ಭಾನುವಾರ, ಆಗಸ್ಟ್ 21, 2011

ನಾನ್ಯಾಕೆ ಜನಲೋಕಪಾಲ್ ಮಸೂದೆಯ ಪರವಾಗಿಲ್ಲ..

ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿರುವ ದೇಶದಲ್ಲಿ ಅದಕ್ಕೆ ಪರಿಹಾರವಾಗಿ ಜನ್ ಲೋಕ್ ಪಾಲ್ ಅನ್ನುವ ಮಸೂದೆ ಜಾರಿಯಾಗಬೇಕು ಎಂದು ಅಣ್ಣಾ ಹಜಾರೆ ನೇತೃತ್ವದ ತಂಡ ಹೋರಾಟ ಮಾಡುತ್ತಿದೆ. ಕಳೆದ ಹಲವು ತಿಂಗಳಿಂದ ಜನರು ನಿಬ್ಬೆರಗಾಗುವಂತಹ ಹತ್ತು ಹಲವು ಭ್ರಷ್ಟಾಚಾರದ ಪ್ರಕರಣಗಳು ಬೆಳಕಿಗೆ ಬಂದ ಸಂದರ್ಭದಲ್ಲಿ ಈ ಹೋರಾಟದಿಂದಲಾದರೂ ಭ್ರಷ್ಟಾಚಾರ ಅಂತ್ಯ ಕಾಣಲಿ ಎಂದು ಜನಸಾಮಾನ್ಯರು ಬಯಸಿದ್ದರಲ್ಲಿ ಅಚ್ಚರಿಯಿಲ್ಲ. ಚುನಾವಣಾ ಸುಧಾರಣೆಗಳ ಮೂಲಕ ಯೋಗ್ಯರು ಆಯ್ಕೆಯಾಗಿ ಬರುವಂತಾಗುವ ಬದಲಾವಣೆ ಮತ್ತು ಆರ್ಥಿಕ ಸುಧಾರಣೆಗಳ ಮೂಲಕ ಸರ್ಕಾರದ ಪಾತ್ರ ಕಡಿಮೆ ಮಾಡಿ ಹೆಚ್ಚು ಪರಿಣಾಮಕಾರಿಯಾದ ಮತ್ತು ಗುಣಮಟ್ಟದ ಸೇವೆಯನ್ನು ಜನರಿಗೆ ನೀಡುವಂತಹ ಬದಲಾವಣೆಗಳು ಬಂದಾಗ ಭ್ರಷ್ಟಾಚಾರ ಕಡಿಮೆಯಾಗುವುದೇ ಹೊರತು ದೆಹಲಿಯಲ್ಲಿ ಒಬ್ಬ ಲೋಕಪಾಲ್ ಅನ್ನುವ ನ್ಯಾಯಾಂಗ, ಸರ್ಕಾರ, ಸಂಸತ್ತು ಎಲ್ಲವನ್ನೂ ಮೀರಿದ ಸರ್ವ ಶಕ್ತನನ್ನು ಕೂರಿಸುವುದರಿಂದಲ್ಲ ಅನ್ನುವುದು ನನ್ನ ಅನಿಸಿಕೆ. ಹಾಗಿದ್ದರೆ ಲೋಕ್ ಪಾಲ್ ಅಲ್ಲಿರುವ ತೊಂದರೆ ಏನು? ಅಣ್ಣ ಹಜಾರೆಯವರ ಹೋರಾಟದಲ್ಲಿ ಏನು ತೊಡಕಿದೆ ಅನ್ನುವುದನ್ನು ತಕ್ಷಶಿಲ ಅನ್ನುವ ಚಿಂತಕರ ಸಂಸ್ಥೆಯನ್ನು ನಡೆಸುವ ಹಾಗೂ ಪ್ರಗತಿ ಅನ್ನುವ ಪತ್ರಿಕೆ ನಡೆಸುವ ಬೆಂಗಳೂರಿನ ನಿತಿನ್ ಪೈ ಬರೆದಿರುವ ಬರಹವೊಂದು ಗಮನ ಸೆಳೆಯುತ್ತೆ. ಪ್ರಶ್ನೋತ್ತರ ಮಾದರಿಯಲ್ಲಿ ಬರೆದಿರುವ ಅವರ ಬರಹವನ್ನು ಕನ್ನಡಕ್ಕೆ ಅನುವಾದಿಸಿ, ಅವರ ಅನುಮತಿಯೊಂದಿಗೆ ಇಲ್ಲಿ ಪ್ರಕಟಿಸಿರುವೆ.

ಭ್ರಷ್ಟಾಚಾರವನ್ನು ಹೊಡೆದೊಡಿಸಲು ಲೋಕಪಾಲ್ ಬೇಕೆ?
ಇಲ್ಲ. ಅದು ಬೇಕಿಲ್ಲ. ಅಷ್ಟೇ ಅಲ್ಲ, ಅದು ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸುವುದು. ಅಂಕೆ ಮೀರಿ ಎಲ್ಲ ರಂಗದಲ್ಲೂ ಹೆಚ್ಚೆಚ್ಚು ಸರ್ಕಾರದ ಪಾತ್ರವಿರುವುದು, ಗೊಂದಲಮಯವಾಗಿರುವ, ಸಂಕೀರ್ಣವಾದ  ಬೇಡದ ನೀತಿ ನಿಯಮಗಳೆಲ್ಲವೂ ಭಾರತದಲ್ಲಿ ಭ್ರಷ್ಟಾಚಾರದ ಹೆಚ್ಚಳಕ್ಕೆ ಕಾರಣವಾಗಿವೆ. ಲೋಕಪಾಲ್ ಮೂಲಕ ಈಗಾಗಲೇ ಸಂಕೀರ್ಣವಾಗಿರುವ ಈ ವ್ಯವಸ್ಥೆಗೆ ಇನ್ನೊಂದು ಶಕ್ತಿಶಾಲಿ ಪದರವನ್ನು ಸೇರಿಸುವುದು ವ್ಯವಸ್ಥೆಯನ್ನು ಇನ್ನಷ್ಟು ಗೊಜಲಾಗಿಸುವುದು. ಈ ರೀತಿಯ ಗೊಂದಲಮಯ, ಸಂಕೀರ್ಣವಾದ ಸ್ಥಿತಿಯೇ ಲಂಚ ಕೊಡುವವನಿಗೂ, ಪಡೆಯುವವನಿಗೂ ಪೂರಕವಾಗುವಂತಹ ಭ್ರಷ್ಟಾಚಾರದ ವಾತಾವರಣ ನಿರ್ಮಿಸುತ್ತದೆ.

ಲೋಕಪಾಲ್ ಯಾಕೆ ಪರಿಹಾರವಲ್ಲ ಅನ್ನುವ ವಿಷಯದಲ್ಲಿ ನಿತೀನ್ ಪೈ ಅವರ ಇನ್ನೊಂದು ಅಂಕಣ ಇಲ್ಲಿದೆ. ಹಾಗೂ ಪ್ರಗತಿಯಲ್ಲಿ ಪ್ರಕಟವಾದ ಅಂಬಾ ಸಲೇಲಕರ್ ಅವರ ಅಂಕಣಕ್ಕೆ ಇಲ್ಲಿ ನೋಡಿ.

1A. ಹಾಗಿದ್ರೆ ಸರ್ಕಾರಿ ಲೋಕಪಾಲ್ ಮಸೂದೆ ಜನಲೋಕಪಾಲ್ ಗಿಂತ ಒಳ್ಳೆಯದೇ?
ಇಲ್ಲ. ನಮಗೆ ಯಾವುದೇ ಲೋಕಪಾಲ್ ಬೇಕಾಗಿಲ್ಲ. ಈಗಾಗಲೇ ಇರುವ ಸಂಸ್ಥೆಗಳಾದ ಸಿಎಜಿ, ಸಿವಿಸಿ, ಸಿಬಿಐ ಮತ್ತು ಚುನಾವಣಾ ಆಯೋಗಗಳಿಗೆ ಇನ್ನಷ್ಟು ಸ್ವತಂತ್ರವಾಗಿ ಕೆಲಸ ಮಾಡಲು ಆಗುವಂತೆ ಸ್ವಾತಂತ್ರ್ಯ ಕೊಟ್ಟರೂ ಸಾಕು, ಅವು ಸಮರ್ಥವಾಗಿ ಭ್ರಷ್ಟಾಚಾರವನ್ನು ಅಂಕೆಯಲ್ಲಿಡಬಲ್ಲವು. ಈಗಿರುವ ಈ ಸಂಸ್ಥೆಗಳಿಗೆ ರಾಜಕೀಯ ಬಣ್ಣ ಬಳಿದು ಅವುಗಳು ಮಹತ್ವ ಕಳೆದುಕೊಳ್ಳುವುದನ್ನು ತಪ್ಪಿಸಲಾಗದ ನಾವು ಲೋಕಪಾಲ್ ಅನ್ನುವ ಸಂಸ್ಥೆಗೆ ರಾಜಕೀಯದ ವಾಸನೆ ತಾಕದೇ, ಅದು ಮಹತ್ವ ಕಳೆದುಕೊಳ್ಳುವುದನ್ನು ಹೇಗೆ ತಡೆಯಬಲ್ಲೇವು? ಲೋಕಪಾಲ್ ರಾಜಕೀಯದ ಬಣ್ಣ ಪಡೆಯದಂತೆ, ಮಹತ್ವ ಕಳೆದುಕೊಳ್ಳದಂತೆ ನೋಡಿಕೊಳ್ಳಬಲ್ಲೆವು ಅನ್ನುವುದೇ ಆದರೆ, ಈಾಗಲೇ ಇರುವ  ಸಿಎಜಿ, ಸಿವಿಸಿ, ಸಿಬಿಐ ಮತ್ತು ಚುನಾವಣಾ ಆಯೋಗಗಳಂತಹ ಸಂಸ್ಥೆಗಳಿಗೆ ಸ್ವಾಯತ್ತತೆ ಕೊಟ್ಟು ಅವುಗಳ ನಂಬಿಕೆಯನ್ನು ಮರಳಿ ಸ್ಥಾಪಿಸಲು ಅದೇಕೆ ಆಗದು?  


2. ಲೋಕಪಾಲ್ ಬೇಡ ಅನ್ನುವುದಾದರೆ ಬೇರಾವ ಹಾದಿಯಿದೆ?
ಇದಕ್ಕುಳಿದಿರುವ ಹಾದಿಯೆಂದರೆ ಅರ್ಥ ವ್ಯವಸ್ಥೆಯ  ಎರಡನೆ ಪೀಳಿಗೆಯ ಸುಧಾರಣೆಗಳೊಂದಿಗೆ ಮುಂದುವರೆಯುವುದು. ವಸ್ತು ಸ್ಥಿತಿ ಏನೆಂದರೆ ಸುಧಾರಣೆ(reforms) ಗಳು ಭ್ರಷ್ಟಾಚಾರವನ್ನು ಒಂದು ಹಂತಕ್ಕೆ ಕಡಿಮೆ ಮಾಡಿವೆಯಾದರೂ ಸರ್ಕಾರದ ಉನ್ನತ ಮಟ್ಟದಲ್ಲಿ ಭ್ರಷ್ಟಾಚಾರ ಹೆಚ್ಚಾಗಿವೆ ಅನ್ನುವುದು ಸುಳ್ಳಲ್ಲ. 1989ರಲ್ಲಿ ಸಾಮಾನ್ಯ ಮನುಷ್ಯನೊಬ್ಬ ಒಂದು ಟೆಲಿಪೋನ್ ಸಂಪರ್ಕ ಪಡೆಯಲು ಲಂಚ ಕೊಡಬೇಕಾದ ಸ್ಥಿತಿ ಇತ್ತು, ಆದರೆ 2005ರ ಹೊತ್ತಿಗೆ ಲಂಚ ಕೊಡದೇ ಫೋನ್ ಸಂಪರ್ಕವನ್ನು ನಿಮಿಷಗಳಲ್ಲಿ ಪಡೆಯುವ ಬದಲಾವಣೆ ಬಂದಿದೆ. 2010ರಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ 2ಜಿ ಯಂತಹ ದೊಡ್ಡ ಹಗರಣವೇ ಬೆಳಕಿಗೆ ಬಂತು, ಆದರೆ ಇದಕ್ಕೆ ಯುಪಿಎ ಸರ್ಕಾರ ಆರ್ಥಿಕ ಸುಧಾರಣೆಗಳಿಗೆ ಎಳ್ಳು-ನೀರು ಬಿಟ್ಟಿದ್ದೇ ಕಾರಣವಾಗಿದೆ. 
ನಿಜ ಹೇಳಬೇಕು ಅಂದರೆ ಅರ್ಥ ವ್ಯವಸ್ಥೆಯ ಯಾವ ಯಾವ ಕ್ಷೇತ್ರಗಳು ಮುಕ್ತ ಮಾರುಕಟ್ಟೆಗೆ ತೆರೆದುಕೊಂಡಿವೆಯೋ ಅಲ್ಲೆಲ್ಲ ಭ್ರಷ್ಟಾಚಾರದ ಪ್ರಮಾಣ ಕಡಿಮೆಯಾಗಿದೆ ಅನ್ನುವುದಕ್ಕೆ ಮಾಹಿತಿ ಇದೆ.  ಇನ್ನಾವ ಹಾದಿ ಇದೆ ಎಂಬ ಬಗ್ಗೆ ಹೆಚ್ಚು ತಿಳಿಯಲು ಅತನು ಡೇ ಅವರ ಚಿಕ್ಕ ಪುಸ್ತಕ ಟ್ರಾನ್ಸಫಾರ್ಮಿಂಗ್ ಇಂಡಿಯಾವನ್ನೊಮ್ಮೆ ಓದಿ.

3. ಹಾಂಕಾಂಗ್ ನಲ್ಲೂ ಲೋಕಪಾಲ್ ನಂತೆ ಒಬ್ಬ ಒಂಬ್ಡುಸಮನ್ ಇದ್ದಾರೆ, ಅಲ್ಲಿ ಭ್ರಷ್ಟಾಚಾರ ಕಡಿಮೆಯೂ ಇದೆ, ಇದಕ್ಕೇನಂತೀರಿ?
ಇದೊಂದು ಸರಿ ಅನ್ನಿಸೋ ತಪ್ಪು ವಾದ. ಹಾಂಕಾಂಗ್ ನಲ್ಲಿ ಒಬ್ಬ ಒಂಬ್ಡುಸಮನ್ ಇರುವುದರಿಂದಾಗಿ ಅಲ್ಲಿ ಭ್ರಷ್ಟಾಚಾರ ಕಡಿಮೆ ಇದೆ ಅನ್ನಲು ಯಾವ ಆಧಾರವೂ ಇಲ್ಲ. ಹಾಗೇ ನೋಡಿದ್ರೆ, ಮುಕ್ತ ಆರ್ಥಿಕ ನೀತಿ, ಆರ್ಥಿಕ ಸ್ವಾತಂತ್ರ್ಯ ಹೊಂದಿರುವ ದೇಶಗಳಲ್ಲಿ ಭ್ರಷ್ಟಾಚಾರ ಕಡಿಮೆ ಅನ್ನುವ ಮಾತನ್ನು ಸಮರ್ಥಿಸಲು ಜಗತ್ತಿನೆಲ್ಲೆಡೆಯಿಂದ ಸಾಕಷ್ಟು  ಎಂಪಿರಿಕಲ್ ಸಾಕ್ಷಿ ಇದೆ.
ಹಾಂಕಾಂಗ್ ಅತ್ಯಂತ ಮುಕ್ತ ಆರ್ಥಿಕ ವ್ಯವಸ್ಥೆ ಹೊಂದಿರುವ ದೇಶಗಳಲ್ಲೊಂದಾಗಿದೆ. ಇದರಿಂದಾಗಿಯೇ, ಸರ್ಕಾರಿ ಅಧಿಕಾರಿಗಳಿಗೆ ಭ್ರಷ್ಟರಾಗುವ ಅವಕಾಶಗಳಾಗಲಿ, ಸಾಧ್ಯತೆಗಳಾಗಲಿ, ಪ್ರೋತ್ಸಾಹವಾಗಲಿ ಅತ್ಯಂತ ಕಡಿಮೆಯಿದೆ. ಅರ್ಥ ವ್ಯವಸ್ಥೆಯ ಕೆಲ ಭಾಗಗಳ ಮೇಲೆ ಕಾನೂನಿನ ನೇರ ಹಿಡಿತವಿರುವುದಿಲ್ಲವೋ ಅಂತಲ್ಲಿ ಒಂಬ್ಡುಸಮನ್ ಬೇಕಾಗಬಹುದು.

4. ಭ್ರಷ್ಟ ರಾಜಕಾರಣಿಗಳು ಬಿಡದೇ ಹೇಗೆ ಆರ್ಥಿಕ ಸುಧಾರಣೆಗಳು ಜಾರಿಯಾದಾವು?
ನಿಜ ಹೇಳಬೇಕು ಅಂದರೆ, ನಾವು ಸರಿಯಾಗಿ ಆರ್ಥಿಕ ಸುಧಾರಣೆಗಳಿಗಾಗಿ ಧ್ವನಿಯೇ ಎತ್ತಿಲ್ಲ. ಅದನ್ನು ನಾವು ಮಾಡಿದರೆ, ಖಂಡಿತ ಈ ವಿಷಯಗಳು ರಾಷ್ಟ್ರದ ರಾಜಕೀಯದ ಕಾರ್ಯಸೂಚಿಯಲ್ಲಿ ಸೇರಿಕೊಳ್ಳುತ್ತವೆ. ರಾಜಕೀಯದ ನಾಯಕರಿಗೆ ಅವರ ರಾಜಕೀಯ ಭವಿಷ್ಯವೇ ಈ ಆರ್ಥಿಕ ಸುಧಾರಣೆಗಳ ಮೇಲೆ ಅವಲಂಬಿತವಾಗಿವೆ ಅನ್ನುವಂತ ಬಿಂಬಿಸುವ, ಮನವೊಲಿಸುವ ಕೆಲಸ ನಾವು ಮಾಡಬೇಕಿದೆ.

5. ಹೇಳೊದೇನೊ ಸುಲಭ, ಆದರೆ ಇದನ್ನ ಹೇಗೆ ಮಾಡೋದು ?
ಮತ ಚಲಾಯಿಸುವ ಮೂಲಕ. ಆರ್ಥಿಕ ಸುಧಾರಣೆಗಳ ನೇರ ಲಾಭ ಪಡೆಯುವ ಮಧ್ಯಮ ವರ್ಗ ದೊಡ್ಡ ಸಂಖ್ಯೆಯಲ್ಲಿ ಮತ ಚಲಾಯಿಸಬೇಕಿದೆ. ಮಧ್ಯಮ ವರ್ಗದ ಮತ ಬ್ಯಾಂಕ್ ಇಲ್ಲದಿರುವುದರಿಂದಲೇ ಇವತ್ತು ಬೇರೆ ಬೇರೆ ಆಮಿಷವೊಡ್ಡಿ ಬಡವರನ್ನು ಮತ ಬ್ಯಾಂಕಾಗಿಸುವತ್ತ ರಾಜಕಾರಣಿಗಳ ಗಮನ ಹರಿದಿದೆ. ಅಷ್ಟೇ ಅಲ್ಲ, ಅರ್ಧಂಬರ್ಧ ಸುಧಾರಣೆಗೆ ತೆರೆದುಕೊಂಡಿರುವ ಅರ್ಥ ವ್ಯವಸ್ಥೆಯನ್ನು ಅತಿ ಶ್ರೀಮಂತರು ತಮ್ಮ ಲಾಭಕ್ಕೆ ಬಳಸಿಕೊಳ್ಳುವಲ್ಲಿಯೂ ರಾಜಕಾರಣಿಗಳ ಸಹಾಯಹಸ್ತವಿದೆ. ಈ ವ್ಯವಸ್ಥೆಯನ್ನು  ಬದಲಾಯಿಸುವುದು ಸುಲಭವಲ್ಲ, ಆದರೆ ನಾವು ಹೊಸ ರೀತಿಯಲ್ಲಿ ಯೋಚಿಸಿ ಇದರತ್ತ ಕೆಲಸ ಮಾಡಬೇಕಿದೆ. ಒಳ್ಳೆಯ ಆಡಳಿತಕ್ಕೆ ಅನುವಾಗುವಂತೆ ಮಧ್ಯಮ ವರ್ಗದ ಮತ ಬ್ಯಾಂಕ್ ಕಟ್ಟುವುದು ಹೇಗೆ ಅನ್ನುವ ಬಗ್ಗೆ ಅತನು ದೇವ್ ಅವರ ಕೂತುಹಲ ಕೆರಳಿಸೋ ಐಡಿಯಾ ಬಗ್ಗೆ ಇಲ್ಲಿ ನೋಡಿ.

ಲೋಕಪಾಲ್ ಬೆನ್ನಿಗಿರುವವರು ಏನೇ ಹೇಳಬಹುದು, ಆದರೆ ಅದು ಖಂಡಿತ ಮಂತ್ರದಂಡದಂತೆ ಕೆಲಸ ಮಾಡದು. ಒಂತರ ಕಣ್ ಮುಚ್ಚಿ ಕಣ್ ತೆರೆಯೊದ್ರೊಳಗೆ ತೂಕ ಕಳೆದುಕೊಳ್ಳೊ ಮ್ಯಾಜಿಕ್ ಮಾತ್ರೆಯಂತೆ ಲೋಕಪಾಲ್ ಅನ್ನು ಬಿಂಬಿಸಲಾಗುತ್ತಿದೆ. ಆದರೆ, ಅಂತಹ ಮಾತ್ರೆ ಎಂದಿಗೂ ಕೆಲಸ ಮಾಡಲ್ಲ. ನಿಮ್ಮ ಅರೋಗ್ಯವನ್ನೇ ಅದು ಹಾಳು ಮಾಡಬಹುದು. ಈ ಮಾತ್ರೆ ತೆಗೆದುಕೊಳ್ಳಬೇಡಿ ಅಂದ ತಕ್ಷಣ, " ಹಾಗಿದ್ರೆ ಇನ್ನಾವ ಮ್ಯಾಜಿಕ್ ಮಾತ್ರೆ ತಗೊಬೇಕು" ಅಂತ ಕೇಳಬೇಡಿ. ಇಂತಹ ಸಮಸ್ಯೆಗೆಲ್ಲ ರಾತ್ರೋರಾತ್ರಿ ಯಾವ ಪರಿಹಾರವೂ ಇಲ್ಲ. ಪರಿಹಾರಕ್ಕೆ ಶ್ರಮಪಡಬೇಕು.

6. ಅದೆಲ್ಲ ಸರಿ, ಈಗಿರೋ ಜನ್ ಲೋಕ್ ಪಾಲ್ ಅಲ್ಲಿ ಏನ್ ತೊಂದರೆ ಇದೆ?
ಇದಕ್ಕೆ ಆಗಲೇ ಉತ್ತರಿಸಲಾಗಿದೆ. ಆದರೆ ಅದೇ ಪ್ರಶ್ನೆ ಮತ್ತೆ ಮತ್ತೆ ಬರೋದರಲ್ಲಿ ಅಚ್ಚರಿಯೇನಿಲ್ಲ. ಲೋಕಪಾಲ್ ಅಲ್ಲಿರೋ ಸಮಸ್ಯೆಯೆನೆಂದರೆ ಅದು ಈಗಾಗಲೇ ಇರುವ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಿಸುವಂತೆ ಮಾಡುತ್ತೆ. ನಿಮ್ಮಲ್ಲಿ ಯಾರಿಗಾದರೂ ಅನ್ನಿಸುತ್ತಾ ಹತ್ತಾರು ಸಾವಿರ ಪ್ರಾಮಾಣಿಕ ಅಧಿಕಾರಿಗಳನ್ನು ತಂದು ಲೋಕಪಾಲ್ ಮಾಡಬಲ್ಲೆವು ಎಂದು? ಸರಿ ಅವರ ಮೇಲೆ ಯಾರು ನಿಗಾ ಇಡುತ್ತಾರೆ? ಅದಕ್ಕೊಂದು ಸೂಪರ್ ಲೋಕಪಾಲ್ ಮಾಡುವೆವಾ? ಅವರನ್ನು ಗಮನಿಸಲು ಇನ್ನೊಂದು ಹೈಪರ್ ಲೋಕಪಾಲ್? ತಮಾಷೆ ಮಾಡ್ತಿಲ್ಲ. ಲೋಕಪಾಲ್ ಪರವಾಗಿ ವಾದ ಮಂಡಿಸುವವರು ಹೇಳುವುದೇ ಇದನ್ನು ತಾನೇ? ಈಗಿರುವ ವ್ಯವಸ್ಥೆ ಸರಿಯಿಲ್ಲ, ಆದ್ದರಿಂದ ಅವನ್ನು ಗಮನಿಸಲು ಲೋಕಪಾಲ್ ಬೇಕು ಅಂತ ತಾನೇ?

7. ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ನಮಗಿಲ್ಲವೇ? "ಜೀವ ಇರುವವರೆಗೂ ಉಪವಾಸ" ಅನ್ನುವುದು ಯಾಕೆ ವಿಶ್ವಾಸಾರ್ಹವಲ್ಲ?
ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ಖಂಡಿತ ನಮಗೆಲ್ಲರಿಗೂ ಇದೆ. ನಮಗೆ ಹಕ್ಕಿದೆಯೋ ಇಲ್ಲವೋ ಅನ್ನುವುದಕ್ಕಿಂತ ಇದನ್ನು ನಾವು ಸರಿಯಾಗಿ ಬಳಸುತ್ತಿದ್ದೆವೆಯೋ ಅನ್ನುವುದು ಹೆಚ್ಚು ಮುಖ್ಯವಾಗಿದೆ. (ನಿಮಗೆ ಫ್ರೀಡಂ ಆಫ್ ಸ್ಪೀಚ್ ಇದೆ ಎಂದು ರಾತ್ರಿ ಎರಡು ಗಂಟೆಗೆ ಮನೆಗಳಿರೋ ಜಾಗದಲ್ಲಿ ಎಮಿನೆಮ್ ಹಾಡನ್ನ ಲೌಡ್ ಸ್ಪೀಕರ್ ಅಲ್ಲಿ ಹಾಕ್ತಿನಿ ಅನ್ನೋದು ಅಂತಹ ಒಳ್ಳೆಯ ಐಡಿಯಾ ಏನಲ್ಲ :) )
ಅಂಬೇಡ್ಕರ್ ಸಂವಿಧಾನವನ್ನು ಪರಿಚಯಿಸುತ್ತ ನವೆಂಬರ್ 1949ರಲ್ಲಿ ಒಂದು ಮಾತು ಹೇಳಿದ್ರು. "ಒಮ್ಮೆ ಸಂವಿಧಾನ ಜಾರಿಗೆ ಬಂದ ಮೇಲೆ, ಪ್ರತಿಭಟನೆ, ಸತ್ಯಾಗ್ರಹದಂತ ಅಸಂವಿಧಾನಿಕ ಹಾದಿ ತುಳಿಯುವುದನ್ನು ನಾವು ತಪ್ಪಿಸಬೇಕು. ಅವು ಅರಾಜಕತೆಯ ಮೂಲವಾಗಿವೆ. ಒಂದೊಮ್ಮೆ ಇಬ್ಬರು ವ್ಯಕ್ತಿಗಳು ಎರಡು ಪರಸ್ಪರ ವಿರೋಧಿ ಕಾರಣಗಳಿಗಾಗಿ ಸಾಯುವವರೆಗೂ ಉಪವಾಸ ಅಂತ ಕುಳಿತರೆ ಯಾರು ಮೊದಲು ಸಾಯುತ್ತಾರೋ ಅವರೇ ಗೆದ್ದರು ಎಂದು ನಾವು ತೀರ್ಮಾನಿಸಲಾಗುವುದಿಲ್ಲ.  ಸಾಯುವವರೆಗೂ ಉಪವಾಸ ಅನ್ನುವುದು ರಾಜಕೀಯ ಬ್ಲಾಕ್-ಮೇಲ್. ಇದೊಂದು ರೀತಿಯಲ್ಲಿ ಪ್ರತಿಭಟನೆಕಾರರು ಬಯಸಿದ ಹಾದಿಯನ್ನೇ ಸರ್ಕಾರ ತುಳಿಯುವಂತೆ ಒತ್ತಾಯಿಸುವ ಮಾದರಿಯ ನಾಟಕವೆನ್ನಬಹುದು. ಕಾರಣ ಎಂತಹುದೇ ಇರಬಹುದು, ಆದರೆ ಒಬ್ಬ ವ್ಯಕ್ತಿ ಇಡೀ ದೇಶಕ್ಕೆ ಇಂತಹುದೇ ಕಾನೂನು ಬೇಕು ಎಂದು ಅಪ್ಪಣೆ ಹೊರಡಿಸುವುದನ್ನು ಒಪ್ಪಲಾಗದು.

8. ಅಣ್ಣಾ ಹಜಾರೆಯವರಿಗೆ ಸಾಯುವವರೆಗೂ ಉಪವಾಸ ಮಾಡುವ ಹಕ್ಕಿಲ್ಲವೇ?
ಅಣ್ಣಾ ಹಜಾರೆಯವರಿಗೆ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ಖಂಡಿತ ಇದೆ. ಅವರ ಪ್ರತಿಭಟನೆ  ಆತ್ಮಹತ್ಯೆಗೆ ಪ್ರಯತ್ನ ಅನ್ನುವಂತ ಹಂತಕ್ಕೆ ಹೋದಲ್ಲಿ ಅದು ಕಾನೂನಿನನ್ವಯ ತಪ್ಪು. ಆತ್ಮಹತ್ಯೆಯ ಪ್ರಯತ್ನಕ್ಕೆ ಕಾರಣಗಳೇನೇ ಇದ್ದರೂ ಅವರು ತಮ್ಮನ್ನು ತಾವೇ ಕೊಂದುಕೊಳ್ಳದಂತೆ ತಡೆಯುವ ಎಲ್ಲ ಅಧಿಕಾರ ಕಾನೂನಿನನ್ವಯ ಸರ್ಕಾರಕ್ಕಿದೆ.

9. ನೀನೊಬ್ಬ ತೋಳುಕುರ್ಚಿ ಬುದ್ದಿಜೀವಿ (armchair intellectual). ನಿನಗಿಂತ ಬೀದಿಯಲ್ಲಿ ಹೋರಾಡುತ್ತಿರುವ ಚಳುವಳಿಗಾರರನ್ನೇ ನಾವು ನಂಬಬಾರದೇಕೆ?
ಪೈಲಟ್ ಗಳು ವಿಮಾನವನ್ನೇನು ವಿನ್ಯಾಸ ಮಾಡುವುದಿಲ್ಲ. ಮದ್ದು ಕೊಡುವ ವೈದ್ಯರು ಹೊಸ ಔಷಧಿಗಳನ್ನೇನು ಕಂಡು ಹಿಡಿಯುವುದಿಲ್ಲ. ಈ ಕೆಲಸ ಮಾಡುವುದು ತೋಳುಕುರ್ಚಿ ಬುದ್ದಿಜೀವಿಗಳಂತಹ ಜನರೇ. ಆದ್ದರಿಂದ ತೋಳುಕುರ್ಚಿ ಬುದ್ದಿಜೀವಿಯಾಗಿರುವುದರಿಂದ ಈ ವಿಷಯಗಳ ಬಗ್ಗೆ ಮಾತನಾಡುವ ಅಧಿಕಾರವಿಲ್ಲ ಅಂತೇನು ಇಲ್ಲ.   
ಅವರು ಏನು ಹೇಳುತ್ತಾ ಇದ್ದಾರೆ ಅನ್ನುವ ಕಾರಣಕ್ಕೆ ನೀವು ಯಾವುದೇ ಬುದ್ದಿಜೀವಿ ಇಲ್ಲವೇ ಕಾರ್ಯಕರ್ತನನ್ನು ನಂಬಬೇಡಿ. ನೀವು ಅವರ ವಾದವನ್ನು ಕೇಳಿ, ಪರಾಮರ್ಷಿಸಿ, ನಿಮ್ಮದೇ ಆದ ತೀರ್ಮಾನ ಕೈಗೊಳ್ಳಿ. ಜನಲೋಕಪಾಲ್ ಬೇಕೆನ್ನುತ್ತಿರುವ ಹೆಚ್ಚಿನ ಜನರಿಗೆ ಆ ಬಿಲ್ ಅಲ್ಲಿ ಏನಿದೆ ಎಂದೂ ತಿಳಿದಿಲ್ಲ, ಅದರ ವಿರುದ್ಧವಾಗಿ ಯಾರು ವಾದ ಮಾಡುತ್ತಿರುವರೋ ಅವರ ವಾದವನ್ನು ಕೇಳಿಲ್ಲ. ಕುರುಡಾಗಿ, ಯಾರೋ ಜನಪ್ರಿಯ ವ್ಯಕ್ತಿ ಹೇಳಿದ್ದಾರೆ ಅನ್ನುವ ಕಾರಣಕ್ಕೆ ಇದೊಂದೇ ಪರಿಹಾರವೆಂಬಂತೆ ಅದನ್ನು ಒಪ್ಪಿಕೊಳ್ಳುತ್ತಿದ್ದಾರೆ.

11. ಅಣ್ಣಾ ಹಜಾರೆಯವರ ಹೋರಾಟವನ್ನು ವಿರೋಧಿಸುತ್ತಿರುವವರು ಭ್ರಷ್ಟ ರಾಜಕಾರಣಿಗಳನ್ನು ಬೆಂಬಲಿಸಿದಂತಲ್ಲವೇ?
ಇಲ್ಲ. ಭ್ರಷ್ಟಾಚಾರದ ವಿರುದ್ಧದ ಹೋರಾಟ ಹೇಗಿರಬೇಕು ಅನ್ನುವುದು ಕೇವಲ ಅಣ್ಣ ಹಜಾರೆ ಮತ್ತು ಅವರ ಸಂಗಡಿಗರಿಗೆ ಸೇರಿದ ವಿಷಯವಲ್ಲ. ನಿಜ ಜಗತ್ತಿನಲ್ಲಿ, ನೂರಕ್ಕೆ ನೂರು ಶುದ್ಧವಾಗಿರುವ, ಭ್ರಷ್ಟರಲ್ಲದ ರಾಜಕಾರಣಿಗಳಿರಬೇಕು ಎಂದು ಅಪೇಕ್ಷಿಸುವುದು ನಿಜಕ್ಕೂ ಮೂರ್ಖತನವಾದೀತು. ಅಪೂರ್ಣವಾದ ಸಂವಿಧಾನಗಳು, ಅಪೂರ್ಣವಾದ ಸಂಸ್ಥೆಗಳು, ಅಪೂರ್ಣವಾದ ನಾಯಕರು ಮತ್ತು ಅಪೂರ್ಣವಾದ ನಾಗರಿಕರನ್ನು ಇಟ್ಟುಕೊಂಡೇ ಒಳ್ಳೆಯ ಆಡಳಿತ ಪಡೆಯುವುದು ನಿಜ ಜಗತ್ತಿನ ಸವಾಲು. ಲಂಚ ಕೊಡಲು, ಪಡೆಯಲು ಇರುವ ಅವಕಾಶವನ್ನು ಕಡಿಮೆ ಮಾಡಿದಲ್ಲಿ ಭ್ರಷ್ಟಾಚಾರ ಕಡಿಮೆಯಾಗುವುದು. ಇದನ್ನು 1991ರಲ್ಲಿ ಶುರುವಾದ ಆದರೆ 2004ರಿಂದಾಚೆ ನಿಂತು ಹೋಗಿರುವ ಸುಧಾರಣೆಗಳನ್ನು ಮುಂದುವರೆಸುವುದೇ ಇಂತಹದೊಂದು ವಾತಾವರಣ ಕಟ್ಟಲು ಸಹಾಯ ಮಾಡುವುದು.

ಸಂವಿಧಾನದನ್ವಯ ರಚಿತವಾದ ಯುಪಿಎ ಸರ್ಕಾರದ ರಾಜಕೀಯ ಮತ್ತು ನೀತಿನಿಯಮಗಳನ್ನು ವಿರೋಧಿಸಲು ಖಂಡಿತ ಎಲ್ಲರಿಗೂ ಹಕ್ಕಿದೆ. ಕೆಲವು ವ್ಯಕ್ತಿಗಳು, ಪಕ್ಷಗಳು ಕಡು ಭ್ರಷ್ಟಾಚಾರದಿಂದ ನಂಬಿಕೆ ಕಳೆದುಕೊಂಡಿರಬಹುದು, ಆದರೆ ಒಂದು ಸಂವಿಧಾನಿಕ ಸಂಸ್ಥೆಯಾಗಿ ಭಾರತ ಸರ್ಕಾರ ಮಾತ್ರವೇ ದೇಶಕ್ಕೆ ಬೇಕಿರುವ ಕಾಯಿದೆ,ಕಾನೂನು ರೂಪಿಸುವ ಅಧಿಕಾರವಾಗಿದೆ.

12. ಬ್ರಿಟಿಷರ ವಿರುದ್ಧ ಹೋರಾಟದ ಸಮಯದಲ್ಲಿ ಮಹಾತ್ಮ ಗಾಂಧಿಯೇ ಉಪವಾಸಕ್ಕೆ ಮುಂದಾಗಿರುವಾಗ, ಈಗ ಉಪವಾಸ ಮಾಡುವುದು ಯಾಕೆ ವಿಶ್ವಾಸಾರ್ಹವಲ್ಲ? 
ನಮ್ಮ ಸಂವಿಧಾನ ಅಸ್ತಿತ್ವಕ್ಕೆ ಬಂದ 26 ಜನವರಿ1950 ಮತ್ತು ಅದಕ್ಕೂ ಮೊದಲಿದ್ದ ದಿನಗಳ ನಡುವಿನ  ಸಂದರ್ಭಗಳ ಮಧ್ಯೆ ಅಗಾಧವಾದ ಅಂತರವಿದೆ. ಬ್ರಿಟಿಷ ಸರ್ಕಾರ ವಿಧಿಸಿದ್ದ ಕಾನೂನುಗಳ ವಿರುದ್ಧ ಮಹಾತ್ಮ ಗಾಂಧಿ ಅಸಹಕಾರದ ಹಾದಿಯನ್ನು ತುಳಿದಿದ್ದರು. ಆಗ ಭಾರತೀಯರಿಗೆ ಕಾನೂನು ರೂಪಿಸುವಲ್ಲಿ ಇಲ್ಲವೇ ಅನುಷ್ಟಾನಕ್ಕೆ ತರುವಲ್ಲಿ ಯಾವುದೇ ರೀತಿಯ ಹಿಡಿತವಿರಲಿಲ್ಲ. ತಮಗೆ ಬೇಡದ ಯಾವುದೇ ಕಾನೂನಿನ ಬಗ್ಗೆ ಮೇಲ್ಮನವಿ ಸಲ್ಲಿಸುವ ಅವಕಾಶವೂ ಅವರಿಗಿರಲಿಲ್ಲ. ಈ ಅರ್ಥದಲ್ಲಿ  ಉಪವಾಸದ ಚಳುವಳಿಗೆ ಒಂದು ಸಮರ್ಥನೆ ಇದೆ. 

ಅಂಬೇಡ್ಕರ್ ಸೇರಿದಂತೆ ಹಲವು ಭಾರತದ ನಾಯಕರನ್ನು ತಮ್ಮ ನಿಲುವಿಗೆ ಒಪ್ಪಿಸಲು ಕೂಡಾ ಗಾಂಧಿ ಈ ಮಾರ್ಗವನ್ನು ಬಳಸಿದ್ದರು. ಗಾಂಧಿಯವರ ಉದ್ದೇಶಗಳಲ್ಲಿನ ತಿಳುವಳಿಕೆ ಏನೇ ಇದ್ದರೂ, ಇದು ಅಸಂವಿಧಾನಿಕವೂ, ಒಂದು ರೀತಿಯಲ್ಲಿ "ಹೈಕಮಾಂಡ್" ಸಂಸ್ಕೃತಿಯನ್ನು ಹುಟ್ಟು ಹಾಕಿದ ಮಾರ್ಗವಾಗಿತ್ತು. ಈ ಹೈಕಮಾಂಡ್ ಸಂಸ್ಕೃತಿ ನಮ್ಮಲ್ಲಿ ಇಂದಿಗೂ ಜೀವಂತವಾಗಿದೆ. ಈ ಅರ್ಥದಲ್ಲಿ ಉಪವಾಸವನ್ನು ಸಮರ್ಥಿಸಿಕೊಳ್ಳಲಾಗದು. ಆದರೆ ಭಾರತೀಯ ಇತಿಹಾಸವನ್ನು ವಿವರಿಸುವಾಗ ಗಾಂಧಿ ಬದುಕಿನ ಈ ಭಾಗಕ್ಕೆ ಯಾವುದೇ ಗಮನ ಸಿಕ್ಕಿಲ್ಲ.

26 ಜನವರಿ1950ರಂದು ನಮ್ಮ ಸಂವಿಧಾನ ಅಸ್ತಿತ್ವಕ್ಕೆ ಬರುವುದರೊಂದಿಗೆ ಒಂದು ದೊಡ್ಡ ಬದಲಾವಣೆ ಆಯಿತು. ಭಾರತೀಯರೆಲ್ಲರಿಗೂ ಹೇಗೆ ಕಾನೂನುಗಳನ್ನು ಮಾಡಲಾಗುತ್ತೆ, ಇಲ್ಲವೇ ಅನುಷ್ಟಾನಗೊಳಿಸಲಾಗುತ್ತೆ ಅನ್ನುವುದರ ಮೇಲೆ ಒಂದು ಹಿಡಿತವಿದೆ. ನಮಗೆ ಬೇಕಿಲ್ಲದ ಕಾನೂನನ್ನು ತೆಗೆದುಹಾಕುವ ಇಲ್ಲವೇ ಬದಲಾಯಿಸುವ ಸಾಧ್ಯತೆ ನಮಗಿದೆ. ಆದರೆ ಇದನ್ನು ಮಾಡಲು ಖಂಡಿತ ಸರಿಯಾದ ಮಾರ್ಗವೊಂದಿದೆ ಮತ್ತು ಅದನ್ನು ಎಲ್ಲರೂ ಪಾಲಿಸಬೇಕಿದೆ. ಈ ಮಾರ್ಗಗಳನ್ನೇ ಅಂಬೇಡ್ಕರ್ ತಮ್ಮ ಗ್ರಾಮರ್ ಆಫ್ ಅನಾರ್ಕಿ ಭಾಷಣದಲ್ಲಿ ಉಲ್ಲೇಖಿಸಿದ್ದು. ಸಂವಿಧಾನಿಕವಾದ ಮಾರ್ಗಗಳು ಲಭ್ಯವಿರುವಾಗ, ಸತ್ಯಾಗ್ರಹ, ಉಪವಾಸದಂತಹ ಅಸಂವಿಧಾನಿಕ ಮಾರ್ಗಗಳಿಗೆ ಅರ್ಥವಿಲ್ಲ. ಆದ್ದರಿಂದ ಬ್ರಿಟಿಷರ ಆಳ್ವಿಕೆಯಲ್ಲಿ ಗಾಂಧಿ ಮಾಡಿದ ಸತ್ಯಾಗ್ರಹಕ್ಕೂ, ನಮ್ಮನ್ನು ನಾವೇ ಆಳಿಕೊಳ್ಳುವ ಈ ದಿನದಲ್ಲಿ ಅಣ್ಣಾ ಹಜಾರೆಯವರು ಮಾಡುತ್ತಿರುವ ಉಪವಾಸಕ್ಕೂ ಹೋಲಿಕೆಯಿಲ್ಲ.

ನಿಲ್ಲಿ ನಿಲ್ಲಿ ನಿಲ್ಲಿ ! : ನನಗೆ ಗೊತ್ತು, ಇದನ್ನು ಓದಿದ ಕೂಡಲೇ ಕೆಲವರು "ನಾನು ಭ್ರಷ್ಟಾಚಾರದ ಪರ, ಕಾಂಗ್ರೆಸ್ ಪರ, ಸರ್ಕಾರದ ಪರ" ಅನ್ನುತ್ತ ನನ್ನ ಮೇಲೆ ಹಾರುತ್ತಾರೆ ಎಂದು. ಅವರಿಗೆ ನಾನು ಹೇಳುವುದು ಇಷ್ಟೇ. ಸಮಾಧಾನದಿಂದ ಇನ್ನೊಬ್ಬರ ಅಭಿಪ್ರಾಯ ಕೇಳುವ, ಅದರ ಬಗ್ಗೆ ಚರ್ಚಿಸುವ ವ್ಯವಧಾನ ಬೆಳೆಸಿಕೊಳ್ಳಿ, ಚರ್ಚೆಯ ನಂತರ ನಿಮ್ಮ ಅಭಿಪ್ರಾಯ ಬದಲಾಗಬಹುದು, ಬದಲಾಗದೇ ಇರಬಹುದು. ನಾನಂತೂ ಅದನ್ನು ಗೌರವಿಸುತ್ತೇನೆ. After all, democracy is all about that. Mob frenzy ಮನಸ್ಥಿತಿ ಇಟ್ಟುಕೊಂಡು ಬಂದರೆ ಯಾವ ಚರ್ಚೆಯೂ ಅಸಾಧ್ಯ.

16 ಕಾಮೆಂಟ್‌ಗಳು:

  1. This is Shrinivas Panchamukhi.
    I like your blog but I do not agree with you on this issue. The Govt would never give the kind of independence one would like to..to CVC CBI Etc.
    It has been proven time & again that these institutions have been/are being used as mere tools to settle political scores.

    Any way your blog is really good. Keep the good work.

    This is my blog...
    http://shrinivaspanchamukhi.blogspot.com/

    ಪ್ರತ್ಯುತ್ತರಅಳಿಸಿ
  2. ನಮಸ್ಕಾರ ವಸಂತ್ ...
    ಭ್ರಷ್ಟಾಚಾರ ನಿರ್ಮೂಲನೆಯ ಬಗೆಗಿನ ನಿಮ್ಮ ಅಭಿಪ್ರಾಯವನ್ನು ನಾನು ಗೌರವಿಸುತ್ತೇನೆ. ಉತ್ತಮ ಆರ್ಥಿಕ ನೀತಿಗಳು, ಸರ್ಕಾರದ ಹಸ್ತಕ್ಷೇಪ ಕಡಿಮೆ ಮಾಡುವಂಥವ ವ್ಯವಸ್ತೆ ಭ್ರಷ್ಟಾಚಾರ ಕಡಿಮೆ ಮಾಡುವಲ್ಲಿ ಪರಿಣಾಮಕಾರಿ. ಅದೇ ರೀತಿ ಎಂತಹುದೇ ವ್ಯವಸ್ತೆಯಲ್ಲಿ ಭ್ರಷ್ಟಾಚಾರ ಮಾಡಬಹುದಾದ ವ್ಯಕ್ತಿಗಳಿಗೆ ಸರಿಯಾದ ಶಿಕ್ಷೆ ಕೊಡುವ ಕಾನೂನು ಅಷ್ಟೇ ಅವಶ್ಯಕ ಅಲ್ಲವೇ?

    ಲೋಕ್ ಪಾಲ್ ನ ಕೆಲವು ಅಂಶಗಳೆಂದರೆ
    --> ತ್ವರಿತ ತನಿಖೆ ಮತ್ತು ವಿಚಾರಣೆಯ
    --> ಲಂಚವಷ್ಟೇ ಭ್ರಷ್ಟಾಚಾರವಲ್ಲ, ಮಾಡಬೇಕಾದ ಕೆಲಸ ಮಾಡದೇ ಇರುವುದು, ಬೇಕಾದ್ದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದು, ಭ್ರಷ್ಟರನ್ನು ರಕ್ಷಿಸುವುದು, ನಿರಪರಾಧಿಗಳಿಗೆ ತೊಂದರೆ ಕೊಡುವುದು....

    ಭ್ರಷ್ಟಾಚಾರ ದಲ್ಲಿ ಭಾಗಿಯಾಗಿ ಹತ್ತಾರು ವರ್ಷಗಳವರೆಗೆ ಯಾವುದೇ ಶಿಕ್ಷೆ ಇಲ್ಲದೆ ಸಹಜ ಜೀವನ ಸಡೆಸಲು ಅವಕಾಶ ಕೊಡುವ ವ್ಯವಸ್ಥೆ, ಹಲ್ಲಿಲ್ಲದ ಕಾನೂನುಗಳು ಇತರೆ ನಿಷ್ಟಾವಂತ ಜನರಲ್ಲಿ ಅಸಮಧಾನ ಹೆಚ್ಚಾಗಿ ಅವರೂ ಬ್ರಷ್ಟರಾಗುವ ಸಾದ್ಯತೆ ಹುಟ್ಟುಹಾಕುತ್ತಿದೆ ಅಲ್ಲವೇ....

    ಹೊಸ ಆರ್ಥಿಕ ಮತ್ತು ಕಾನೂನು ಸುಧಾರಣೆಗಳೊಂದಿಗೆ ಲೋಕ್ಪಾಲ್ ಕೂಡ ಇದ್ದರೆ ಬ್ರಷ್ಟಾಚಾರ ನಿರ್ಮೂಲನೆ ಹೆಚ್ಚು ಪರಿಣಾಮಕಾರಿಯಾಗಬಲ್ಲದು ಎಂಬುದು ನನ್ನ ಅನಿಸಿಕೆ....

    ಪ್ರತ್ಯುತ್ತರಅಳಿಸಿ
  3. Hello Vansant, I am sorry to be writing in English. It will take at least 1 year minimum for me to write in kannada :-)

    Very nicely written article and I agree with you.
    To me we should strengthen the existing bodies and make them independent of govt. I do not believe that Jan Lok Pal will curb corruption. It is to me authoritarian and un-elected body. There is a saying "power makes one corrupt, >Absolute< power gives absolute corruption".
    People should first understand on what India was built upon as a country and it was a strong democracy and excellent constitution by our constitutional fathers.
    I do not agree any bodies in shaking our constitution. There should be open debates and there are quite a number of educated people in Govt to have debates with Team Anna. Team Anna is being very inconsiderate and not open at all.

    I understand in India, especially in cities people are busy and no time to read Jan Lok Pal and they are just blindly supporting as you said in the hope of getting rid of corruption. But they should make time to understand it create a livable life to next generations and not an authoritarian rules.

    Regards,
    Bhavana

    ಪ್ರತ್ಯುತ್ತರಅಳಿಸಿ
  4. ಭಾವನಾ ಮತ್ತು ಚಂದ್ರಕಾಂತ್ ಅವರೇ,, ನಿಮ್ಮ ಅನಿಸಿಕೆಗಳಿಗೆ ನನ್ನಿ.
    Popular media is finally waking up and asking tough questions about the effect of this movement.

    A few questions for Anna worshippers
    http://www.dnaindia.com/analysis/comment_salil-desai-a-few-questions-for-anna-worshippers_1578306

    The dangerous element in the Hazare-led anti-corruption crusade is the strident self-righteous tone of the campaigners. They are convinced that what they are prescribing is right and others have to accept it. They claim that they are speaking for the people — the few hundreds, the few thousands and the few tens of thousands — who are congregating in the city squares, and they are not embarrassed by their preposterous claim. There is total absence of modesty and humility. It is this smugness of the Lokpal activists that is frightening. In the language of Hazare, Kejriwal, Bedi and Bhushan, ‘many’ stands for ‘all’, a terrifying verbal sleight that bends dangerously close to untruth.
    http://www.dnaindia.com/analysis/column_analysis-anna-hazare-s-deplorable-moral-fascism_1578319

    Corruption is not rocket science, and India is not an exception. Globally, countries that rigidly regulate their economies, and restrict the economic freedom enjoyed by their people, also tend to be also among the more corrupt ones, and generally poorer. While India has improved its standing in the Economic Freedom of the World Index, over the past two decades, its has not changed fast enough, and the low rank on the Doing Business Report indicate that the changes have not been deep enough to make substantive impact on corruption.
    http://www.indefenceofliberty.org/story.aspx?id=4190&pubid=4288

    ಪ್ರತ್ಯುತ್ತರಅಳಿಸಿ
  5. ವಸಂತ್ ನೀವು ಹೇಳಿದ ಹಾಗೆ "೧. ಬೇಡದ ನೀತಿ ನಿಯಮಗಳೆಲ್ಲವೂ ಭಾರತದಲ್ಲಿ ಭ್ರಷ್ಟಾಚಾರದ ಹೆಚ್ಚಳಕ್ಕೆ ಕಾರಣವಾಗಿವೆ. ೨. ಲೋಕಪಾಲ್ ಮೂಲಕ ಈಗಾಗಲೇ ಸಂಕೀರ್ಣವಾಗಿರುವ ಈ ವ್ಯವಸ್ಥೆಗೆ ಇನ್ನೊಂದು ಶಕ್ತಿಶಾಲಿ ಪದರವನ್ನು ಸೇರಿಸುವುದು ವ್ಯವಸ್ಥೆಯನ್ನು ಇನ್ನಷ್ಟು ಗೊಜಲಾಗಿಸುವುದು. ೩. ಈ ರೀತಿಯ ಗೊಂದಲಮಯ, ಸಂಕೀರ್ಣವಾದ ಸ್ಥಿತಿಯೇ ಲಂಚ ಕೊಡುವವನಿಗೂ, ಪಡೆಯುವವನಿಗೂ ಪೂರಕವಾಗುವಂತಹ ಭ್ರಷ್ಟಾಚಾರದ ವಾತಾವರಣ ನಿರ್ಮಿಸುತ್ತದೆ."

    ನಿಮ್ಮ ಒಂದನೇ ಬಿಂದುವನ್ನು ನಾನು ಕಂಡಿತ ಒಪ್ಪುತೇನೆ. ಎರಡನೆ ಬಿಂದುವನ್ನು ಒಪ್ಪಲು ಸಾದ್ಯವಿಲ್ಲ. ಮೂರನೇ ಬಿಂದುವನ್ನೂ ಒಪ್ಪುತೇನೆ. ಒಂದು ಮತ್ತು ಮೂರನೇ ಬಿಂದುಗಳು ಒಂದೇ ವಿಷಯವನ್ನು ಹೇಳುತ್ತವೆ, ಏನೆಂದರೆ ಸಂಕೀರ್ಣವಾದ ವ್ಯವಸ್ಥೆ ಭ್ರಷ್ಟಾಚಾರದ ವಾತಾವರಣ ನಿರ್ಮಿಸುತ್ತದೆ. ಸಂಕೀರ್ಣವಾದ ವ್ಯವಸ್ಥೆ ಎಂದರೆ ಏನು ಎನ್ನುವುದನ್ನು ಇನ್ನೂ ಬಿಡಿಸಿ ನೋಡಬೇಕು. ಸಂಕೀರ್ಣವಾದ ವ್ಯವಸ್ಥೆ ಎಂದರೆ ಸಂಕೀರ್ಣವಾದ ಕಾನೂನೂ ಮತ್ತು ನಿಯಮಗಳು ಅಲ್ಲವೇ ? ಬೇರೆ ಏನಾದರು ಇದೆಯೇ? ಸಂಕೀರ್ಣವಾದ ವ್ಯವಸ್ಥೆ ಭ್ರಷ್ಟಾಚಾರದ ವಾತಾವರಣ ನಿರ್ಮಿಸುತ್ತದೆ, ಅದೂ ಅಲ್ಲದೆ ಕಾರ್ಯ ಸಾಧು ವಲ್ಲದ (impractical) ನಿಯಮಗಳೂ ಭ್ರಷ್ಟಾಚಾರದ ವಾತಾವರಣ ನಿರ್ಮಿಸುತ್ತದೆ. ಭ್ರಷ್ಟಾಚಾರಕ್ಕೆ ಇದೊಂದೇ ಕಾರಣವೇ ? ಇಲ್ಲ ಇನ್ನೂ ಹಲವಾರು ಕಾರಣಗಳಿವೆ. ಇದನ್ನು ನೀವು ಒಪ್ಪುವಿರೆಂದು ಕೊಂಡಿದ್ದೇನೆ. ಸಂಕೀರ್ಣವಾದ ಕಾನೂನೂ ಮತ್ತು ನಿಯಮಗಳು: ಇದನ್ನು ಸರಿಪಡಿಸಲು ಸುಧಾರಣೆಗಳು (reforms) ಬರಬೇಕು . ಸುಧಾರಣೆಗಳು ಎಷ್ಟು ಬಂದರೂ ಭ್ರಸ್ಷ್ಟಾಚಾರದ ಸಂಪೂರ್ಣ ನಿರ್ನಾಮ ಸಾದ್ಯವಿಲ್ಲ ಎನ್ನುವುದನ್ನು ಮುಂದುವರೆದ ಹಲವಾರು ದೇಶಗಳಿಂದ ಕಲಿಯಬಹುದು ಅಲ್ಲವೇ? ಹಾಗಾದರೆ ಭ್ರಷ್ಟಾಚಾರದಲ್ಲಿ ಮುಳುಗುವವರನ್ನು ಏನು ಮಾಡಬೇಕು. ಅವರನ್ನು ಹಾಗೆ ಬಿಡಬೇಕೇ ? ಅಥವಾ ಶಿಕ್ಷೆಬೇಕೇ? ಶಿಕ್ಷೆ ಕೊಡಬೇಕು ಎನ್ನುವುದಾದರೆ ಲೋಕಪಾಲ್ ಅಂತಹ ಸ್ವತಂತ್ರ ಸಂಸ್ತೆ ಬೇಕೇ ಅಥವಾ CBI ಅಂತಹ conflict of interest ಇರುವ ಸಂಸ್ತೆ ಬೇಕೇ? ಹೆಸರು ಏನೇ ಇರಲಿ (CBI or Lokpal ) ನಮಗೆ ಬೇಕಾಗಿರುವುದು ಸ್ವತಂತ್ರ ಸಂಸ್ತೆ . ಹೀಗಿರುವಾಗ ಸ್ವತಂತ್ರ ಸಂಸ್ತೆಗೂ ಸಂಕೀರ್ಣವಾದ ವ್ಯವಸ್ಥೆಗೂ ಹೇಗೆ ಸಂಬಂಧ ನನಗೆ ಅರ್ತವಾಗಲಿಲ್ಲ. ಆಗಲಿ, ಸ್ವತಂತ್ರ ಸಂಸ್ತೆ ಹುಟ್ಟು ಹಾಕುವುದರಿಂದ "ಸಂಕೀರ್ಣವಾದ ವ್ಯವಸ್ಥೆ" ಗೆ ಪದರ ಹಾಕಿದ ಹಾಗೆ ಆಗುವುದೋ ಅಥವಾ ಅದನ್ನು "ತಡೆಯುವ ವ್ಯವಸ್ಥೆ" ಗೆ ಇನ್ನೊಂದು ಪದರ ಹಾಕಿದ ಹಾಗೆ ಆಗುವುದೋ? ಸುಧಾರಣೆಗಳು (reforms) ೮೦ ಭಾಗ ಭ್ರಷ್ಟಾಚಾರ ವನ್ನು ಕಡಿಮೆ ಮಾಡಬಹುದು . ಉಳಿದ ೨೦ ಭಾಗವನ್ನು (ಭ್ರಷ್ಟಾಚಾರದಲ್ಲಿ ಮುಳುಗುವವರನ್ನು) ಸರಿಪಡಿಸಲು ಸ್ವತಂತ್ರ ಸಂಸ್ತೆ ಬೇಡವೇ ?? ಸುಧಾರಣೆಗಳು ಮೊದಲು ಬರಬೇಕು, ಅದು ಬಂದು ಭ್ರಷ್ಟಾಚಾರ ಹೋಗುವವೆರೆಗೂ ಇಂತಹ ಸಂಸ್ತೆ ಬೇಕಲ್ಲವೇ? ಏನು ಹೇಳುತೀರಿ ?

    ಪ್ರತ್ಯುತ್ತರಅಳಿಸಿ
  6. ಅಧಿಕಾರ ವಿಕೇಂದ್ರೀಕರಣ, ರಾಜ್ಯಗಳಿಗೆ ಹೆಚ್ಚು ಹೆಚ್ಚು ಸ್ವಾಯುತ್ತತೆ, ಅನಿಯಂತ್ರಿತ ವಲಸೆ ತಡೆ, ಮೂಲ ಸಂವಿಧಾನದಂತೆ ಶಿಕ್ಷಣವನ್ನು ರಾಜ್ಯ ಪಟ್ಟಿಗೆ ಸೇರಿಸುವುದು ಬಹಳ ಮುಖ್ಯವಾದುವು. ಇವುಗಳು ಸಾಕಷ್ಟು ಮಟ್ಟಿಗೆ ಭ್ರಷ್ಟಾಚಾರವನ್ನು ಕಡಿಮೆ ಮಾಡುತ್ತದೆ. ಹೊಸ ಹೊಸ ಕಾನೂನುಗಳಿಂದ ಭ್ರಷ್ಟಾಚಾರ ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಈ ಕ್ರಮಗಳನ್ನು ತಕ್ಷಣ ತೆಗೆದುಕೊಳ್ಳದಿದ್ದಲ್ಲಿ ನಾವು ಮುಂದಿನ ದಿನಗಳಲ್ಲಿ ಭ್ರಷ್ಟಾಚಾರದ ಜತೆಗೆ ಇನ್ನೂ ಅನೇಕ ಹೊಸ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
    -ಹರಿಹರ

    ಪ್ರತ್ಯುತ್ತರಅಳಿಸಿ
  7. ಶಶಿ ಅವರೇ, ಆಂಗ್ಲ ಭಾಷೆಯ "ಪಾಯಿಂಟ್" ಅನ್ನು "ಬಿಂದು" ಅಂತ ಅಸಮರ್ಪಕವಾಗಿ ಅನುವಾದಿಸಬೇಡಿ. ಅದಕ್ಕೆ "ಅಂಶ" ಅನ್ನುವುದೇ ಸೂಕ್ತ.

    ಪ್ರತ್ಯುತ್ತರಅಳಿಸಿ
  8. what do you say about adhominem fallacy http://en.wikipedia.org/wiki/Ad_hominem in these matters!! ha! some go to the extent of using these concepts to point out that we have succumbed to it.

    ಪ್ರತ್ಯುತ್ತರಅಳಿಸಿ
  9. can you refer to Both bills - and contemplate why are you saying this ?
    ಅದು ಬೇಕಿಲ್ಲ. ಅಷ್ಟೇ ಅಲ್ಲ, ಅದು ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸುವುದು. ಅಂಕೆ ಮೀರಿ ಎಲ್ಲ ರಂಗದಲ್ಲೂ ಹೆಚ್ಚೆಚ್ಚು ಸರ್ಕಾರದ ಪಾತ್ರವಿರುವುದು, ಗೊಂದಲಮಯವಾಗಿರುವ, ಸಂಕೀರ್ಣವಾದ ಬೇಡದ ನೀತಿ ನಿಯಮಗಳೆಲ್ಲವೂ ಭಾರತದಲ್ಲಿ ಭ್ರಷ್ಟಾಚಾರದ ಹೆಚ್ಚಳಕ್ಕೆ ಕಾರಣವಾಗಿವೆ. ಲೋಕಪಾಲ್ ಮೂಲಕ ಈಗಾಗಲೇ ಸಂಕೀರ್ಣವಾಗಿರುವ ಈ ವ್ಯವಸ್ಥೆಗೆ ಇನ್ನೊಂದು ಶಕ್ತಿಶಾಲಿ ಪದರವನ್ನು ಸೇರಿಸುವುದು ವ್ಯವಸ್ಥೆಯನ್ನು ಇನ್ನಷ್ಟು ಗೊಜಲಾಗಿಸುವುದು. ಈ ರೀತಿಯ ಗೊಂದಲಮಯ, ಸಂಕೀರ್ಣವಾದ ಸ್ಥಿತಿಯೇ ಲಂಚ ಕೊಡುವವನಿಗೂ, ಪಡೆಯುವವನಿಗೂ ಪೂರಕವಾಗುವಂತಹ ಭ್ರಷ್ಟಾಚಾರದ ವಾತಾವರಣ ನಿರ್ಮಿಸುತ್ತದೆ.

    2) ಪೈಲಟ್ ಗಳು ವಿಮಾನವನ್ನೇನು ವಿನ್ಯಾಸ ಮಾಡುವುದಿಲ್ಲ. ಮದ್ದು ಕೊಡುವ ವೈದ್ಯರು ಹೊಸ ಔಷಧಿಗಳನ್ನೇನು ಕಂಡು ಹಿಡಿಯುವುದಿಲ್ಲ. ಈ ಕೆಲಸ ಮಾಡುವುದು ತೋಳುಕುರ್ಚಿ ಬುದ್ದಿಜೀವಿಗಳಂತಹ ಜನರೇ. ಆದ್ದರಿಂದ ತೋಳುಕುರ್ಚಿ ಬುದ್ದಿಜೀವಿಯಾಗಿರುವುದರಿಂದ ಈ ವಿಷಯಗಳ ಬಗ್ಗೆ ಮಾತನಾಡುವ ಅಧಿಕಾರವಿಲ್ಲ ಅಂತೇನು ಇಲ್ಲ. - Why are you classfying here.. SSLC paas aagi.., votu haakuva hakku irrorella onde allave.. , and dont we take inputs from pilot while Designing ??

    3) You are saying it will create MORE Mess anta... aadre Alli clear aagi helta idare adu ondu external but cohesive body anta.. - shikshe aagokke suru aadre jana brastachara maadodu bitte biduttare.. at lease swalpanaadru..

    4) Idra bagge yaarigu gottillla summne protest maadutiddare antiri.... hinga andre en helabeku... Innu Halli galige hogi.. Nanu Indira Gandhige votu haakodu anno jana iddare.. Anta daddar jote seri.. ellaru daddaragbeke.. ?

    5) Upavaas maadade innenu maadbeku..?? Saravadikaar hondiro.. Srakaar Janara maatu kelutillve...?

    6) ನಿಮ್ಮಲ್ಲಿ ಯಾರಿಗಾದರೂ ಅನ್ನಿಸುತ್ತಾ ಹತ್ತಾರು ಸಾವಿರ ಪ್ರಾಮಾಣಿಕ ಅಧಿಕಾರಿಗಳನ್ನು ತಂದು ಲೋಕಪಾಲ್ ಮಾಡಬಲ್ಲೆವು ಎಂದು? ಸರಿ ಅವರ ಮೇಲೆ ಯಾರು ನಿಗಾ ಇಡುತ್ತಾರೆ? ಅದಕ್ಕೊಂದು ಸೂಪರ್ ಲೋಕಪಾಲ್ ಮಾಡುವೆವಾ? ಅವರನ್ನು ಗಮನಿಸಲು ಇನ್ನೊಂದು ಹೈಪರ್ ಲೋಕಪಾಲ್? ತಮಾಷೆ ಮಾಡ್ತಿಲ್ಲ. ಲೋಕಪಾಲ್ ಪರವಾಗಿ ವಾದ ಮಂಡಿಸುವವರು ಹೇಳುವುದೇ ಇದನ್ನು ತಾನೇ? I will tell u for sure evattue kooda istondu corruption idru.. chennagi nadita irodakke.. karana kelavu olle IAS IPS officer galu.. avaru jaasti yaak aagbaardu.. ? You Know what these officer are being crucified and bullied by corrupt politicians...

    7) Jaat Rajkaarna, Jaati inda matagalu.. anno situation irovaaga.. adu hege olleya leadergallana aarisokke saadya.. Yaav Olle Young.. Jatyatit MP eega cabinet alli iddane heli.. ella ministries.. Jaati mattu rajkiyada mele taane vingadane aagta irodu...

    4. ಭ್ರಷ್ಟ ರಾಜಕಾರಣಿಗಳು ಬಿಡದೇ ಹೇಗೆ ಆರ್ಥಿಕ ಸುಧಾರಣೆಗಳು ಜಾರಿಯಾದಾವು?
    ನಿಜ ಹೇಳಬೇಕು ಅಂದರೆ, ನಾವು ಸರಿಯಾಗಿ ಆರ್ಥಿಕ ಸುಧಾರಣೆಗಳಿಗಾಗಿ ಧ್ವನಿಯೇ ಎತ್ತಿಲ್ಲ. ಅದನ್ನು ನಾವು ಮಾಡಿದರೆ, ಖಂಡಿತ ಈ ವಿಷಯಗಳು ರಾಷ್ಟ್ರದ ರಾಜಕೀಯದ ಕಾರ್ಯಸೂಚಿಯಲ್ಲಿ ಸೇರಿಕೊಳ್ಳುತ್ತವೆ. ರಾಜಕೀಯದ ನಾಯಕರಿಗೆ ಅವರ ರಾಜಕೀಯ ಭವಿಷ್ಯವೇ ಈ ಆರ್ಥಿಕ ಸುಧಾರಣೆಗಳ ಮೇಲೆ ಅವಲಂಬಿತವಾಗಿವೆ ಅನ್ನುವಂತ ಬಿಂಬಿಸುವ, ಮನವೊಲಿಸುವ ಕೆಲಸ ನಾವು ಮಾಡಬೇಕಿದೆ. Sari Oppide.. Aadare ivaranna shikshisvaaru yaaru - Ondu hottu ootakku paradadbekaagirovaag.. E riti yochisuva rajkaarni yelli ? ( Pardon me - Our MMS is one of them..)

    ಪ್ರತ್ಯುತ್ತರಅಳಿಸಿ
  10. Koneya Maatu - Keval Karnatakadalli.. Lokayukta.. activagide.. addikke istondu Hurna horge banddiddu..
    bere rajyadalli idu naam ka vaaste...

    ಪ್ರತ್ಯುತ್ತರಅಳಿಸಿ
  11. Hi I am Teju..


    There is no proper mechanisam for public to question..

    what prime minister is doing ?
    What MPs (govt servants) are doing ?
    what beurocrats are doing ?
    What MLC MLA are doing ?
    nor they tell ..

    The only chance they get is one VOTE every 5 years once.. and mean time..


    then whom to question ?.. This is where JANLOKPLA, LOKAYUKTA come.. who can question this..to them..

    This is how i am understanding it...

    ಪ್ರತ್ಯುತ್ತರಅಳಿಸಿ
  12. ನಮಸ್ತೆ ವಸಂತ್,ಲೇಖನವನ್ನು ಓದಿದ ನಂತರ ಡಿ.ವಿ.ಜಿ.ಯವರ ಕೆಲವು ಕಗ್ಗಗಳನ್ನು
    ನಿಮ್ಮೊಂದಿಗೆ ಹಂಚ್ಚಿ ಕೊಳ್ಳಬೇಕೆಂದೆನಿಸಿ ಇಲ್ಲಿ ನೀಡಿದ್ದೇನೆ

    ಶ್ರೀ ವಿಷ್ಣು ವಿಶ್ವಾದಿ ಮೂಲ ಮಾಯಲೋಲ
    ದೇವ ಸರ್ವೇಶ ಪರಬೋಮ್ಮನೆಂದು ಜನಂ
    ಆವುದನು ಕಾಣದೋಡ ಮಳ್ತಿಯಿಂ ನಂಬಿಹುದು
    ಆ ವಿಚಿತ್ರಕೆ ನಮಿಸೋ ಮಂಕ್ಕುತಿಮ್ಮ

    ಜೀವಜಡ ರೂಪ ಪ್ರಪಂಚವನ್ನದಾವುದೋ
    ಆವರಿಸಿಕೊಂಡು ಮೊಳನೆರೆದುಮಿಹಿದಂತೆ
    ಭಾವಕೊಳಪಡುವಂತೆ ಅಳತೆಗಳೋಡೆದಂತೆ
    ಆ ವಿಶೇಷಕೆ ನಮಿಸೋ ಮಂಕ್ಕುತಿಮ್ಮ

    ಇಹುದೋ ಇಲ್ಲವೋ ತಿಳಿಯಗೋಡದೊಂದು ವಸ್ತು ನಿಜ
    ಮಹಿಮೆಯಿಂ ಜಗವಾಗಿ ಜೀವ ವೇಷದಲಿ
    ವಿಹರಿಪುದು ಒಳಿತೆಂದು ನಿಸದವಾದೊಡೆ
    ಗಹನ ತತ್ವಕೆ ಶರಣು ಮಂಕ್ಕುತಿಮ್ಮ

    ......ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  13. Hello Vasanth,

    Nicely put, I agree with you in all aspects. We shouldn't be creating another system but fix the loopholes in the existing system and upgrade the existing system.

    In my strong opinion, President of India should be elected by each and every person in this country and our existing corruption fighting agencies like lokayuktha, CBI, CID and many other (I am not sure) should be bought under the purview of the newly elected President. Currently military, Judiciary and others are under President office.

    What if we amend our constitution to elect new President by each and every individual! Anna / Santosh Hegade can stand for that post and guide us towards a corrupt free nation. We already have a 2 powerful offices (Prime Minister Office and President Office), but our MP's elect both Prime Minister and President, that's the reason they will have to listen to all the corrupt leaders on the Govt. One powerful position (PM) is indirectly elected by us and the other powerful position (President) will be directly elected by us!

    This is my thought, instead of creating one more system, tweaking an existing system makes more sense, effective and economical!

    Jai India
    Madhu Chandan
    madhuchandan@yahoo.com

    ಪ್ರತ್ಯುತ್ತರಅಳಿಸಿ
  14. Vasanth, I think this is incorrect way of thinking. For example, the solution for the corruption this article is providing is "the middle class should vote the right candidate". If you take an example of Karnataka politics, who is the "right" candidate to vote? Everyone standing for election is a corrupt person. The only way out is for each citizen to become non-corrupt in every social act of his. As Mahatma Gandhi has told, "Be the change you want to see in the world", if we as citizens stop supporting corruption from our level (by not feeding the Govt employees for site registration, passport background check, traffic rule breaking....), half of the corruption will be iradicated. On top of this, for people who will never decide to improve themselves, something like "Jan Lokpal Bill" is needed. Jan Lokpal bill is not the final solution for removing corruption. But, it is one of the right tools.

    ಪ್ರತ್ಯುತ್ತರಅಳಿಸಿ
  15. I AGREE WITH U VASANTH,

    VOTIGAAGI NOTU PADEYUVA BHARATHIYARANNU BADALAYISABEKU,

    AGA NAMMA DESH UDDARA AGABAHUDU,

    ಪ್ರತ್ಯುತ್ತರಅಳಿಸಿ
  16. i Will not agree with vasanth.... what they are demanding for Lokpal bill its in correct way please don't misguide the people. if you don't want you don't support.. we all knows how CBI is working in favour to the government and supreme court also warned so many times to the govt regarding lot of isuues.. our government admininstrator is like a rubber stamp he don't have any rights to take is own decission in this situation what annahazare is doing is the correct

    ಪ್ರತ್ಯುತ್ತರಅಳಿಸಿ

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !