ಶುಕ್ರವಾರ, ಜನವರಿ 7, 2011

ಕನ್ನಡ ಮತ್ತು ಸಂಸ್ಕೃ’ತ’ ಇಲಾಖೆಯೇ?

ಸಂಸ್ಕೃತದಲ್ಲಿ ಅಡಗಿರುವ ಅರಿವನ್ನು ಹೆಚ್ಚು ಜನರಿಗೆ ಪರಿಚಯಿಸುವ ಉದ್ದೇಶದಿಂದ ಶುರುವಾದ ಸಂಸ್ಕೃತ ಭಾರತಿ ಸಂಸ್ಥೆ ಬೆಂಗಳೂರಿನಲ್ಲಿ ಸಂಸ್ಕೃತ ಪುಸ್ತಕ ಮೇಳ ಆಯೋಜಿಸಿದೆ ಅನ್ನುವ ಜಾಹೀರಾತು ಪತ್ರಿಕೆಗಳಲ್ಲಿ ಕಂಡೆ. ವೇದ, ಉಪನಿಷತ್ತು, ಆಯುರ್ವೇದ ಸೇರಿದಂತೆ ಹಲವು ಜ್ಞಾನ ಸಂಪತ್ತನ್ನು ಜನ ಸಾಮಾನ್ಯರಿಗೆ ಮುಟ್ಟಿಸುವುದು ಈ ಮೇಳದ ಉದ್ದೇಶವಾಗಿದೆಯಂತೆ. ಪುಸ್ತಕ ಮೇಳಕ್ಕೆ ನನ್ನ ಯಾವುದೇ ವಿರೋಧವಿಲ್ಲ. ಸಂಸ್ಕೃತದ ಬಗ್ಗೆ ಮೊದಲೇ ವಿರೋಧ ಇಲ್ಲ. ಸಂಸ್ಕೃತದಲ್ಲಿರುವ ಎಲ್ಲ ಒಳ್ಳೆಯದು ಕನ್ನಡಕ್ಕೆ ಅನುವಾದಗೊಂಡು ಕನ್ನಡಿಗರಿಗೆ ದೊರಕಲಿ ಅನ್ನುವುದು ನನ್ನ ನಿಲುವು.  ಆದರೆ ಈ ಮೇಳದ ಜಾಹೀರಾತು ನೋಡಿದಾಗ ಅಚ್ಚರಿಯಾಗಿದ್ದು, ಈ ಮೇಳದ ಸಹ ಪ್ರಾಯೋಜಕರು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಂಬುದು !

ಕನ್ನಡ ಮತ್ತು ಸಂಸ್ಕೃ’ತ’ ಇಲಾಖೆಯೇ?
ಆರ್.ಎಸ್.ಎಸ್ ನ ಅಂಗಸಂಸ್ಥೆಯಾದ "ಸಂಸ್ಕೃತ ಭಾರತಿ"  ಸಂಸ್ಕೃತ ಪ್ರಚಾರ, ಪುಸ್ತಕ ಮೇಳ ಅಂತ ಖಾಸಗಿಯಾಗಿ ಕಾರ್ಯಕ್ರಮ ನಡೆಸುವುದಕ್ಕೆ ಯಾರ ವಿರೋಧವೂ ಇಲ್ಲ. ಆದರೆ ಇಂತಹ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿಸುವುದರ ಹಿಂದಿನ ರಹಸ್ಯವೇನು? ಇಮಾಮ ಸಾಬಿಗೂ ಗೋಕುಲಾಷ್ಟಮಿಗೂ ಏನ್ ಸಂಬಂಧ? ಬೆಳಗಾವಿಯಲ್ಲಿ ನಡೆಯಬೇಕಿದ್ದ ವಿಶ್ವ ಕನ್ನಡ ಸಮ್ಮೇಳನಕ್ಕೆ ಸರಿಯಾದ ಆದ್ಯತೆ, ಗಮನ ಕೊಡದೇ ವರ್ಷಾನುಗಟ್ಟಲೆ ಅದನ್ನು ಮುಂದೆ ಹಾಕುವ ಸರ್ಕಾರ ಸಂಸ್ಕೃತ ಪುಸ್ತಕ ಮೇಳದ ಯಶಸ್ಸಿಗೆ ಟೊಂಕ ಕಟ್ಟಿ ನಿಲ್ಲುವುದನ್ನು ನೋಡಿದಾಗ ಅದನ್ನು misplaced priority ಅನ್ನದೇ ವಿಧಿಯಿಲ್ಲ. ಹೇಗೆ ಕೊಂಕಣಿ ಅಕಾಡೆಮಿಯ ಕೆಲಸ ಕೊಂಕಣಿ ಭಾಷೆ, ಸಂಸ್ಕೃತಿಯ ಉಳಿಸುವಿಕೆ-ಬೆಳೆಸುವಿಕೆಯೋ, ಹೇಗೆ ತುಳು ಅಕಾಡೆಮಿಯ ಕೆಲಸ ತುಳು ನುಡಿ, ತುಳು ಸಂಸ್ಕೃತಿಯ ಪೋಷಣೆ, ರಕ್ಷಣೆಯೋ, ಅದೇ ರೀತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೆಲಸ ಕನ್ನಡ ನಾಡು-ನುಡಿ, ಸಂಸ್ಕೃತಿಯ ಉಳಿವು,ಬೆಳೆವು, ಕನ್ನಡಿಗರಲ್ಲಿ ಕನ್ನಡತನದ ಅರಿವು ಹೆಚ್ಚಿಸುವತ್ತ ಗಮನ ಹರಿಸುವುದೇ ವಿನಹ ಇಂದು ಸಂಸ್ಕೃತ ಮೇಳ ಇಲ್ಲವೇ ನಾಳೆ ದಿನ ತಮಿಳು ಮೇಳ, ಹಿಂದಿ ಮೇಳ ಅಂತ ತನ್ನ ಕಾರ್ಯ ವ್ಯಾಪ್ತಿಗೆ ಸಂಬಂಧಿಸದ ಮೇಳಗಳನ್ನು ಪ್ರಾಯೋಜಿಸುವುದಲ್ಲ. ಕನ್ನಡ ವಿಶ್ವವಿದ್ಯಾಲಯಗಳು ಅನುದಾನವಿಲ್ಲದೇ ಒದ್ದಾಡುತ್ತಿವೆ. ಗಡಿ ಭಾಗದ ಕನ್ನಡ ಶಾಲೆಗಳೆಲ್ಲ ಒಂದೊಂದಾಗಿ ಬಾಗಿಲು ಹಾಕಿ, ಅಲ್ಲಿನ ಕನ್ನಡಿಗರೆಲ್ಲ ಪರಭಾಷಿಕರಾಗುತ್ತಿದ್ದಾರೆ, ಇದಾವುದನ್ನೂ ಗಮನಿಸದ ಸರ್ಕಾರ, ಸಂಸ್ಕೃತ ಪುಸ್ತಕ ಮೇಳವನ್ನು ಪ್ರಾಯೋಜಿಸುವುದನ್ನು ನೋಡಿದಾಗ, ಕೋಟ್ಯಾಂತರ ಜನ ಆಡುವ ಜೀವಂತ ಭಾಷೆಯತ್ತ ಅದಕ್ಕಿರುವ ಆದ್ಯತೆ ಏನಿದೆ, ಎಷ್ಟಿದೆ ಅನ್ನುವ ಪ್ರಶ್ನೆ ಕನ್ನಡಿಗರ ಮನಸಲ್ಲಿ ಬರದೇ ಇರದು.

ಕನ್ನಡ ಒಂದು ದ್ರಾವಿಡ ನುಡಿ

ಈ ಮೇಳ ಶುರುವಾದ ನಿನ್ನೆ ದಿನ ಶಿಕ್ಷಣ ಮಂತ್ರಿ ಕಾಗೇರಿಯವರು " ಸಂಸ್ಕೃತವೇ ಎಲ್ಲ ಭಾಷೆಗಳ ತಳಹದಿ" ಅನ್ನುವ ಹಸಿ ಸುಳ್ಳೊಂದನ್ನು ಹೇಳಿದ್ದಾರೆ. Linguistics ಅನ್ನುವ ವಿಜ್ಞಾನ ಗೊತ್ತಿರುವ ಯಾರಿಗಾದರೂ ಗೊತ್ತಿರುವ ಅಂಶವೆಂದರೆ ದಕ್ಷಿಣ ಭಾರತದ ಕನ್ನಡ,ತಮಿಳು,ತೆಲುಗು, ಮಲಯಾಳಂಗಳು ದ್ರಾವಿಡ ಭಾಷೆಗಳು ಅನ್ನುವುದು. ಹಾಗೆಯೇ ಸಂಸ್ಕೃತ ಅನ್ನುವುದು ಇಂಡೋ ಆರ್ಯನ್ ಭಾಷಾ ಕುಟುಂಬಕ್ಕೆ ಸೇರಿದ ಭಾಷೆ ಅನ್ನುವುದು. ಕನ್ನಡ ಸಂಸ್ಕೃತದಿಂದ ಸಾಕಷ್ಟು ಪದಗಳನ್ನು ಎರವಲು ಪಡೆದಿದೆ ಎಂದ ಮಾತ್ರಕ್ಕೆ ಸಂಸ್ಕೃತ ಅದರ ತಾಯಿಯಾಗುವುದಿಲ್ಲ.

ಕನ್ನಡಿಗರ ಬದುಕಿನ ಭಾಷೆಯಾದ ಕನ್ನಡ ಅತ್ಯಂತ ತುರ್ತಾಗಿ ಗಮನ ಬೇಡುತ್ತಿರುವ ಈ ಸಂದರ್ಭದಲ್ಲಿ ಸರ್ಕಾರದ ಆದ್ಯತೆ ಕನ್ನಡದ ಉಳಿವು, ಬೆಳೆವಿನತ್ತ ಧಾವಿಸುವುದಾಗಬೇಕೆ ವಿನಹ "ಸಂಸ್ಕೃತ ಎಲ್ಲ ಭಾಷೆಗಳ ತಾಯಿ", "ಸಂಸ್ಕೃತ = ಸಂಸ್ಕೃತಿ" ಅನ್ನುತ್ತ ತನ್ನ ideological pet themesಗಳನ್ನು ಪೋಷಿಸುವ ಕೆಲಸಗಳತ್ತ ಸರ್ಕಾರದ ಸಂಪನ್ಮೂಲವನ್ನು ಪೋಲು ಮಾಡುವುದಕ್ಕಲ್ಲ ಅನ್ನುವುದು ನನ್ನ ಅನಿಸಿಕೆ.

8 ಕಾಮೆಂಟ್‌ಗಳು:

  1. good interesting..information...it puts thinking cap on..
    nice write up...about how suppression can create depression in the minds about the language

    ಪ್ರತ್ಯುತ್ತರಅಳಿಸಿ
  2. Interesting information.... this is the main problem Kannada is not growing... we have some many division with in us only. -- Nandish

    ಪ್ರತ್ಯುತ್ತರಅಳಿಸಿ
  3. Although it is still to be apolitically debated and discovered, whether there is actually any merit in the Aryan-Dravidian theory, I will accept it here for the sake of an argument. Tamil is supposed to be the oldest known "Dravidian" language. So, do you think Kannada, Malayalam and Telugu originated from Tamil?

    ಪ್ರತ್ಯುತ್ತರಅಳಿಸಿ
  4. @ repudiated Brilliance

    How does it matter here in this context to you if Kannada, Malayalam and Telugu originated from Tamil? The question is both Banal and inane.

    ಪ್ರತ್ಯುತ್ತರಅಳಿಸಿ
  5. @Repudiated...
    If you accepted the aryan-dravidian theory, even momentarily, it is surprising that you can derive from that theory your second sentence. Did you even look at the link (in the blog post) correctly?
    Besides, rank is not the subject matter of discussion here. I suppose you havent realized that yet. The discussion is about misplaced identities. People seemed to be made to believe Sanskrit is this "mother" of all languages of the world and what not. Simply said, it is the "mother" of all lies ever told on this planet.

    Do you agree or not??

    ಪ್ರತ್ಯುತ್ತರಅಳಿಸಿ
  6. @Reputed Brilliance

    ಆರ್ಯನ್ ದ್ರಾವಿಡಿಯನ್ ಥಿಯರಿ ಬಗ್ಗೆ ನಿಮಗೆ ಏನೇ ಗೊಂದಲವಿರಬಹುದು, ಆದರೆ, ಭಾಷಾ ವಿಜ್ನ್ಯಾನಿಗಳು ಈಗಾಗಲೇ ಸಾಬೀತುಪಡಿಸಿರುವ ವಿಷಯದ ಬಗ್ಗೆ ಇಲ್ಲಿ ಮಾತನಾಡಲಾಗಿದೆ.
    ಸಂಸ್ಕೃತ ಭಾಷೆಯು ಇಂಡೋ ಆರ್ಯನ್ ಭಾಷಾ ಕುಟುಂಬಕ್ಕೆ ಸೇರುತ್ತದೆ.
    ಕನ್ನಡ ಭಾಷೆಯು ದ್ರಾವಿಡಿಯನ್ ಭಾಷಾ ಕುಟುಂಬಕ್ಕೆ ಸೇರುತ್ತದೆ.
    ಭಾಷಾ ವಿಜ್ನ್ಯಾನಿಗಳು ಇದನ್ನು ಒಪ್ಪಿಕೊಂಡಿದ್ದಾರೆ. ಇಂಟರ್ನೆಟ್-ನಲ್ಲಿ ಈ ಬಗ್ಗೆ ಹುಡುಕಿದರೆ ಹೆಚ್ಚಿನ ಮಾಹಿತಿ ಸಿಕ್ಕುತ್ತದೆ ಕೂಡ.

    ಭಾಷೆ ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ಅರಿತರೆ, ಭಾಷೆ ಹೇಗೆ ಮಾರ್ಪಡುತ್ತದೆ ಎಂಬುದನ್ನು ಅರಿತರೆ, ನಿಮಗೆ "ಕನ್ನಡವು ತಮಿಳಿನಿಂದ ಹುಟ್ಟಿತಾ?" ಎಂಬ ಪ್ರಶ್ನೆ ಮೂಡುವುದಿಲ್ಲ.
    ಭಾಷೆಯಲ್ಲಿ ಒಳನುಡಿಗಳು ರೂಪುಗೊಳ್ಳುತ್ತವೆ, ಒಳನುಡಿಗಳು ಬೇರೆ ರೂಪ ಪಡೆದುಕೊಂಡು ಅವೇ ಬೇರೆ ಭಾಷೆಯಾಗುವ ಹೊತ್ತಿಗೆ, ಮೂಲನುಡಿ ಎಲ್ಲೂ ಇರುವುದಿಲ್ಲ. ಮೂಲನುಡಿ ಬೇರೆ ಬೇರೆ ರೂಪಗಳಲ್ಲಿ, ಬೇರೆ ಬೇರೆ ಭಾಷೆಯಾಗಿ ಮುಂದುವರೆಯುತ್ತದೆ.
    ಸಂಸ್ಕೃತವೂ ಬೇರೆ ಬೇರೆ ರೂಪುಗಳನ್ನು ಪಡೆದುಕೊಂಡು, ಇವತ್ತು ಬೇರೆ ಬೇರೆ ಭಾಷೆಗಳಾಗಿ ಚಾಲ್ತಿಯಲ್ಲಿದೆ. ಬೆಂಗಾಲಿ, ಮರಾಠಿ, ಗುಜರಾತಿ, ಹಿಂದಿ ಇವುಗಳು ಸಂಸ್ಕೃತ ಬೇರಿನಿಂದ ಮೂಡಿದ, ಬೇರೆ ಬೇರೆ ಭಾಷೆಗಳು.
    ಹಾಗೆ ನೋಡಿದರೆ, ರುಗ್ವೇದದಲ್ಲಿರೋ ಸಂಸ್ಕೃತ ಹಾಗೂ ಗೀತೆಯಲ್ಲಿರೋ ಸಂಸ್ಕೃತದಲ್ಲೇ ತುಂಬಾ ಬದಲಾವಣೆಗಳಿವೆ. ಭಾಷೆ ನಿರಂತರವಾಗಿ ಬದಲಾಗುತ್ತಲೇ ಇರುತ್ತದೆ ಎಂಬುದನ್ನು ಇದರಿಂದ ನಾವು ಅರಿಯಬಹುದು.

    ಇವತ್ತಿನ ಕನ್ನಡ, ಇವತ್ತಿನ ತಮಿಳು, ಇವತ್ತಿನ ತುಳು ಎಲ್ಲವೂ ಪ್ರೋಟೋ ದ್ರಾವಿಡಿಯನ್ ಎಂದು ಕರೆಯಬಹುದಾದ ಭಾಷೆಯಿಂದ ರೂಪುಗೊಂಡವು ಎಂಬುದು ಒಪ್ಪಿತವಾಗಿದೆ.

    ಪ್ರತ್ಯುತ್ತರಅಳಿಸಿ
  7. ಸಂಸ್ಕೃತ ನುಡಿ " ಇಂಡೊ-ಆರ್ಯನ್ " ನುಡಿ ಕುಟುಂಬಕ್ಕೆ ಸೇರಿದ್ದು ಕನ್ನಡ " ದ್ರಾವಿಡ " ನುಡಿ ಕುಟುಂಬಕ್ಕೆ ಸೇರಿರುವ ಬಗ್ಗೆ ನುಡಿಯರಿಮೆಯಲ್ಲಿ ಕೆಲಸ ಮಾಡಿದವರಿಗೆ ಗೊತ್ತು. ಸಂಸ್ಕೃತ ಎಲ್ಲಾ ನುಡಿಗಳಿಗೆ ತಾಯಿ ಅನ್ನುವ ಮಾತಲ್ಲಿ ನಿಲವರವಿಲ್ಲ ( ನಿಜ ).

    ಪ್ರತ್ಯುತ್ತರಅಳಿಸಿ

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !