ಮುಖ್ಯಮಂತ್ರಿಯಾಗಬೇಕು ಅನ್ನುವ ಹುಚ್ಚಿನ ಕೆಲವು ರಾಜಕಾರಣಿಗಳು
ಹಚ್ಚಿದ ಬೆಂಕಿಗೆ ಇಡೀ ತೆಲುಗು ದೇಶವೇ ಒಡೆದ ಮನೆಯಾಗಿದೆ. ಕಳೆದ 70 ದಿನಗಳಿಂದ
ಆಂಧ್ರಪ್ರದೇಶದಲ್ಲಿ ಜನಜೀವನ ದಿಕ್ಕೆಟ್ಟಿದೆ. ತೆಲಂಗಾಣದ ಪರ ವಿರೋಧವಿರುವ ಎಲ್ಲರಿಗೂ
ಸಮಾಧಾನ ತರುವಂತಹ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವಂತಹ ಯಾವುದೇ ಕ್ರಮ
ಕೈಗೊಳ್ಳದೇ, 2014ರಲ್ಲಿ ತೆಲಂಗಾಣ ರಾಜ್ಯದ ಹೆಸರಲ್ಲಿ ಎಷ್ಟು ಎಮ್.ಪಿ ಸೀಟು ಗೆಲ್ಲಬಹುದು
ಅನ್ನುವ ಲೆಕ್ಕಾಚಾರದಲ್ಲಿ, ಯು.ಪಿ.ಎ ಸರ್ಕಾರ ಹೀನವಾದ ಮತ ಬ್ಯಾಂಕ್ ರಾಜಕೀಯಕ್ಕೆ ಕೈ
ಹಾಕಿ ತೆಲುಗರನ್ನು ಒಡೆದು ಆಳುವ ಕೆಲಸಕ್ಕೆ ಮುಂದಾಗಿದೆ. ಈಗ ಇನ್ನು ಒಂದು ಹೆಜ್ಜೆ
ಮುಂದೆ ಹೋಗಿ ತೆಲಂಗಾಣಕ್ಕೆ ಸಂಬಂಧಿಸಿದ ನಿರ್ಣಯ ಆಂಧ್ರದ ಅಸೆಂಬ್ಲಿಯಲ್ಲಿ ಪಾಸಾಗುವ
ಅಗತ್ಯವಿಲ್ಲ, ಸಂಸತ್ತಿನ ಮುದ್ರೆಯಿದ್ದರೆ ಸಾಕು ಅನ್ನುವ ನಿಲುವು ವ್ಯಕ್ತಪಡಿಸಿದೆ.
ಅಲ್ಲಿಗೆ ತೆಲುಗರು ಒಂದಾಗಿರಬೇಕೋ, ಒಡೆದು ಬೇರೆಯಾಗಬೇಕೋ ಅನ್ನುವ ನಿರ್ಣಯ ಕೈಗೊಳ್ಳಲು
ತೆಲುಗರ ಒಪ್ಪಿಗೆಯೇ ಬೇಡ ಅನ್ನುವ ಸ್ಥಿತಿ ಕಣ್ಣೆದುರಿದ್ದು, ಇದಕ್ಕೆ ಬೆಂಬಲವಾಗಿ
ಸಂವಿಧಾನದ ಆರ್ಟಿಕಲ್ 3 ನಿಂತಿದೆ ಅನ್ನುವುದು ಭಾರತ ಒಕ್ಕೂಟದ ಸಂವಿಧಾನಕ್ಕೆ ಒಕ್ಕೂಟ
ಮಾದರಿಯ ತಿದ್ದುಪಡಿಯ ಅಗತ್ಯವನ್ನು ಸಾರಿ ಹೇಳುತ್ತಿದೆ.
ಏನು ಹೇಳುತ್ತೆ ಆರ್ಟಿಕಲ್ 3?Formation of new States and alteration of areas, boundaries or names of existing States: Parliament may by law
(a) form a new State
by separation of territory from any State or by uniting two or more
States or parts of States or by uniting any territory to a part of any
State;
(b) increase the area of any State;
(c) diminish the area of any State;
(d) alter the boundaries of any State;
(e) alter the name
of any State; Provided that no Bill for the purpose shall be introduced
in either House of Parliament except on the recommendation of the
President and unless, where the proposal contained in the Bill affects
the area, boundaries or name of any of the States, the Bill has been
referred by the President to the Legislature of that State for
expressing its views thereon within such period as may be specified in
the reference or within such further period as the President may allow
and the period so specified or allowed has expired Explanation I In this
article, in clauses (a) to (e), State includes a Union territory, but
in the proviso, State does not include a Union territory Explanation II
The power conferred on Parliament by clause (a) includes the power to
form a new State or Union territory by uniting a part of any State or
Union territory to any other State or Union territory
ನಿಮ್ಮ ಮನೆಯ ಜಗಳ ನೀವು ಬಗೆಹರಿಸಿಕೊಳ್ಳಬೇಕೋ ದೂರದ ದೆಹಲಿಯೋ?
8 ಕೋಟಿ ತೆಲುಗರ ನಡುವೆ ಎದ್ದಿರುವ ವಿವಾದ ಬಗೆಹರಿಸಿಕೊಳ್ಳಲು ಅವರಿಗೆ ಸಂಬಂಧವೇ ಇರದವರು ನಿರ್ಣಯ ಕೈಗೊಳ್ಳಬಹುದು ಮತ್ತು ತೆಲುಗರ ಪ್ರತಿನಿಧಿಯಾದ ಆಂಧ್ರದ ವಿಧಾನಸಭೆಯನ್ನು ಲೆಕ್ಕಕ್ಕೇ ತೆಗೆದುಕೊಳ್ಳದೇ ಮಾಡಬಹುದು ಅನ್ನುವುದು ಪ್ರಜಾಪ್ರಭುತ್ವವನ್ನೇ ಅಣಕಿಸುವಂತಹ ಹೆಜ್ಜೆಯೇ ಸರಿ. ರಾಜ್ಯಗಳು ಭಾರತದ ಅತಿಯಾದ ಕೇಂದ್ರಿಕೃತ ವ್ಯವಸ್ಥೆಯ ವಿರುದ್ದ ದನಿ ಎತ್ತುತ್ತ ಹೋಗುತ್ತಿದ್ದಂತೆಯೇ ಅವರನ್ನು ಹಣಿದು ತೆಕ್ಕೆಯಲ್ಲಿಟ್ಟುಕೊಳ್ಳಲು ದೊಡ್ಡ ರಾಜ್ಯಗಳನ್ನು ಒಡೆದು ಚಿಕ್ಕದಾಗಿಸಿ ಕೇಂದ್ರದ ಬಲ ಹೆಚ್ಚಿಸಬೇಕು ಅನ್ನುವ ಚಿಂತನೆ ಬಿಜೆಪಿ, ಕಾಂಗ್ರೆಸ್ ಎರಡರಲ್ಲೂ ಇದೆ. ಹೀಗಿರುವಾಗ ದೆಹಲಿಯಲ್ಲಿ ಅಧಿಕಾರ ಹಿಡಿಯುವ ಈ ಪಕ್ಷಗಳು ಮನಸು ಮಾಡಿದರೆ ಎಲ್ಲ ಭಾಷಾವಾರು ರಾಜ್ಯಗಳನ್ನು ಒಡೆದು ಚಿಕ್ಕದಾಗಿಸಿ ದೆಹಲಿಯ ಸಾಮಂತರಾಗಿಸುವುದು ಹೆಚ್ಚು ಕಷ್ಟವೇನಲ್ಲ, ಯಾಕೆಂದರೆ 1950ರ ಸಂವಿಧಾನ ಅಂತಹದೊಂದು ಕೆಲಸಕ್ಕೆ ಅವಕಾಶವನ್ನು ಕಲ್ಪಿಸಿದೆ. ಸಂಸತ್ತಿನಲ್ಲಿರುವ ಪ್ರಾದೇಶಿಕ ಪಕ್ಷಗಳೆಲ್ಲವೂ ಈ ಬಗ್ಗೆ ಎಚ್ಚರಿಕೆಯಿಂದಿದ್ದು ರಾಜ್ಯಗಳ ಹಕ್ಕು ಉಳಿಸಿಕೊಳ್ಳಲು ಮುಂದಾಬೇಕು, ಆರ್ಟಿಕಲ್ 3ಕ್ಕೆ ತಿದ್ದುಪಡಿ ತಂದು ಯಾವುದೇ ರಾಜ್ಯದ ಸ್ವರೂಪ ಬದಲಾಯಿಸುವ ಹಕ್ಕು ಕೇವಲ ಆ ರಾಜ್ಯ ಜನರಿಗೆ, ಅವರ ಚುನಾಯಿತ ಪ್ರತಿನಿಧಿಗಳಿಗೆ ಇರುವಂತೆ ನೋಡಿಕೊಳ್ಳಬೇಕು.
ಕೊನೆಕಿಡಿ: ತೆಲುಗರ ಮಾತಿಗೆ ಬೆಲೆಯೇ ಇಲ್ಲದೇ ಬೇಕಾಬಿಟ್ಟಿ ತೆಲುಗು ದೇಶವನ್ನು ಒಡೆಯುವ ನಿರ್ಧಾರ ಕಂಡ ತೆಲುಗರಿಗೆ ಇಡೀ ಭಾರತವೇ ಅವರ ವಿರುದ್ದ ಸಂಚು ರೂಪಿಸಿದೆ ಅನ್ನಿಸಿದೆ. ಆದರೆ ತೆಲುಗರ ಮನೆಯ ವಿಷಯ ತೆಲುಗರೇ ಬಗೆಹರಿಸಿಕೊಳ್ಳಬೇಕು ಅನ್ನುವುದು ಅವರ ಪಾಲಿಗೆ ಸೆಲ್ಪ್ ರೂಲ್ ಆಗಿದ್ದು ಆ ಬಗ್ಗೆ ಭಾರತದ ಎಲ್ಲ ಭಾಷಿಕರು ಅವರ ಬೆಂಬಲಕ್ಕೆ ನಿಲ್ಲಬೇಕು.
Photo Source: https://twitter.com/Fight4UnitedAP/status/386757486994153472/photo/1 and http://dd508hmafkqws.cloudfront.net/sites/default/files/mediaimages/gallery/2013/Aug/954653_10151830224152160_457612235_n.jpg
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !