ಭಾನುವಾರ, ಏಪ್ರಿಲ್ 3, 2011

ಯಾವುದು ನಿಜವಾದ ದೇಶಪ್ರೇಮ ?

ವಿಶ್ವ ಕಪ್ ಗೆದ್ದ ಭಾರತಕ್ಕೆ ಅಭಿನಂದನೆಗಳು. ಹಾಗೆಯೇ ಕೊನೆಯವರೆಗೂ ಅತ್ಯಂತ ಸ್ಪರ್ಧಾತ್ಮಕ ಕ್ರಿಕೆಟ್ ಆಡಿದ ಶ್ರೀಲಂಕೆಗೂ ಶುಭಾಶಯಗಳು. ಮೊನ್ನೆ ಮೊನ್ನೆಯ ಪಾಕಿಸ್ತಾನದ ಎದುರಿನ ಸೆಮಿ ಫೈನಲ್ ಬಗ್ಗೆ ಮಾಧ್ಯಮಗಳಲ್ಲಿ ಇದ್ದ ಕ್ರೇಜ್, ಇದೊಂದು ಯುದ್ಧ ಅನ್ನುವ ಮನಸ್ಥಿತಿ ಫೈನಲ್ ಪಂದ್ಯದಲ್ಲಿ ಅಷ್ಟಾಗಿ ಕಾಣಲಿಲ್ಲ. ಸೆಮಿ ಫೈನಲ್ ನಲ್ಲಿ ಪಾಕಿಸ್ತಾನವನ್ನು ಸೋಲಿಸಿದರೆ ಸಾಕು, ಫೈನಲ್ ಗೆಲ್ಲದಿದ್ದರೂ ಆದೀತು ಅನ್ನುವ ಅನಿಸಿಕೆಗಳನ್ನು ಅಲ್ಲಲ್ಲಿ ಕಂಡೆ. ಹಾಗೆಯೇ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತಕ್ಕೆ ಈ ಕಪ್ಪು ಬೇಕೇ ಬೇಕು ಅನ್ನುವ ತರಹದ ಚರ್ಚೆಗಳನ್ನು ಅಲ್ಲಲ್ಲಿ ಕಂಡೆ. ಕೊನೆಯಲ್ಲಿ, ಕಪ್ ಗೆದ್ದ ತಂಡಕ್ಕೆ ಹೆಚ್ಚಿನ ಸರ್ಕಾರಗಳು (ನಮ್ಮ ರಾಜ್ಯ ಸರ್ಕಾರವು ಸೇರಿದಂತೆ ) ಬಹುಮಾನದ ಸುರಿಮಳೆ ಗೈದು ತಮ್ಮ ಅಸಂಖ್ಯ ಪಾಪುಲಿಸ್ಟ್ ಕ್ರಮಗಳಿಗೆ ಇನ್ನೊಂದು ಸೇರ್ಪಡೆ ಮಾಡಿದ್ದನ್ನು ಕಂಡೆ. ಒಂದು ಆಟಕ್ಕೆ ಈ ಮಟ್ಟದ ಗಮನ, ಆದ್ಯತೆ ಕೊಡುವಷ್ಟರಲ್ಲಿ ಅದರ ಅರ್ಧದಷ್ಟು ಗಮನ ಈ ದೇಶದ, ಅದರ ಜನರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲೂ ಕೊಟ್ಟಿದ್ದಲ್ಲಿ ನಮ್ಮೆದುರು ಇರುವ ಸಮಸ್ಯೆಗಳಲ್ಲಿ ಕೆಲವಕ್ಕಾದರು ಪರಿಹಾರ ಸಿಕ್ಕಿರುತಿತ್ತೇನೋ ಅನ್ನಿಸಿತು.

ಯಾವುದು ದೇಶ ಪ್ರೇಮ ?
ಮೈದಾನದಲ್ಲಿ ಇಂಡಿಯಾ ಇಂಡಿಯಾ ಎಂದು ಕೂಗುವುದೋ, ಮುಖಕ್ಕೆ ಬಣ್ಣ ಬಳಿದು ಕುಣಿದು ಕುಪ್ಪಳಿಸುವುದೋ, ಇಲ್ಲವೇ ಪಂದ್ಯ ಗೆದ್ದ ಮೇಲೆ ಬಾರಿಗೋಗಿ ಎಣ್ಣೆ ಹೊಡೆದು ರಸ್ತೆಯಲ್ಲಿ ಹೋ ಎಂದು ಕಿರಿಚುವುದೇ ದೇಶಪ್ರೇಮ ತೋರಿಸುವ ಮಾರ್ಗ ಅನಿಸುವಂತಹ ಸ್ಥಿತಿ ಇದೆ ನಮ್ಮ ಹಲವು ಯುವಕರಲ್ಲಿ.  ಹಾಗಿದ್ರೆ ಅದನ್ನು ಮಾಡಲೇಬಾರದಾ? ಮಾಡಲೇ ಬಾರದು ಎಂದು ಹೇಳುವ ಮಾರಲ್ ಪೋಲಿಸಿಂಗ್ ನಿಲುವು ನನ್ನದಲ್ಲ. ಯಾರಿಗೂ ತೊಂದರೆ ಆಗದಂತೆ ಖಂಡಿತ ಮಾಡಬಹುದು. ಯಾವ ತಪ್ಪು ಇಲ್ಲ. ಆದರೆ ಒಂದು ಆಟಕ್ಕೆ ಮೈ ಮೇಲೆ ಆವೇಶ ಬಂದಂತೆ ವರ್ತಿಸುವ ಇದೇ ಜನರು ನಿಜವಾದ ದೇಶಪ್ರೇಮ ತೋರಿಸುವಂತ ಚಿಕ್ಕ ಕೆಲಸಗಳಾದ "ಟ್ರಾಫಿಕ್ ರೂಲ್ಸ್ ಅನುಸರಿಸುವುದು","ಫೂಟ್ ಪಾತ್ ಮೇಲೆ ಬೈಕು ಓಡಿಸದಿರುವುದು", "ಕಂಡ ಕಂಡಲ್ಲಿ ಕಸ ಎಸೆಯದೆ, ಉಚ್ಚೆ ಹೊಯ್ಯದೆ" ಸಿವಿಕ್ ಸೆನ್ಸ್ ಇಟ್ಟುಕೊಳ್ಳುವುದರಿಂದ ಹಿಡಿದು  "ಸಮಯಕ್ಕೆ ಸರಿಯಾಗಿ ತೆರಿಗೆ ಕಟ್ಟುವುದು", "ಪ್ರತಿ ಚುನಾವಣೆಯಲ್ಲಿ ತಪ್ಪದೆ ಮತ ಚಲಾಯಿಸುವುದು",  ಇಂತಹ ನಾಗರಿಕ ಪ್ರಜ್ಞೆಯ ಜವಾಬ್ದಾರಿಯ ಕೆಲಸಗಳನ್ನು ಇದೇ ಶ್ರದ್ಧೆಯಿಂದ, ಇದೇ ಪ್ರೀತಿಯಿಂದ ಮಾಡುತ್ತಾರಾ? ದೇಶಪ್ರೇಮದ ನಿಜವಾದ ಮಾಪನಗಳಾದ ಇವುಗಳ ಬಗ್ಗೆ ದಿವ್ಯ ನಿರ್ಲಕ್ಷ ತಾಳುವ ಜನರು ಒಂದು ಮ್ಯಾಚ್, ಅದರಲ್ಲೂ ಒಂದು ದೇಶದ ವಿರುದ್ಧದ ಪಂದ್ಯಕ್ಕೆ ಕೊಡುವ ಗಮನ ಎಲ್ಲೋ ಒಂದು ಕಡೆ ನಿಜವಾದ ಸಮಸ್ಯೆಗಳಿಂದ, ಜವಾಬ್ದಾರಿಗಳಿಂದ ನುಣುಚಿಕೊಳ್ಳುವ, ಪಲಾಯನವಾದಿ ಮನಸ್ಥಿತಿಯೇ ಅನ್ನುವುದು ನನ್ನ ಅನಿಸಿಕೆ. ಇಂತಹ ಮನಸ್ಥಿತಿಯ ಪ್ರಜೆಗಳಿಂದಾಗಿಯೇ ಇವರನ್ನು ಆಳುವ ದೊರೆಗಳು ಗೆದ್ದ ಆಟಗಾರರಿಗೆ(ಅದು ಕೂಡಾ ವರ್ಷಕ್ಕೆ ನೂರಾರು ಕೋಟಿ ದುಡಿಯುವ ಆಟಗಾರರಿಗೆ) 50X80 ಸೈಟು ಕೊಡ್ತೀನಿ ಅನ್ನೋ ಮಟ್ಟದ ಚೀಪ್ ಪಾಪುಲಿಸ್ಟ್ ಕ್ರಮಗಳಿಗೆ ಜೋತು ಬೀಳೋದು. ದೇಶದ ಎಲ್ಲ ಅವ್ಯವಸ್ಥೆಗೂ ರಾಜಕಾರಣಿಗಳನ್ನು ಬೈಯುತ್ತ, ತಮ್ಮ ತಮ್ಮ ಜವಾಬ್ದಾರಿಯಿಂದ ಜಾರಿಕೊಂಡು, ಮ್ಯಾಚ್ ಇದ್ದಾಗ ಕ್ರಿಕೆಟ್ ಬಟ್ಟೆ ಹಾಕೊಂಡು, ಮುಖಕ್ಕೆ ಬಣ್ಣ ಬಳ್ಕೊಂಡು ಇಂಡಿಯಾ ಇಂಡಿಯಾ ಎಂದು ಕೂಗಿ, ಮ್ಯಾಚ್ ಮುಗಿಸಿ ಮನೆಗ್ ಬಂದು ಊಟ ಮಾಡಿ ಮಲಗಿ ಬೆಳಿಗ್ಗೆ ಎದ್ದು ಮತ್ತದೇ ಕೆಲಸ ಮಾಡಿಕೊಂಡು, "ಈ ದೇಶದ ಕತೆ ಇಷ್ಟೇ " ಅಂತ ಬೈಕೊಂಡು, ವೀಸಾ ಸಿಕ್ಕ ತಕ್ಷಣ ಅಮೆರಿಕಕ್ಕೆ ಹಾರಿ ಹೋಗಿ ಡಾಲರ್ ಎಣಿಸೋ ಕನಸು ಕಾಣೋ ಜನರ ದೇಶಪ್ರೇಮ ಎಷ್ಟು shallow ಅನ್ನಿಸುತ್ತೆ .

ಚಿತ್ರ ಕೃಪೆ: zimbio.com

16 ಕಾಮೆಂಟ್‌ಗಳು:

  1. adrallu maaja andre , cricket nalli toruva ee tarada hucchu beredralli torsodilla ..


    bahala chennagide shettare

    ಪ್ರತ್ಯುತ್ತರಅಳಿಸಿ
  2. ದೇವಸ್ಥಾನದಲ್ಲಿ ಪ್ರಸಾದ ಹಂಚುತ್ತಿದ್ದಾಗ ಜಾಸ್ತಿ ಇರಲಿ ಕಮ್ಮಿ ಇರಲಿ, ಬಂದವರಿಗೆ, ಬರುವವರಿಗೆ ನೋಡಿಕೊಂಡು ಹಂಚುತ್ತಾರೆ, ನಾವೆಲ್ಲರೂ ಮಾಡಬಹುದಾದ ಕೆಲಸ ಏನೆಂದರೆ ನಮಗೆ ಇಷ್ಟ ಆಗುವ ಎಲ್ಲ ಕ್ರೀಡೆ ಇರಬಹುದು, ಕಾರ್ಯಕ್ರಮ ಇರಬಹುದು, ಚರ್ಚೆ ಇರಬಹುದು ತುಂಬು ಮನಸಿನಿಂದ ಭಾಗವಹಿಸುವುದು ಹಾಗು ಹುರಿದುಂಬಿಸುವುದು, ಹಾಗು ನಮ್ಮ ಕೈಲಾದ ಸಹಾಯ ಮಾಡುವುದು. ಇದರಿಂದ ಎಲ್ಲರು, ಎಲ್ಲಕದೆಗು ಬೆಳವಣಿಗೆ ಆಗಲು ದಿಕ್ಸೂಚಿ ಸಿಕ್ಕಂತೆ ಆಗುತ್ತದೆ. ಇದೆಲ್ಲಕ್ಕಿಂತಲೂ ನಮ್ಮ ಹಕ್ಕು ಮತ್ತು ಕರ್ತವ್ಯಗಳನ್ನ ಮರೆಯದೆ ಇರುವುದು. ಕನ್ನಡ ಮಾತು ಬರಿ ನವೆಂಬರ್ ತಿಂಗಳಿನಂತೆ ಆಗಬಾರದು.

    ಪ್ರತ್ಯುತ್ತರಅಳಿಸಿ
  3. ಇಪ್ಪತ್ತೆಂಟು ವರ್ಷಗಳ ನಂತರ ಭಾರತ ಕ್ರಿಕೆಟ್ ವಿಶ್ವಕಪ್ ಗೆದ್ದ ಸಂಭ್ರಮಾಚರಣೆಗಳಿಗೂ ಭಾರತದ ಸಮಸ್ಯೆಗಳಿಗೂ, ಅವುಗಳ ಪರಿಹಾರಗಳಿಗೂ ತಳುಕು ಹಾಕುತ್ತ ನಿಟ್ಟುಸಿರುಗರೆಯುವದೂ ಒಂದು ಸಮಸ್ಯೆಯೆ ಆಗಿರುವಂತಿದೆ.ಒಂದು ದೇಶದ ಚೈತನ್ಯ ಹಲವು ವಿಧಗಳಲ್ಲಿ ಅಭಿವ್ಯಕ್ತಗೊಳ್ಳುತ್ತಿರುತ್ತದೆ.ಧೋನಿ ಎಂಬ ಒಬ್ಬ ದಿಟ್ಟ ಯುವಕನ ಮುಂದಾಳತ್ತ್ವದಲ್ಲಿ ಭಾರತದ ಕ್ರಿಕೆಟ್ ಟೆಸ್ಟ್ ರಾಂಕಿಂಗ್ ನಲ್ಲಿ ಪ್ರಥಮ ಸ್ಥಾನಕ್ಕೇರಿದೆ. ಇಪ್ಪತ್ತ್ತು ಓವರ್ ಗಳ ಆವೃತ್ತಿಯ ವಿಶ್ವಕಪ್ ಗೆದ್ದು ಈಗ ಒಂದು ದಿನದ ಕ್ರಿಕೆಟ್ ವಿಶ್ವಕಪ್ ಗೆದ್ದಿದೆ.ಅಬಾಲವೃದ್ಧರಾದಿಯಾಗಿ ಜನ ಸಂಭ್ರಮಿಸುತ್ತಿದ್ದಾರೆ.ಎಲ್ಲೂ ಏನೂ ಅನಾಹುತಗಳಾಗಿಲ್ಲ, ಕಾನೂನು ಸುವ್ಯವಸ್ಥೆಯ ಸಮಸ್ಯೆಗಳಾಗಿಲ್ಲ.ಯಾಕೆ ಎಲ್ಲದರ ಬಗ್ಗೆಯೂ ಕೊರಗು ಧ್ವನಿಯಲ್ಲಿ ಮಾತ್ತನಾಡುತ್ತಿರಬೇಕು?

    ಪ್ರತ್ಯುತ್ತರಅಳಿಸಿ
  4. ನಮಸ್ಕಾರ ಅಶೋಕ್ ಅವರೇ,
    ವಿಶ್ವ ಕಪ್ ಗೆದ್ದ ಬಗ್ಗೆ ನನಗು ಅಷ್ಟೇ ಸಂತಸವಿದೆ. ನನ್ನ ಕಾಳಜಿ ಇದ್ದಿದ್ದು ಈಗ ದೇಶಪ್ರೇಮದ ಹೊಳೆಯಲ್ಲಿ ಮಿಯುತ್ತಿರುವ ಯುವಕರು ಇದೆ ರೀತಿ ಈ ನಾಡಿನ ಸಮಸ್ಯೆಗಳ ಬಗ್ಗೆಯೂ ಸ್ವಲ್ಪ ಕಾಳಜಿ ತೋರಿಸಿದ್ದಾರೆ, ಸಿನಿಕಲ್ ಆಗಿರೋದನ್ನು ಬಿಟ್ಟು ಪ್ರಜಾ ತಂತ್ರ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವ ಮನಸು ಮಾಡಿದರೆ ನಿಜಕ್ಕೂ ಬದಲಾವಣೆ ಸಾಧ್ಯವಿತ್ತು ಅನ್ನುವುದಾಗಿದೆ. ಎಲ್ಲದಕ್ಕೂ ರಾಜಕಾರಣಿಗಳನ್ನು ಬೈದು, ನೈಜ ಸಮಸ್ಯೆಗಳಿಗೆ indifferent ಆಗಿರುವ ಯುವ ಜನರ ಧೋರಣೆಯನ್ನು ಈ ಸಂದರ್ಭದಲ್ಲಿ ಪ್ರಶ್ನಿಸಲು ಹಾಗೆ ಬರೆದೆ. ಅದು ಅಲ್ಲದೆ ನಾನಿಲ್ಲಿ ದೇಶದ ಸಮಸ್ಯೆಗಳಿಗಿಂತ ಹೆಚ್ಚಾಗಿ ಒಬ್ಬ ನಾಗರಿಕನಾಗಿ ಪ್ರತಿಯೊಬ್ಬರೂ ನಡೆದುಕೊಳ್ಳುವ ರೀತಿಯನ್ನ ಪ್ರಶ್ನಿಸಿದೆ, ಯಾಕೆಂದರೆ ಬೇರಾವ ಸಮಸ್ಯೆಗೆ ಪರಿಹಾರವಿಲ್ಲದಿದ್ದರು ಸಮಯಕ್ಕೆ ತೆರಿಗೆ ಕಟ್ಟುವ, ಟ್ರಾಫಿಕ್ ರೂಲ್ಸ್ ಪಾಲಿಸುವಂತಹ ಚಿಕ್ಕ ಪುಟ್ಟ ವಿಷಯಕ್ಕೂ ಇಲ್ಲಿರುವ indifference ಅನ್ನು ಇದೆ ಸಂದರ್ಭದಲ್ಲಿ ಪ್ರಶ್ನಿಸಿದೆ. ಓದಿ ಪ್ರತಿಕ್ರಿಯಿಸಿದ್ದಕ್ಕೆನನ್ನಿ ..

    ಪ್ರತ್ಯುತ್ತರಅಳಿಸಿ
  5. nimma comment ok, aadre namma hechhina mandiyalli ee alochanegalu illa yaake.. nannadondu vinanti... saadyavaadare rajakiyakke banni... nimmanta alochane iruvavara sankye raajakiyadalli kadime ide... adikaravillade yeshtu baradaru, koogidaru prayojana illa... dhanyavadagalu...

    -prashanthenigma@gmail.com

    ಪ್ರತ್ಯುತ್ತರಅಳಿಸಿ
  6. vasant, nice article. you are very true about everything you have written. but ee reethiya deshabhimana hechisuva cricket nanthaha aacharanegala agatyavide. neevu ashtondu nirasharagabedi. ide deshabhimanavu ondalla ondu dina bere vishayagaligoo haraduttade. people will surely realize as the time passes. ishtu varshagaLu badatanadinda arajakateyinda baLaluttida baratada yuvakanalli abhimanada korate haagu inferiority complex ittu. but avellavu hoguva kaala bandide. jotege supiority complex hechaagoshte aagi hogide. aadare ivellavu samastitiyalli baralu swalpa kaala beku. adu tadavaagabahudu but aage aaguttade. haagu adu aago haage naavu shrama vahisabeku. namma nimma pratiyobbara yuvakana prayathna mukhya idaralli. cricket ondu kade aadare mattondu kade inthaha articles haagu inthaha charchegaLu. ellavu ottaare pragatiparadatta kondoyyalu mettilugaLu. adannu hege upayogisikoLtheevi annodu nammellara kaiyalli ide...

    ಪ್ರತ್ಯುತ್ತರಅಳಿಸಿ
  7. olleya baraha vasant.
    heege 20+ varshagalinda ella world cup aadagalu kooda kunidaadi aagide..adarinda enu deshabhimaana kanatte nange gottilla...aa deshabhimaana deshakke enu maadiside nammninda adunnu kaane...

    ಪ್ರತ್ಯುತ್ತರಅಳಿಸಿ
  8. Valle vichara prasthapisiddira Shettare. Nanagu kuda e sangati tumba dina dinda kadta ide. "Cricket and bollywood are the only 2 things that unites the country" antha tirmanissidagide! Namma (nammantha)yuvakarige aakarshane ne jivana. Vishwa cup ishtu adbuthavagi geddidakke nammelarigu kushi yagide. Aadare, yenne hodedu rastegallali deshabhimana merayuvudu yava seeme abhimana?
    Navella yochisabekagiddu- hege namma janaranna rajakiya, deshada pragatiyatta aakarshisodu anta? Dhongi deshabhimanakke dhikkaravirali.
    Nanna itare barahagalige- http://thoughts.com/vinaybiradar/blog

    ಪ್ರತ್ಯುತ್ತರಅಳಿಸಿ
  9. Vasant would have written completely different article, if the Captain or the man of the match had been a karnataka player :) Tumba dina aad mele, ella kade ondu olle feeling ide. Swalpa enjoy maadi.

    ಪ್ರತ್ಯುತ್ತರಅಳಿಸಿ
  10. Good and neat write-up. Even I feel we take too much "pride" in some issues of no national importance.

    ಪ್ರತ್ಯುತ್ತರಅಳಿಸಿ
  11. Exactly what I have been pondering over from a few days Mr.Vasanth...is there a solution to this at all!!

    ಪ್ರತ್ಯುತ್ತರಅಳಿಸಿ
  12. i agree with Vasanths views,teher are others sports also ,which needs our attantions ,support

    ಪ್ರತ್ಯುತ್ತರಅಳಿಸಿ
  13. Vasanth avre,

    Thumba olleya article....Nanu cricket nodolla, adre, ade yuvakaru cricket bagge iro huchu deshada samasyagala bagge yake illa antha...

    Cricket gu mathu desha premakku yav sambhandhavu illa...cricket ondu ata, adu aata vagiye iddare olleyadu..

    Tumba channagi barithidiri...

    hange continue madri...

    ಪ್ರತ್ಯುತ್ತರಅಳಿಸಿ
  14. Elli bekandalli galeeju maado namage, nijavaada desha prema swalpa noo illa...

    ಪ್ರತ್ಯುತ್ತರಅಳಿಸಿ
  15. "ವೀಸಾ ಸಿಕ್ಕ ತಕ್ಷಣ ಅಮೆರಿಕಕ್ಕೆ ಹಾರಿ ಹೋಗಿ ಡಾಲರ್ ಎಣಿಸೋ ಕನಸು ಕಾಣೋ ಜನರ ದೇಶಪ್ರೇಮ ಎಷ್ಟು shallow ಅನ್ನಿಸುತ್ತೆ"

    Sir navenu manasittu hogtivi antha ankondra? Khandita illa. Illina avakashagala korate indaagi ashte! Halvaaru kutumbagalige duddina avashyakate bahalashtu iratte. Hagaagi avru haage madtaare.

    Illidkondu hege desha seve madbahudu antha swalpa heltira?

    ಪ್ರತ್ಯುತ್ತರಅಳಿಸಿ

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !