ಶನಿವಾರ, ಜುಲೈ 23, 2011

ಸಿಂಗಂ ವಿವಾದ - ಕೇಳಿಕೊಳ್ಳಬೇಕಾದ ಕೆಲವು ಪ್ರಶ್ನೆಗಳು..

ಸಿಂಗಂ ಅನ್ನುವ ನಕಲು ಚಿತ್ರದಲ್ಲಿ ಕನ್ನಡಿಗರನ್ನು ನಾಯಿಗಳೆಂದು ಜರಿಯುವ ಡೈಲಾಗ್ನಿಂದ ಕರ್ನಾಟಕದಲ್ಲಿ ಎಲ್ಲೆಡೆ ಪ್ರತಿಭಟನೆ ವ್ಯಕ್ತವಾಗಿದ್ದು ಕಂಡೆ. ಕರ್ನಾಟಕದಲ್ಲಿ ವ್ಯಕ್ತವಾದ ಭಾರಿ ವಿರೋಧಕ್ಕೆ ಪ್ರತಿಕ್ರಿಯಿಸಿದ ಸಿಂಗಂನಲ್ಲಿ ನಟಿಸಿರುವ ಕನ್ನಡ ಮೂಲದ ನಟ ಮಹಾಶಯರೊಬ್ಬರು "ಅದೇನು ದೊಡ್ಡ ವಿಷಯವೇ ಅಲ್ಲ. ಇದರ ವಿರೋಧಕ್ಕೆ ಅರ್ಥವಿಲ್ಲ" ಅಂದರು. ಘಟನೆ ಚಿಕ್ಕದೋ, ದೊಡ್ಡದೋ ಅನ್ನುವುದಕ್ಕಿಂತ ಇಂತಹ ಘಟನೆಯ ಹಿಂದೆ ಮನಸ್ಸಲ್ಲಿ ಏಳುವ ಕೆಲವು ಪ್ರಶ್ನೆಗಳು ಹಲವಾರು.
 • ಇದೊಂದು ಚಿಕ್ಕ ಘಟನೆ ಅನ್ನುವ ಪ್ರಕಾಶ ರೈ ಅವರಿಗೆ ಕರ್ನಾಟಕ-ಮಹಾರಾಷ್ಟ್ರದ ನಡುವೆ ದಶಕಗಳಿಂದ ಗಡಿ ವಿವಾದವಿರುವುದು, ಅದು ಎರಡೂ ಕಡೆಯವರಿಗೆ ಭಾವನಾತ್ಮಕ ವಿಷಯವಾಗಿರುವುದರ ಅರಿವಿಲ್ಲವೇ? ಅರಿವಿದ್ದೂ ಇಂತಹದೊಂದು ಡೈಲಾಗ್ ಪ್ರಯೋಗ ಮಾಡಿರುವುದು ಪ್ರಚೋದಿಸಿ ಮರಾಠಿಗರನ್ನು ಈ ಹಿಂದಿ ಚಿತ್ರದತ್ತ ಸೆಳೆಯುವ playing to the gallery ಅನ್ನುವ ಮನಸ್ಥಿತಿಯಲ್ಲವೇ? ಇಲ್ಲದಿದ್ದರೆ ಚಿತ್ರದಲ್ಲಿ ಕರ್ನಾಟಕದಿಂದ ಸಾವಿರ ಜನರನ್ನು ಕರೆ ತರುವೆ ಎಂದು ಇವರು ಅನ್ನುವುದು, ಅದಕ್ಕೆ ಎದೆ ತಟ್ಟಿ ನಾನು ಮರಾಠ, ನಾನು ಮರಾಠ ಎಂದು ಕೂಗುತ್ತ ಕನ್ನಡಿಗರನ್ನು ನಾಯಿಗಳು ಎಂದು ಹೀರೊ ಬೊಬ್ಬಿರಿಯವುದು ಏನನ್ನು ತೋರಿಸುತ್ತದೆ? Artistic freedom ಹೆಸರಿನಲ್ಲಿ ಯಾವ ಅವಮಾನ ಮಾಡಿದರೂ, ಏನು ಮಾತನಾಡಿದರೂ ಸಹಿಸಿಕೊಳ್ಳಬೇಕೆ? ಅದನ್ನು ಪ್ರಶ್ನಿಸಿ ಬೀದಿಗಿಳಿಯುವುದು ಸಣ್ಣತನವೇ? ಸಂಕುಚಿತ ಮನೋಭಾವನೆಯೇ? ಪ್ರಕಾಶ್ ರೈಗೇನು ಬಿಡಿ, ಇವತ್ತು ಇಲ್ಲಿ ಕನ್ನಡಿಗ, ಅಲ್ಲಿ ತಮಿಳಿಗ, ಇನ್ನೆಲ್ಲೋ ತೆಲುಗ, ಮತ್ತೆಲ್ಲೋ ಇಂಡಿಯನ್ ಅಂದುಕೊಂಡು ತಮ್ಮ ಕೆಲಸ ಮಾಡ್ಕೊಂಡು ಮುಂದಕ್ಕೊಗ್ತಾರೆ. ಎಷ್ಟೇ ಅಂದರೂ ಕಲಾವಿದರಿಗ ಭಾಶೆಯ ಹಂಗಿಲ್ಲವಲ್ಲವೇ? :)
 • ಇಂತದೇ ಡೈಲಾಗ್  ಪ್ರಕಾಶ ರೈ ಕೈಯಲ್ಲಿ ಮರಾಠರ ವಿರುದ್ದ ಉದುರಿಸುವ ಧೈರ್ಯ ನಿರ್ದೇಶಕರಿಗೆದೆಯೇ? ಅಂತಹ ಪ್ರಯತ್ನ ಮಾಡಿದ್ದಲ್ಲಿ ಮಹಾರಾಷ್ಟ್ರ ಇಷ್ಟೊತ್ತಿಗೆ ಹೊತ್ತಿ ಉರಿಯುತ್ತಿತ್ತೆನೋ..ಇದು ಕರ್ನಾಟಕ ನೋಡಿ, ಬಿಟ್ಟಿ ಬಿದ್ದಿರುವ ಊರು, ಜನರು. ಈ ರೀತಿ ಬೆಂಕಿ ಹಚ್ಚೋ ಯಾವ ಕೆಲಸ ಮಾಡಿದ್ರೂ ನಡೆಯುತ್ತೆ ಅನ್ನೋದು ಇದರ ಹಿಂದಿನ ನಂಬಿಕೆಯೇ?
 • ಕಂಠಿ ಅನ್ನುವ ಕನ್ನಡ ಚಿತ್ರದಲ್ಲಿ ಮರಾಠಿಗರ ವಿರುದ್ಧ ಡೈಲಾಗ್ ಇದೆ ಅನ್ನುವ ಕಾರಣವೊಡ್ಡಿ ಎರಡೆರಡು ತಿಂಗಳು ಚಿತ್ರದ ಬಿಡುಗಡೆಯೇ ಆಗದಂತೆ ಮುಂದೂಡಿದ ಸೆನ್ಸಾರ್ ಮಂಡಳಿ ಈ ಚಿತ್ರದಲ್ಲಿ ಇಂತಹದೊಂದು ನೇರಾನೇರ ಪ್ರಚೋದನಕಾರಿ ಡೈಲಾಗ್ ಇದ್ದರೂ ಚಿತ್ರವನ್ನು ಸರ್ಟಿಫೈ ಮಾಡಿದ್ದು ಯಾಕೆ? ಹಿಂದಿ ಚಿತ್ರಕ್ಕೊಂದು, ಕನ್ನಡ ಚಿತ್ರಕ್ಕೊಂದು ಅಂತೇನಾದರೂ ನಿಯಮಗಳಿವೆಯಾ?
 • ತಮಿಳಿನಲ್ಲಿ ಮೊದಲು ಬಂದು, ಆಮೇಲೆ ಕನ್ನಡದಲ್ಲಿ ಕೆಂಪೇಗೌಡನಾಗಿ ಬಂದ ಈ ಚಿತ್ರಕ್ಕೆ ಕರ್ನಾಟಕದಲ್ಲಿ ಸಿಕ್ಕಿದ್ದು ಬರೋಬರಿ 27 ಚಿತ್ರಮಂದಿರಗಳು. ನಿಯಮಾನುಸಾರ 21 ಚಿತ್ರಮಂದಿರಗಳಲ್ಲಿ ಮಾತ್ರವೇ ಪರಭಾಷಾ ಚಿತ್ರ ಬಿಡುಗಡೆಯಾಗಬೇಕು. ಇಲ್ಲಿ ಅದನ್ನು ಮೀರಿ ಬಿಡುಗಡೆ ಮಾಡಿದ ರಿಲಾಯನ್ಸ್ ಸಂಸ್ಥೆಯನ್ನು ಪ್ರಶ್ನಿಸಬೇಕಾದ KFCC ಏನ್ ನಿದ್ದೆ ಮಾಡ್ತಿದೆಯೇ? ಉದ್ಯಮದ ಏಳಿಗೆ, ಉಳಿವಿನ ಬಗ್ಗೆ ಕೆಲಸ ಮಾಡಬೇಕಾದ ಇವರ ಗಮನ ಏನಿದ್ದರೂ ರಿಮೇಕ್ ಚಿತ್ರಕ್ಕೂ ಸಬ್ಸಿಡಿ ಕೊಡಿ, ಅಸಂವಿಧಾನಿಕವಾಗಿ ಡಬ್ಬಿಂಗ್ ನಿಷೇಧಿಸಿ ಅನ್ನುವಂತಹ ಕೆಲಸಕ್ಕೆ ಬಾರದ ಬೇಡಿಕೆಗಳ ಬಗ್ಗೆ ಮಾತ್ರವೇನು?
ಇಂತದ್ದೆಲ್ಲ ಆದಾಗ ನಾವು ಸುಮ್ನೆ ಇದ್ರೆ ಇಂತದ್ದಕ್ಕೆಲ್ಲ ಕೊನೆಯೇ ಇರಲ್ಲ. ನಮ್ಮನ್ನೇ ಆಡ್ಕೊಂಡು, ನಮ್ ನಾಡಲ್ಲೇ ದಂಡಿಯಾಗಿ ಚಿತ್ರ ಬಿಡುಗಡೆ ಮಾಡಿ ನಮ್ ಕಾಸೇ ಬಾಚ್ಕೊಂಡು ಹೋಗೊ ಇಂತಹ ಹೇರಿಕೆಯ ಚಿತ್ರಗಳನ್ನು ನಾವೇ ಕೈಯಾರೆ ನೋಡಿ ಬೆಂಬಲಿಸಬೇಕೇ? ಆಯ್ಕೆ ನಮ್ ನಮ್ ಕೈಯಲ್ಲೇ ಇದೆ.

28 ಕಾಮೆಂಟ್‌ಗಳು:

 1. Kannadakke kannadigare shathrugalu,,,,,,,ennuvudakke edondu example


  adu samanya kannadigarinda edidu,, ellaravarege...

  PUTTA HONNEGOWDA

  ಪ್ರತ್ಯುತ್ತರಅಳಿಸಿ
 2. inthavarinda intha asahyakara varthaneyannashte nireekshisabahudu.. ivarella avakashavaadigalu!!

  ಪ್ರತ್ಯುತ್ತರಅಳಿಸಿ
 3. neevu kelida haage, idu bitti biddiruva raajya.....yaru eshte daurjanya-dukha needali...namma maneya bagge ashte namage chinthe....prati obbara padu ishte...chitra ranga ondu nidarshana, udyoga-shikshana-soulabhyagalellavu ide category ge barutte!! innu mundhaadaru ecchettu kondu nammali adagiruva swabhimanavannu ebbisi inthaha avamangala viruddha horadale beku!!

  ಪ್ರತ್ಯುತ್ತರಅಳಿಸಿ
 4. the most effective form of protest is mass boycott! if their economics is hurt, they will never repeat this mistake again

  ಪ್ರತ್ಯುತ್ತರಅಳಿಸಿ
 5. vicky21

  yakoo hindi film censor board ge hindi bashee baroola anta kaanute...

  ಪ್ರತ್ಯುತ್ತರಅಳಿಸಿ
 6. Sambhavane kotre enbekadru madthivi anno mattakke e ella kalivadaru bandiddare... (kelavaranna bittu). Bhasha premavantu doora ulitu.., modalu avaru tamma tamma labha elli ide anthane nodthare... Gadi vichara bandaga karnatakadavaru yako onthara summnago thara kanutte... Han nanu opkotini kelave kelavu jana nishwarthathe inda horaduttiddare.. Yake namma ella kannadigarannu ogggattu maduvudakkagodilla emba prashne nanna sada kadutte,. Ide singham vichara maharashtrada viruddha agiddiddre alli jana sidideluta idru, yochisiye irbardu aa thara madthidru., namma e holasu rajakiya nammanu atantra goliside..

  ಪ್ರತ್ಯುತ್ತರಅಳಿಸಿ
 7. Duddigagi enannadaru marikollo ivrige Thayinadina hirime, Bhasheya bagegina gouravada bele khanditha gotthillaaa.........

  ಪ್ರತ್ಯುತ್ತರಅಳಿಸಿ
 8. Namma Master Heerannaiah avaru helida haage kannadigaru (inthavaru) Nirabhimaanigalu. Including KFCC.!

  ಪ್ರತ್ಯುತ್ತರಅಳಿಸಿ
 9. kannidigaru veeshaaala hrudayadavaru ankodu dailag hakidare...

  mettinda hodedu nantara kshame kelbahudu anno idea?

  ಪ್ರತ್ಯುತ್ತರಅಳಿಸಿ
 10. singam chitrada nirdeshakaru saha karnatakadavare (rohith shetty) kannadadalli fighting master n nataraagidda M.B.shetty yavara maga.

  ಪ್ರತ್ಯುತ್ತರಅಳಿಸಿ
 11. good one. but it is unfortunate that no articles on this topic i read in any popular dailies. People who read English dailies dont even know about this issue. Even Kannadigas have shifted on a large scale to English dailies and hence they also dont know. I suggest to send this article to a kannada daily and also write one in English with the same content and try for publishing in an English daily. I indeed read some news on this in english news channel but they kind of wrote provocatively just saying KRV targeted Singham movie screening, without even mentioning what is the real issue about. such half baked news gives negative impressions on kannadigas ...

  ಪ್ರತ್ಯುತ್ತರಅಳಿಸಿ
 12. We kannadiga's boycott this film, but others will definitely watch this for entertainment. In India people look for entertainment more than respect for others. Also about the media people who show & publish half baked news are not kannadigas, 80% of them are outsiders, they are just doing it to increase program's TRP rating.

  ಪ್ರತ್ಯುತ್ತರಅಳಿಸಿ
 13. ಕನ್ನಡಿಗರೇ ಇನ್ನಾದರೂ ಕನ್ನಡಿಗರಾಗಿ ಬಾಳಿ. ಕನ್ನಡದ ಬಗ್ಗೆ ಸ್ವಲ್ಪವಾದರೂ ಅಭಿಮಾನವಿರಲಿ. ಇಂತಹ ಚಿತ್ರಗಳನ್ನು ಮೊದಲು ಬಹಿಷ್ಕಾರಗೊಳಿಸಬೇಕು.

  ಪ್ರತ್ಯುತ್ತರಅಳಿಸಿ
 14. hogli bidu siva yaakingadtira ellaru.. ayyoo

  ಪ್ರತ್ಯುತ್ತರಅಳಿಸಿ
 15. HI nanna hesaru sathish, Article chennagi bardidira, but idu avrige reach aagbeku, innond sthi hingella maadbardu, jai karnataka maathe

  ಪ್ರತ್ಯುತ್ತರಅಳಿಸಿ
 16. ನಾವು ಕನ್ನಡಿಗರು, ಹಿರಣ್ಣಯ್ಯನವರು ಹೇಳಿದ ಹಾಗೆ "ನಿರಭಿಮಾನಿಗಳು" ೧೦೦% ನಿಜ.
  ಕೆ ಎಫ್ ಸಿ ಸಿ ಯವರು ನರ ಸತ್ತವರು.

  In the end; Very appropriately put in newspaper - The Hindu - magazine section article So what's the fuss all about? - an article about protests in India, where author Vijay Nair concludes "In this secular country of ours, it's never about religion or values. It's always about politics and the economics you can derive from it."

  ಅಶ್ವಿನಿ ಕುಮಾರ್
  ಬೆಂಗಳೂರು

  ಪ್ರತ್ಯುತ್ತರಅಳಿಸಿ
 17. modalu kaanadigaru thama bhaseya mele preethi, abhimana belesikolabeku... namma chitra ranga uttama prathibavantha nirdeshakarige avakasa kodabeku.... ivattu 'Krishnan marriage story' yemba chitravanu nodidde...chitra noduvaga nanna mansalli nirdeshakanige hidi shapa haakidanthu nija... yochisi samaya thengedukondu uttamavada chitragalanu kodi... manasige banda aage cinema thegedu kannada chitra rangakke keta hesaru tarabedi...

  ಪ್ರತ್ಯುತ್ತರಅಳಿಸಿ
 18. ಇಲ್ಲಿ ಕೇಳಬೇಕಾದ ಇನ್ನು ಕೆಲವು ಪ್ರಶ್ನೆಗಳು

  ೧) ಹೀರೊ ಹಾಗೂ ವಿಲುನ್ ಇಬ್ಬರೂ ಮರಾಠಿಗರು ಆದರೂ ಕರ್ನಾಟಕದಿಂದ ಜನರನ್ನು ಕರೆಸುತ್ತೇನೆ ಎನ್ನುವ ಅಗತ್ಯವೇನಿತ್ತು
  ೨) ಸಿನಿಮಾ ದೃಷ್ಠಿಯಿಂದ ಅದನ್ನು ಒಪ್ಪಿಕೊಂಡರು ಹೀರೊ
  ನಾನು ಮರಾಠ ಮರಾಠ ಎಂದು ಬೊಬ್ಬೆ ಹೊಡೆದು ನಿನ್ನಂತ ನಾಯಿಗಳ ಹಿಂಡು ಎನ್ನುವಾಗ ಇದರ ಹಿಂದಿರುವ ಉದ್ದೇಶ ಅರಿವಾಗುವುದಿಲ್ಲವೆ.

  ಪ್ರತ್ಯುತ್ತರಅಳಿಸಿ
 19. ಕನ್ನಡಿಗರು ವಿಶಾಲ ಹೃದಯಿಗಳು, ನಾವು ಮೊದಲು ಭಾರತೀಯರು ನಂತರ ಕನ್ನಡಿಗರು ಅಂತ ತಿಳಿದುಕೊಂಡು ಇವರಿಗೆ ನಮ್ಮ ಮಾರುಕಟ್ಟೆ ಬಿಟ್ಟು ಕೊಡು ಮೊದ್ಲು;ಕರ್ನಾಟಕದಿಂದಲೇ ಭಾರತ ಅಂತ ಅರ್ಥೈಸಿಕೊಳ್ಳಬೇಕಿದೆ.
  ಪರಭಾಷಾ ಸಿನಿಮಾಗಳಿಗೆ ಪ್ರತ್ಯೇಕ ಸೆನ್ಸಾರ್ ಬೋರ್ಡ್ ವೊಂದು ಸ್ಥಾಪಿತ ವಾಗಬೇಕಿದೆ.
  --

  ಪ್ರತ್ಯುತ್ತರಅಳಿಸಿ
 20. nan helbekandre nam karnataka dalli modlu oggattilla adke e lofers galu e reeti madtirodu,,,iddannu hage bitre iinu jasti aagutte,,,,,,

  ಪ್ರತ್ಯುತ್ತರಅಳಿಸಿ
 21. See hero & villain both are playing marathi characters. So if villain says that he'll bring support from outside means, people in Maharashtra are supporting hero and villain is seeking support from marathi people staying outside, in neighboring states like Andra, Karnataka. Just like UPA govt. which seeks outside support to survive. So I don't know why marathi people are calling their own group as dogs..I think we should ignore it & let them think...
  PK

  ಪ್ರತ್ಯುತ್ತರಅಳಿಸಿ
 22. ವಸಂತ್ ಅವರಿಗೆ ನಮಸ್ಕಾರ,,
  ನಾನು ಸಂತೋಷ್ ಅಂತ....
  ಈ ಚಿತ್ರ ದ ಡೈಲಾಗ್ ಬಗ್ಗೆ,,ಕನ್ನಡಿಗರ ವಿರೋಧ ಇದೆ ಇದೆ,,
  ಆಗಲೇ ರಕ್ಷಣಾ ವೇದಿಕೆ ಪ್ರಕಾಶ್ ರೈ ಗೆ ಬಿಸಿ ಮುಟ್ಟಿಸಿದೆ.....
  ಆದರೆ ವಿಪರಿಯಾಸ ಎಂದರೆ ನಮ್ಮ ಕರ್ನಾಟಕದ ರಾಜಕೀಯ ವ್ಯಕ್ತಿಗಳು ,ಕನ್ನಡದ ಬಗ್ಗೆ ಸಮಾರಂಭ ಗಳಾದರೆ ಅಲ್ಲಿ ಮಾತ್ರ
  ಕನ್ನಡದ ಬಗ್ಗೆ ಬಾಷಣ ಕೆನು ಕಮ್ಮಿ ಇಲ್ಲ ,,ಕನ್ನಡ ದ ಶಲ್ಯ ವನ್ನು ಉಟ್ಟು ಅಪ್ಪಟ ಕನ್ನಡಾಭಿಮಾನ ಮೆರೆಯುತಾರೆ
  ಆದರೆ ಇಂತಹ ವಿಷಯಗಳು ಬಂದಾಗ ಒಬ್ಬರು ದ್ವನಿ ಎತ್ತುವುದಿಲ್ಲ,,
  ಆದರೆ ಪಕ್ಕದ ಮಹಾರಾಷ್ಟ್ರ ದಲ್ಲಿ ಆಗೇ ಅಲ್ಲ,,ಎಲ್ಲರೂ ಒಮ್ಮೆಲೇ ದ್ವನಿ ಎತ್ತುತಾರೆ
  ಯಾಕೆ ನಮ್ಮ ರಾಜ್ಯದಲ್ಲಿ ಈಗೆ??????????????
  ಆದರೆ ಈ ಪರಿಸ್ತಿತಿ ಯಲ್ಲಿ ಇನ್ನೊಂದು ವಿಷಯ ಪ್ರಸ್ಥಾಪಿಸಲೇ ಬೇಕು,,,ಯಾವ ರಾಜಕಾರಣಿ ಬರಲಿ ಬಿಡಲಿ
  ನಮ್ಮ ಕನ್ನಡಕ್ಕಾಗಿ ಪ್ರಾಣ ಕೊಡಲು ಕೋಟಿ ಕೋಟಿ ಕನ್ನಡ ಸಿಂಹಗಳು ಎಂದೆಂದು ಸಿದ್ಹ,,

  ಪ್ರತ್ಯುತ್ತರಅಳಿಸಿ
 23. ನನ್ನ ಪ್ರಕಾರ ಈ ಪ್ರಚೋದನಾಕಾರಿ ಡೈಲಾಗನ್ನು ಪ್ರಕಾಶ್ ರೈರವರು ನಿರ್ದೇಶಕರ ಜೊತೆ ಸಮಾಲೋಚಿಸಿ ತೆಗೆದು ಹಾಕಲು ಹೇಳಬೇಕಿತ್ತು. ಅದು ಬಿಟ್ಟು ತಮ್ಮ ಮುಂಬರುವ ಚಿತ್ರಗಳಿಗೆ ಎಲ್ಲಿ ಕುಂದು ಬರುವುದೋ ಎಂದುಕೊಂಡು ನಿರ್ದೇಶಕರು ಹೇಳಿದ್ದೆಲ್ಲವನ್ನೂ ಮಾಡಿ ಕನ್ನಡಿಗರ ಮನ ನೋಯಿಸಿದ್ದಾರೆ. ಮುಂಬರುವ ಚಿತ್ರಗಳಲ್ಲಾದರೂ ಇಂತಹ ಪ್ರಚೋದನಕಾರಿ ಡೈಲಾಗ್ ಗಳು ಬರದಿರಲಿ ಎಂಬ ಆಶಯ.

  ಪ್ರತ್ಯುತ್ತರಅಳಿಸಿ
 24. We should really appreciate the ability of Kannada Communities to protest and demonstrate against anti-kannada activities. Things like this can't be ignored, because these days patience is misunderstood as inability to react. Although I agree that Singham team did not have any intention to hurt or dishonor any Kannadiga. In my opinion, the dialogue line doesn't directly mention anything against Kannadiga, it is clearly uttered against the person named "Jayakanth Shikre" villain in the movie, thats all.

  ಪ್ರತ್ಯುತ್ತರಅಳಿಸಿ
 25. nanu hemmeya kannadiga....

  Kannadakke anyayavadaga kannada sanghagagala jote kai jodisi horadadidre matra kannada uliyodu sadhya.. Heli eddeli kannada premigale...

  ಪ್ರತ್ಯುತ್ತರಅಳಿಸಿ
 26. Really tht provoking blog!!! Its sad to see dat a Director & Actor of K'taka Origin have used this cheap dialogue to titillate Maharashtra Cine-goers. Though I'm not supporter of violent protests, any1 who says the protests in K'taka r making mountain out of a mole, should just imagine what wud have happened if the dialogue wer against Marathi's???

  ಪ್ರತ್ಯುತ್ತರಅಳಿಸಿ
 27. shravan
  sariyagi helidya guru bari nam manelli kunthkondu kannada kannada andre agalla yella bittu bedheli nithokond horadbeku... ad bittu 4 banner katkondu 6 road mervange madi dc office ge hogi manavi pathra kododalla dandam dashaguam antha madidre ne budhi barodu... avag inond sari kannadad bage mathadad irli neneskoloku hedru beku maklu... jai karnataka mathe

  ಪ್ರತ್ಯುತ್ತರಅಳಿಸಿ

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !