ಕವಿಗಳ, ಸಾಹಿತಿಗಳ ನೆನಪಲ್ಲಿ ಬೇರೆ ಬೇರೆ ವಿಷಯಗಳಿರಬಹುದು. Atleast, ನನ್ನ ಜನರೇಶನ್ನಿನ ಹೆಚ್ಚಿನ ಹುಡುಗರಿಗೆ ಹೊಳೆಯುವ ಕೆಲವು ಅಂಶಗಳು ಅಂದರೆ,
- ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕೃತಿಗೆ ಜ್ಞಾನ ಪೀಠ ಪ್ರಶಸ್ತಿ ಬಂತು.
- ಕುವೆಂಪು ಅವರು ಕನ್ನಡದ ಎರಡನೇ ರಾಷ್ಟ್ರಕವಿ.
- ಎಲ್ಲಾದರೂ ಇರು, ಎಂತಾದರೂ ಇರು ಅನ್ನೋ ಕನ್ನಡಿಗರಲ್ಲಿ ಕನ್ನಡತನದ ಕಿಚ್ಚು ತುಂಬೋ ಹಾಡಿನ ಸಾಲುಗಳು
- ಕುವೆಂಪು ಅವರ ಜಯ ಭಾರತ ಜನನಿಯ ತನುಜಾತೆ ಅನ್ನೋ ನಾಡಗೀತೆ.
ಗಮನಿಸಿ ನೋಡಿದರೆ, ಇವೆಲ್ಲ ನಾವು ನಮ್ಮ ಶಾಲೆಗಳಲ್ಲಿ ಕಲಿತ, ಕೇಳಿದ ಅಂಶಗಳು. ಆದರೆ ಇದೆಲ್ಲವನ್ನು ಮೀರಿ, ಕುವೆಂಪು ಒಬ್ಬ ವ್ಯಕ್ತಿಯಾಗಿ ಅವರ ಮನೆಯಲ್ಲಿ ಹೇಗಿದ್ದರು? ಅವರ ಮಕ್ಕಳೊಡನೆ ಅವರಿಗಿದ್ದ ಒಡನಾಟ ಎಂತದ್ದು? ಕುವೆಂಪು ಅವರು ಅವರ ಕಾಲದಲ್ಲಿ ಇದ್ದಂತಹ ಸಾಮಾಜಿಕ ಪಿಡುಗುಗಳ ಬಗ್ಗೆ, ಜಾತಿ, ಧರ್ಮ, ದೇವರು, ಸಮಾಜವಾದದ ಬಗ್ಗೆ, ಅಖಂಡ ಕರ್ನಾಟಕದ ಬಗ್ಗೆ ಅವರಿಗಿದ್ದ ನಿಲುವೇನು ಅನ್ನೋ ಕೂತುಹಲ ನಿಮಗಿದ್ದಲ್ಲಿ ನೀವೆಲ್ಲ ತಪ್ಪದೇ ಓದಬೇಕಾದ ಕೃತಿ ತೇಜಸ್ವಿ ಅವರು ಬರೆದ ಅಣ್ಣನ ನೆನಪು. ತೇಜಸ್ವಿ ಅವರ ಅಬಚೂರಿನ ಪೋಸ್ಟಾಫೀಸು, ಕರ್ವಾಲೋ, ಚಿದಂಬರ ರಹಸ್ಯ, ಮುಂತಾದ ಹೊತ್ತಿಗೆಗಳನ್ನು ಓದಿದವರಿಗೆ ಅವರಿಗಿದ್ದ sense of humour ಎಂತದ್ದು ಅನ್ನುವುದು ತಿಳಿದಿರುತ್ತೆ. ಅಣ್ಣನ ನೆನಪುವಿನಲ್ಲೂ ಅದು ಎದ್ದು ಕಾಣುತ್ತೆ.
ಅಣ್ಣನ ನೆನಪಿನಲ್ಲಿ ನನಗಿಷ್ಟವಾದ ಕೆಲ ಸಂದರ್ಭಗಳು, ಮಾತುಗಳು:
ತೇಜಸ್ವಿ ಚಿಕ್ಕವರಿದ್ದಾಗ ಒಂದು ಜಾತಿ ನಾಯಿ ಸಾಕ್ತಾರೆ, ಯಾರನ್ನು ಕಂಡರೂ ಬಾಲ ಅಲ್ಲಾಡಿಸೋ ಆ ನಾಯಿನಾ ಪಳಗಿಸಿ, ಚುರುಕು ಮಾಡೋದು ಹೇಗೆ ಅನ್ನೋದು ಅವರ ತಲೆಬಿಸಿಯಾಗಿರುತ್ತೆ. ಜಾನ್ (ಜಾನಪ್ಪ) ಅನ್ನೋರು ಜಾತಿ ನಾಯಿಗೆ ಇಂಗ್ಲಿಷ್ ಮಾತ್ರ ಅರ್ಥ ಆಗುತ್ತೆ, ಹೀಗಾಗಿ ಇಂಗ್ಲಿಷ್ ಅಲ್ಲಿ ಮಾತಾಡಿ, ಕನ್ನಡ ಅರ್ಥ ಆಗೋಕೆ ಇದು ಕಂತ್ರಿ ನಾಯಿಯಲ್ಲ ಅನ್ನೋ ಮಾತು ಆಡ್ತಾರೆ. ಅದನ್ನ ಕೇಳಿ ತೇಜಸ್ವಿ ಮತ್ತವರ ತಮ್ಮ ನಾಯಿಗೆ ಇಂಗ್ಲಿಷ್ ಅಲ್ಲಿ " ಕಮಂಡಾ, ಕಮಂಡಾ" ( come on dog) ಅಂತ ನಾಯಿನಾ ಮಾತಾಡಿಸೋ ಪ್ರಯತ್ನದಲ್ಲಿದ್ದಾಗ ಕುವೆಂಪು ಅಲ್ಲಿಗೆ ಬರ್ತಾರೆ. ಏನ್ರೋ ಇದೆಲ್ಲ ಅಂದಾಗ, ಜಾನ್ ಹೇಳಿದ ಮಾತನ್ನ ತೇಜಸ್ವಿ ಅವರಿಗೆ ಹೇಳ್ತಾರೆ. ಇದನ್ನು ಕೇಳಿದ ಕುವೆಂಪು ಅವರಿಗೆ ಸಂಕಟ ಆಗುತ್ತೆ. ಕಂತ್ರಿ ನಾಯಿಗಳಿಗೆ ಕನ್ನಡ, ಜಾತಿ ನಾಯಿಗಳಿಗೆ ಇಂಗ್ಲಿಷ್ ಅನ್ನೋ ಆಲೋಚನೆಯ ಹಿಂದಿರುವ ಕನ್ನಡದ ಬಗೆಗಿನ ತಿರಸ್ಕಾರ ಅವರ ಮನ ನೋಯಿಸುತ್ತೆ. ಆಗ ಅವರು ಹೇಳೋ ಮಾತು, " ಪಂಪನೆನ್ನುವ ಕವಿ ಕನ್ನಡದಲ್ಲಿ ಮಹಾ ಕಾವ್ಯ ಬರೆಯುತ್ತಿದ್ದಾಗ ನಿನ್ನ ಇಂಗ್ಲಿಷ್ ದೊರೆಗಳು ಕಾಡಿನಲ್ಲಿ ತೊಗಟೆ ಸುತ್ತಿಕೊಂಡು ಕಿರಾತಕರಂತೆ ಬದುಕುತ್ತಿದ್ದರು ಅಂತ ಜಾನಪ್ಪ ಇನ್ನೊಮ್ಮೆ ಬಂದರೆ ಹೇಳಿ" ಅಂತ ಅಂದ್ರಂತೆ. ಕನ್ನಡಿಗರ ಅಭಿಮಾನ ಶೂನ್ಯತೆಯ ಬಗ್ಗೆ ಕುವೆಂಪು ಅವರಿಗಿದ್ದ ಸಿಟ್ಟಿನ ಪರಿಚಯ ತೇಜಸ್ವಿಯವರಿಗಾಗುತ್ತದೆ.
ಇನ್ನೊಂದು ಸಂದರ್ಭದಲ್ಲಿ, ಕನ್ನಡದಲ್ಲಿ ಎಲ್ಲ ಹಂತದ ಕಲಿಕೆ ಬರಬೇಕು, ಕನ್ನಡ ಶಿಕ್ಷಣ ಮಾಧ್ಯಮವಾಗಬೇಕು ಅನ್ನುತ್ತ ಅವರು ಹೇಳುವ ಇನ್ನೊಂದು ಮಾತು ಗಮನ ಸೆಳೆಯುತ್ತೆ:
ಕನ್ನಡ ಭಾಷೆ ಮಾತನಾಡುವ ಜನರ ನಡುವೆಯೇ ಬಾಳಿ ಬದುಕಿ ಅನ್ನ ಸಂಪಾದನೆ ಮಾಡುತ್ತಾ ಜ್ಞಾನ, ಆಲೋಚನೆ, ವಿಚಾರಗಳನ್ನೆಲ್ಲ ಬೇರೊಂದು ಭಾಷೆಯಲ್ಲೇ ಇಡಲೆತ್ನಿಸುವವನು ನೀಗ್ರೋ ಗುಲಾಮರಿಂದ ದುಡಿಸಿಕೊಂಡು ದೊಡ್ಡವರಾದ ಅಮೇರಿಕನ್ ಶೋಷಕರಿಗಿಂತ ಕೆಟ್ಟ ಹಾಗೂ ಅತಿ ಸೂಕ್ಷ್ಮ ಶೋಷಕ.
ಈ ಕಾಲದ ಹುಡುಗರು ಕನ್ನಡ ಸಾಹಿತ್ಯ ಓದಿಗೆ ದೊಡ್ಡ ನಮಸ್ಕಾರ ಹಾಕಿರುವಾಗ, ಇಂತಹ ಕೆಲವು ಕೃತಿಗಳು ಖಂಡಿತಾ ಅವರನ್ನು ಕನ್ನಡ ಪುಸ್ತಕದೆಡೆಗೆ ಸೆಳೆಯಬಲ್ಲವು. ಅಂಕಿತ ಪುಸ್ತಕದಲ್ಲಿ ಇದು one of the best seller ಅಂತಾ ಕೂಡಾ ಹೇಳಿದ್ರು. ನೀವು ಓದಿಲ್ಲ ಅಂದ್ರೆ ಖಂಡಿತ ಖರೀದಿ ಮಾಡಿ ಓದಿ, I am sure, you will enjoy it.
malegalalli madhumagalu mattu avara maga purnachandra tejaswi
ಪ್ರತ್ಯುತ್ತರಅಳಿಸಿ"Magalu Kanda Kuvempu" innu bahala chennagide. Kuvempu avara kone magalu Taarni barediru booku. Dont miss , bahala chennagide odi.
ಪ್ರತ್ಯುತ್ತರಅಳಿಸಿವಸಂತ್,
ಪ್ರತ್ಯುತ್ತರಅಳಿಸಿಇದಲ್ಲದೆ ಆ ಹೊತ್ತಿಗೆಯಲ್ಲಿ, ಕುವೆಂಪು ಕಲಿಕೆಯ ಎಲ್ಲ ಹಂತದಲ್ಲಿ ಕನ್ನಡದಲ್ಲೇ ಇರಬೇಕೆಂಬ ದೊಡ್ಡಾಸೆಯನ್ನು ಇಟ್ಕೊಂಡಿದ್ದರು ಅಂತ ಬರುತ್ತೆ. ಅದಲ್ಲದೆ ಟಿ.ಎಸ್.ಎಲಿಯಟ್ ನ ಚಿಂತನೆಗಳ ಪ್ರಬಾವ ಕುವೆಂಪುರವರ ಮೇಲೆ ಆಗಿತ್ತು ಅನಿಸುತ್ತೆ. ಅಲ್ಲದೆ ಎಲಿಯಟ್ಟನ ಬಗ್ಗೆ ಆಗಾಗ ವಿಚಾರಗಳು ಆ ಹೊತ್ತಿಗೆಯಲ್ಲಿ ಬಂದುವೋಗುತ್ತದೆ.
ಆಮೆರಿಕಾದಲ್ಲಿ ಹುಟ್ಟಿದ ಎಲಿಯಟ್ಟಿನ ಈ ಹೇಳಿಕೆ/ನಿಲುವು ನೋಡಿ ನನಗೆ ತುಂಬ ಅಚ್ಚರಿಯಾಯಿತು
In 1945 Eliot wrote: "A poet must take as his material his own language as it is actually spoken around him." Correlatively, the duty of the poet, as Eliot emphasized in a 1943 lecture, "is only indirectly to the people: his direct duty is to his language, first to preserve, and second to extend and improve."
http://www.poetryfoundation.org/archive/poet.html?id=81338
ಹದುಳವಿರಲಿ,
ಬರತ್
http://ybhava.blogspot.com
ಬರತ್,
ಪ್ರತ್ಯುತ್ತರಅಳಿಸಿನಿಮ್ಮ ಮಾತು ನಿಜ. ಟಿ.ಎಸ್.ಎಲಿಯಟ್ ಪ್ರಬಾವ ಕುವೆಂಪು ಮೇಲೆ ಇದ್ದಿದ್ದು ನಿಜವೇ.
ಹಾಗೇ, ನಿಮ್ಮ ಬ್ಲಾಗ್ ಕೂಡಾ ನೋಡಿದೆ. ಹೊಸಗನ್ನಡದಲ್ಲಿ ಸುಂದರವಾಗಿ ಮೂಡಿ ಬಂದಿದೆ. ನಿಮ್ಮ ಜೊತೆ ಒಂದೆರಡು ಮಾತಾಡಬೇಕು.
ನನ್ನ ಮಿಂಚೆ ವಿಳಾಸಕ್ಕೆ ಮಿಂಚಿಸಿ.