಬೆಳೆಯುತ್ತಿದ್ದ ಕಲಬುರ್ಗಿ, ಬಿಜಾಪುರ, ಬೆಳಗಾವಿ, ರಾಯಚೂರು, ಧಾರವಾಡದ ಹೆಚ್ಚು ಕಮ್ಮಿ ಎಲ್ಲ ತಾಲೂಕಿನಲ್ಲಿಯ ಬೆಳೆಯೂ ಸಂಪೂರ್ಣ ನಾಶವಾಗಿದೆ. ಮನೆ, ಮಠ, ಹಸು-ಕರು ಹೀಗೆ ತನ್ನದೆಂದು ಇದ್ದ ಎಲ್ಲವನ್ನು ಕಳೆದುಕೊಂಡು ಬಾಳಿನ ಬೆಳಕೇ ಆರಿ ಹೋದಂತೆ ಕುಳಿತಿದ್ದಾನೆ ಅಲ್ಲಿನ ಕನ್ನಡಿಗ. ಮುಂದೇನು ಎಂಬ ದಾರಿ ಕಾಣದೇ ಆತಂಕದ ಮಡುವಿನಲ್ಲಿ ತಲೆ ಮೇಲೆ ಕೈ ಹೊತ್ತು ಕುಳಿತಿರುವ ಆತನ ಸಹಾಯಕ್ಕೆ ಧಾವಿಸದಷ್ಟು ಕಟುಕ ಮನಸ್ಸು ಕನ್ನಡಿಗನದಾ?
ಬಿಹಾರದಲ್ಲೆಲ್ಲೋ ನೆರೆ ಬಂದರೆ, ಬೆಂಗಳೂರಿನ ಪ್ರತಿ ಕಂಪನಿಯಲ್ಲೂ ಪರಿಹಾರ ಸಂಗ್ರಹಿಸುವ ಕೆಲಸ ನಡೆಯುತ್ತೆ. ಎಷ್ಟೋ ಬಾರಿ ಅದನ್ನ ಕನ್ನಡಿಗನೇ ಮುಂದೆ ನಿಂತು ಮಾಡಿರುತ್ತಾನೆ. ತಮಿಳುನಾಡಲ್ಲಿ ಸುನಾಮಿ ಬಂದರೇ ಕನ್ನಡಿಗನೇ ಮುಂದೆ ನಿಂತು ಲಾರಿಯಲ್ಲಿ ಚಪಾತಿ ತುಂಬಿಕೊಂಡು ಹೋಗಿ ಅಲ್ಲಿನ ಸಂತ್ರಸ್ಥರ ಕಣ್ಣೀರು ಒರೆಸಲು ಮುಂದಾಗ್ತಾನೆ. ಓರಿಸ್ಸಾದಲ್ಲೆಲ್ಲೋ ಚಂಡಮಾರುತೆ ಬೀಸಿದರೆ, ಅಲ್ಲಿಗೆ ಕೂಡಲೇ ಧಾವಿಸಿ, ಅವರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗ್ತಾನೆ. ಇವತ್ತು ಅವನ ಮನೆಗೆ ಬೆಂಕಿ ಬಿದ್ದಿದೆ, ಉಕ್ಕಿ ಬಂದ ತುಂಗೆ, ಕೃಷ್ಣೆಯರ ಅಬ್ಬರಕ್ಕೆ ತನ್ನದೆಲ್ಲವನ್ನೂ ಕಳೆದುಕೊಂಡು ಬೀದಿಯಲ್ಲಿ ಬೆತ್ತಲಾಗಿ ನಿಂತಿರುವ ಉತ್ತರದ ತನ್ನ ಅಣ್ಣ-ತಮ್ಮಂದಿರ ನೆರವಿಗೆ ಆತ ಮುಂದಾಗುತ್ತಾನಾ? ಅಥವಾ ಈಗಲೂ ಮನೆಗೆ ಮಾರಿ, ಊರಿಗೆ ಉಪಕಾರಿ ಎಂಬಂತೆ ತನ್ನ ಪಾಡಿಗೆ ತಾನು ಇದ್ದು ಬಿಡ್ತಾನಾ?
ಏನ್ ಗುರು ಬ್ಲಾಗಿನಲ್ಲಿ ಬಂದ ಒಂದು ಕವನವನ್ನು ಇಲ್ಲಿ ಹಾಗೇ ಹಾಕ್ತಾ ಇದೀನಿ.
ಅಂದೊಮ್ಮೆ...
ಕಾರ್ಗಿಲ್ ಯುದ್ಧದಿ
ದಂಡಿನ ಮಂದಿ ಬಲಿಯಾದಾಗ
ಮರುಗಿದ ಕನ್ನಡ ಮನವೇ ...
ಹಿಂದೊಮ್ಮೆ ...
ಲಾಥೂರ್, ಕಿಲಾರಿಯಲ್ಲಿ,
ಕಛ್, ಭುಜ್‌ನಲ್ಲಿ,
ಗುಡುಗುಡುಗಿ ನೆಲನಡುಗಿ,
ಮನೆಮುರಿದಾಗ
ಮಿಡಿದ ಕನ್ನಡ ಮನವೇ ...
ನಿನ್ನೆ ...
ಸಾಗರದಲೆಗಳು ತಮಿಳು ತೀರದಲಿ
ಮೃತ್ಯು ನರ್ತನ ನಡೆಸಿರಲು,
ಧಿಗ್ಗನೆ ನೆರವಿಗೆ
ಧಾವಿಸಿದ ಕನ್ನಡ ಮನವೇ ...
ಮೆಚ್ಚಿ ತಲೆಬಾಗುವೆ
ನಿನ್ನ ರಾಷ್ಟ್ರೀಯ ಭಾವಕ್ಕೆ!
ಜಾತಿ ಭಾಷೆ ಮೀರಿದ
ನಿನ್ನ ಉದಾತ್ತತೆಗೆ!!
ನಿನ್ನೊಡಲ ದೇಶ ಪ್ರೇಮಕ್ಕೆ ...
ಇಂದು ...
ಸುರಿದ ಮಳೆಗೆ ಕೃಷ್ಣೆ ಉಕ್ಕಿಹುದು,
ಮಲಪ್ರಭೆ, ತುಂಗಭಧ್ರೆ ನುಗ್ಗಿಹುದು
ನಿನ್ನದೇ ಮನೆಯ ಒಳಗೆ ...
ನೆಲ, ಮನೆ, ದನಕರು
ಕಡೆಗೆ ಹೆತ್ತಕಂದಮ್ಮಗಳೂ ... ಕೃಷ್ಣಾರ್ಪಣ!!
ಇಂದು ...
ರಾಯಚೂರಾಗಿದೆ ಚೂರು ಚೂರು,
ಬಿಜಾಪುರದ ಗುಂಬಜ್‍ಗಳಲ್ಲಿ ಮಸಣಮೌನ,
ಕಾರವಾರದಿ ಮೈಮೇಲೆ ಮುರಿದು ಬಿದ್ದ ಗುಡ್ಡ!
ಕಮರಿದೆ ಕನಸು, ಮುರುಟಿದೆ ಮನಸು
ಬಟಾ ಬಯಲಾಗಿದೆ ಬದುಕು...
ಭೂಕಂಪಿತರಿಗೆ ಬಟ್ಟೆ
ಸೈನ್ಯದ ಜನಕೆ ಹಣ,
ಸುನಾಮಿ ಪೀಡಿತರಿಗೆ ಚಪಾತಿ ಅನ್ನ.
ನಿನ್ನಯ ಮನೆಯ ಜನಕ್ಕೆ ??
ಕಡೆ ಪಕ್ಷ ಒಂದು ಹನಿ ಕಣ್ಣೀರು ?
ಮನೆಗೆ ಮಾರಿ ಊರಿಗೆ ಉಪಕಾರಿ
ಇದು ಕನ್ನಡಿಗನ ನಿಜ ರೂಪವೆಂದು
ಬೆಚ್ಚಿಹಳು ಭುವನೇಶ್ವರಿ ...
ನಿನ್ನ ನಿರಭಿಮಾನ ನಿರ್ಲಜ್ಜತನ, ನಿನ್ನದೇ ಜನಗಳ
ಕಷ್ಟಕಾಲದಲ್ಲೂ ತಟಸ್ಥವಾಗಿಹ ನಿನ್ನ ಗುಣ,
ಮೈಮನ ತುಂಬಿಹ ನಿರ್ವಿಣ್ಣತೆ
ನಿನ್ನಂತಹ ಮಕ್ಕಳನ್ನು ಹಡೆದವ್ವೆ ಧನ್ಯ !!!
ಅಳಿಸು ಈ ಕೆಟ್ಟಹೆಸರನಿಂದು ಗೆಳೆಯಾ,
ಇದು ನಮ್ಮವರ ಕಣ್ಣೊರೆಸೆ ಮುನ್ನುಗ್ಗೊ ಸಮಯಾ!
ಮುಂದಾಗು ಕನ್ನಡದ ಮನೆಯ ಮತ್ತೆ ಕಟ್ಟಲು,
ಕನ್ನಡ ರಾಜರಾಜೇಶ್ವರಿಯ ಋಣ ತೀರಿಸಲು!! ಸೋಮವಾರ, ಅಕ್ಟೋಬರ್ 5, 2009
ಇದಕ್ಕೆಲ್ಲ ಕೊನೆ ಎಂದು ?
ಕರ್ನಾಟಕದ ೧೫ಕ್ಕೂ ಹೆಚ್ಚು ಜಿಲ್ಲೆಗಳು ಹಿಂದೆಂದೂ ಕೇಳರಿಯದ ರೀತಿಯಲ್ಲಿ ನೆರೆಗೆ ತುತ್ತಾಗಿದ್ದು, ಜನ ಮನೆ ಮಠ ಎಲ್ಲ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಅವರ ನೆರವಿಗೆ ತಕ್ಷಣ ಸ್ಪಂದಿಸಬೇಕಾಗಿದ್ದ ರಾಜ್ಯ ಸರ್ಕಾರ ಸುತ್ತೂರು ಮಠದಲ್ಲಿ ಜನಗಳ ಸೇವೆ ಮಾಡೋದು ಹೇಗೆ ಅಂತ ಪಾಠ ಕಲಿತಾ ಇದ್ರಂತೆ. ನೆರೆ ಪೀಡಿತ ಜನರ ನೆರವಿಗೆ ಧಾವಿಸಿ, ಅವರ ಕಣ್ಣೀರು ಒರೆಸೋ practical ಕೆಲಸ ಮಾಡೋದು ಬಿಟ್ಟು, ಅದೇ ಜನಗಳ ಕಷ್ಟ ನಿವಾರಿಸೋದು ಹೇಗೆ ಅಂತ theory ಕಲಿತೀನಿ ಅಂತ ಮಠದಲ್ಲಿ ಕೂತ ಸರ್ಕಾರ, ಜನರ ನೆರವಿಗೆ ಧಾವಿಸೋ ಹೊತ್ತಿಗೆ ಅಲ್ಲಾಗಲೇ ೧೮೦ಕ್ಕೂ ಹೆಚ್ಚು ಜನರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಅಕಾಲಿಕ ಸಾವಿಗೀಡಾದ ನಮ್ಮ ಅಣ್ಣ-ತಮ್ಮ-ಅಕ್ಕ-ತಂಗಿಯರ ಆತ್ಮಕ್ಕೆ ಶಾಂತಿಸಿಗಲಿ ಎಂದು ಪ್ರಾರ್ಥಿಸೋಣ.
ಇದೇ ವೇಳೆ, ಕೇಂದ್ರದಲ್ಲಿರುವ ಸರ್ಕಾರ ಕರ್ನಾಟಕದ ಬಗ್ಗೆ ತನಗಿರುವ ಮಲತಾಯಿ ಧೋರಣೆಯನ್ನು ಹೇಗೆ ಮುಂದುವರೆಸಿದೆ ಅನ್ನೋದನ್ನ ಇವತ್ತಿನ DNA ಮತ್ತು ಕನ್ನಡ ಪ್ರಭ ಪತ್ರಿಕೆಗಳ ವರದಿಗಳು ಹೇಳುತ್ತಿವೆ.
ಅಲ್ಲಾ, ಇಂತಹ ಹೊತ್ತಲ್ಲೂ ಇವರಿಗೆ ರಾಜಕೀಯ ಲಾಭದ್ದೇ ಚಿಂತೆ ಅಂದ್ರೆ ಏನ್ ಹೇಳಬೇಕು. ರಾಜ್ಯದಲ್ಲಿ ೧೫ಕ್ಕೂ ಹೆಚ್ಚು ಜಿಲ್ಲೆಗಳು ನೆರೆಗೆ ತುತ್ತಾಗಿರುವುದು, ೧೮೦ಕ್ಕೂ ಹೆಚ್ಚು ಜನ ಸಾವೀಗಿಡಾಗಿ, ಆಂಧ್ರಕ್ಕಿಂತ ಅತಿ ಹೆಚ್ಚಿನ ನಷ್ಟ ಇಲ್ಲಿ ಆಗಿರುವ data ಕಣ್ಣ ಮುಂದೆ ಇದ್ದರೂ, ಆಂಧ್ರಕ್ಕೆ ಎಲ್ಲ ರೀತಿಯ ನೆರವು, ಕರ್ನಾಟಕಕ್ಕೆ ಬೇಕೋ ಬೇಡವೋ ಅನ್ನೋ ರೀತಿಯ ನೆರವು ಕೊಡ್ತಾ ಇರೋದನ್ನ ನೋಡಿದಾಗ, ರಾಷ್ಟ್ರೀಯ ಪಕ್ಷಗಳಿಗೆ ಕರ್ನಾಟಕ, ಕನ್ನಡಿಗರ ಹಿತದ ಬಗ್ಗೆ ಅದೇಷ್ಟು ಕಾಳಜಿ ಇದೆ ಅನ್ನುವುದು ಗೊತ್ತಾಗಲ್ವ? ಇದೇ ಬಿ.ಜೆ.ಪಿ ಸರ್ಕಾರ ಕೇಂದ್ರದಲ್ಲಿದ್ದಿದ್ದರೆ ಪರಿಸ್ಥಿತಿ ಬೇರೆಯಾಗೇನು ಇರುತ್ತಿರಲಿಲ್ಲ. ಅವರ ಸರ್ಕಾರಕ್ಕೆ ಆಂಧ್ರದಿಂದ ಯಾರು ಸಪೋರ್ಟ್ ಕೊಡುತ್ತಿದ್ದರೋ, ಅವರ ಅಣತಿಯಂತೆ ಅವರಿಗೆ ಹೆಚ್ಚಿನ ನೆರವು ಸಿಗುತಿತ್ತು. ಕರ್ನಾಟಕಕ್ಕೆ ಯಾವತ್ತು ಚೊಂಬೇ ಗತಿ. ಇದಕ್ಕೆಲ್ಲ ಪರಿಹಾರವೆಂದರೆ, ಕರ್ನಾಟಕದ ಹಿತ ಕಾಯಬಲ್ಲ ಪ್ರಾದೇಶಿಕ ಪಕ್ಷವೊಂದರ ಉದಯ. ಅದು ಆಗೋವರೆಗೂ ಇಂತಹ ಅನ್ಯಾಯ, ಅಸಡ್ಡೆಗಳಿಗೆ ಕೊನೆಯಿಲ್ಲ ಅನ್ನಿಸುತ್ತೆ. ನೀವೇನ್ ಅಂತೀರಾ?

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)