ಭಾನುವಾರ, ಜನವರಿ 31, 2010

ನಮ್ಮ ಹುಡುಗ್ರು ಯಾರಿಗೂ ಕಮ್ಮಿ ಇಲ್ಲ !

ಇವತ್ತು ಜೀ ಕನ್ನಡದಲ್ಲಿ ಬರುವ ಸರೆಗಮಪ ಹಾಡಿನ ಸ್ಪರ್ಧೆ ನೋಡ್ತಾ ಇದ್ದೆ. ಇದೇ ಸಂದರ್ಭದಲ್ಲಿ ತಮ್ಮ ಮುಂದಿನ ಚಿತ್ರ "ಜಸ್ಟ್ ಮಾತ್ ಮಾತಲ್ಲಿ" ನ promote ಮಾಡಲು ಸುದೀಪ್, ರಘು ದೀಕ್ಷಿತ್ ವಿಶೇಷ ಅತಿಥಿಗಳಾಗಿ ಬಂದಿದ್ರು. ನನಗೆ ತುಂಬಾ ಖುಶಿ ಅನ್ನಿಸಿದ ವಿಷಯಗಳಲ್ಲಿ ಇದು ಒಂದು. ಬರೀ ಚಿತ್ರ ಮಾಡಿ, ಸರಿಯಾಗಿ promote ಮಾಡದೇ ಇರೋದ್ರಿಂದಲೇ ಅದೆಷ್ಟೋ ಒಳ್ಳೆಯ ಕನ್ನಡ ಚಿತ್ರಗಳು ನೆಲಕ್ಕಚ್ಚುತ್ತವೆ. ಅಂತಾದ್ರಲ್ಲಿ "ಜಸ್ಟ್ ಮಾತ್ ಮಾತಲ್ಲಿ" ಗಾಗಿ ಸುದೀಪ್, ಮಳೆಯಲಿ ಜೊತೆಯಲಿ ಚಿತ್ರಕ್ಕಾಗಿ ಗಣೇಶ್ ಮಾಡಿದ ಪ್ರಚಾರ ನಿಜಕ್ಕೂ ಉದ್ಯಮದ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯ ಹೆಜ್ಜೆ. ಮಳೆಯಲಿ ಜೊತೆಯಲಿ ಚೆನ್ನಾಗಿ ಓಡುತ್ತಿರುವುದಕ್ಕೆ, ಗಣೇಶ ಪ್ರಚಾರಕ್ಕಾಗಿ ಪಟ್ಟ ಶ್ರಮ ಕೂಡಾ ಒಂದು ಕಾರಣ ಅನ್ನಬಹುದು.


ನಮ್ಮ ಹುಡುಗ್ರು ಯಾರಿಗೂ ಕಮ್ಮಿ ಇಲ್ಲ !
ಅದಿರಲಿ, ಈ ಕಾರ್ಯಕ್ರಮದಲ್ಲಿ ಸುದೀಪ್ ನನಗೆ ಇಷ್ಟ ಆಗಿದ್ದು ಇನ್ನೊಂದು ಬೇರೆ ಕಾರಣಕ್ಕೆ. "ಮರುಭೂಮಿ ಹೂವು ಅರಳೋ ಹುಚ್ಚು ಕನಸಾ ಕಂಡೆ" ಅನ್ನೋ ಸಕತ್ ಹಾಡೊಂದನ್ನ ಜಸ್ಟ್ ಮಾತ್ ಮಾತಲ್ಲಿ ಚಿತ್ರದಲ್ಲಿ ರಾಜೇಶ್ ಕೃಷ್ಣನ್ ಹಾಡಿದ್ದಾರೆ. ಸ್ಪರ್ಧೆಯಲ್ಲಿ ಒಬ್ಬ ಈ ಹಾಡನ್ನು ಹಾಡಿದಾಗ, ರಾಜೇಶ್ ಮಾತಾಡಿ " ಇಂತಹ ಹಾಡು ನನ್ ಕೈಲೂ ಹಾಡೋಕೆ ಆಗ್ತಿರಲಿಲ್ಲ, It's a different genre song. ಆದ್ರೆ ರಘು ಹಾಡಿಸಿದ್ರು" ಅಂತಾ ಹೇಳಿದ್ರು. ಆಗ ಮಾತಾಡಿದ ಸುದೀಪ್ " ರಾಜೇಶ್, ನಿಮ್ಮಲ್ಲಿರೋ ಸಾಮರ್ಥ್ಯ ನಿಮಗೆ ಗೊತ್ತಿಲ್ಲ. ನಿಮ್ಮ ಸಾಮರ್ಥ್ಯನಾ underestimate ಮಾಡಬೇಡಿ. ಕನ್ನಡದ ಗಾಯಕರು ಯಾರಿಗೂ ಕಮ್ಮಿ ಇಲ್ಲ. ಹೊರಗಿನಿಂದ ಬಂದ ಯಾವ ಗಾಯಕನೂ ಕನ್ನಡದ ಗಾಯಕನ feel ಕೊಡಲಾರ, ಆದ್ರೆ ನಾವು ನಮ್ಮನ್ನ ಸರಿಯಾಗಿ promote ಮಾಡಿಕೊಳ್ಳದೇ ಇರೋದ್ರಿಂದಲೇ ಇವತ್ತು ಹೊರಗಿನವರು ನಮ್ಮ ಮಾರುಕಟ್ಟೆಯಲ್ಲಿ ಮಿಂಚುತ್ತಾ  ಇರೋದು, ಕನ್ನಡದ ಗಾಯಕರು ಇದರ ಬಗ್ಗೆ ಗಮನ ಕೊಡಬೇಕು" ಅನ್ನೋ ಸಂದೇಶ ಕೊಟ್ರು. ಇದು ನಿಜಕ್ಕೂ ಸಕತ್ ಒಳ್ಳೆಯ ಮಾತು. We should become more market savvy. We should not hesitate to promote ourselves.

ನಮ್ಮನ್ನ ನಾವು promote ಮಾಡ್ಕೋಬೇಕು
ರಾಜೇಶ್ ಕೃಷ್ಣನ್ ಈ ದಶಕ ಕಂಡ ಅದ್ಭುತ ಗಾಯಕರಲ್ಲಿ ಒಬ್ಬ. ಕರ್ನಾಟಕದ ಉದ್ದಗಲಕ್ಕೂ ಸಿಕ್ಕಾಪಟ್ಟೆ ಫ್ಯಾನ್ಸ್ ಇರೋ ಗಾಯಕ. ಇಷ್ಟೆಲ್ಲಾ ಜನಪ್ರಿಯತೆ ಇರೋ ಇವರು ತಮ್ಮನ್ನು ಒಂದು ಬ್ರಾಂಡ್ ತರಹ ಪ್ರಮೋಟ್ ಮಾಡಿಕೊಂಡಿದ್ದಾರಾ? ಖಂಡಿತ ಇಲ್ಲ ಅನ್ನಬಹುದು. ರಾಜ್ಯದ ಅಸಂಖ್ಯಾತ ಶಾಲೆ-ಕಾಲೇಜುಗಳಲ್ಲಿ ನಡೆಯೋ ಫೆಸ್ಟ್, ಹಲವು ದೊಡ್ಡ ಪಟ್ಟಣಗಳಲ್ಲಿ ನಡೆಯೋ ದಸರೆ, ದೀಪಾವಳಿ ಉತ್ಸವ, ಹೀಗೆ ಇಲ್ಲೆಲ್ಲ ಕನ್ನಡದ ಗಾಯಕರು, ಸಂಗೀತ ನಿರ್ದೇಶಕರು ತಮ್ಮ concerts, music shows ಗಳನ್ನು ಆಯೋಜಿಸಿ, ತಮ್ಮ ಬ್ರಾಂಡ್ ಕಟ್ಟಿಕೊಳ್ಳಬೇಕು. ಇವರು ಇದನ್ನ ಮಾಡದೇ ಇರೋದ್ರಿಂದಲೇ, ಇವತ್ತು ಅಲ್ಲೆಲ್ಲ ಬಾಲಿವುಡ್ ಗಾಯಕರು ಬಂದು, ಹಿಂದಿ ಮೆರೆಸೋ ಕೆಲಸ ನಡಿತಿದೆ.

ಕನ್ನಡದಿಂದ ದುಡ್ಡು, ಹೆಸರು ಎಲ್ಲಾ ಮಾಡ್ಕೊಬೇಕು
ನಮ್ಮವರು ತಮ್ಮನ್ನು promote ಮಾಡ್ಕೊಳ್ಳೋದು ತಪ್ಪೇನೋ, ಆದಷ್ಟು ಎಲೆಮರೆಕಾಯಿಯಂತೆ ಇರಬೇಕು ಅನ್ನೋ ರೀತಿಲಿ ವರ್ತಿಸುತ್ತಾರೆ (ಇದಕ್ಕೆ ಅಪವಾದವೆಂಬಂತೆ ಇರೋರು ರಘು ದೀಕ್ಷಿತ್ ಒಬ್ರೇ ಅನ್ಸುತ್ತೆ. ಅವರನ್ನ ಈ ವಿಷಯಕ್ಕೆ ನಿಜಕ್ಕೂ ಮೆಚ್ಚಬೇಕು). ಆದ್ರೆ ಸೋನು ನಿಗಮ್ ಅವರನ್ನ ನೊಡಿ, ಆತನ ಕನ್ನಡ ಹಾಡುಗಳಿಗೆ ಕನ್ನಡಿಗರು ಕೊಟ್ಟ ಪ್ರೀತಿ ವಿಶ್ವಾಸಕ್ಕೆ ಪ್ರತಿಯಾಗಿ ಕಾಣಿಕೆಯಾಗಿ ಕೊಟ್ಟ "ನೀನೇ ಬರೀ ನೀನೇ" ಅಲ್ಬಮ್ ಗಾಗಿ ತಗೊಂಡಿದ್ದು ಕೇವಲ ಒಂದು ಕೋಟಿಯಂತೆ ಅನ್ನೋ ಸುದ್ದಿ ಕೆಲ ತಿಂಗಳ ಹಿಂದೆ ಓದಿದ್ದ ನೆನಪು. ದುಡ್ಡು ತಗೊಂಡು, ತಮ್ಮನ್ನ ಮಾಧ್ಯಮದಲ್ಲೂ ಚೆನ್ನಾಗಿ promote ಮಾಡಿಕೊಳ್ಳೊ ಬಾಲಿವುಡ್ ಗಾಯಕರ ಕಲೆ ಕನ್ನಡದ ಗಾಯಕರಲ್ಲೂ ಬರ್ಬೇಕು. ಕನ್ನಡದಿಂದ ಚೆನ್ನಾಗಿ ದುಡ್ದು, ಖ್ಯಾತಿ ಎಲ್ಲಾನೂ ಗಳಿಸಿಕೊಳ್ಳಬಹುದು, ಆದ್ರೆ ನಮ್ಮ ಗಾಯಕರು, ಸಂಗೀತಗಾರರು ಆ ಬಗ್ಗೆ ಯೋಚ್ನೆ ಮಾಡಬೇಕಷ್ಟೇ. ನಿಮಗೇನ್ ಅನ್ಸುತ್ತೆ ಗೆಳೆಯರೇ?

12 ಕಾಮೆಂಟ್‌ಗಳು:

 1. Manjunath Shanubhoganahalli... Hudu nivu helodralli sathya ede ..

  ಪ್ರತ್ಯುತ್ತರಅಳಿಸಿ
 2. Howdu! Vasanth,

  Ninna neenu mareterenu sukhavide tanna tanava toredarenu palavide andange.

  Ellaru ella kshetradalli avaravara swantikeyanna ulisikondu balistavagi gurutisikollabeku.

  ಪ್ರತ್ಯುತ್ತರಅಳಿಸಿ
 3. kavya gurunath...
  definitely sir....neevu heliddu aksharasaha sathya..RAJESH KRISHNAN obba bahala adhbuthavada singer....he s a great individual too....antavaranna namma industry sariyagi nadskollalilla ishtu dina...atleast now people should support such truely talented kannada singers wholeheartedly instead of crazily following the bollywood crowd!!!!!!!!

  ಪ್ರತ್ಯುತ್ತರಅಳಿಸಿ
 4. rajesh krishnan concerts koduttare, i had seen him in gubbi eng. college

  ಪ್ರತ್ಯುತ್ತರಅಳಿಸಿ
 5. ವಸಂತ್ ಅವರೇ,

  ನಾನು ಕೂಡ ಈ ಕಂತಿನ ಸರಿಗಮಪ ನೋಡಿದೆ. ಸುದೀಪ್ ಮಾತನಾಡಿದಾಗ ನನಗೂ ತುಂಬ ಖುಷಿಯಾಯಿತು. ನಮ್ಮ ಗಾಯಕರು ಯಾವುದರಲ್ಲೂ ಕಮ್ಮಿ ಇಲ್ಲ. ಆದರೆ ಎಲ್ಲೋ ಒಂದು ಕಡೆ ಅವರ ವರ್ತನೆಯಿಂದ ಹಿಂದೆ ಬೀಳುತ್ತಿದ್ದಾರೇನೋ ಅನ್ನಿಸುತ್ತಿದೆ. ಹಿಂದೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಹೀಗೆ ಪ್ರಕಟವಾಗಿತ್ತು "ರಾಜೇಶ್ ಕೃಷ್ನನ್ ಅವರಿಗೆ ಕರೆ ಮಾಡಿದರೆ, ಇವತ್ತು ನಾಳೆ ಅಂತ ಹೇಳುತ್ತಾರೆ ಅಥವ ಫೋನನ್ನು ತೆಗೆಯೋದೇ ಇಲ್ಲವೆಂದು". ಅದು ಎಷ್ಟರ ಮಟ್ಟಿಗೆ ಸತ್ಯವೆನ್ನು ವಿಚಾರ ನನಗೆ ತಿಳಿದಿಲ್ಲ.

  ಪ್ರತ್ಯುತ್ತರಅಳಿಸಿ
 6. Naanu Deepakraj, mangloorina bajaj allianz nalli kelasa, vishaya enappa antandre, yaake naavu, bollywood, sandalwood anta taaratamya madbeku, ellaru nammavre alve? naavella ondu, ondagiye irona, just a feel, aytaa..

  ಪ್ರತ್ಯುತ್ತರಅಳಿಸಿ
 7. ದೀಪಕ್ ರಾಜ್ ಅವರೇ,
  ತಾರತಮ್ಯದ ಪಾಠ ಹೋಗಿ ಬಾಲಿವುಡ್ ನಲ್ಲಿ ಮಾಡಿ. ದಕ್ಷಿಣ ಭಾರತದ ಕಲಾವಿದರನ್ನ ಅವರು ಹೇಗೆ ನಡೆಸಿಕೊಳ್ಳುತ್ತಾರೆ ಅನ್ನೋದು ನಿಮಗೆ ಗೊತ್ತಿಲ್ಲ ಅನ್ನಿಸುತ್ತೆ. ಸೋನು ನಿಗಮ್ ಇಲ್ಲಿ ಬಂದು ತಪ್ಪು ತಪ್ಪಾಗಿ ಹಾಡಿದ್ರೂ, ಅಡ್ಜಸ್ಟ್ ಮಾಡಿಕೊಂಡು ಕೇಳುವವರು ಕನ್ನಡಿಗರು, ಆದ್ರೆ ನಮ್ಮ ರಾಜೇಶ್ ಕೃಷ್ಣನ್ ಹಿಂದಿ ಚಿತ್ರವೊಂದರಲ್ಲಿ ಹಾಡಲು ಹೋದಾಗ ನಿನ್ನ ಹಿಂದಿ ಉಚ್ಚರಣೆ ಸರಿ ಇಲ್ಲ ಎಂದು ವಾಪಸ್ಸು ಕಳಿಸಿದ್ದರು. ತಾರತಮ್ಯವೊಂದೇ ಅಲ್ಲ, ಹಿಂದಿ ಚಿತ್ರರಂಗದ ಉದ್ದೇಶವೇ ಭಾರತದ ಬೇರೆಲ್ಲ ಭಾಷೆಗಳನ್ನು ನುಂಗಿ ತನ್ನದೊಂದೇ ಅಧಿಪತ್ಯ ಸ್ಥಾಪಿಸುವುದು. ಇದಕ್ಕೆ ಉದಾಹರಣೆ ಬೇಕೆಂದರೆ ಮರಾಠಿ, ಪಂಜಾಬಿ, ಗುಜರಾತಿ, ರಾಜಸ್ಥಾನಿ ಹೀಗೆ ಸಾಲು ಸಾಲು ಭಾಷೆಗಳ ಚಿತ್ರರಂಗ ಸಿಗುತ್ತೆ. ಅವೆಲ್ಲ ಬೆಳೆಯದಿರುವುದಕ್ಕೆ ಕಾರಣವೇ ಹಿಂದಿ ಚಿತ್ರರಂಗ. ಆ ಎಲ್ಲ ಭಾಷೆಗಳ ಚಿತ್ರರಂಗವನ್ನು ನುಂಗಿ ಅಲ್ಲೆಲ್ಲ ಹಿಂದಿ ಸ್ಥಾಪಿಸಿ ಆಯ್ತು. ಈಗ ಇವರ ಕಣ್ಣು ದಕ್ಷಿಣ ಭಾರತದ ಮೇಲೆ ಬಿದ್ದಿದೆ. ಕರ್ನಾಟಕದಲ್ಲಿ ವಿತರಕರಿಗೆ ಕಡಿಮೆ ದರದಲ್ಲಿ ಸಿನೆಮಾ ಕೊಟ್ಟು, ಕನ್ನಡ ಚಿತ್ರಗಳನ್ನು ಒಕ್ಕಲೆಬ್ಬಿಸುತ್ತಿರುವುದು ಹಿಂದಿ ಚಿತ್ರರಂಗದವರೇ. ಘಜನಿ ಚಿತ್ರ ಬರಬೇಕಾದದ್ದು ಕೇವಲ ೨೧ ಸೆಂಟರ್ ಗಳಲ್ಲಿ, ಆದ್ರೆ ಎಲ್ಲ ನಿಯಮ ಮುರಿದು ೫೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೋರಿಸಿದರು.. ಚೆನ್ನಾಗಿ ಓಡುತ್ತಿದ್ದ ಸುಮಾರು ಕನ್ನಡ ಚಿತ್ರಗಳನ್ನು ಇದು ಒಂದೇ ಏಟಿಗೆ ನುಂಗಿ ನೀರು ಕುಡಿಯಿತು. ಇದನ್ನೆಲ್ಲ ಮೊದಲು ಅರ್ಥ ಮಾಡಿಕೊಳ್ಳಿ. ಆಮೇಲೆ ತಾರತಮ್ಯದ ಪಾಠ ಮಾಡಿ ಮೇಷ್ಟ್ರೆ..

  ಪ್ರತ್ಯುತ್ತರಅಳಿಸಿ
 8. @chitraprasca,
  ನಾನು ಕೂಡಾ ಈ ಮಾತು ಕೇಳಿದ್ದೇನೆ. ಎಷ್ಟು ನಿಜವೋ ಅರಿಯೆ.

  ಪ್ರತ್ಯುತ್ತರಅಳಿಸಿ
 9. ಒಂದು ಸಿನಿಮಾವನ್ನು ಪ್ರೊಮೋಟ್ ಮಾಡುವುದು ಎಷ್ಟು ಮುಖ್ಯ ಎಂದರೆ ನೀವು ಕೊಟ್ಟಿರುವ ಗಜನಿ ಚಿತ್ರದ ಉದಾಹರಣೆಯನ್ನು ತೆಗೆದುಕೊಳ್ಳಿ. ಯಾವುದೋ ಅರ್ಧ ಇಂಗ್ಲೀಷ್ ಅರ್ಧ ತೆಲುಗು ತಮಿಳು ಎಲ್ಲ ಚಿತ್ರಗಳನ್ನ ಮಿಕ್ಸ್ ಮಾಡಿ ಸ್ವಲ್ಪವೂ ಚೇನಾಗಿಲ್ಲದ ಚಿತ್ರ ಅದು. ನಾನು ಸಾಮಾನ್ಯವಾಗಿ ಹಿಂದಿ ಚಿತ್ರ ಅಥವಾ ಬೇರೆ ಭಾಷೆಯ ಚಿತ್ರಗಳನ್ನ ನೋಡುವುದು, ಸಿಕ್ಕಾಪಟ್ಟೆ ಚೆನ್ನಾಗಿದೆ ಅಂತ ರಿಪೋರ್ಟ್ ಬಂದ್ರೆ ಮಾತ್ರ. ಗಾಜಾನೀಯ ಪ್ರೊಮೋಷನ್ ನೋಡಿ ಸರಿ ಅಂತ ವಿಮಾನದಲ್ಲಿ ಬೇರೆ ಹಾಕಿದ್ದರು ಅಂತ ನೋಡಿದೆ. ಅಷ್ಟು ಅಸಹ್ಯವಾಗಿದೆ. ಸುಮ್ಮನೇ ಎಮ್ಮೆ ತರ ಮೈ ಬೆಳೆಸಿಕೊಂಡಿದಾನೆ ಅಷ್ಟೇ ಆ ಆಮೀರ್ ಖಾನ್. ಸ್ವಲ್ಪವೂ ಲಾಜಿಕ್ ಇಲ್ಲ, ಹೊಸದೇನು ಇಲ್ಲ. ೮೦ಸ್ ನಲ್ಲಿ ಬರುತ್ತಿದ್ದ ಕನ್ನಡ ಸಿನಿಮಾ ತರ ಇದೆ. ಹೆರೊವಿನ್ ಯಾವುದೋ ಗ್ಯಾಂಗಿನ ರೇಪ್ ಸಿಂ ನೋಡುತ್ತಲೇ, ಅವಳನ್ನವರು ಸಾಯಿಸುತ್ತಾರೆ ನಂತರ ಹೀರೋ ರಿವೇಂಜ್ ತಗೊಳುತಾಣೆ. ನಮ್ಮ ದೇವರಾಜ್ ಇತರ ಸಾವಿರ ಸಿನಿಮಾ ಮಾಡಿರಬಹುದೇನೋ. ಆದರೆ ಪ್ರಮೋಷನ್ ಒಂದರಿಂದ ಸಿನಿಮಾ ಸಿಕ್ಕಾಪಟ್ಟೆ ಓಡಿದೆ.

  ಪ್ರತ್ಯುತ್ತರಅಳಿಸಿ
 10. neevu ene anni, Sudeep obba hypocrite. thanna sparsha chitradinda, eegina just maath maathalliya varegu, avaru hindi gaayakarige maNe haakiddare.

  thamma swantha production just maath maathalli chitradalli avaru Shreya Ghoshal avara kaili haadisiddare.

  ಪ್ರತ್ಯುತ್ತರಅಳಿಸಿ
 11. Hi Vasant,

  Yes , neevu helodu tumbane sari. kannadadalli est jana olle gayakarilla heli Rajesh, archana.. adre sonu . shreya kannadada ganda gali gottilde iroru hatra hadistare.. nammavaru adakkinta chennagi hadtare.. promote madkololla aste..

  Thanks
  praveen

  ಪ್ರತ್ಯುತ್ತರಅಳಿಸಿ

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !