ಆಪಲ್ ಕಂಪನಿಯ ಐ-ಪಾಡ್, ಐ-ಫೋನ್, ಐ-ಮ್ಯಾಕ್ ಗಳ ಮೂಲಕ ಇಡೀ ಜಗತ್ತನ್ನೇ ಬೆರಗುಗೊಳಿಸಿದ ಅದರ CEO ಸ್ಟೀವ್ ಜಾಬ್ಸ್ ಈ ದಶಕ ಕಂಡ ಅತ್ಯುತ್ತಮ CEO ಅನ್ನುವ ಬಿರುದಿಗೆ ಪಾತ್ರವಾಗಿದ್ದಾರೆ. ಸಂಗೀತ ಕೇಳೊದು, ಫೋನ್ ಬಳಸೋದು, ಕಂಪ್ಯೂಟರ್ ಬಳಸೋದು,, ಹೀಗೆ ಎಲ್ಲ ಕೆಲಸದಲ್ಲೂ The Best ಅನ್ನುವ ಅನುಭವ ಕೊಡುವಂತಹ ಉಪಕರಣಗಳನ್ನು ರೂಪಿಸಿದ, ಆ ಮೂಲಕ ಆಪಲ್ ಕಂಪನಿಯನ್ನು ಎಂತಹ ರಿಸೆಶನ್ ನ ಅವಧಿಯಲ್ಲೂ ಲಾಭದ ಹಾದಿಯಲ್ಲಿ ನಡೆಯುವಂತೆ ನೋಡಿಕೊಂಡ ಜಾಬ್ಸ್ ಅವರಿಗೆ ಈ ಬಿರುದು ನಿಜಕ್ಕೂ ಸೂಕ್ತ ಅನ್ನಿಸುತ್ತೆ. He deserves every bit of it !.
ಸ್ಟೀವ್ ಜಾಬ್ಸ್ ಅವರಿಂದ ಕನ್ನಡಿಗರೆಲ್ಲರೂ ಕಲಿಲೇಬೇಕಾದ ಒಂದು ಗುಣವಿದೆ ಅಂತ ನನಗನ್ನಿಸೋದು. ಅದೇನಪ್ಪ ಅಂತಾದ್ದು ಅಂತ ಅಚ್ಚರಿ ಪಡಬೇಡಿ. ಜೀವನದ ಎಂತಹ ಕಷ್ಟದ ಸ್ಥಿತಿಯಲ್ಲೂ ಅಳುಕದೇ, ಛಲದಿಂದ ಮುನ್ನುಗಬೇಕು, ಆ ಮೂಲಕ ಜಗತ್ತು ಬೆರಗಾಗುವಂತಹ ಸಾಧನೆ ಮಾಡಬೇಕು, ಒಟ್ಟಾರೆ, ಛಲ ಬಿಡದವನಿಗೆ ಗೆಲುವು ಕಟ್ಟಿಟ್ಟದ್ದು ಅನ್ನುವುದೇ ಆ ಗುಣ ಅನ್ನೋದು ನನ್ನ ಅನಿಸಿಕೆ. ಜಗತ್ತಿನ ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಸ್ಟಾನ್ ಫರ್ಡ್ ಯುನಿವರ್ಸಿಟಿಯ ಕನವೊಕೇಶನ್ ನಲ್ಲಿ ಅವರು ನೀಡಿದ ಒಂದು ಭಾಷಣ ಇಲ್ಲಿದೆ. ಇಲ್ಲಿ ಅವರು ತಮ್ಮ ಜೀವನದಲ್ಲಿ ಬಂದ ಕಷ್ಟ, ಅವಮಾನ, ಅದನ್ನೆದುರಿಸಿದ ರೀತಿ, ಮತ್ತೆ ಗೆಲುವು ಪಡೆದ ಬಗೆ, ಹೀಗೆ ಎಲ್ಲವನ್ನೂ ಮನಸಿಗೆ ಆಪ್ತ ಎನ್ನಿಸುವಂತೆ ವಿವರಿಸಿದ್ದಾರೆ. ಯಾವಾಗ ಕೇಳಿದರೂ, ಮೈ ಮನದಲ್ಲಿ ಹೊಸ ಉತ್ಸಾಹ ಮೂಡುವಂತೆ ಮಾಡುವ ಈ ಭಾಷಣ ನಿಜಕ್ಕೂ ಸಕತ್ inspiring !
ಒಂದು ಜನಾಂಗ ಉದ್ಧಾರ ಆಗುವಲ್ಲಿ ಒಗ್ಗಟ್ಟು ಎಷ್ಟು ಮುಖ್ಯವೋ, ಸಾಧಿಸಬೇಕೆನ್ನುವ ಛಲವು ಅಷ್ಟೇ ಮುಖ್ಯ. ಏನಂತೀರಾ ಗೆಳೆಯರೇ?
howdhu Vasanth ;) idhu nammeyalla kannadigaru kalibeku. Namma kannadigaru ega yedhidare ..thumba santoshada vishaya :)
ಪ್ರತ್ಯುತ್ತರಅಳಿಸಿI'm Rashmi.
ಪ್ರತ್ಯುತ್ತರಅಳಿಸಿIts really inspiring article.
Thanks for such nice article.
ಪ್ರದೀಪ್, ರಶ್ಮಿ ಅವರೇ,
ಪ್ರತ್ಯುತ್ತರಅಳಿಸಿನಿಮ್ಮ ಪ್ರತಿಕ್ರಿಯೆಗೆ ವಂದನೆಗಳು :)
bahaLa chennaagide..upload maaDiddakke dhanyavaadagaLu..eMthavarannU huriduMbisuvantaha bhaaShaNa..
ಪ್ರತ್ಯುತ್ತರಅಳಿಸಿ