ಬುಧವಾರ, ಡಿಸೆಂಬರ್ 29, 2010

ABVP ಸಮಾವೇಶಕ್ಕೆ ಹಿಂದಿ ಬ್ಯಾನರ್ ಯಾಕೆ?

ಮೊನ್ನೆ ಬಸವನಗುಡಿಯ ಟಾಗೋರ್ ಸರ್ಕಲ್ ಬಳಿ ಹೋಗುವಾಗ ಈ ಬ್ಯಾನರ್ ಕಂಡಿತು. ಇದೇನಪ್ಪ ಇದು ಅಂತ ನೋಡಿದ್ರೆ, ಬೆಂಗಳೂರಿನಲ್ಲಿ ನಡೆಯುತ್ತಿರುವ ABVP ಯವರ ಯಾವುದೋ ವಿಧ್ಯಾರ್ಥಿ ಸಮಾವೇಶದ ಬ್ಯಾನರ್, ಅದು ಪೂರ್ತಿ ಹಿಂದಿಯಲ್ಲಿ !!. ಅಲ್ಲಲ್ಲಿ ಕನ್ನಡದಲ್ಲೂ ಬ್ಯಾನರ್ ಕಂಡಿದ್ದೆ, ಆದರೆ ಕರ್ನಾಟಕದಲ್ಲಿ ಹಿಂದಿ ಬ್ಯಾನರ್ ಯಾವ ಪುರುಷಾರ್ಥಕ್ಕಾಗಿ ಹಾಕಿದ್ದಾರೆ ಅಂತ ಗೊತ್ತಾಗಲಿಲ್ಲ.

ಎಲ್ಲ ಓಕೆ, ಹಿಂದಿ ಬ್ಯಾನರ್ ಯಾಕೆ?
ಸಮಾವೇಶ ಮಾಡೋದು, ಜನರನ್ನ ಸೇರಿಸೋದು, ತಮ್ಮ ನಿಲುವನ್ನ ಹೇಳಿಕೊಳ್ಳೊ ಅವಕಾಶ ಎಲ್ಲ ಸಂಘಟನೆಗಳಿಗೂ ಇದೆ. ಅದನ್ನೇ ABVPನೂ ಮಾಡಿದ್ರೆ ತಪ್ಪೇನಿಲ್ಲ, ಆದರೆ ಇದೇ ನೆಪದಲ್ಲಿ ಬೆಂಗಳೂರಲ್ಲಿ ಎಲ್ಲೆಡೆ ಹಿಂದಿ ಬ್ಯಾನರ್ ಹಾಕುವ ಉದ್ದೇಶವೇನು? ’ಹಿಂದಿ’ಗೂ ಬೆಂಗಳೂರಿಗೂ, ಇಲ್ಲವೇ ಕರ್ನಾಟಕಕ್ಕೂ ಏನ್ ಸಂಬಂಧ? ಸಮಾವೇಶಕ್ಕೆ ಬರೋ ಪರಭಾಷಿಕರಿಗಾಗಿ ಇಂಗ್ಲಿಷ್ ಅಲ್ಲಿ ಮಾಹಿತಿ, ಕನ್ನಡಿಗರಿಗಾಗಿ ಕನ್ನಡದಲ್ಲಿ ಮಾಹಿತಿ ಸಾಕಾಗಲ್ವಾ? ಅದ್ಯಾಕೆ ಬೇಡದಿದ್ದರೂ ’ಹಿಂದಿ’ನಾ ಕರ್ನಾಟಕಕ್ಕೆ ತೂರಿಸೋದು? ಇದೇ ಅಲ್ವಾ  ಹಿಂದಿ ಹೇರಿಕೆ ಅಂದರೆ ? ಹಿಂದಿ ರಾಷ್ಟ್ರ ಭಾಷೆ ಅನ್ನೋ ಸುಳ್ಳನ್ನೇ ಸಾವಿರದ ಒಂದನೇ ಸಾರಿ ಕನ್ನಡಿಗರ ತಲೆಗೆ ತುಂಬೋದು ಇದರ ಹಿಂದಿನ ಉದ್ದೇಶವಾ? ಪಾಟ್ನಾದಲ್ಲೋ, ಲಕ್ನೋದಲ್ಲೋ ನಡೆಯುವ ಸಮಾವೇಶದಲ್ಲೂ ಹೀಗೆ ಕನ್ನಡ ಬ್ಯಾನರ್ ಹಾಕ್ತಾರಾ? ನಿಜವಾದ ರಾಷ್ಟ್ರವಾದಿಗಳು ಅನ್ನೋರು ರಾಷ್ಟ್ರದ ಎಲ್ಲ ಭಾಷೆಗಳನ್ನು ಸಮಾನವಾಗಿ ಕಾಣಬೇಕಿತ್ತಲ್ವಾ? ಅದ್ಯಾಕೆ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಅನ್ನೋ ಧೋರಣೆ?   ಭಾರತದ ಭಾಷಾ ವೈವಿಧ್ಯತೆಯೇ ದೇಶದ ಏಕತೆಗೆ ಭಂಗ ತರುತ್ತಿರುವ ಅಂಶ, ಆದ್ದರಿಂದ ಅವೆಲ್ಲವನ್ನು ಗೌಣವಾಗಿಸಿ, ಹಿಂದಿಯೊಂದನ್ನೇ ದೇಶದ ಭಾಷೆ ಆಗಿಸಿ ಬಿಟ್ರೆ ದೇಶದಲ್ಲಿ ಏಕತೆ ತುಂಬಿ ತುಳುಕುತ್ತೆ ಅನ್ನೋ ಭ್ರಮೆಯಲ್ಲಿರುವವರಿಂದ ಇನ್ನೇನು ತಾನೇ ನಿರೀಕ್ಷಿಸಲಾದೀತು ಅನ್ನಿಸುತ್ತೆ.

10 ಕಾಮೆಂಟ್‌ಗಳು:

  1. ಹೆಸರು ಪ್ರಮೋದ,

    ಸಮಾವೇಶಕ್ಕೆ ಕನ್ನಡದಲ್ಲಿ ಬ್ಯಾನರ್ ಇದ್ದರೆ ತುಂಬಾ ಚೆಂದ ಆದರೆ ಹಿಂದಿ ತಪ್ಪು ಅಂತ ಹೇಳೋಕೆ ಆಗೋಲ್ಲ, ಪಾಟ್ನಾದಲ್ಲೋ, ಲಕ್ನೋದಲ್ಲೋ ನಡೆಯುವ ಸಮಾವೇಶದಲ್ಲೂ ಕನ್ನಡ ಬ್ಯಾನರ್ ಹಾಕದೆ ಇರಬೋದು ಆದರೆ ಹಿಂದಿ ಇದ್ದೇ ಇರುತ್ತೆ. ಆ ಸ್ತಳದಲ್ಲಿ ಹಿಂದಿ ಸ್ತಳೀಯ ಬಾಷೆ ಆದರೆ ಆಂಧ್ರ ಮುಂಬೈ ನಲ್ಲಿ ತೆಲಗು ಮರಠಿ ಜೊತೆಗೆ ಹಿಂದಿ ಇರಬೇಕು ಅಲ್ವಾ?

    ಪ್ರತ್ಯುತ್ತರಅಳಿಸಿ
  2. I wonder why you are so sick about Hindi and feels ok with English, both are languages for communiation

    ಪ್ರತ್ಯುತ್ತರಅಳಿಸಿ
  3. @shanks : Then, do you think Kannada is a language for automation and designing. That too is a language and its THE language of the region Karnataka. Why the hell should we learn HINDI for the benefit of North Indians. And, I firmly believe that People who can read Hindi in Karnataka can definitely read English.

    ಪ್ರತ್ಯುತ್ತರಅಳಿಸಿ
  4. ದೇಶದ ವೈವಿಧ್ಯತೆ ಬಗ್ಗೆ ಗೌರವ ಇದ್ದಂಗೆ ಕಾಣಲ್ಲ ಇವರಿಗೆ.
    ಇದ್ದಿದ್ರೆ, ಬೇರೆ ಭಾಷೆಗಳದ್ದೂ ಬ್ಯಾನರ್ ಹಾಕ್ತಿದ್ರು.
    ಬೇರೆ ಊರಲ್ಲಿ, ಎಬಿವಿಪಿ ಸಮಾವೇಶ ನಡೆದಾಗ ಅಲ್ಲಿ ಕನ್ನಡ ಬ್ಯಾನರ್ ಹಾಕ್ತಿದ್ರು.
    "ಹಿಂದಿಗೆ ಕೊಡೋ ಸ್ಥಾನ ಬೇರೆ ಭಾಷೆಗಳಿಗೆ ನೀಡಲ್ಲ" ಅನ್ನೋ ಸಂದೇಶ ಕೊಡ್ತಿರೋ ಹಂಗಿದೆ ಈ ಬ್ಯಾನರ್ ಮೂಲಕ.

    ಪ್ರತ್ಯುತ್ತರಅಳಿಸಿ
  5. @shanks

    If you think, communication is the sole purpose of the banner being in Hindi; then, I am sorry my friend, you are being grossly wrong.

    Why does ABVP want to hindify the banner when its hardly understood by handful. And as you say if the purpose was communication, then it should have been in Kannada rather ain't it?

    I am pretty sure its a mode to shove, yes shove Hindi into the throat of a Kannadiga.

    ಪ್ರತ್ಯುತ್ತರಅಳಿಸಿ
  6. ಪ್ರಮೋದ,

    ಯಾಕೆ ಹಿಂದಿಲೂ ಇರ್ಬೇಕು ಅಂತ ಹೇಳ್ತೀರಾ?
    ಹಿಂದಿ ಏನು ಹರಣ ಜಡೆಯಿಂದ, ಹರಿಯ ಅಡಿಯಿಂದ ಋಷಿಯ ತೊಡೆಯಿಂದ ನುಸುಳಿ ಬಂದ ನುಡಿಯೇ?

    ಇಂತಿ
    ರಮೇಶ ರಾವ್

    ಪ್ರತ್ಯುತ್ತರಅಳಿಸಿ
  7. They have got all the banners printed before, it seems they are just reusing that everywhere coz either the budget or time might not be there. I do not think its intentional. There is no reason to make this as an issue.

    ಪ್ರತ್ಯುತ್ತರಅಳಿಸಿ
  8. Manu,

    Is it that your are being funny when you are talking about budget constraints.

    or

    are you ignorant about ABVP is backed by BJP?

    And, i don't think there is dearth for money when there is surplus to give away to all the mathas (ಮಠ ) in Karnataka.

    Now again you are being funny by stating "They have got all the banners printed before"; It was a 56th National summit and it happens once in a year. I again don't think the banners are reusable :)

    http://www.facebook.com/pages/ABVP-Karnataka/149826085051304?v=wall

    Shows that National summit was decided well before November 29th 2010. Spare me god, I again don't think that 1 month is less sufficient for preparing banners.

    After all this, now do you agree that it was delibrate ;)

    ಪ್ರತ್ಯುತ್ತರಅಳಿಸಿ
  9. Nice article. Dont know Why this "akhil bhaarath" always needs to be equated with hindi ? Definitely there is hidden agenda of slowly imposing hindi on everybody.

    ಪ್ರತ್ಯುತ್ತರಅಳಿಸಿ
  10. Many schools in Karnataka have been hypnotized with Hindi as third language from 5th to 7th but have option to change from 8th. However, even after searching for many notifications in government web site did not provide any such information. But found an study report by Union HRD ministry that tells about 3rd languages (http://www.teindia.nic.in/mhrd/50yrsedu/u/47/3Y/473Y0Q01.htm ) of all states. Under Karnataka heading, it was specified that Hindi or Regional language or classical language or Alternate Hindi. So Hindi is not compulsory in Karnataka & parents have choice to take any language such as tulu, Konkani, Sanskrit, etc. However why our schools are insisting on parents to take Hindi only? Language is choice of parents & should not be enforced without providing an option. Most schools have Sanskrit teachers but they teach only from 8th standard. Learning a new language in 8th is not only difficult but also time consuming thus students lose focus subjects like science & maths. Moreover, Karnataka has adopted NCF syallabus, which is same as CSBE & ICSE. Both these central boards 3rd language exist till 8th only. Then why Karnataka has not adopted same policy as new core subjects like Science & Maths consume lots of time. Karanataka govt should fix this anomaly.

    ಪ್ರತ್ಯುತ್ತರಅಳಿಸಿ

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !