ಶುಕ್ರವಾರ, ಫೆಬ್ರವರಿ 11, 2011

ಬೆಂಗಳೂರಲ್ಲಿ ಕನ್ನಡಿಗರು ಕಮ್ಮಿ ಅನ್ಬೇಡಿ ಸಾರ್ !

77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇತ್ತೀಚಿಗೆ ಬೆಂಗಳೂರಲ್ಲಿ ನಡೀತು. ಅದ್ದೂರಿ ಮೆರವಣಿಗೆ, ಸಾವಿರಾರು ಕನ್ನಡಿಗರು, ನೂರಾರು ಹೊತ್ತಗೆ ಮಳಿಗೆಗಳು, ಹಾರಾಡುತ್ತಿದ್ದ ಹಳದಿ ಕೆಂಪು ಬಾವುಟಗಳು, ಉಕ್ಕಿ ಹರಿಯುತ್ತಿದ್ದ ಸಡಗರ, ತುಂಬಿ ತುಳುಕುತ್ತಿದ್ದ ಬಸವನಗುಡಿ... ಓಹ್, ಕನ್ನಡದ ನುಡಿಹಬ್ಬದ ಸೊಗಸನ್ನು ತುಂಬಿಕೊಳ್ಳಲು ಎರಡು ಕಣ್ಣು ಸಾಲದಾಗಿದ್ದವು. ಈ ಸಮ್ಮೇಳನದ ಅಧ್ಯಕ್ಷರಾದ ಹಿರಿಯರಾದ ವೆಂಕಟಸುಬ್ಬಯ್ಯನವರು (ಚಿತ್ರ ಕೃಪೆ: ದ ಹಿಂದೂ) ಈ ಸಂದರ್ಭದಲ್ಲಿ ಭಾಷಣ ಮಾಡಿದರು. ಅನಿಯಂತ್ರಿತ ವಲಸೆಯಿಂದ ಮುಂದೊಂದು ದಿನ ಬೆಂಗಳೂರು ಕೇಂದ್ರಾಡಳಿತ ಪ್ರದೇಶವಾಗಬಹುದು, ಕಾಲ್ ಸೆಂಟರ್ ಐವಿಆರ್ ನಲ್ಲಿ ಕನ್ನಡ ಆಯ್ಕೆ ಬಳಸಿ, ಅಡುಗೆ ಮನೆಯಲ್ಲಿ ಕನ್ನಡದ ಹೆಂಗಸರು ಕನ್ನಡ ಬಳಸಿ,, ಹೀಗೆ ಹಲವು ವಿಷಯಗಳಲ್ಲಿ ಸತ್ತಂತಿಹ ಕನ್ನಡಿಗರನ್ನು ಬಡಿದೆಬ್ಬಿಸುವಂತ ವಿಷಯಗಳನ್ನು ಅಧ್ಯಕ್ಷರು ತಮ್ಮ ಭಾಷಣದಲ್ಲಿ ಹೇಳಿದರು. ಅವೆಲ್ಲವೂ ಅವರ ಬಗ್ಗೆ ನನಗಿದ್ದ ಗೌರವವನ್ನು ಇಮ್ಮಡಿಗೊಳಿಸಿದವು. ಹೀಗೆ ಹೇಳುತ್ತಲೇ ಅವರಾಡಿದ ಇನ್ನೊಂದು ಮುಖ್ಯವಾದ ವಿಷಯದ ಬಗ್ಗೆ  ನನ್ನ ಬ್ಲಾಗ್ ಅಲ್ಲಿ ಬರಿಬೇಕು ಅನ್ನಿಸ್ತು. ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ನೂರಕ್ಕೆ ಮೂವತ್ತರಷ್ಟು ಇದೆ ಮತ್ತು ಮತ್ತಷ್ಟು ಕುಸಿಯುತ್ತಿದೆ ಎಂದು ಜಿವಿ ಅವರು ಹೇಳಿದ್ರು, ಇದು ನಿಜಾನಾ? ಇದನ್ನ ಆಡಳಿತದಲ್ಲಿರುವ ಹಲವರು ಆಗಾಗ ಹೇಳ್ತಾನೇ ಇರ್ತಾರೆ, ಆದ್ರೆ ಇದೆಷ್ಟು ನಿಜ?

ಕನ್ನಡಿಗರ ಸಂಖ್ಯೆಯ ಬಗ್ಗೆ!
ಕನ್ನಡಿಗರು ಕಡಿಮೆ ಅನ್ನುವ ಅಂಕಿ-ಅಂಶಕ್ಕೆ ಸಾಮಾನ್ಯವಾಗಿ ಆಧಾರವೆಂದರೆ 2001ರ ಜನಗಣತಿಯ ಮಾಹಿತಿ. ಇದು ಅರೆಬೆಂದ ಮಾಹಿತಿ ಎನ್ನುವುದು ನನ್ನ ಅನಿಸಿಕೆ ಹಾಗೂ ನಂಬಿಕೆ. ಇದಕ್ಕೆ ಜನಗಣತಿಯ ಯಾವ ಕಾಲಂ ಆಧಾರವೆಂಬುದನ್ನು ನೋಡಿದರೆ ಅರ್ಥ ಆಗುತ್ತೆ. ಜನಗಣತಿಯಲ್ಲಿ ಮನೆಯೊಂದರಲ್ಲಿ ವಾಸಿಸುವ ಜನರ ತಾಯ್ನುಡಿಯನ್ನು ಕೇಳಿ ಬರೆದುಕೊಳ್ಳಲಾಗುತ್ತದೆ. ಬೆಂಗಳೂರಿನ ಜನಗಣತಿಯಲ್ಲಿ ಹೀಗೆ ತಮ್ಮ ತಾಯ್ನುಡಿ ಕನ್ನಡ ಅಂತಾ ಬರೆಸಿರೋರ ಸಂಖ್ಯೆ ನೂರಕ್ಕೆ 30ರಷ್ಟು ಎಂಬುದನ್ನು, ಬೆಂಗಳೂರಿನಲ್ಲಿ ಕನ್ನಡಿಗರು ಅಲ್ಪಸಂಖ್ಯಾತರೆನ್ನುವುದಕ್ಕೆ ಆಧಾರವಾಗುವುದು ಸರಿಯಲ್ಲ. ಇದೇ ಬೆಂಗಳೂರಿನಲ್ಲಿ ತಲತಲಾಂತರದಿಂದ ಬದುಕುತ್ತಿರುವ ಮುಸಲ್ಮಾನರು ತಮ್ಮ ತಾಯ್ನುಡಿಯನ್ನು ಉರ್ದು ಎಂದೇ ಬರೆಸಿರುತ್ತಾರೆ. ಇವರು ಕನ್ನಡಿಗರಲ್ಲವೇ? ಇಲ್ಲೇ ನೂರಾರು ವರ್ಷದಿಂದ ಬದುಕುತ್ತಿರುವ ಅನೇಕ ತುಳುವರು, ಕೊಡವರು, ಅಯ್ಯಂಗಾರರು, ರೆಡ್ಡಿಗಳು...ಮೊದಲಾದವರು ತಮ್ಮ ತಾಯ್ನುಡಿಯನ್ನು ಕನ್ನಡವೆಂದು ಬರೆಸಿಲ್ಲದಿದ್ದಾಗ ಅವರನ್ನು ಕನ್ನಡಿಗರಲ್ಲ ಎನ್ನಲಾಗುವುದೇ?

ಕನ್ನಡಿಗರೆಂದರೆ ಯಾರು?
ಡಾ. ಸರೋಜಿನಿ ಮಹಿಷಿ ಅವ್ರು ಕನ್ನಡಿಗರ ಉದ್ಯೋಗಕ್ಕೆ ಸಂಬಂಧಿಸಿದಂತೆ ಒಂದು ವರದಿಯನ್ನು ಸಲ್ಲಿಸಿದ್ದರು. ಆಗ ಅದರಲ್ಲಿ ಕನ್ನಡಿಗರು ಅಂದ್ರೆ ಯಾರು ಅನ್ನೋ ಒಂದು ಮೂಲಭೂತ ಪ್ರಶ್ನೆ ಎತ್ತಿ ಅದಕ್ಕೊಂದು ಸೂತ್ರಾನೂ ಹೇಳಿದ್ರು. ಹದಿನೈದು ವರ್ಷಗಳಿಂದ ಕನ್ನಡನಾಡಲ್ಲಿ ಬದುಕ್ತಾ ಇರೋ... ಕನ್ನಡವನ್ನು ಮಾತಾಡಬಲ್ಲ, ಓದಬಲ್ಲ, ಬರೆಯಬಲ್ಲವರೆಲ್ಲರೂ ಕನ್ನಡಿಗರು ಅಂತಂದಿದ್ರು. ಸರೀ ತಾನೇ? ಈ ಮಾನದಂಡದ ಪ್ರಕಾರವೇ ಯಾಕೆ ನೋಡಬೇಕು ಅಂದರೆ ಬೆಂಗಳೂರಿನಂತಹ ದೊಡ್ಡ ಊರಿನಲ್ಲಿ ಕೆಲಸದ ಅವಕಾಶಗಳು ಹೆಚ್ಚು ಹೆಚ್ಚು ಆದಷ್ಟೂ ಬೇರೆ ಬೇರೆ ಕಡೆಗಳಿಂದ ಜನರು ಬರೋದು ಸಹಜ. ವಲಸೆ ನಿಯಂತ್ರಣ ಕಾಯ್ದೆ ಇಲ್ಲದೆ ನಮ್ಮ ಕೈ ಕಟ್ಟಿ ಹಾಕಲಾಗಿರುವ ಇಂಥಾ ಸಂದರ್ಭದಲ್ಲಿ ಹಾಗೆ ಬಂದವರು ಮುಖ್ಯವಾಹಿನಿಗೆ ಬೆರೆಯುವಂತೆ ಮಾಡುವುದೊಂದೇ ದಾರಿಯಲ್ಲವೇ. ಹಾಗಾಗಿ ಹೀಗೆ ಮುಖ್ಯವಾಹಿನಿಗೆ ಬಂದು ಕನ್ನಡವನ್ನು ಓದಲು, ಬರೆಯಲು, ಮಾತನಾಡಲು ಕಲಿತವರನ್ನು ಕನ್ನಡಿಗರೆಂಬ ಲೆಕ್ಕಕ್ಕೇ ತೆಗೆದುಕೊಳ್ಳಬೇಕಲ್ಲವೇ? ಹಾಗೆ ನೋಡಿದಾಗ ಬೆಂಗಳೂರಿನ ಕನ್ನಡಿಗರ ಸಂಖ್ಯೆ 30%ಕ್ಕಿಂತಾ ಹೆಚ್ಚಿದೆ ಅನಿಸುವುದಿಲ್ಲವೇ? ನಿಜವಾದ ಲೆಕ್ಕವನ್ನು ಈಗಿನ ಪದ್ದತಿಯ ಜನಗಣತಿ ಎಂದಿಗೂ ಹೊರತರಲಾರದು. ಆದರೆ ಕನ್ನಡವೇ ಬೆಂಗಳೂರಿನ ಬಹುಸಂಖ್ಯಾತ ಭಾಷೆ ಎಂದು ನಂಬಲು ಬೇಕಾದ ಇತರೆ ಹಲವು ಕಾರಣಗಳೂ, ಮಾಹಿತಿಗಳು ಸಾಕಷ್ಟಿವೆ.

ಬೆಂಗಳೂರಿನಲ್ಲಿ ಕನ್ನಡಿಗರೇ ಹೆಚ್ಚೆಣಿಕೆಯಲ್ಲಿರುವವರು!
ನನ್ನ ನಂಬಿಕೆಗೆ ಕಾರಣಗಳೂ ಇವೆ. ಇಡೀ ಬೆಂಗಳೂರಿನ ದಿನಪತ್ರಿಕೆಗಳ ಓದುಗರ ಪ್ರಮಾಣದ ಬಗ್ಗೆ ಒಂದು ಸಮೀಕ್ಷಾ ವರದಿ ಬಂದಿದೆ. ಇದರ ಆಧಾರದಂತೆ ಬೆಂಗಳೂರಿನಲ್ಲಿ ದಿನಪತ್ರಿಕೆ ಓದುಗರ ಸಂಖ್ಯೆ ಸುಮಾರು 26 ಲಕ್ಷ. ಇದರಲ್ಲಿ 18 ಲಕ್ಷದಷ್ಟು ಓದುಗರು ಕನ್ನಡ ದಿನಪತ್ರಿಕೆ ಓದುತ್ತಾರೆ. ಅಂದರೆ ನೂರಕ್ಕೆ 70ರಷ್ಟು ಎಂದಾಯ್ತು. ಬೆಂಗಳೂರಿನ ಜನಸಂಖ್ಯೆ ಸುಮಾರು 60 ಲಕ್ಷದ ಆಸುಪಾಸಿನಲ್ಲಿದ್ದು ನೂರಕ್ಕೆ 83 ಜನ ಓದು ಬರಹ ಬಲ್ಲವರು. ಈ ಲೆಕ್ಕವನ್ನೂ ಸೇರಿಸಿಕೊಂಡರೆ ಪತ್ರಿಕೆಗಳನ್ನೇ ಓದದ ಕನ್ನಡಿಗರ ಸಂಖ್ಯೆಯೂ ಇದೇ ಪ್ರಮಾಣದಲ್ಲಿರುತ್ತದೆ ಎನ್ನುವ ಅಂದಾಜಿನೊಂದಿಗೆ ನಗರದ ಕನ್ನಡಿಗರ ಪ್ರಮಾಣ 65%ಕ್ಕಿಂತ ಹೆಚ್ಚಿದೆ ಎನ್ನಬಹುದಲ್ಲವೇ? ಇದೇ ರೀತಿ ಬೆಂಗಳೂರಿನಲ್ಲಿ FM ಕೇಳುಗರ ಸಂಖ್ಯೆಯತ್ತಲೂ ಕಣ್ಣು ಹಾಯಿಸೋಣ. ಇದನ್ನು ಕೂಡಾ RAM ವರದಿ ಹೇಳುತ್ತಿದೆ. ಕನ್ನಡ ವಾಹಿನಿಗಳ ಪಾಲು ಒಟ್ಟಾರೆ 85%ಕ್ಕಿಂತಲೂ ಹೆಚ್ಚಿದೆ. ಒಟ್ಟು FM ಕೇಳುಗರ ಸಂಖ್ಯೆ ಬೆಂಗಳೂರಿನಲ್ಲಿ ಸುಮಾರು 53 ಲಕ್ಷದಷ್ಟು. ಅಂದರೇನಂದುಕೊಳ್ಳಬಹುದು? ಬೆಂಗಳೂರಿನಲ್ಲಿ ಕನ್ನಡಿಗರು ಬಹುಸಂಖ್ಯಾತರೆಂದೇ ಅಲ್ಲವೇ? ಹೌದು... ಬರಿಯ IRS ವರದಿ ಮತ್ತು RAM ವರದಿಗಳು ಕನ್ನಡಿಗರ ಜನಸಂಖ್ಯೆ ಇಷ್ಟು ಎಂದು ನಿಖರವಾಗಿ ಹೇಳುವುದಿಲ್ಲ. ಆದ್ರೆ ನಿಶ್ಚಿತವಾಗಿ ಒಲವೊಂದನ್ನು ಇದು ತೋರಿಸಿಕೊಡುತ್ತದೆ. ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಪುಸ್ತಕಗಳಿಗೆ ಸಿಕ್ಕ ಸಕತ್  ಪ್ರೋತ್ಸಾಹಾನೂ ಇದೇ ತೋರಿಸುತ್ತೆ.  ಕನ್ನಡಿಗರು ಬೆಂಗಳೂರಿನಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ ಎಂಬ ಹೇಳಿಕೆಯನ್ನು ನೀಡದಿರಲು ಇಷ್ಟು ಸಾಕು ಅನ್ಸುತ್ತೆ.

ಅಪಪ್ರಚಾರದಿಂದ ಸಲ್ಲದ ಭಯ, ಕೀಳರಿಮೆ!
"ಕನ್ನಡಿಗರು ಬೆಂಗಳೂರಲ್ಲಿ ಅಲ್ಪಸಂಖ್ಯಾತರು" ಎಂದು ಅವಕಾಶ ಸಿಕ್ಕಾಗಲೆಲ್ಲಾ ಹೇಳಿಕೆ ಕೊಡೋದು ಇನ್ನಾದ್ರೂ ನಿಲ್ಲಲಿ. ಯಾಕಂದ್ರೆ ಅದನ್ನು ಕೇಳಿ ಕೇಳಿ ಕನ್ನಡಿಗರಲ್ಲಿ ಸಲ್ಲದ ಕೀಳರಿಮೆ ತುಂಬುವ ಎಲ್ಲಾ ಸಾಧ್ಯತೆಗಳಿವೆ. ಕನ್ನಡಿಗರೇ ಕಮ್ಮಿ ಇದ್ದಾಗ ಬೆಂಗಳೂರಿನ ಆಡಳಿತ ಯಾಕೆ ಕನ್ನಡದಲ್ಲಿರಬೇಕು? ಗ್ರಾಹಕಸೇವೆಯಲ್ಲಿ ಯಾಕೆ ಕನ್ನಡ ಇರಬೇಕು? ಕಲಿಕೆ ಯಾಕೆ ಕನ್ನಡದಲ್ಲಿರಬೇಕು? ಅನ್ನೋ ಧ್ವನಿಗಳು ಬಲವಾಗೋಕೆ ಇದು ಅವಕಾಶ ಕೊಡಲ್ವಾ ? ಕನ್ನಡಿಗರ ನುಡಿಹಬ್ಬದಲ್ಲೇ ಇಂಥಾ ಎದೆಗುಂದಿಸೋ ಮಾತುಗಳನ್ನು ಸಮ್ಮೇಳನದ ಅಧ್ಯಕ್ಷರೇ ಆಡಿದ್ರೆ ಸಾಮಾನ್ಯ ಕನ್ನಡಿಗರ ಮನಸ್ಸಿನ ಮೇಲೆ ಆಗೋ ಪರಿಣಾಮ  ಎಷ್ಟು ಕೆಟ್ಟದ್ದು ಅಂತ ಅನ್ನಿಸಲ್ವಾ?

12 ಕಾಮೆಂಟ್‌ಗಳು:

  1. ನಮಸ್ಕಾರ ಶೆಟ್ಟಿಯವರಿಗೆ, ನಾನೊಬ್ಬ ತುಳುನಾಡ ಕನ್ನಡಿಗ. ಕರ್ನಾಟಕದಲ್ಲಿ ತಲೆತಲಾಂತರದಿಂದ ವಾಸಿಸುತ್ತಿರುವ ಅನ್ಯಭಾಷೀಯರನ್ನು ಕನ್ನಡಿಗರೆನ್ನುವುದು ತಪ್ಪು ಎಂದು ನನಗನಿಸುತ್ತದೆ. ಕನ್ನಡಿಗರಾದ ನಾವು ನಮ್ಮ ನಿಜವಾದ ತತ್ತ್ವವನ್ನು ಪ್ರತಿಪಾದಿಸಬೇಕೇ ಹೊರತು 'ಅನ್ಯ'ರನ್ನು ಅನುಕರಿಸಬಾರದು. ಹಾಗಿದ್ದಲ್ಲಿ ಹೊರನಾಡ ಕನ್ನಡಿಗರು ಕನ್ನಡಿಗರಲ್ಲವೋ? ನಾಡು ಬಿಟ್ಟೊಡನೆ ನುಡಿ ನಾಶವಾಗುವುದೋ? ಇದೆಂಥ ವಾದ ಶೆಟ್ಟಿಯವರೇ? ಕಾರ್ನಾಟಿಕರು ನಾವೆಲ್ಲಾ, ಕನ್ನಡಿಗರಾಗಿರಲೇಬೇಕೆಂದಿಲ್ಲವಲ್ಲ. ನಾನು ಮೊದಲು ಕಾರ್ನಾಟಿಕ, ನಂತರ ಕನ್ನಡಿಗನೋ, ತುಳುವನೋ, ಕೊಡವನೋ...ಇತ್ಯಾದಿ ಇತ್ಯಾದಿ.

    ಪ್ರತ್ಯುತ್ತರಅಳಿಸಿ
  2. ನಮಸ್ಕಾರ ವಸಂತ್ ಶೆಟ್ಟಿ ಅವರೇ
    ನಾನು ಸಂತೋಷ್ ಕನ್ನಡಿಗ,,,,
    ಕರ್ನಾಟಕದಲ್ಲಿ ಕನ್ನಡಿಗರು ಅಲ್ಪ ಸಂಖ್ಯಾತರಲ್ಲ ನೀವು ಹೇಳಿದ ಹಾಗೆ ಎಂಬುದು ನನ್ನ ಅಭಿಪ್ರಾಯ
    ಇದಕ್ಕೆ ಉದಾಹರಣೆ ಮೊನ್ನೇ ನಡೆದ ಸಮ್ಮೇಳನ
    ಆದರೆ ಇಲ್ಲಿ ಸಂಖ್ಯಾತರಲ್ಲ ಎಂದು ನಮಗೆ ಏಕೆ ಅನಿಸುತದೆ ಅಂದರೆ ನಮ್ಮವರೇ ಅಂದರೆ ಕನ್ನಡ ಬರುವವರೆ ಆಂಗ್ಲ ಬಾಷೆಗೆ ಮಾರು ಆಗಿ ಕನ್ನಡ ಮಾತಾಡದೆ ಇರೋದರಿಂದ ....
    ನಮ್ಮ ಮಂದಿ ಅದರಲ್ಲೂ ಹೆಚ್ಹಾಗಿ ಹೆಣ್ಣು ಮಕ್ಕಳು ಕನ್ನಡ ಬಂದರು ಮಾತಾಡಿದರೆ ಮರ್ಯಾದಿ ಕಮ್ಮಿ ಅಗುಥೆ ಅಂತ ಕನ್ನಡ ದ ಬಗ್ಗೆ ಧೋರಣೆ ಥಲೆದಿಧಾರೆ
    ಇದು ಎಂದೆಂದಿಗೂ ಸಹಿಸಲಾಗದ ಸಂಗತಿ
    ಅಂತವರಿಗೆ ನಾವು ಸರಿಗೆ ಮುಕದಮೇಲಿ ಒಡೆದಂತೆ ಹೇಳಬೇಕು
    ಇಲ್ಲಿ ಕನ್ನಡವೇ ಎಲ್ಲ ಅಂತ,ಕನ್ನಡದಲ್ಲೇ ನಾವು ಉತ್ತರಿಸಬೇಕು
    ಒಟ್ಟಿನಲ್ಲಿ ಕರ್ನಾಟಕದಲ್ಲಿ ನಾನು ಇಂತವರಿಗೆ ಒಂದು ಸಂದೇಶವನ್ನು ಕೊದದಕ್ಕೆ ಇಷ್ಟ ಪಡ್ತೀನಿ
    ಕನ್ನಡ ಇಲ್ಲಿ ಅನ್ನ,,ಕಲಿಯಿರಿಮಾತನಾಡಿ ತಿನ್ನೋಕೆ ಮುನ್ನ

    ಪ್ರತ್ಯುತ್ತರಅಳಿಸಿ
  3. ನೀವ್ ಹೇಳೋದು ಸರಿ!!
    ಬೆ೦ಗ್ಳೂರಲ್ಲಿ ಕನ್ನಡದವರು ೩೦% ಪರ್ಸೆ೦ಟು" ಅನ್ನೋದು ಪರಭಾಷೆಯವರಿಗೆ(ಹಿ೦ದಿ,ತಮಿಳು ಮತ್ತು ತೆಲುಗು ನಾಡುಗಳಿ೦ದ ಬ೦ದವರಿಗೆ) ಒ೦ದ್ ರೀತಿ ವರದಾನ ಅ೦ತ್ಲೇ ಹೇಳಬಹುದು.ಬೆ೦ಗ್ಳೂರಿನ ಆಡಳಿತ ಭಾಷೆ ಕನ್ನಡ. ರಾಜಕೀಯವಾಗಿ , ಸಾ೦ಸ್ಕೄತಿಕವಾಗಿ , ಕನ್ನಡ ಬೆ೦ಗ್ಳೂರು ತು೦ಬಾ ಮಿ೦ಚುತ್ತಿರುವಾಗ , ನಮ್ಮನ್ನ ನಾವು ಅಲ್ಪಸ೦ಖ್ಯಾತರು ಅ೦ತ ಕರೆದುಕೊ೦ಡು ಧೀನರಾಗಿರುವುದು ಎಷ್ಟು ಸರಿ ಅಲ್ವೇ.
    ಒ೦ದು ಸಾರಿ!! ನಮ್ಮವರು ಚೆನ್ನೈ ಗೆ ಬರಲಿ. ಇಲ್ಲಿ!! ಹಿ೦ದಿ ಹೋಗ್ಲಿ , ನಮ್ಮಲ್ಲಿ ಕನ್ನಡಿಕರಣವಾಗಿರುವ ನಾರ್ಮಲ್ ಇ೦ಗ್ಲೀಷ್ ಪದಗಳು ಕೂಡ ಕೇಳಸಿಗುವುದಿಲ್ಲ.

    ಪ್ರತ್ಯುತ್ತರಅಳಿಸಿ
  4. Shettiyavarige aathmeeya vandanegalu. Neevu kottiruva "Kannadiga" shabdhada artha athyanta sookthavaadaddu mattu prasthutavaadaddu. Kannadada bagge (thamma maatrubhaasheya jothege) svalpa preethi, kaalaji hondiruvava Kannadiga, ashte!!
    Thamma arthagarbhita lekhanakke dhanyavaadagalu :)

    Nimmava
    Kiran

    ಪ್ರತ್ಯುತ್ತರಅಳಿಸಿ
  5. ವಸಂತ,
    ಮು.ಮ.ಚಂದ್ರು ಮತ್ತು ಜೀವಿ ಇದನ್ನೆ ಹಲವು ಸಲ ಹೇಳ್ತಾ ಇರ್ತಾರೆ. ಆದರೆ ಅವರಿಗೆ ಈ ಅಂಕಿ ಅಂಶಗಳು ಯಾವ ಟ್ರೆಂಡನ್ನು ತೋರಿಸುತ್ತವೆ ಎಂಬು ಅರಿತವಾದರೆ ಒಳ್ಳೇದು.

    ಇದಲ್ಲದೆ ಜೀವಿಯವರು ಇನ್ನು ಕೆಲವು ಎಡವಟ್ಟಿನ ಹೇಳಿಕೆಗಳನ್ನ ಕೊಟ್ಟಿದ್ದಾರೆ.
    http://prajavani.net/Content/Feb62011/state20110206225986.asp?section=updatenews
    "..ಸಮ್ಮೇಳನಾಧ್ಯಕ್ಷರೊಡನೆ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕನ್ನಡದ್ದು ಒಳ್ಳೆಯ ಪೊನೆಟಿಕ್ಸ್. ಸ್ವರ ಬಿಟ್ಟರೆ ಕಾಗುಣಿತವೂ ಕೆಡುತ್ತದೆ’ ಎಂದರು. ‘ಉದಾಹರಣೆಗೆ ಋ ಸ್ವರ ಬಿಟ್ಟರೆ ಕನ್ನಡದಲ್ಲಿರುವ ಅನೇಕ ಸಂಸ್ಕೃತ ಶಬ್ಧಗಳನ್ನು ಕೊಂದು ಬಿಡಬೇಕಾಗುತ್ತದೆ. ಅಮೃತ ಎಂಬ ಶಬ್ಧವನ್ನು ಅಮ್ರುತ ಎಂದು ಬರೆಯಬೇಕಾಗುತ್ತದೆ. ಎರಡೂ ಶಬ್ಧಗಳ ಉಚ್ಚಾರದಲ್ಲಿ ವ್ಯತ್ಯಾಸವಾಗುತ್ತದೆ..."

    ಕನ್ನಡ ಶಬ್ದಗಳಿಗಿಂತ ಸಂಸ್ಕ್ರುತ ಶಬ್ದಗಳನ್ ಬರೆಯಕ್ಕಾಗಲ್ಲ ಅಂತ ನಾವು ’ಋ’ ಅಕ್ಷರವನ್ನ ಉಳಿಸ್ಕಬೇಕೆಂತೆ. ಏನ್ ಲಾಜಿಕ್? ಆದರೆ ಕನ್ನಡದ್ದೆ ಆದ ’ಱ’, ’ೞ’ ಹೊಂದಿರುವ ಪದಗಳು ಸತ್ ಹೋದರೂ ಚಿಂತೆ ಇಲ್ಲ.. ಅದನ್ನ ದಾರಾಳವಾಗಿ ಅಕ್ಕರಮಾಲೆಯಿಂದ ಬಿಟ್ ಬಿಡ್ಬೋದು. ಅದೇನೊ ಯೋಳ್ತಾರಲ್ಲ....ನಮ್ ಮನೆಗೆ ನಾವೇ ಬೆಂಕಿ ಹಚ್ಕೊಂಡಂಗೆ...ಹಾಗಾಯ್ತು ಇದು

    ಪ್ರತ್ಯುತ್ತರಅಳಿಸಿ
  6. Nannu obba kannadiga addare nanna mathru bashe Tamil, bengalorinalli kannada hechagi balaruthare addare ondu kashtakaravada vishaya, bengaluru hegge irruvudilla bahala baratiyaru nanna kadeyinda bengalurige baruthidare.. bavisyakalladali kannada mathru bashe annuvaru bengalurinalli bahala kadima addare.. Bharat sarakara bengalurannu Union territory mada bahudu.. avaga bengaluru tumba unnati praptisuthade adare.. iggagele janna english medium CBSE/ICSE shallegallali oddisuthare thamma makallanu.. heege hodare Bengaluru union territory agibitare kannada ka gi mathaduvaru yarru irruvudilla.. Kannada bengalureena mukha bashe annuvudu allisi hoguthade.. iddanu yarru neelisallu prayatnisolla mathe kannada bengalurina pramanikka mukha bashe annuvudu bari pustakadalli mathra katheyagi iruthe.. bengalureena bavisha English mathe Hindi annuvadari yavva samshayavilla..

    ಪ್ರತ್ಯುತ್ತರಅಳಿಸಿ
  7. Bengalureenali Kannadavanu kappaduvudu tumbha kashta addare navvella praythinasabekku Kannada vannu ullisuvadake.. ondu vishaya chintisatakkadu ennandre evathu kannada mathaduvaru bengalureenali hechu annuva vadadali iddevve adare ee prashne yake banthu.. kannada bengalureenali aliyuthide.. berre bashe yavarannu kannada mathadallu navvu maratiyarra hagge heemsisuvadu manushatva alla.. yakkandare ellarigu avaravara basheya melle gaurava mathu abhimana iruvadu sahagakaravada vishaya..

    Kannada ullisuvaddu kannadigara kayalide..
    sirigannadam gelge!!
    Manjunath

    ಪ್ರತ್ಯುತ್ತರಅಳಿಸಿ
  8. Hari Om,

    Prashant Patil
    Moola: Dandeli | vaasa/kelsa: Bengaluru

    I done think GVS has said in a way you have tried to understand. I understand that being a kannadiga if i dont speak or use my language in day to day life in business at where necessary then wont be become so(alpasankhyataru)?

    Numbers are only for counting. We need that for ruling bur in real sense we need people accepting it.

    Our love towards our language should not be event triggered(as in IT language). It should not end by buying books durng functions and forgetting to use it.

    it should be reflected in every field Banks, ATMs, Customer Service etc.

    Just ask one question.
    How many of us speak Kannada when we go to any Big Showrooms/Forum/PVRs/hotels??????

    you will get an answer who is a kannadiga.

    inti,
    PP

    ಪ್ರತ್ಯುತ್ತರಅಳಿಸಿ
  9. bhasheya preeti olleyadu, aadare adannu hidkondu...manava kulavannu devide madodu olleyadalla. idarinda...bhashe beleyalla..adakkagi bereyavarige preeti noo huttalla. English bhashe na naavu preetiyinda kaleeta iddeeva?

    ಪ್ರತ್ಯುತ್ತರಅಳಿಸಿ
  10. ಮಾನ್ಯ ವಸ0ತ ಶೆಟ್ಟರೆ, ಮಾತೄಭಾಷೆಯ ಆಧಾರದ ಮೇಲೆ ಕನ್ನಡಿಗರೆ0ದು ಎಣಿಸಬೇಕೇ ಹೊರತು ಒಬ್ಬ ವ್ಯಕ್ತಿ ಕನ್ನಡವನ್ನು ಬರೆಯಲು ಓದಲು ಮತ್ತು ಮಾತಾಡಲು ಬರುತ್ತದೆ ಎ0ಬ ಅಧಾರದ ಮೇಲಲ್ಲ. ಉದಾಹರಣೆಗೆ ಇ0ದು ನಮ್ಮ ದೇಶದಲ್ಲಿ 100 ಕ್ಕೆ ಕನಿಷ್ಟ ಪಕ್ಷ 70 ಜನ ಆ0ಗ್ಲ ಭಾಷೆಯನ್ನು ಬರೆಯಬಲ್ಲರು ಓದಬಲ್ಲರು ಮತ್ತು ಸ್ಪುಟವಾಗಿ ಮಾತನಾಡಬಲ್ಲರು ಹಾಗೆ0ದ ಮಾತ್ರಕ್ಕೆ ಅವರೆಲ್ಲ ಆ0ಗ್ಲರೆ0ದು ಪರಿಗಣಿಸಲಾಗದು ಅಲ್ಲವೇ????

    ಪ್ರತ್ಯುತ್ತರಅಳಿಸಿ

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !