ಸೋಮವಾರ, ಸೆಪ್ಟೆಂಬರ್ 13, 2010

Language Policy that is apt for India !

ಏನ್ ಗುರು ಬ್ಲಾಗಿನಲ್ಲಿ ಬಂದ "ಭಾರತಕ್ಕೊಪ್ಪೋ ಭಾಷಾನೀತಿ..." ಎಂಬ ಅಂಕಣವನ್ನು ಗೆಳೆಯ ಸಂದೀಪ ಇಂಗ್ಲಿಷ್ ಗೆ ಅನುವಾದ ಮಾಡಿದ್ದಾರೆ. ಅತ್ಯಂತ ಸರಳವಾದ ಶೈಲಿಯಲ್ಲಿ ಬರೆದಿರುವ ಅಂಕಣವನ್ನು ಅನುಮತಿಯೊಂದಿಗೆ ಇಲ್ಲಿ ಪ್ರಕಟಿಸುತ್ತಿರುವೆ. ನೀವು ಓದಿ, ನಿಮ್ಮ ಕನ್ನಡೇತರ ಗೆಳೆಯರೊಂದಿಗೂ ಹಂಚಿಕೊಳ್ಳಿ..  - ವಸಂತ

India is a vast country of several peoples, cultures, customs, and beliefs. Politically, after having obtained independence in 1947, several prominent challenges that faced us as a nation were: "How to govern this diverse country of ours? How to keep it united?..." etc.

India stumbled in the very first step
Well before independence, the designs for a post-independent India were discussed in the several sessions of the Indian National Congress. The idea of having Hindi as India's national language too was discussed and debated. Post independence, there were also efforts in this direction. But owing to opposition from non-Hindi speaking areas the idea did not see the light of day. A parliamentarian by name Dhulekar even once commented that "people who do not know Hindustani have no right to stay in India". T.T. Krishnamachari, in a bitter response, had said, "it is up to my friends in U.P. to have a whole-India; it is up to them to have a Hindi-India", and had warned of India's division if Hindi was made the sole national language of India. After three years of exhaustive discussions the Indian Constitution was framed, and brought into effect in 1950.


Approval for Hindi propagation in the Constitution
Though it was not declared in the constitution as the sole National Language, Hindi was given a new special status, 'Raj Bhasha', thus declaring it the official language of communication for the Government of India, along with English for the next 15 years. However, those non-Hindi speakers who fought against the National Language tag for Hindi were relieved by the fact that the Indian constitution had not used the word 'National Language', when referring to Hindi. But the fact that Article 351 of the Constitution makes it the duty of the Union Government to promote the spread of Hindi, clearly reflects the character of language policy adopted in India, and in reality the Union Government by then had already laid the foundation stone for the grand establishment of Hindi in every Indian home. So, the relief was only limited to the fact that Hindi was not given the National Language tag.

It was written in the pages of the Constitution that "it shall be the duty of the Union to promote the spread of the Hindi language" (Article 351) throughout India. With the objective of making Hindi the sole official language and help its spread across India, it was mandated that a commission be constituted for the progressive use of Hindi and restrict the use of English (Article 344). And communication between the states and the Union, and among the states was mandated to be in English or Hindi (Article 345).

Programs for the spread of Hindi
Whenever possible, efforts were made to establish the supremacy of Hindi. By appointing a language Committee, in 1963 efforts were made to remove English as an official language and to retain Hindi alone in that position. But when there was wide-spread opposition to such a move in Tamil Nadu, an amendment was made in 1965 to continue to retain English in that position. So what? Hindi was given the special privilege for propagation across India, that was denied for any other language. Several hundred crores are being spent from the taxpayers' money for the spread of Hindi. On the other hand 'Hindi Prachar Sabhas' were established in every nook and corner of the country. Thus it became India's official policy to spread Hindi through persuasion, incentive and goodwill.

Department of Official Language
For the purposes of meeting such an objective the Department of Official Language was opened. Through this department designs for the establishment of Hindi in the institutions under or affiliated to the Central Government were formed and the rules for the use of the official language for communication in India were formulated. The specifications of The Official Languages Rules, that came into effect in 1976, seemed to provide more velocity to the efforts of the establishment of Hindi. But the discriminatory nature of this law was very apparent. Because the very first lines of this law mention that it is not applicable to the state of Tamil Nadu. The fact that this law mandates that any letter written in Hindi in a Central Government office in any corner of the country should be replied to only in Hindi, clearly reflects the Hindi-Colonial mindset.

Recognition for Hindi alone
It is clear that the overall language policy of India is to give exclusive encouragement for the development of Hindi. If this encouragement was limited to the Hindi speaking regions we could have asked for the same kind of encouragement for our languages too. But the Union Government's efforts towards encouragement of Hindi are focused at establishing it in our state. This discriminatory language policy is clearly against the United Nations' language policy. So then, India's language policy should be such that....

Language Policy that is apt for India
The language policy for a pluralistic India should be such that it should help retain and develop plurality and diversity. The language policy should be such that it should provide every language group their rights, that is their linguistic rights as specified in UNESCO's Universal Declaration of Linguistic Rights. Let the status of Official language be given to every language of India. Let the communication among states happen in languages of those states. Let there be a language policy that allows every state to use its language in government, education and for the purposes of building livelihoods of their people. Thus India's language policy needs to be reformulated such that every language, belonging to a particular region, is ensured a supreme status in that region. In effect, all languages defined in the Eighth schedule of the Constitution should be given equal rights and status. India's language policy should be so formulated that it should enable the participation of every person, people and language group in the path towards development, it should not affect linguistic diversity, it should aid in the achievement of effective communication and cohesion, it should help create an environment where it is possible for every language group to conduct itself in a way that complements the all round development of all other language groups, their environments and cultures.

Parting Comments
There is nothing wrong in amending the Constitution so that it facilitates the development of a language policy that is apt for a country like India, which is comprised of linguistically diverse regions.

29 ಕಾಮೆಂಟ್‌ಗಳು:

  1. Then Mr vasant shetty, When there is a need for interstate communication In which language people of India can communicate ?

    ಪ್ರತ್ಯುತ್ತರಅಳಿಸಿ
  2. ಇದರಂತೆ, ಜನಗಣತಿ ತಂಡ ಮಾತನಾಡಿಸಿದ ಪ್ರತಿ ಸಾವಿರ ಜನರಲ್ಲಿ 953 ಜನ ಗಣತಿ ನಡೆದ ಆ ರಾಜ್ಯದಲ್ಲೇ ಹುಟ್ಟಿರೋದು. ಅವರು ಬೇರೊಂದು ರಾಜ್ಯದಿಂದ ವಲಸೆ ಬಂದಿರೋರಲ್ಲ. ಹಾಗೆಯೇ, ಜನಗಣತಿ ತಂಡ ಮಾತನಾಡಿಸಿದ ಪ್ರತಿ 1000 ಜನರಲ್ಲಿ 878 ಜನ ಗಣತಿ ನಡೆದ ಅದೇ ಜಿಲ್ಲೆಯಲ್ಲೇ ಹುಟ್ಟಿರೋದು. ಕೊನೆಯಲ್ಲಿ, ಪ್ರತಿ 1000 ಜನರಲ್ಲಿ ಸುಮಾರು 701 ಜನ ಗಣತಿ ನಡೆದ ಹಳ್ಳಿಯಲ್ಲೇ ಹುಟ್ಟಿರೋದು ! ಇವರು ತಮ್ಮ ಜಿಲ್ಲೆಯಲ್ಲೇ ಇನ್ನೊಂದು ಜಾಗಕ್ಕೆ ವಲಸೆ ಹೋಗಿಲ್ಲ !
    ಈ ಮೇಲಿನ ಅಂಕಿಅಂಶ ಭಾರತ ಅನ್ನೋದು ಅಲೆಮಾರಿಗಳ ದೇಶವಲ್ಲ ಅನ್ನೋದನ್ನ ಒತ್ತಿ ಹೇಳುತ್ತೆ. ನೆಲೆಸಿಗನನ್ನು ಕಡೆಗಣಿಸಿ, ವಲಸಿಗನಿಗಾಗಿ ಒಂದು ನಾಡಿನ ಕಲಿಕೆ, ಆಡಳಿತ, ಉದ್ಯೋಗವಕಾಶ ಕಟ್ಟಬೇಕು ಅನ್ನೋದು ತಪ್ಪು ನಿರ್ಧಾರ ಅಂತ ಒತ್ತಿ ಹೇಳುತ್ತೆ http://enguru.blogspot.com/2010/03/bharatha-ondu-alemaarigala-deshava.html

    ಪ್ರತ್ಯುತ್ತರಅಳಿಸಿ
  3. “ನೀವು ಕರ್ನಾಟಕದಿಂದ ಹೊರಗ್ ಬಂದು ನೋಡಿ, ಅಲ್ಲಿನ ಊರುಗಳಿಗೆ ಹೋದಾಗ ಯಾವ ಭಾಷೆ ಮಾತಾಡ್ತೀರಿ? ಎಷ್ಟೂ ಅಂತಾ ಭಾಷೆಗಳನ್ನು ಕಲೀತೀರಿ? ಅಧಿಕೃತವಾಗೇ 22 ಭಾಷೆಗಳಿವೆ, ಅವೆಲ್ಲಾ ಕಲಿಯಕ್ ಆಗುತ್ತಾ? ಅದರ ಬದಲಾಗಿ ಒಂದು ಭಾಷೆಯಾಗಿ ಹೆಚ್ಚು ಜನಕ್ ತಿಳಿದಿರೋ ಹಿಂದೀ ಬಳಸೋದು ಒಳ್ಳೇದಲ್ವಾ?” ಅಂತ ಹಿಂದಿ ಬೇಕೆನ್ನೋ ಗೆಳೆಯರು ವಾದಿಸೋದನ್ನು ನಾವೂ ನೀವೂ ಕೇಳೇ ಇರ್ತೀವಿ. ಈಗ ಒಂದು ಕಡೆಯಿಂದ ನಾವು ಹೀಗ್ ಮಾಡೋದ್ರು ಪರಿಣಾಮ ಏನಾದೀತು ಅಂತ ನೋಡೋಣ. ನಮ್ಮ ಕನ್ನಡನಾಡಿನ ಒಂದು ಊರಿಗೆ (ಉದಾಹರಣೆಗೆ ಶಿವಮೊಗ್ಗಾ ಅಂದ್ಕೊಳ್ಳಿ) ಭಾರತದ ಬೇರೆ ಬೇರೆ ಮೂಲೆಗಳಿಂದ ತಮಿಳ್ರು, ತೆಲುಗ್ರು, ಗುಜರಾತಿಗಳೂ, ಪಂಜಾಬಿಗಳೂ, ಅಸ್ಸಾಮಿಗಳೂ, ಬೆಂಗಾಲಿಗಳೂ, ಒರಿಯಾದವರೂ… ಅವ್ರೂ ಇವ್ರೂ ಎಲ್ಲಾ ಬರ್ತಾರೆ. ಇವರೆಲ್ಲಾ ಯಾಕೆ ಬರ್ತಾರೆ ಅಂದ್ರೆ ಅಲ್ಲಿಗೆ ಹೊಸ ಹೊಸ ಉದ್ದಿಮೆಗಳನ್ನು ತರೋ ಮೂಲಕ ನಮ್ಮ ಯಡ್ಯೂರಪ್ಪನೋರು ಉದ್ಯೋಗಾವಕಾಶಗಳನ್ನು ಹೆಚ್ಚಿಸಿದ್ರು ಅಂತಾನೆ ಇಟ್ಕೊಳ್ಳಿ. ಇವರೆಲ್ಲಾ ನಮ್ಮ ಘನಸರ್ಕಾರದ ಮತ್ತು ಹಿಂದೀವಾದಿಗಳ ಆಶಯದಂತೆ ಹಿಂದಿಯನ್ನು ಕಲಿತೇ ಬರ್ತಾರೆ ಅಂದುಕೊಳ್ಳೋಣ. ಈಗ ಇವರ ಜೊತೆ ವ್ಯವಹರಿಸಬೇಕಾಗಿರೋ ನಮ್ಮೂರಿನ ಆಟೊದವ್ರು, ಬಸ್ಸಿನವ್ರು, ತರಕಾರಿಯೋರು, ಮನೆಕೆಲ್ಸದೋರು, ದಿನಸಿ ಅಂಗಡಿಯೋರು, ಮಾಲ್‍ಗಳೋರು, ನಗರಪಾಲಿಕೆಯೋರು, ತೆರಿಗೆ ಇಲಾಖೆಯೋರು, ರಾಜ್ಯಸರ್ಕಾರದೋರು ಎಲ್ಲಾ ಹಿಂದೀಲಿ ತಾನೇ ವ್ಯವಹರಿಸಬೇಕು? ಅಷ್ಟೇ ಅಲ್ಲಾ, ನೀರಿನ ಬಿಲ್ಲಿಂದ ಹಿಡ್ದು ಜಾಹೀರಾತು ಫಲಕಗಳ ತನಕ ಎಲ್ಲಾದ್ರಲ್ಲೂ, ಇವರೆಲ್ಲಾ ಕಲಿತು ಬಂದಿರೋ ಹಿಂದೀ ತಾನೇ ಇರಬೇಕಾದ್ದು? ಪಕ್ಕದ ಗಾಜನೂರಿನ ಗಂಡು, ಓದು ತಲೆಗೆ ಹತ್ತಿಲ್ಲಾ ಅಂತಾ ಶಿವಮೊಗ್ಗಾಕ್ಕೆ ಬಂದು ಏನಾದ್ರೂ ಕೆಲಸ ಹುಡುಕ್ಕೊತೀನ್ ಅಂದ್ರೆ ಆಗುತ್ತಾ? ಆಟೋ ಓಡ್ಸೋದ್ರಿಂದ ಹಿಡ್ದು ಅಂಗಡಿ ಸೇಲ್ಸ್‍ಬಾಯ್ ಆಗೋಕೂ ಬರೀ ಹಿಂದೀ ಬರಲ್ಲಾ ಅನ್ನೋ ಒಂದು ಕಾರಣಕ್ಕೆ ಅವ ನಾಲಾಯಕ್ಕಾಗಲ್ವಾ? ಇಂಥಾ ಶಿವಮೊಗ್ಗದಲ್ಲಿ ಕನ್ನಡದ ಗತಿ ಏನಾಗಿರುತ್ತೆ? ಕನ್ನಡಿಗರ ಗತಿ ಏನಾಗಿರುತ್ತೆ? ಅಂತಾ ಒಸಿ ಯೋಚ್ಸು ಗುರು… ಕನ್ನಡ ಅನ್ನೋದು ಅಡುಗೆ ಮನೆ ಸೇರ್ಕೊಂಬುಡುತ್ತೆ ಅಂತೀರಾ? ಊಹೂ, ಅದೂ ಆಗಲ್ಲ. ಯಾಕಂದ್ರೆ ಅಷ್ಟು ಹೊತ್ತಿಗೆ ಮಾರ್ಕೆಟ್‍ನಲ್ಲಿ ಕೊಂಡು ಅಡುಗೆ ಮನೆಗೆ ನಾವು ತಂದಿಡೋದು ಸಬ್ಜಿ., ದಾಲ್, ಚಾವಲ್ ಆಗೋಗಿರುತ್ತಲ್ಲಾ? ಸೌಹಾರ್ದತೆ ಅಂತಾ ನಾವೇನಾದ್ರೂ ಹಿಂದೀನಾ ಒಪ್ಪೋದಾದ್ರೆ ನಮಗಾಗಿ ನಾವೇ ಸರಿಯಾದ ಅಳತೆಯ, ಒಳ್ಳೇ ಶ್ರೀಗಂಧದ ಸೊಗಸಾದ ಶವಪೆಟ್ಟಿಗೆ ಮಾಡ್ಕೊಂಡಂಗೆ ಅಂತಾ ಅನ್ಸಲ್ವಾ ಗುರು?

    ಹಿಂದಿ ಬೇಕು ಅನ್ನೋದ್ರು ಹಿಂದಿರೋ ನಿಜಕಾರಣ

    “ಕನ್ನಡದ ಮಂಕುಮುಂಡೇವಾ, ಭಾರತದ ಒಗ್ಗಟ್ಟು ಅಂದ್ರೇನು ಗೊತ್ತಾ? ಇಡೀ ಭಾರತದ ಯಾವ ಮೂಲೆಗೆ ಹೋದ್ರೂ ಹಿಂದಿಯೆನ್ನುವ ನಮ್ಮ ಭಾಷೆ ನಡೀಬೇಕು. ಹಿಂದಿ ಮಾತಾಡೋಕೆ ಬರದಿದ್ರೆ ಭಾರತೀಯ ಅಲ್ಲಾ ಅಲ್ವಾ, ಹಾಗಾಗಿ ಹಿಂದಿ ಮಾತಾಡೋರಿಗೆ ಅಂದ್ರೆ ಭಾರತೀಯರಿಗೆ ಭಾರತದ ಯಾವ ಮೂಲೇಲೂ ಕಳ್ಳೇಕಾಯಿ ತೊಗೊಳ್ಳೋಕೂ ಭಾಷಾ ಸಮಸ್ಯೆ ಆಗಬಾರದು. ನೀವು ಚೆನ್ನಾಗಿ ಹಿಂದೀನ ಕಲಿತುಕೊಳ್ಳಿ ಅಂತಾನೆ ರೈಲ್ವೇ ಡಿ ದರ್ಜೆ ಕೆಲಸಗಳ ಥರದ ಕೇಂದ್ರಸರ್ಕಾರದ ಕೆಲಸಗಳು ಬೇಕು ಅನ್ನೋದಾದ್ರೆ ಅರ್ಜೀನಾ ಹಿಂದೀಲಿ ಬರೀರಿ ಅನ್ನೋದು. ಇಲ್ಲಾಂದ್ರೆ ನೀವು ಕೆಲಸ ಮಾಡೋ ರೈಲು ನಿಲ್ದಾಣಕ್ಕೆ ಬರೋ ಭಾರತೀಯರಿಗೆ ತೊಂದರೆ ಆಗಲ್ವಾ? ಇವತ್ತು ನಿಮಗೆ ಅನ್ನ ಕೊಡಕ್ಕೆ ಇಂಗ್ಲೀಷ್ ಇದೆ ಅಂತೀರಾ? ಥೂ… ಅದು ನಮ್ಮನ್ನು ಮುನ್ನೂರು ವರ್ಷ ಗುಲಾಮರನ್ನಾಗಿಸಿದ ಬ್ರಿಟೀಷ್ ಸಾಮ್ರಾಜ್ಯಶಾಹಿಯ ಕುರುಹು. ಹೋಗಿ ಹೋಗಿ ಅಷ್ಟು ದೂರದಲ್ಲಿರೋ ಇಂಗ್ಲೀಷ್ ಸೂಜಿಯಿಂದ ಯಾಕೆ ಕಣ್ಣು ಚುಚ್ಕೋತೀರಾ? ಇಗೋ ನೋಡಿ, ನಿಮ್ಮದೇ ದೇಶದ ಹೊಚ್ಚ ಹೊಸ ಚಿನ್ನದ ಸೂಜಿಯಿದೆ, ತಗೊಂಡು ಹೆಟ್ಕೊಳ್ಳಿ” ಅಂತೆಲ್ಲಾ ಹೇಳುದ್ರೆ ಜನಾ ಕೇಳ್ತಾರಾ ಗುರು? ಅದುಕ್ಕೆ ನಿಮ್ಮ ರಾಷ್ಟ್ರಪ್ರೇಮದ ಕುರುಹಾಗಿ, ಭಾರತದ ಒಗ್ಗಟ್ಟಿಗಾಗಿ, ಭಾರತೀಯರೆಲ್ಲರೂ ಒಂದೆಂದು ಸಾರಲಿಕ್ಕಾಗಿ, ಹಿಂದೀ ಎಂಬ ರಾಷ್ಟ್ರೀಯ ಮಟ್ಟದ ಉರುಫ್ ರಾಷ್ಟ್ರೀಯ ಉರುಫ್ ರಾಷ್ಟ್ರಭಾಷೇನಾ (ನೀವು ಸುಮ್ನೆ ಗೊಂದಲ ಮಾಡ್ಕೊಳ್ಳಿ ಅಂತಾ ಅಷ್ಟು ಹೆಸರು) ಒಪ್ಪಿಕೊಳ್ರೋ ಹುಚ್ಚಪ್ಪಗಳಿರಾ ಅಂತಿದಾರೆ ಅನ್ನೋದೇ ದಿಟ ಅಲ್ವಾ ಗುರು?

    ಪ್ರತ್ಯುತ್ತರಅಳಿಸಿ
  4. If I move to Andhra, or Maharashtra or any other state, I have two options.
    1> If I have gone there as a visitor, I don't have to learn their language before going and I can manage with whatever bit n peaces of knowledge I have.
    2> If I have gone there in search of a job and planning to settle there, I would learn their language and become one among them.

    Leave the choice of learning a language to people. If I have plans to move to Pune, let me learn Marathi. If I am moving to UP, let me learn hindi. Don't create a language policy and impose a language on everyone. After all, just 0.47% of India migrates to another state for jobs as evident in census data. You can't create a lang policy just for those few migrants.

    ಪ್ರತ್ಯುತ್ತರಅಳಿಸಿ
  5. ಸೆನ್ಸಸ್ ಪ್ರಕಾರ ಕೇವಲ 0.47 % ಜನರು ಬೇರೆ ರಾಜ್ಯಗಳಿಗೆ ವಲಸೆ ಹೋಗುವುದಾದರೆ, ಶಿವಮೊಗ್ಗಕ್ಕೆ ಬರುವವರ ಸಂಖ್ಯೆ ಎಷ್ಟಾದೀತು ? 0.000...1 %. ಕೇವಲ ಅಷ್ಟು ಜನರಿಗೋಸ್ಕರ ಶಿವಮೊಗ್ಗದ ಅಂಗಡಿಗಳ ನಾಮಫಲಕ ಬದಲಾವಣೆ ಆಗುವುದಿಲ್ಲ ಮತ್ತು ಕೇವಲ ಅಷ್ಟು ಕಡಿಮೆ ಜನರಿಗೋಸ್ಕರ ಹಿಂದಿ ಗೊತ್ತಿರುವವರಿಗೆ ಮಾತ್ರ ಕೆಲಸ ಸಿಗುವುದಾಗಿ ಯಾರೂ ನಂಬುವುದಿಲ್ಲ.
    1 ) ಬೇರೆ ರಾಜ್ಯಗಳಿಗೆ ವಿಸಿಟರ್ ಆಗಿ ಹೋದಾಗ ಅಲ್ಲಿನ ಭಾಷೆಯ ಬಿಟ್ ಅಂಡ್ ಪೀಸ್ ನಲ್ಲಿ ಮಾತಾಡುವುದಾದರೆ- ಅಸ್ಸಾಮಿಯಲ್ಲೋ ಮಣಿಪುರಿಯಲ್ಲೋ ಕಳ್ಳೆಕಾಯಿ ಇದೆಯಾ ಅಂತ ಹೇಗೆ ಕೇಳ್ತೀರಿ ಈ ಬ್ಲಾಗ್ ನಲ್ಲಿ ಕಾಮೆಂಟ್ ಮಾಡಿ ನೋಡೋಣ ?

    ಪ್ರತ್ಯುತ್ತರಅಳಿಸಿ
  6. ಕಲಿಕೆ, ಬ್ಯಾಂಕ್ ಗಳ ಸೌಲಭ್ಯ, ಉದ್ಯೋಗಾವಕಾಶಗಳು, ಜನರ ಏಳ್ಗೆಗಾಗಿ ಬೇಕಿರೋ ಎಲ್ಲ ಸೌಲಭ್ಯಗಳು ಸ್ಥಳೀಯ ಭಾಷೆಯಲ್ಲಿದ್ದರೆ ಸಾಮಾನ್ಯ ಜನರಿಗೆ ಎಟುಕುತ್ತದೆ. ಜನರ ಏಳ್ಗೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಭಾಷಾ ನೀತಿಯನ್ನು ರೂಪಿಸಬೇಕೆ ಹೊರತು, ಯಾರೋ ಕೆಲವರಿಗೆ ಮಣಿಪುರಕ್ಕೆ ಹೋಗಿ "ಕಳ್ಳೆಕಾಯಿ ಇದೆಯಾ " ಅಂತ ಕೇಳಲು ಕಷ್ಟ ಆಗಬಾರದು ಆನುವುದನ್ನು ಇಟ್ಟುಕೊಂಡು ಅಲ್ಲ
    --
    ravi

    ಪ್ರತ್ಯುತ್ತರಅಳಿಸಿ
  7. ಒಬ್ಬ ಫ಼್ರಾನ್ಸ್ ಗೋ, ಇಟಾಲಿಗೋ, ಚೈನಾಗೋ, ಜಪಾನ್ ಗೋ, ರಶಿಯಗೋ ಅಥವ ಇನ್ನಾವುದೇ ದೇಶಕ್ಕೆ ಹೋದಾಗ, ಅಲ್ಲಿನ ನುಡಿಯ ಬಗ್ಗೆ ಕನಿಷ್ಠ ಅರಿವು, ಅಲ್ಲಿನ ತಿಂಡಿ ತಿನಿಸುಗಳ ಬಗ್ಗೆ ಕನಿಷ್ಠ ಅರಿವು, ಅಲ್ಲಿಯ ಬಟ್ಟೆ ಬರೆಗಳ ಬಗ್ಗೆ ಕನಿಷ್ಠ ಅರಿವು, ಅಲ್ಲಿನ ಜನರ ಬಗ್ಗೆ ಕನಿಷ್ಠ ಅರಿವು ಇಟ್ಟುಕೊಂಡು ಹೋಗೋದು ಸರ್ವೇ ಸಾಮನ್ಯ. ಅಷ್ಟು ಎಚ್ಚರಿಕೆ ವಹಿಸದವನು ಮೂಢ ಅಂತಲೋ ಮುಠ್ಠಾಳ ಅಂತಲೋ ಕರಿಬೊಹುದು. ಇನ್ನು ಮಣಿಪುರದಲ್ಲಿ ಕಳ್ಳೆಕಾಯಿ ಸಿಗುತ್ತೋ ಇಲ್ಲವೋ. ಅದಕ್ಕೇನು ಹೆಸರು ಅಂತ ತಿಳ್ಕೊಂಡ್ ಹೊಗೋದು ರೂಢಿ. ಅಥವ ಅಲ್ಲಿನ ಜನ ಕಳ್ಲೆಕಾಯಿಗೆ ಕಳ್ಳೆಕಾಯಿ ಅಂತಾರೋ ಅಥವ ಗಿಳ್ಳೆಕಾಯಿ ಅಂತರೋ ಅಲ್ಲಿ ಹೋದಮೇಲೆ ತಿಳ್ಕೊಬೊಹುದು.

    ಅದು ಬಿಟ್ಟು ಇಲ್ಲಿ ಬಂದು ಸಿಕ್ಕಿದ್ದೆ ಚಾನ್ಸ್ ಅಂತ ಬುರುಡೆ ಬಿಡೋದು, ಅದಕ್ಕೆ ಏನ್ ಕರಿತಾರೆ ಇದಕ್ಕೇನು ಕರಿತಾರೆ, ಜ್ವರ ಬಂದರೆ ಅವರು ಮೂಸಿ ನೋಡ್ತಾರ ಅಥವ ಮುಟ್ ನೋಡ್ತಾರ ಅಂತ ಕೇಳೋದು ನೋಡಿದ್ರೆ ಏನ್ ಹೇಳ್ಬೇಕೊ ಗೊತ್ತಾಗೊಲ್ಲ.

    ಪ್ರತ್ಯುತ್ತರಅಳಿಸಿ
  8. ಬರೀ ಅಲ್ಲಿ ಹೋದಾಗ ಏನ್ ಮಾಡ್ಬೇಕು ಅನ್ನೋ ಗುಂಗಿನಲ್ಲೇ ಇರೋರಿಗೆ, ಇಲ್ಲೇ ಇರುವ ಅವರ ೨೦ ರಶ್ಟು ಜನ ಯಾಕೆ ಕಣ್ಣಿಗೆ ಕಾಣಲ್ಲ. ಬಾರತ ಅಂದ್ರೆ, ಬರೀ ಅಲೆಮಾರಿಗಳ ದೇಶ ಅಂತ ತಿಳ್ಕೊಂಡಿದ್ದಾರೆ,, ಕೆಲವೇ ಕೆಲವು ಅಲೆಮಾರಿಗಳಿಗೋಸ್ಕರ ಸ್ಥಳೀಯರೆಲ್ಲ ತಮ್ಮೂರಲ್ಲೇ ಅಲೆಮಾರಿಗಳಾಗಬೇಕು ಅನ್ನೋ ಇವರ ನಿಲುವು ಅತ್ಯಂತ ಕ್ರೂರ ಮತ್ತು ಖಂಡನೀಯ...

    ಪ್ರತ್ಯುತ್ತರಅಳಿಸಿ
  9. ಸುರೇಶ ಅವರು ತುಂಬಾ ಗೊಂದಲಗೊಂಡಿದಾರೆ ಅನ್ಸುತ್ತೆ.
    ಒಬ್ಬ ಮನುಷ್ಯ, ತನ್ನ ಜೀವನ ಪೂರ್ತಿ ಎಲ್ಲಾ ಬಾಷೆಲೂ 'ಕಳ್ಳೆಕಾಯಿಗೆ ಎಷ್ಟು?" ಅಂತ ಕೇಳೋದನ್ನ ಕಲೀತಾ ಕೂತಿರಬೇಕು ಅನ್ನೋ ನಿಲುವು ಅವರದು.

    ಪ್ರತ್ಯುತ್ತರಅಳಿಸಿ
  10. "ಕೇವಲ 0.47 % ಜನರು ಬೇರೆ ರಾಜ್ಯಗಳಿಗೆ ವಲಸೆ ಹೋಗುವುದಾದರೆ, ಶಿವಮೊಗ್ಗಕ್ಕೆ ಬರುವವರ ಸಂಖ್ಯೆ ಎಷ್ಟಾದೀತು ? 0.000...1 %"

    ಇದರಲ್ಲೇ ಉತ್ತರ ಇದೆ. 0.000 ..1 % ವಲಸಿಗ ಜನರಿಗೆ ಅನುಕೂಲವಾಗುವಂತ ಕಟ್ಟಳೆ ಅಥವ ಭಾಷಾ ನೀತಿ ಇರಬೇಕಾ? 99 .999 ....9 % ಇರುವ ಜಾಗದಲ್ಲೇ ಜೀವನ ನಡೆಸುವ ಜನರಿಗೆ ಅನುಕೂಲವಾಗುವಂತ ಕಟ್ಟಳೆ ಅಥವ ಭಾಷಾ ನೀತಿ ಇರಬೇಕಾ ? ಭಾರತದ ಒಕ್ಕೂಟದಲ್ಲಿ ಬರೀ ಹಿಂದಿ ಭಾಷಿಕರ ಊರುಗಳು ಮಾತ್ರ ಇಲ್ಲ. ಬರೀ ಹಿಂದಿ ಒಂದೇ ಭಾಷೆ ಅಲ್ಲ ಇಡೀ ಭಾರತದಲ್ಲಿ. ಎಲ್ಲಾ ಕಡೆ ಹಿಂದಿಗೆ ಹೆಚ್ಚು ಒತ್ತು ಕೊಟ್ಟರೆ ಹಿಂದಿ ಭಾಷಿಕರು ಹಿಂದಿಯೇತರ ರಾಜ್ಯಗಳ ಮುಖ್ಯವಾಹಿನಿಯಲ್ಲಿ ಹೇಗೆ ಬೆರೆಯುತ್ತಾರೆ?

    "1 ) ಬೇರೆ ರಾಜ್ಯಗಳಿಗೆ ವಿಸಿಟರ್ ಆಗಿ ಹೋದಾಗ ಅಲ್ಲಿನ ಭಾಷೆಯ ಬಿಟ್ ಅಂಡ್ ಪೀಸ್ ನಲ್ಲಿ ಮಾತಾಡುವುದಾದರೆ- ಅಸ್ಸಾಮಿಯಲ್ಲೋ ಮಣಿಪುರಿಯಲ್ಲೋ ಕಳ್ಳೆಕಾಯಿ ಇದೆಯಾ ಅಂತ ಹೇಗೆ ಕೇಳ್ತೀರಿ"

    ಬೇರೆ ಬೇರೆ ರಾಜ್ಯಗಳಿಗೆ ಭೇಟಿ ನೀಡಿದಾಗ ಅಲ್ಲಿ ಯಾವ ಭಾಷೆಯಲ್ಲಿ ಮಾತಾಡ್ಬೇಕು ಅನ್ನೋ ಪ್ರಶ್ನೆಗೆ :

    ಅಮೆರಿಕದ ವೀಸಾ ತೊಗೊಳ್ಳೋಕೆ ಚೆನ್ನೈಗೆ ಹೋಗ್ಬೇಕಾಗಿ ಬಂತು. ಅಲ್ಲಿ ಟ್ಯಾಕ್ಸಿ ಚಾಲಕನಿಗೆ ತಮಿಳು ಬಿಟ್ಟು ಬೇರೆ ಭಾಷೆ ಬರ್ತಿರಲಿಲ್ಲ. ಆತನಿಗೆ ಇಂಗ್ಲಿಷ್ ಬರ್ತಿರಲಿಲ್ಲ. ನನಗೆ ತಮಿಳು ಬರ್ತಿರಲಿಲ್ಲ. ನಾನು ಕನ್ನಡದಲ್ಲಿ ಮಾತಾಡ್ತಿದ್ದೆ ಆತ ತಮಿಳಿನಲ್ಲಿ..ಇಬ್ರಿಗೂ ಸಮಸ್ಯೆ ಆಗಲಿಲ್ಲ..

    ಬೇರೆ ಬೇರೆ ಭಾಷಿಕರು ಮಾತಾಡಬೇಕೆಂದರೆ ಯಾವ ಭಾಷೆ ಬಳಸಬೇಕು ಅನ್ನೋದು ಅವರೇ ನಿರ್ಧರಿಸುತ್ತಾರೆ. ಅದನ್ನ ಕೇಂದ್ರ ಸರ್ಕಾರ ನಿರ್ಧರಿಸೋದು ಅಥವಾ ಹೇರೋದು ಯಾವ ಸೀಮೆ ನ್ಯಾಯ?

    ಸಾಧ್ಯವಾದರೆ ಈ ಬ್ಲಾಗನ್ನು ಒಮ್ಮೆ ಓದಿ : http://kspriyank.blogspot.com/2011_09_01_archive.html

    ಪ್ರತ್ಯುತ್ತರಅಳಿಸಿ
  11. I forgot that i commented in this blog. many people commented but not vasant shetty. So Mr vasant shetty can you please answer ?

    ಪ್ರತ್ಯುತ್ತರಅಳಿಸಿ
  12. Mr Suresh,
    Before I could answer, many have rightfully answered your questions. ನಾನು ಮಣಿಪುರಕ್ಕೆ ಕಡ್ಲೆಕಾಯಿ ಇದೆಯಾ ಅಂತ ಕೇಳೊಕೆ ಹೋಗಿದ್ದೆ ಆದಲ್ಲಿ, ಅಲ್ಲಿ ಕಡ್ಲೆಕಾಯಿಗೆ ಏನ್ ಅಂತಾರೆ ಅಂತ ತಿಳ್ಕೊಂಡೇ ಹೋಗ್ತಿನಿ.. ನಾನು ಜರ್ಮನಿಗೆ ಹೋಗಿ ಸೆಟ್ಲ್ ಆಗಬೇಕು, ಫ್ರಾನ್ಸಿಗೆ ಪ್ರವಾಸ ಹೋಗ್ತಿನಿ, ಅದಕ್ಕೆ ಸರ್ಕಾರ ಎಲ್ಲರಿಗೂ ಜರ್ಮನ್ ಕಲಿಸಲಿ, ಇಲ್ಲ ಫ್ರೆಂಚ್ ಕಲಿಸಲಿ ಅನ್ನೋದು ಎಷ್ಟು ಮೂರ್ಖತವಾಗುತ್ತೆ, ಹಾಗೆಯೇ ಇದು ಕೂಡಾ,, ಯಾರೋ ಒಬ್ರು ಕಡೆಲೆಕಾಯಿ ಹುಡುಕಿಕೊಂಡು ಅಸ್ಸಾಂಗೆ ಹೋಗ್ತಾರೆ ಅದಕ್ಕೆ ಎಲ್ಲರೂ ಹಿಂದಿ ಕಲಿಯಲಿ ಅನ್ನೋದು ಮೂರ್ಖತನದ ಪರಮಾವಧಿ. ಯಾರೋ ನಾಲ್ಕು ಜನರಿಗಾಗಿ ಸರ್ಕಾರದ ಭಾಷಾ ನೀತಿಗಳೆಲ್ಲ ಇರಬಾರದು.. ಯಾರಿಗೆ ಯಾವ ಭಾಷೆ ಕಲಿಬೇಕೊ ಕಲ್ತಕೊಳ್ಳೊಕೆ ಬಿಡಿ,, ಅದು ಬಿಟ್ಟು, ಎಲ್ಲರೂ ಇದನ್ನ ಕಲಿಲೇಬೇಕು,, ಕಲಿತ್ರೆ ಕೆಲಸ, ಕಲಿತ್ರೆ ಬಡ್ತಿ,, ಕಲಿತ್ರೆ ದೇಶಪ್ರೇಮ, ಕಲಿದಿದ್ರೆ ದೇಶದ್ರೋಹಿ, ಕಲಿದಿದ್ರೆ ನೀನು ಭಾರತೀಯನೇ ಅಲ್ಲ ಅನ್ನೋದು ಸಾಮ್ರಾಜ್ಯಶಾಹಿ ಮನಸ್ಥಿತಿ. ಅದು ಪ್ರಜಾತಂತ್ರಕ್ಕೆ ಎಂದಿಗೂ ಒಗ್ಗದ ನಿಲುವು.

    ಪ್ರತ್ಯುತ್ತರಅಳಿಸಿ
  13. ಮಣಿಪುರಕ್ಕೆ ಕಳ್ಳೆಕಾಯಿ ಇದೆಯಾ ಅಂತ ಕೇಳಲು ಹೋಗುವುದಲ್ಲ. ನೀವೇ ಹೇಳಿದಿರಿ ಬೇರೆ ರಾಜ್ಯಕ್ಕೆ ವಿಸಿಟರ್ ಆಗಿ ಹೋದಾಗ ಅಲ್ಲಿನ ಭಾಷೆಯ ಬಿಟ್ ಅಂಡ್ ಪೀಸ್ ನಲ್ಲಿ ವ್ಯವಹರಿಸುತ್ತೇನೆ ಅಂತ. ಅದಕ್ಕೆ ನಾನು ಕೇಳಿದ್ದು ಕುಡಿಯಲು ನೀರು ಇದೆಯಾ ? ಇಲ್ಲ ತಿನ್ನೋದಿಕ್ಕೆ ಅನ್ನ ಸಿಗುತ್ತಾ ಅಂತ ಮನಿಪುರಿಯಲ್ಲೋ ಇಲ್ಲ ಅಸ್ಸಾಮಿಯಲ್ಲೋ ಹೇಗೆ ಕೇಳ್ತೀರಿ ? ಜರ್ಮನಿಗೋ ಫ್ರಾನ್ಸ್ ಗೋ ಕೆಲವು ದಿನಗಳ ಮಟ್ಟಿಗೆ ಹೋದಾಗ ಅಲ್ಲಿನ ಭಾಷೆ ಕಲಿಯೋದರಲ್ಲೇ ವರ್ಷಗಳು ಕಳೆಯಬಾರದು ಅಂತಾನೆ ಅಂತರಾಷ್ಟ್ರೀಯ ಭಾಷೆ ಇಂಗ್ಲಿಷ್ ಕಲಿಸೋದು. ಮತ್ತೊಮ್ಮೆ ಹೇಳ್ತೇನೆ ಕಡಲೇಕಾಯಿ ಹುಡ್ಕೊಂಡು ಹೋಗುವುದಲ್ಲ. ವಿಸಿಟರ್ ಆಗಿ ಹೋದ ದಿನವೇ ಅಲ್ಲಿನ ಭಾಷೆಯನ್ನ್ನು ಕಲಿಯಲಾಗದು .ಹೋದಾಗ ಹಸಿವು ಬಾಯಾರಿಕೆಯಿಂದ ಸಾಯಬಾರದು ಅಂತ ಸಂಪರ್ಕಕ್ಕೊಸ್ಕರವಾಗಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯನ್ನೂ ದ್ವಿತೀಯ ಮತ್ತು ತ್ರತೀಯ ಭಾಷೆಯಾಗಿ ಕಲಿಸುವುದು. ನೀವ್ ಹೇಳೋದು ಹೆಂಗಿದೆ ಅಂದ್ರೆ ಯಾರೋ ನಾಲ್ಕು ಜನ ಕಳ್ಳರು ಇರ್ತಾರೆ ಅಂತ ಕಾನೂನು ಪೊಲೀಸರು ಇರ್ಬಾರ್ದು. ಕದಿಬೇಕೋ ಬೇಡವೋ ಅಂತ ಜನ ನಿರ್ಧರಿಸ್ತಾರೆ. ಕದ್ದವರಿಗೆ ತಪ್ಪು ಮಾಡಿದವರಿಗೆ ಜೈಲು. ಕದೀದವರಿಗೆ ಜೈಲಿಲ್ಲ ಅಂತ ಇರಬಾರದು, ಅದನ್ನೆಲ್ಲ ಜನ ನಿರ್ಧರಿಸಬೇಕು. ಕದಿಯೋರು ಕದೀಲಿ ಅಂದ ಹಾಗೆ ಇದೆ.
    ಮತ್ತು 0.000...1 %. ಜನರಿಗೋಸ್ಕರ ಶಿವಮೊಗ್ಗದ ಅಂಗಡಿಗಳ ನಾಮಫಲಕ ಬದಲಾವಣೆ ಆಗುವುದಿಲ್ಲ ಮತ್ತು ಕೇವಲ ಅಷ್ಟು ಕಡಿಮೆ ಜನರಿಗೋಸ್ಕರ ಹಿಂದಿ ಗೊತ್ತಿರುವವರಿಗೆ ಮಾತ್ರ ಕೆಲಸಕ್ಕಾಗಿ ಹಿಂದಿ ಕೇಳುವುದಿಲ್ಲ. ೯೯.೯೯೯೯೯೯% ಜನರ ಭಾಷೆಯಲ್ಲಿಯೇ ನಾಮಫಳಕವಿರುತ್ತದೆ . ದಯವಿಟ್ಟು ತಮ್ಮ ಮನಸ್ಥಿತಿ ಬದಲಾವಣೆ ಮಾಡಿಕೊಳ್ಳಿ. ಉತ್ತರಿಸಿ.....

    ಪ್ರತ್ಯುತ್ತರಅಳಿಸಿ
  14. ಸುರೇಶ್ ಅವರೇ,, ಇಲ್ಲಿ ವಾದಕ್ಕಿಂತ "ಹಿಂದಿ ಹೇರಿಕೆ - ಮೂರು ಮಂತ್ರ, ನೂರು ತಂತ್ರ" ಅನ್ನುವ ಪುಸ್ತಕ ಒಮ್ಮೆ ಓದಿ. ಆನಂತರ ಚರ್ಚೆ ಮಾಡೋಣ.

    ಪ್ರತ್ಯುತ್ತರಅಳಿಸಿ
  15. ಸುರೇಶ, ವಸಂತ್ ಅವರ ಉತ್ತರವನ್ನು ಹೇಗೇಗೋ ಅರ್ಥ ಮಾಡ್ಕೊತಿದೀರಿ.. ಭಾರತ ಅಲೆಮಾರಿಗಳ ದೇಶವಲ್ಲ ಅಲ್ಲ ಅಂತ ಈಗಾಗಲೇ ಪುರಾವೆ ಸಮೇತ ವಿವರಿಸಲಾಗಿದೆ. ಅದ್ಯಾಕೆ ತಮಗೆ ಅರ್ಥವಾಗುತ್ತಿಲ್ಲ ಅನ್ನೋದು ಗೊತ್ತಾಗ್ತಿಲ್ಲ. ೯೯.೯೯% ಜನ ಇರೋ ಜಾಗದಲ್ಲೇ ಇರೋವಾಗ ಅವರಿಗೆ 'ಹಿಂದಿ'ಯ ಅಗತ್ಯ ಏನಿದೆ? ಮಣಿಪುರಿಗೋ ಅಸ್ಸಾಮಿಗೋ ೦..೦೧% ಜನರ ಅಗತ್ಯಕ್ಕೆ ೯೯.೯೯% ಜನ ಯಾಕೆ ಬೇಡವಾದ ಹೊರೆ ಹೊರಬೇಕು?

    ಅಷ್ಟು ಮೀರಿ ಸಂಪರ್ಕ ಭಾಷೆ ಬೇಕೇ ಬೇಕು ಅಂದರೆ :

    ಇಂಗ್ಲಿಷ್ ಅಂತಾರಾಷ್ಟ್ರೀಯ ಭಾಷೆಯಾಗಿದೆ ಅಂತ ಅಂದಿರಿ(ಜಪಾನ್/ಚೀನಾ/ಕೊರಿಯಾದಲ್ಲಿ ಕೆಲಸ ಮಾಡಿರೋ ನನ್ನ ಗೆಳೆಯ ಹೇಳಿದ್ದು : ಇಂಗ್ಲಿಷ್ ಆ ಜನರಿಗೆ ಅರ್ಥಾನೆ ಆಗೋಲ್ಲ ಅಂತ..ಇನ್ನು ಫ್ರಾನ್ಸ್-ಜರ್ಮನಿಯಲ್ಲಿ ಇಂಗ್ಲಿಷ್ ಮಾತಾಡಿದ್ರೆ ನಮಗೆ ಉತ್ತರ ಸಿಗೋದು ಅನುಮಾನಾನೆ) ಆಯ್ತು ಒಪ್ಪುವ..ಜನ ಒಪ್ತಾರೋ ಇಲ್ವೋ, ಈಗಿನ ಸ್ತಿತಿಯಲ್ಲಿ ಇಂಗ್ಲಿಷ್ ಗೆ ಅನ್ನ(ಸಂಶೋಧನೆ,ಜ್ಞಾನ, ತಂತ್ರಜ್ಞಾನ ಇತ್ಯಾದಿ) ಕೊಡೊ ಅಷ್ಟು ಶಕ್ತಿ ಭಾರತದ ಯಾವುದೇ ಭಾಷೆಗಳಿಗೆ ಇಲ್ಲ. ಹಾಗಿದ್ದಾಗ ಇಡೀ ಭಾರತದ ಪ್ರಜೆಗಳಿಗೆ ತಾಯ್ನುಡಿಯ ಜೊತೆ ಇಂಗ್ಲಿಷ್ ಕಲಿಸಲಿ. ಆದ್ರೆ ಹಿಂದಿ ಜನರಿಗೆ- ಹಿಂದಿ-ಇಂಗ್ಲಿಷ್ ಮಾತ್ರ, ಹಿಂದಿಯೇತರಿಗೆ ತಾಯ್ನುಡಿ-ಇಂಗ್ಲಿಷ್-ಹಿಂದಿ .. ಹಿಂದಿಯೇತರರು ಏನು ಪಾಪ ಮಾಡಿದಾರೆ ಅಂತ 'ಹಿಂದಿ' ಅನ್ನೋ ಹೆಚ್ಚುವರಿ ಹೊರೆ ಹೊರಬೇಕು?

    ಅದ್ಯಾರೋ ವಿಜ್ಞಾನಿ ಅವನ ಮನೇಲಿರೋ ಎರಡು ಬೇರೆ ಬೇರೆ ಗಾತ್ರದ ಬೆಕ್ಕಿಗೆ ಎರಡು ಗೂಡು ಮಾಡ್ಸಿದ್ನಂತೆ : ದೊಡ್ಡ ಬೆಕ್ಕಿಗೆ ದೊಡ್ಡ ಗೂಡು ಚಿಕ್ಕ ಬೆಕ್ಕಿಗೆ ಚಿಕ್ಕ ಗೂಡು ಅಂತ..ದೊಡ್ಡ ಗೂಡಿನಲ್ಲೇ ಎರಡು ಬೆಕ್ಕು ಇಡಬಹುದು ಅಂತ ವಿಜ್ಞಾನಿಯ ಗೆಳೆಯ ಹೇಳಿದಾಗ ವಿಜ್ಞಾನಿಗೆ 'ಅರೆ ಹೌದಲ್ವಾ, ಇದು ಯಾಕೆ ನನಗೆ ಹೊಳೀಲಿಲ್ಲ?' ಅಂತ ಅನಿಸ್ತಂತೆ..ಇದು ಹಾಗೆ ಆಯ್ತು ಕತೆ..ದೇಶದ ಜನರ ಜೊತೆ ಸಂಪರ್ಕ ಸಾಧಿಸೋಕೆ ಹಿಂದಿ, ವಿವಿಧ ದೇಶಗಳ ಜೊತೆ ಸಂಪರ್ಕಕ್ಕೆ ಇಂಗ್ಲಿಷ್ ಅನ್ನೋದು ಏನು ಬಗೆನೋ..ದೇಶದ ಒಳಗೂ ಹೊರಗೂ ಸಂಪರ್ಕಕ್ಕೆ ಇಂಗ್ಲಿಷ್ ಒಂದೇ ಬಳಸಬಹುದಲ್ವಾ?

    ಪ್ರತ್ಯುತ್ತರಅಳಿಸಿ
  16. ಮಣಿಪುರಕ್ಕೆ ಕಳ್ಳೆಕಾಯಿ ಇದೆಯಾ ಅಂತ ಕೇಳಲು ಹೋಗುವುದಲ್ಲ. ನೀವೇ ಹೇಳಿದಿರಿ ಬೇರೆ ರಾಜ್ಯಕ್ಕೆ ವಿಸಿಟರ್ ಆಗಿ ಹೋದಾಗ ಅಲ್ಲಿನ ಭಾಷೆಯ ಬಿಟ್ ಅಂಡ್ ಪೀಸ್ ನಲ್ಲಿ ವ್ಯವಹರಿಸುತ್ತೇನೆ ಅಂತ. ಅದಕ್ಕೆ ನಾನು ಕೇಳಿದ್ದು ಕುಡಿಯಲು ನೀರು ಇದೆಯಾ ? ಇಲ್ಲ ತಿನ್ನೋದಿಕ್ಕೆ ಅನ್ನ ಸಿಗುತ್ತಾ ಅಂತ ಮನಿಪುರಿಯಲ್ಲೋ ಇಲ್ಲ ಅಸ್ಸಾಮಿಯಲ್ಲೋ ಹೇಗೆ ಕೇಳ್ತೀರಿ ?
    >> I have no clue of Marathi. I had been to Maharashtra last year and managed with bits and pieces of Marathi, Kannada and English. Just for few visitors, why should the government enact a language policy?

    ಜರ್ಮನಿಗೋ ಫ್ರಾನ್ಸ್ ಗೋ ಕೆಲವು ದಿನಗಳ ಮಟ್ಟಿಗೆ ಹೋದಾಗ ಅಲ್ಲಿನ ಭಾಷೆ ಕಲಿಯೋದರಲ್ಲೇ ವರ್ಷಗಳು ಕಳೆಯಬಾರದು ಅಂತಾನೆ ಅಂತರಾಷ್ಟ್ರೀಯ ಭಾಷೆ ಇಂಗ್ಲಿಷ್ ಕಲಿಸೋದು.
    >> Germany, France doesn't teach English for visitor's sake. They teach it to reach out to the world to sell their goods.

    ಮತ್ತೊಮ್ಮೆ ಹೇಳ್ತೇನೆ ಕಡಲೇಕಾಯಿ ಹುಡ್ಕೊಂಡು ಹೋಗುವುದಲ್ಲ. ವಿಸಿಟರ್ ಆಗಿ ಹೋದ ದಿನವೇ ಅಲ್ಲಿನ ಭಾಷೆಯನ್ನ್ನು ಕಲಿಯಲಾಗದು .ಹೋದಾಗ ಹಸಿವು ಬಾಯಾರಿಕೆಯಿಂದ ಸಾಯಬಾರದು ಅಂತ ಸಂಪರ್ಕಕ್ಕೊಸ್ಕರವಾಗಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯನ್ನೂ ದ್ವಿತೀಯ ಮತ್ತು ತ್ರತೀಯ ಭಾಷೆಯಾಗಿ ಕಲಿಸುವುದು.
    >> Nobody has ever died because of their inability to ask for water or food in any of the states in India. This is at best your wild imagination.

    ನೀವ್ ಹೇಳೋದು ಹೆಂಗಿದೆ ಅಂದ್ರೆ ಯಾರೋ ನಾಲ್ಕು ಜನ ಕಳ್ಳರು ಇರ್ತಾರೆ ಅಂತ ಕಾನೂನು ಪೊಲೀಸರು ಇರ್ಬಾರ್ದು. ಕದಿಬೇಕೋ ಬೇಡವೋ ಅಂತ ಜನ ನಿರ್ಧರಿಸ್ತಾರೆ. ಕದ್ದವರಿಗೆ ತಪ್ಪು ಮಾಡಿದವರಿಗೆ ಜೈಲು. ಕದೀದವರಿಗೆ ಜೈಲಿಲ್ಲ ಅಂತ ಇರಬಾರದು, ಅದನ್ನೆಲ್ಲ ಜನ ನಿರ್ಧರಿಸಬೇಕು. ಕದಿಯೋರು ಕದೀಲಿ ಅಂದ ಹಾಗೆ ಇದೆ.
    >> Totally irrelevant example. Compare an apple with an apple and not with a drum stick. For four migrant's sake, don't formulate a policy. Leave it to the people to decide which language they want to learn.

    ಮತ್ತು 0.000...1 %. ಜನರಿಗೋಸ್ಕರ ಶಿವಮೊಗ್ಗದ ಅಂಗಡಿಗಳ ನಾಮಫಲಕ ಬದಲಾವಣೆ ಆಗುವುದಿಲ್ಲ ಮತ್ತು ಕೇವಲ ಅಷ್ಟು ಕಡಿಮೆ ಜನರಿಗೋಸ್ಕರ ಹಿಂದಿ ಗೊತ್ತಿರುವವರಿಗೆ ಮಾತ್ರ ಕೆಲಸಕ್ಕಾಗಿ ಹಿಂದಿ ಕೇಳುವುದಿಲ್ಲ. ೯೯.೯೯೯೯೯೯% ಜನರ ಭಾಷೆಯಲ್ಲಿಯೇ ನಾಮಫಳಕವಿರುತ್ತದೆ . ದಯವಿಟ್ಟು ತಮ್ಮ ಮನಸ್ಥಿತಿ ಬದಲಾವಣೆ ಮಾಡಿಕೊಳ್ಳಿ. ಉತ್ತರಿಸಿ....
    >> To see it happening already, visit most of the post, income tax, railways, banks, PSUs in any part of Karnataka and you will realise how Kannada is getting pushed out of those offices and Hindi is making inroads into it. Come out of your illusion and start travelling to far off corners and see the reality for yourself.

    ಪ್ರತ್ಯುತ್ತರಅಳಿಸಿ
  17. which comment suresh.. I have no comment policy in my blog. Any comment gets approved automatically. I like to answer your queries as long as they are reasonable.

    ಪ್ರತ್ಯುತ್ತರಅಳಿಸಿ
  18. I don't need to prove anything to you. I said I do not delete any comments and now it's up to you to check if you really posted a comment and or assuming you posted one just like you are assuming so many things.
    Thanks.

    ಪ್ರತ್ಯುತ್ತರಅಳಿಸಿ
  19. ಹೆದರೋ ನಾಯಿನ ನೋಡಿದ್ರೆ. ಹೆದ್ರ್ಸೋ ನಾಯಿ ಹೆದರಿಸತ್ತಂತೆ. ಹೆದ್ರ ಬೇಡಿ ವಸಂತ್ ಶೆಟ್ರೆ. ಕಾಮೆಂಟ್ ಮಾಡಿದ್ದನ್ನು ನಾನು ನೋಡಿದ್ದೀನಿ. ರಿಪ್ಲೈ ಹಾಕಿ ಸಕತ್ತಾಗಿ. ತೋರಿಸಿ ಕನ್ನಡದವರ ತಾಕತ್ತ್ ಏನಂತ . ತಾಯಿ ಚಾಮುಂಡೇಶ್ವರಿ ನಿಮ್ಮ ಜತೆಗಿದ್ದಾಳೆ ಮುನ್ನಡೆಯಿರಿ.

    ಪ್ರತ್ಯುತ್ತರಅಳಿಸಿ
  20. Reply to comment--putta ಹೇಳಿದರು...

    ಹೆದರೋ ನಾಯಿನ ನೋಡಿದ್ರೆ. ಹೆದ್ರ್ಸೋ ನಾಯಿ ಹೆದರಿಸತ್ತಂತೆ. ಹೆದ್ರ ಬೇಡಿ ವಸಂತ್ ಶೆಟ್ರೆ. ಕಾಮೆಂಟ್ ಮಾಡಿದ್ದನ್ನು ನಾನು ನೋಡಿದ್ದೀನಿ. ರಿಪ್ಲೈ ಹಾಕಿ ಸಕತ್ತಾಗಿ. ತೋರಿಸಿ ಕನ್ನಡದವರ ತಾಕತ್ತ್ ಏನಂತ . ತಾಯಿ ಚಾಮುಂಡೇಶ್ವರಿ ನಿಮ್ಮ ಜತೆಗಿದ್ದಾಳೆ ಮುನ್ನಡೆಯಿರಿ.
    ೫ ಅಕ್ಟೋಬರ್ ೨೦೧೧ ೦೬:೫೫ pm

    in first comment you are telling that "I like to answer your queries as long as they are reasonable. ". in second comment you are telling "I don't need to prove anything to you.
    you are in a total confusion. even putta has seen my comment. who is assuming things ? ಸೋತವರ ಮುಖ ಮಾತ್ರ ನೋಡೋಕ್ ಆಗ್ತಾ ಇಲ್ಲ. Thanks.

    ಪ್ರತ್ಯುತ್ತರಅಳಿಸಿ
  21. @putta- ದೊಡ್ಡ ಬೆಕ್ಕಿಗೆ ದೊಡ್ಡ ಗೂಡು ಚಿಕ್ಕ ಬೆಕ್ಕಿಗೆ ಚಿಕ್ಕ ಗೂಡು ಎಲ್ಲ ಬೇಡ ಒಂದೇ ಗೂಡು ಸಾಕು ಅಂತಂದ್ರೆ "ಇಂಗ್ಲಿಷ್" ಒಂದೇ ಸಾಕು ಕನ್ನಡ ಬೇಡವೇ ಬೇಡ ಅಲ್ವ ?

    ಪ್ರತ್ಯುತ್ತರಅಳಿಸಿ
  22. i commented in this thread few days before.even my comment is also deleted. Mr Gururaja setty told correctly - as per putta's comment one should learn english only. no other language required.

    ಪ್ರತ್ಯುತ್ತರಅಳಿಸಿ
  23. sorry Vasant.. I thought I had posted my comment, but somehow it was not posted. I'll repost it soon.

    ಪ್ರತ್ಯುತ್ತರಅಳಿಸಿ
  24. ಮೊದಲಿಗೆ, ವಸಂತ್ ಅವ್ರೆ "putta " ಅನ್ನೋ ಹೆಸರಲ್ಲೇ ಇನ್ನೊಬ್ರು ಹೀಗೆ ಬರ್ದಿದಾರೆ..ಅದು ನಾನಲ್ಲ..
    "ಹೆದರೋ ನಾಯಿನ ನೋಡಿದ್ರೆ. ಹೆದ್ರ್ಸೋ ನಾಯಿ ಹೆದರಿಸತ್ತಂತೆ. ಹೆದ್ರ ಬೇಡಿ ವಸಂತ್ ಶೆಟ್ರೆ. ಕಾಮೆಂಟ್ ಮಾಡಿದ್ದನ್ನು ನಾನು ನೋಡಿದ್ದೀನಿ. ರಿಪ್ಲೈ ಹಾಕಿ ಸಕತ್ತಾಗಿ. ತೋರಿಸಿ ಕನ್ನಡದವರ ತಾಕತ್ತ್ ಏನಂತ . ತಾಯಿ ಚಾಮುಂಡೇಶ್ವರಿ ನಿಮ್ಮ ಜತೆಗಿದ್ದಾಳೆ ಮುನ್ನಡೆಯಿರಿ."


    ನಾ ಕೊಟ್ಟ ಉದಾಹರಣೆನ ಹೀಗೂ ಅರ್ಥ ಮಾಡ್ಕೊಬಹುದಾ ಅಂತ ನನಗೆ ಅಚ್ಚರಿ ಆಯಿತು!!

    "ದೊಡ್ಡ ಬೆಕ್ಕಿಗೆ ದೊಡ್ಡ ಗೂಡು ಚಿಕ್ಕ ಬೆಕ್ಕಿಗೆ ಚಿಕ್ಕ ಗೂಡು ಅಂತ..ದೊಡ್ಡ ಗೂಡಿನಲ್ಲೇ ಎರಡು ಬೆಕ್ಕು ಇಡಬಹುದು"

    ಗೂಡು ==> ಭಾಷೆ ಬೆಕ್ಕು ==> ಕನ್ನಡೇತರರು

    ದೊಡ್ಡ ಗೂಡು ==> ಇಂಗ್ಲಿಷ್
    ಚಿಕ್ಕ ಗೂಡು ==> ಹಿಂದಿ
    ದೊಡ್ಡ ಬೆಕ್ಕು ==> ಭಾರತಕ್ಕೆ ಸಂಬಂಧ ಪಡದೆ ಇರೋರು ಮತ್ತೆ ಕನ್ನಡ ತಿಳಿಯದೋರು
    ಚಿಕ್ಕ ಬೆಕ್ಕು ==> ಭಾರತೀಯರು ಆದ್ರೆ ಕನ್ನಡ ಬರ್ದಿರೋರು

    ಈಗ ನನ್ನ ವಾಕ್ಯನ ಓದಿ

    "ಕನ್ನಡ ಬರದೆ ಇರೋ ಭಾರತೀಯರ ಜೊತೆ ಹಿಂದಿ - ಭಾರತದಲ್ಲದವರ ಜೊತೆ ಇಂಗ್ಲಿಷ್" - ಇದು ಹಾಸ್ಯಾಸ್ಪದ..ಭಾರತೀಯರೊ ಅಥವ ಅಲ್ವೋ, ಕನ್ನಡಿಗನಿಗೆ ಕನ್ನಡ ಬರದೆ ಇರೋರೆಲ್ಲ ಕನ್ನಡೇತರರೆ !! ಜೊತೆ ಮಾತಾಡಲು ಸಂಪರ್ಕ ಭಾಷೆ ಬೇಕೇ ಬೇಕು ಅಂದ್ರೆ ಅದಕ್ಕೆ ಇಂಗ್ಲಿಷ್ ಸಾಕು..ಹಾಗೆ ಕನ್ನಡಿಗ ಅಂತ ಅನ್ಸಿಕೊಳ್ಳೋಕೆ ಆತನಿಗೆ ಕನ್ನಡ ಬರಲೇ ಬೇಕು..ಈ ನೆಲದಲ್ಲಿ ಹುಟ್ಟಿ ಬೆಳೆದು ಸ್ವಾಭಾವಿಕವಾಗಿಯೇ ಈ ನೆಲದ ನುಡಿಯನ್ನು ಕಲಿತವರ ನಡುವೆ ಸಂಪರ್ಕ ಭಾಷೆಯಾಗಿ ತಾಯ್ನುಡಿ(ಕನ್ನಡ) ಇರುವಾಗ ಇಂಗ್ಲಿಷ್ ಯಾಕೆ ಬೇಕು? ಅಷ್ಟಕ್ಕೋ ಸಂಪರ್ಕ ಭಾಷೆ ಅನ್ನೋದನ್ನ ಎಲ್ರು ಕಲಿಯಬೇಕಿಲ್ಲ..ಯಾಕಂದ್ರೆ ಭಾರತ ಅಲೆಮಾರಿಗಳ ದೇಶವಲ್ಲ..

    ಮತ್ತೊಮ್ಮೆ ಈ ಲೇಖನಕ್ಕೆ "ಭಾರತಕ್ಕೆ ಹಿಂದಿ ಸಂಪರ್ಕ ಭಾಷೆಯಾಗಿ ಬೇಡ" ಅಂತ ನೀಡಿರುವ ಅನಿಸಿಕೆಗಳೆಲ್ಲ ಓದಿ.. ಹಾಗೆ ಈ ಬ್ಲಾಗನ್ನೂ ಓದಿ : http://kspriyank.blogspot.com/2011_09_01_archive.html ..ನಿಮಗೆ ತಿಳ್ಯುತ್ತೆ..

    ಪ್ರತ್ಯುತ್ತರಅಳಿಸಿ

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !